Posts Tagged ‘ವಾಜಪೇಯಿ’

2004 ರಲ್ಲಿ ಆಗಿದ್ದು  2019 ರಲ್ಲಿ ಮತ್ತೊಮ್ಮೆ ಪುನರಾವರ್ತನೆ ಆಗದಿದ್ದರೆ ಸಾಕು..  ಭಾರತ ತಲೆ ಎತ್ತಿ ನಿಲ್ಲಬಹುದು..!!

08/10/2017

ಕಾಲದಕನ್ನಡಿಗೆ ಇರೋ ಹೆದರಿಕೆ ಅಂದ್ರೆ ಇದೊಂದೇ.. 2004 ನೇ ಇಸವಿ ಕಣ್ಮುಂದೆ ಬರುತ್ತೆಲೋಕಸಭೆಗೆ  ಅವಧಿಪೂರ್ವ ಚುನಾವಣೆ ಘೋಷಿಸಿದ  ಬಾಜಪಾ ಸರ್ಕಾರ. ಪ್ರಕಾಶಿಸುತ್ತಿದೆ ಭಾರತ”” ಎಂಬ ಭಾಜಪ ದವರ ಸ್ಲೋಗನ್.. ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಲಾಲ ಕೃಷ್ಣ ಅಡ್ವಾಣಿ ಹೆಸರು ಘೋಷಣೆ..  ಮತ ಕೇಳಲು ಬೆನ್ನ ಹಿಂದಿದ್ದ ಸಾಲು ಸಾಲು ಅಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಠಾನ.. ಶತ್ರುಗಳೂ ಒಪ್ಪುವ ಅಟಲ್ ಬಿಹಾರೀ ವಾಜಪೇಯಿಯವರ ಸ್ನೇಹ ಬಂಧನ.. ಎಲ್ಲಾ ಮೈತ್ರಿ ಪಕ್ಷಗಳೂ ಮತ್ತೊಮ್ಮೆ ಒಟ್ಟಿಗೇ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ತೆಗೆದುಕೊಂಡಿದ್ದು ..ಎಲ್ಲವೂ ಸರಿಯೇ..!! ವಾಜಪೇಯಿಯವರು ಮತ್ತೊಮ್ಮೆ ಆರಿಸಿಬರಲು ಸಾಕಷ್ಟು ಅಂಶಗಳು ನೆರವಿಗಿದ್ದವು ! ಆದರೆ ಬೇಕಾದುದೇ ಇರಲಿಲ್ಲ !.. ಸ್ವತ: ವಾಜಪೇಯಿಯವರೇ ಲೋಕಸಭೆಯ ಅವಧಿ ಪೂರ್ವ ವಿಸರ್ಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಆಡಳಿತಾರಂಭದ ದಿನಗಳಲ್ಲಿ ಭಾರತಾದ್ಯಂತ ಇದ್ದ ಕೇಂದಸರ್ಕಾರದ ಪರವಾದ ಅಲೆ ಅಥವಾ “ ಆಡಳಿತದ ಪರ ಅಲೆ” ಎಂಬ ಭದ್ರವಾದ ಗೋಡೆಯಲ್ಲಿ ಸಣ್ಣ ಸಣ್ಣ ಬಿರುಕುಗಳು ಕಾಣತೊಡಗಿದ್ದವು . ಜನ ಬದಲಾವಣೆಯನ್ನು ಬಯಸುತ್ತಿದ್ದುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು ! ಯಾಕೋ ಎಲ್ಲಿಯೋ ಏನೋ ಎಡವಟ್ಟಿದೆ” ಎಂಬುದು ಭಾಜಪಾದ “ಚಿಂತಕರ ಚಾವಡಿ “ ಗೆ ಗೊತ್ತಾಗದಿದ್ದರೂ ವಾಜಪೇಯಿಯವರ ಸೂಕ್ಷ್ಮ  ಮನಸ್ಸಿಗೆ ಹೊಳೆದು ಬಿಟ್ಟಿತ್ತು.!  ಆದರೆ “ ಇಷ್ಟು ಬೇಗ ಲೋಕಸಭಾ ವಿಸರ್ಜನೆ ಹಾಗೂ ಚುನಾವಣಾ ದಿನಾಂಕದ ಘೋಷಣೆ ಬೇಡ .. ಇನ್ನಾರು ತಿಂಗಳುಗಳ ಕಾಲದಲ್ಲಿ ಮತ್ತಷ್ಟು ಕೆಲಸಗಳಿಂದ ಜನ ಮಾನಸದಲ್ಲಿ  ಬದಲಾವಣೆಗೆ ಕಾರಣರಾಗಿ ಪುನ: ಅಧಿಕಾರ ಹಿಡಿಯೋಣ” ಎಂಬ ವಾಜಪೇಯಿಯವರ ಎಚ್ಚರಿಕೆ ಪೂರಿತ ಜತನದ ಮಾತುಗಳು ಭಾಜಪಾದ “ಚಿಂತಕರ ಚಾವಡಿಅವಧಿಪೂರ್ವ ಚುನಾವಣೆ ಘೋಷಣೆ ಯ ಹಿಂದಿದ್ದ ಮಹಾಮಸ್ತಿಷ್ಕಗಳು   ಲಾಲ್ ಕೃಷ್ಣ ಅಡ್ವಾಣಿ ಹಾಗೂ ಕರ್ನಾಟಕದಿಂದ ಆರಿಸಿ ಹೋಗಿದ್ದ  ಲೋಕಸಭಾ ಸದಸ್ಯ ಅನಂತಕುಮಾರ ದಾಗಿತ್ತು ಎಂಬ ಊಹಾತ್ಮಕ ಹೇಳಿಕೆಗಳೂ ಇವೆ!) ಗ ಅರಿವಾಗದೇ.. ಅದರ ಜಾಣ ಕಿವಿಡುತನ ಮುಂದುವರೆದು.. ಚುನಾವಣೆ ನಡೆದು.. ಭಾಜಪಾ ಮಕಾಡೆ ಮಲಗಿದ್ದೂ ಆಯ್ತು..!! ಪ್ರಧಾನಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಅಡ್ವಾಣಿಯನ್ನು ಮುಂದೆ ತೋರಿಸಿದ್ದೆಂಬ ತಪ್ಪಿನೊಂದಿಗೆ .. (ವಾಜಪೇಯಿಯವರೂ ಮನಗಂಡಿದ್ದ )ಆಡಳಿತ ವಿರೋಧಿ ಅಲೆಯೂ ಸೇರಿಕೊಂಡು.. ಬಾರತದಲ್ಲಿ “ ಮಹಾ ದುರಂತ” ವೊಂದು ಸಂಭವಿಸಿತು! ಯು.ಪಿಎ. ರಂಗ ಅಧಿಕಾರಕ್ಕೆ ಬಂದು ಮನಮೋಹನಸಿಂಗ್ ಪ್ರಧಾನಿಯಾದರು. ಸ್ಡತ “ ಮಹಾ ಪ್ರಾಮಾಣಿಕನಾದ ಮನುಷ್ಯ ನೂ ಸಹ ಕಳ್ಳರನ್ನು ಪೋಷಿಸಬಲ್ಲ :ಎಂಬ  ಶತಮಾನದ ಅರಿವಿಗೆ  ಮನಮೋಹನಸಿಂಗ ಕಾರಣರಾದದ್ದು ಭಾಋತದ ದುರ್ದೈವ..! ವಿಶ್ವ ಶ್ರೇಷ್ಠ ಅರ್ಥಶಾಸ್ತ್ರಜ್ಞ ಸರ್ಕಾರವೊಂದುವಿಶ್ವ ಶ್ರೇಷ್ಠ ಪ್ರಜಾಸತ್ತೆ “ ಯಲ್ಲಿ ಕೋಟಿಗಟ್ಟಲೆ ಹಣದ  2 ಜಿ.. 3 ಜಿ.. ತರಂಗಾಂತರ , ಕಲ್ಲಿದ್ದಲು, ಯೂರಿಯಾ ಮುಂತಾದ ಹಗರಣಗಳಿಗೆ ಕಾರಣವಾಗುವುದೆಂದರೆ ..? ಆ ಹತ್ತೂ ವರ್ಷಗಳೂ ಮನಮೋಹನಸಿಂಗರು ಭಾರತವನ್ನು ಪ್ರತಿನಿಧಿಸಲೇ ಇಲ್ಲ..!! ಅವರು ಪ್ರತಿನಿಧಿಸಿದ್ದು ಕಾಂಗ್ರೆಸ್ ಎಂಬ ಮಹಾ ಪಕ್ಷವನ್ನು.. ಭಾರತಕ್ಕೆ ಸ್ವಾತಂತ್ರ್ರ್ಯ ತಂದುಕೊಟ್ಟ ಪಕ್ಷವೇ ಭಾರತದಲ್ಲಿ 10 ವರ್ಷಗಳ ಕಾಲ ಪರಿಪೂರ್ಣ ಭ್ರಷ್ಠ ಸರಕಾರವನ್ನು ನೀಡುತ್ತದೆ ಎಂದರೆ ವಿಪರ್ಯಾಸವಲ್ಲದೇ ಇನ್ನೇನು?

ಭಾರತಕ್ಕೊಂದು ಧೀಮಂತ ನೇತೃತ್ವನ್ನು ಕೊಟ್ಟಿದ್ದ , ಅಂತರಾಷ್ತ್ರೀಯವಾಗಿ ಭಾರತಕ್ಕೊಂದು ಸೂಕ್ತ ನೆಲೆಯನ್ನು ದೊರಕಿಸಿಕೊಟ್ಟು, ಭಾರತೀಯರ ಆತ್ಮಸಾಕ್ಷಿಅಸ್ಮಿತೆಗಳು ಎದ್ದು ಕುಣಿದಾಡುವಂತೆ ಮಾಡಿದ್ದ ವಾಜಪೇಯೀ ಸರ್ಕಾರಕ್ಕೆ ಪರಿಯಾದ ಶೋಚನೀಯ ಸೋಲು ಒದಗಿದ್ಯಾಕೆ? .. ಆ ದಿನಗಳಲ್ಲಿ  ಭಾರತದಲ್ಲಿನ ಈ ಚುನಾವಣಾ ಫಲಿತಾಂಶಕ್ಕೆ ಜಗತ್ತೇ ನಿಬ್ಬೆರಗಾಗಿ.. ಪ್ರಜಾಸತ್ತೆಯ ಬಹುಮುಖ್ಯ ಪರಿಣಾಮ ”.. ಪ್ರಜೆಗಳೇ ಪ್ರಭುಗಳಾದ ಚುನಾವಣೆ “ ಎಂದೆಲ್ಲಾ ವಿರೋಧ ಪಕ್ಷಗಳಿಂದ ಹೊಗಳಿಸಿಕೊಂಡ  ಚುನಾವಣೆ ಕಲಿಸಿಕೊಟ್ಟ ಪಾಠವೇನೆಂಬುದು ಗೊತ್ತೆ..? ಯಾರಿಗೂ ಅತಿಯಾದ ಆತ್ಮವಿಶ್ವಾಸ ಸಲ್ಲದು.. ಎಂಬ ಮಹಾಪಾಠ.. ಆ ನಂತರವೇ “ ಜಿಯಾ ಒಬ್ಬ ಮಹಾ ವ್ಯಕ್ತಿ ಆಗಿದ್ದರುಎಂದು  ಪೂರ್ವ ಅಖಂಡ ಭಾರತದಲ್ಲಿದ್ದ  ಈಗಿನ ಪಾಕಿಸ್ತಾನದಲ್ಲಿರುವ ತನ್ನ ಪೂರ್ವಜರ ನೆಲೆಯನ್ನು  ಭೇಟಿಯಾಗಿ ಅಡ್ವಾಣಿ ಹೇಳಿದ್ದು..  ನಿಜವಾಗಿ ತಾನಾಗಿದ್ದೂ.. ರಾಜಕೀಯವಾಗಿ ಪ್ರಸ್ತುತ ಸನ್ನಿವೇಶದಲ್ಲಿ ಹಾನಿಕಾರಕವಾಗಿದ್ದ ತನ್ನ ವ್ಯಕ್ತಿತ್ವವನ್ನು ಬದಲಿಸಿಕೊಳ್ಳಲು ಅಡ್ವಾಣಿ ಹೊರಟು ಕೊನೆಗೆ ಅಲ್ಲಿಯೂ ಸಲ್ಲದೆ ಇಲ್ಲಿಯೂ ಸಲ್ಲದೆ.. ( ರಾಷ್ಟ್ರಪತಿ ಅಭ್ಯರ್ಥಿಯೆಂದುಸ್ಡಲ್ಪದಿನ ಭಾಜಪಾದ ರಾಷ್ಟ್ರಪತಿ ಅಭ್ಯರ್ಥಿಗಳ ಪಟ್ಟಿಯಲ್ಲಿದ್ಉದೇ ಸದ್ಯದ ಅವರ ಸಾಧನೆ! ) ರಾಮಜನ್ಮಭೂಮಿಯ ತಗಾದೆಯಿಂದಾಗಿ  ಅದೂ ಸಾಧ್ಯವಾಗದೆ.. ಈಗ  ತಾವೇ ಅಪ್ರಸ್ತುತ ರಾಗಿದ್ದು..!!  ಭಾಜಪಾದ ಸ್ಥಾಪಕಾಗ್ರಸೇನಾನಿಗಳಿಬ್ಬರೂ ಒಟ್ಟಿಗೇ ನೇಪಥ್ಯಕ್ಕೆ ಸರಿಯುವಂತಾಗಿದ್ದು 2004 ಚುನಾವಣೆಯ ಮಹಾ ಪಾಠ..!!

ಕಾಲದಕನ್ನಡಿಗೆ ಮತ್ತೊಮ್ಮೆ ಎಲ್ಲಾ ನೆನಪಾಗುತ್ತಿವೆ.. ಹೆದರಿಕೆಯೂ ಆಗುತ್ತಿದೆ.!!   ಪುನ: 2004 ಬಾರದಿರಲಿಬಹುಜನ ಹಿತಾಯ ಸುಖಾಯಭಾರತೀಯರ ಈಗಿನ ನೆಮ್ಮದಿಯ ಸ್ವರ ಇಂಪು ಕಳೆದುಕೊಳ್ಳದಿರಲಿ ! ಮೋದಿತನ್ಮೂಲಕದ ಭಾರತ ಗಾನಕ್ಕೆ ವಿಶ್ವವೇ ನಲಿದಾಡಲಿ ಎಂಬುದು ಕಾಲದ ಕನ್ನಡಿಯ ಆಶಯ..!!

ಏಕೆಂದರೆ ಇತ್ತೀಚೆಗಷ್ಟೇ ಭಾರತೀಯರ ಆತ್ಮಸಾಕ್ಷಿ ಹಾಗೂ ಅಸ್ಮಿತೆಗಳು  ಬೆಳಗತೊಡಗಿವೆ.. ಭಾರತ ಒಂದು ಕಡೆಗಣಿಸಲಾಗದ ”  ರಾಷ್ಟ್ರವೆಂಬುದು ವಿಶ್ವ ನಾಯಕರಿಗೆ ಮನವರಿಕೆಯಾಗತೊಡಗಿವೆ. ಮೋದಿ  ರಾಷ್ಟ್ರೀಯಹಾಗೂ ಅಂತರಾಷ್ಟ್ರೀಯ ವಾಗಿ ಬಹು ಪ್ರಭಾವೀ ನಾಯಕರಾಗಿ  ಬೆಳೆಯತೊಡಗಿದ್ದಾರೆ ! ನೆಹರೂ ರವರಿಗೂ ಅಂತರಾಷ್ಟ್ರೀಯವಾಗಿ ತನ್ನ ಚರಿಷ್ಮಾ ವನ್ನು ರಕ್ಷಿಸಿಕೊಳ್ಳಬೇಕಾದ ಹಪಹಪಿ ಇದ್ದುದಕ್ಕೇ ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆ ಯ ಮುಂದಿರಿಸಿದ್ದು.. ಭಾರತದ ಆತ್ಮಸಾಕ್ಷಿ ಯನ್ನೇ ಬೇರೆಯವರಿಗೆ ಒತ್ತೆ ಇಟ್ಟದ್ದು..! ಆದರೆ ಅದ್ಯಾವುದೇ ಹಪಾಹಪಿ ಮೋದಿಯವರಿಗೆ ಇದ್ದಂತೆ ಕಾಣುತ್ತಿಲ್ಲ..ವಸುದೈವ ಕುಟುಂಬಕಂ” ಎಂದಿದ್ದು ಸನಾತನ ಧರ್ಮ…..ಎಲ್ಲರೂ ಒಟ್ಟಾಗಿಯೇ ವಿಶ್ವದ ಸಮಸ್ಯೆಗಳನ್ನೆದುರಿಸೋಣ ಎಂದಿದ್ದು ಮೋದಿ..! ಹೇಗಿದ್ದರೂ “ ಇಸ್ಲಾಂ ಭಯೋದ್ಪಾಕತೆ ” ಎಂಬುದು ಐರೋಪ್ಯ ಹಾಗೂ ಪಾಶ್ಚಿಮಾತ್ಯ ದೇಶಗಳೆಡನ್ನೂ ಕಾಡುತ್ತಿರುವ ಪ್ರಶ್ನೆ..! ಅದಕ್ಕೆ ತಕ್ಕದಾಗಿ ಉತ್ತರಿಸಲು ಎಲ್ಲಾ ದೇಶಗಳನ್ನೂ  ಭಾರತದೊಂದಿಗೆ ಸಮೀಕರಿಸಲು ವಿಶ್ವ ಪ್ರಯತ್ನ ಮಾಡುತ್ತಿರುವ ಮೋದಿ ಜಿ..!! ಮುಂದಿನ ವರುಷಗಳಲ್ಲಿ ಭಾರತ ವಿಶ್ವದ ನಾಯಕ “  ಆಗುತ್ತದೆ  ಎಂಬ  ಪ್ರಪಂಚದ ಮಾತು ಸತ್ಯವಾಗಲಿ ಎಂಬುದು ಕಾಲದ ಕನ್ನಡಿಯ ಆಶಯ ವಷ್ಟೇ ಅಲ್ಲಸಮಸ್ತ ಭಾರತೀಯರದ್ದೂ ಸಹ.!! ದರೆ ಅದಾಗಲೂ ಇನ್ನೂ ಬಹಳ ಕಠಿಣ ಪ್ರಯತ್ನಗಳು ಆಗಬೇಕು..!

ದೇಶ ಹಸಿವಾಗಿದ್ದುಕೊಂಡುಪ್ರಪಂಚಕ್ಕೆ ನಾಯಕನಾದರೆ ಏನು ಪ್ರಯೋಜನ? ಎಂಬುದು ಮತ್ತೊಂದು ಪ್ರಶ್ನೆ..! ನಿಜ..  ಜಪಾನ್ ಎಡವಿಬಿದ್ದಂತೆ ( 2 ನೇ ಮಹಾಯುದ್ದದ ಸಂದರ್ಭದಲ್ಲಿ)  ಚೀನಾ ತನ್ನನ್ನೇ ತಾನು ಕೊಂದುಕೊಂಡಂತೆ ( ಮಾವೋತ್ಸೇತುಂಗನ ಕಾಲದಲ್ಲಾದ ಸಾಂಸ್ಕೃತಿಕ ಕ್ರಾಂತಿ ಯಿಂದ) ಭಾರತವೇನೂ ಆ ಪರಿಯಾಗಿ  ತಪ್ಪು ಹೆಜ್ಜೆಗಳನ್ನಿಟ್ಟಿಲ್ಲಆದರೂ ದೇಶದಲ್ಲಿ  ಪ್ರತಿಯೊಬ್ಬ ಶ್ರೀ ಸಾಮಾನ್ದನೂ ನೆಮ್ಮದಿಯಿಂದ ನಿದ್ರಿಸುವಂತೆ ಆಹಾರವಸ್ತ್ರ ಹಾಗೂ ವಸತಿಗಳ ಸಮರ್ಪಕ ಅನುಷ್ಠಾನ ವಾಗಿಲ್ಲ.. ದೇಶದ ಸಮಸ್ಯೆಗಳು ಹಲವಾರಿವೆ.! ಯಾವುದೂ ಮುಗಿಯುವುದಿಲ್ಲ.. ಎಲ್ಲಾ ಸರಿಯೇ..  ವಿಶ್ವನಾಯಕನಾಗುವುದಕ್ಕಿಂತಲೂ ಮೊದಲು ಭಾರೆತದ ಆಂತರಿಕ ಸಮಸ್ಯೆಗಳು ನಿವಾರಣೆಗೊಳ್ಳಬೇಕು..

ಕೇಂದ್ರ ಸರ್ಕಾರದ ಯಾವ ಯೋಜನೆಗಳದ್ದೂ ಸಮರಪ್ಕವಾಗಿ ಅನುಷ್ಠಾನಗೊಂಡರೂ ಜನರನ್ನು ತಲುಪದಿರುವುದೂ ದುರಂತವೇ.. ನೋಟು ಅಮಾನ್ಯ, ಜನ ಧನ ಯೋಜನೆ, ಜಿ.ಎಸ್.ಟಿ. ಸ್ವಚ್ಚ ಭಾರತ್, ನಮಾಮಿ ಗಂಗಾವಸತಿಶೌಚಾಲಯ ಯೋಜನೆ, ಪಿಂಚಣಿ ಯೋಚನೆಗಳೇ ಮುಂತಾದ ಹತ್ತು ಹಲವು ಯೋಜನೆಗಳಿದ್ದರೂ .. ಸಾಮಾನ್ಯರು ಅದರ ಫಲಾನುಭವಿಗಳಾಗಲೇಬೇಕು.. ಇಲ್ಲದಿದ್ದಲ್ಲಿ 2004 ಮತ್ತೊಮ್ಮೆ ಪುನರಾವರ್ತಿಸುತ್ತದೆ !,.. ಆಗಲೂ ಆಗಿದ್ದು ಇದೇ.. ಯೋಜನೆಗಳು ಸಮರ್ಪಕವಾಗಿ ಅನುಷ್ಠಾನ ಗೊಂಡಿದ್ದರೂ ನಾಯಕರು ಅವುಗಳ ಅನುಕೂಲತೆಗಳ ಬಗ್ಗೆ ಜನರಲ್ಲಿ ಸ್ಪಷ್ಟಭಾವನೆಗಳನ್ನು ಉದಿಸಲು ಪ್ರಯತ್ನಿಸದಿದ್ದರೆ ಆ ಯೋಜನೆಯ ಪರಿಣಾಮವೇನು? ಎಂಬುದು ತಿಳಿಯಲಾರದಷ್ಟು ಮೂರ್ಖರೇ ರಾಜಕೀಯ ನಾಯಕರು !!

ಒಬ್ಬ ಯೋಗಿ. ಒಬ್ಬ ಮೋದಿ.. ಒಬ್ಬ ರಾಜನಾಥ.. ಮತ್ತೊಬ್ಬ ಅರುಣ ಜೈಟ್ಲಿಯೋ ಅಥಹವಾ ಇನ್ನಾರೇ ಆಗಲಿ.. ಅವರೊಂದಿಗೇ ಸಮಸ್ತ ಸಂಪುಟವೂ  ಒಂದೇ ಲಕ್ಷ್ಯದತ್ತಒಂದೇ ವೇಗದಲ್ಲಿ ನಡೆದರೆ ಮಾತ್ರ ಭಾರತ ವಿಕಾಸ ಸಾಧ್ಯ..!!  ಹೌದು.. 2014 ರ ಹಿಂದಿದ್ದ ಭಾರತ ಹೀಗಿಲ್ಲದಿದ್ದರೂಹತ್ತು ಹಲವು ಸಮಸ್ಯೆಗಳು ತಲೆ ತಿನ್ನುತ್ತಲೇ ಇವೆ. ಜನಸಂಖ್ಯಾಸ್ಫೋಟ ದಿಂದಾಗಿ ಎಲ್ಲಾ ಯೋಜನೆಗಳೂ ಕುಂಟುತ್ತಿದ್ದರೂ.. ಏರುತ್ತಿರುವ ಜನಸಂಖ್ಯೆಯನ್ನೇ ಅಭಿವೃದ್ಧಿಯ ಮೆಟ್ಟಿಲುಗಳನ್ನಾಗಿ ಚೀನಾ ಮಾರ್ಪಡಿಡಸಿಕೊಂಡಿಲ್ಲವೇ ಎಂಬುದೂ ಗಮನಕ್ಕೆ ಬರಬೇಕು..! ಯೋಜನೆಗಳು ಅನುಷ್ಠಾನಗೊಳ್ಳುವ ಮೊದಲೇ ಕಾರ್ಯಕರ್ತರು ಜನಸಾಮಾನ್ಯರಲ್ಲಿ ಏಕಾಭಿಪ್ರಾಯದ ಬಗ್ಗೆ ಒಟ್ಟಾಗಿ ಕೆಲಸ ಮಾಡಬೇಕು.. ಜನಸಾಮಾನ್ಯರಿಗೆ ಯೋಜನೆಗಳನ್ನು ತಲುಪಿಸುವಲ್ಲಿ ರಾಷ್ತ್ರೀಯ ಕಾರ್ಯಕರ್ತರು ಸರ್ಕಾರ ಹಾಗೀ ಜನಸಾಮಾನ್ಯರ ನಡುವಿನ ಕೊಂಡಿಯಾಗಬೇಕು.. ಹಾಗಿದ್ದಲ್ಲೀಯೇ ಯೋಜನೆಗಳು ಸಮಾಜದ ಕಟ್ಟಕಡೆಯ ದರಿದ್ರರನ್ನೂ.. ದುರ್ಬಲರನ್ನೂ ಎಡತಾಕುವುದು!!

ಯಾರು ಏನೇ ಹೇಳಲಿ.. ಭಾರತ ಬದಲಾಗುತ್ತಿದೆ ! ಭಾರತೀಯರ ಮನಸ್ಥಿತಿ ಬದಲಾಗುತ್ತಿದೆ ! ಭಾರತೀಯರತ್ತ ವಿಶ್ವದ ದೃಷ್ಟಿಕೋನ ಬದಲಾಗುತ್ತಿದೆ.! ಭಾರತದತ್ತ ವಿಶ್ವವೇ ಬದಲಾಗುತ್ತಿದೆ!! ಪ್ರಪಂಚದ ಸರ್ವಶ್ರೇಷ್ಟ ಪ್ರಜಾಪ್ರಭುತ್ವದ ಅಸ್ತಿತ್ವದ ಅರಿವು ವಿಶ್ವದ ಇತರೆ ನಾಯಕರುಗಳಿಗಾಗುತ್ತಿದೆ..! ಅಷ್ಟು ಸಾಕು..!! ಭಾರತೀಯರ ಸನಾತನ ಧರ್ಮಯೋಗ ಹಾಗೂ ಅಸ್ಮಿತೆಗಳಿಗೀಗ ವಿಶ್ವ ಮನ್ನಣೆಯ ಕಾಲ..  ಶುಭ ಸಂದರ್ಭದಲ್ಲಿಯೇ ಕಾಲವೂ ಸ್ಪಲ್ಪ ಆನಂದವನ್ನು ಅನುಭವಿಸಲು  ಸ್ವಲ್ಪ ನಿಲ್ಲಬಾರದೇಕೆ..!!

ಭಾರತದಂತ ಅಭಿವೃದ್ಧಿ ಶೀಲ ರಾಷ್ತ್ರವೊಂದನ್ನು ಇಡೀ ವಿಶ್ವವೇ ಮಾನ್ಯ ಮಾಡುತ್ತದೆಯೆಂದರೆ ರಾಷ್ಟ್ರವು ತನ್ನ  ಅಸ್ತಿತ್ವ ಹಾಗೂ ಬೆಳವಣಿಗೆಗಳಿಂದ, ಚಿಂತನೆಗಳಿಂದ ಸಂಪೂರ್ಣ ವಿಶ್ವವನ್ನು ಪ್ರಭಾವಿಸುತ್ತಿದೆ ಎಂದೇ ಅರ್ಥನೆರೆಯ ಪಾಕಿಸ್ಥಾನ ಹಾಗೂ ಚೀನಾಗಳೆರಡೂ ಭಾರತದ ಮೇಲೆ ಕಾಲು ಕೆರೆದು ಕೊಂಡು ಜಗಳವಾಡಲು ಸೂಕ್ತ ಸನ್ನಿವೇಶಗಳನ್ನು ಸೃಷ್ಟಿಸಸುತ್ತಿರುವ ಸಂದರ್ಭದಲ್ಲಿ ವಿಶ್ವ ನಾಯಕರ ಸೂಕ್ತ ಮನ್ನಣೆ ಹಾಗೂ ಮೈತ್ರಿಗಳು ಭಾರತಕ್ಕೆ ಬೇಕು. ಅಮೇರಿಕಾ ಮತ್ತು ರಷ್ಯಾಗಳಂಥಹ ದೊಡ್ಡ ರಾಷ್ಷ್ರಗಳೊಂದಿಗೆ ಭೂತಾನ, ಇಸ್ರೇಲ್, ನೇಪಾಳ, ಶ್ರೀಲಂಕಾಗಳೂ ನಮಗೆ ಬೇಕಾಗುತ್ತವೆ ! ವಾಜಪೇಯಿಯವರ ನಂತರ ಭಾರತಕ್ಕೊಂದು ಅಂತರಾಷ್ಟ್ರೀಯ ಅಸ್ಮಿತೆಯನ್ನು ತಂದುಕೊಟ್ಟವರೆಂದರೆ ಮೋದಿ ಮಾತ್ರ! ಈಗೀಗ ಭಾರತದ ವಿದೇಶಾಂಗ ನೀತಿಗೆ ಚಾಣಕ್ಯ ತಂತ್ರಗಳು ಊರುಗೋಲಾಗುತ್ತಿರುವುದು ಸನಾತನ ಧರ್ಮಕ್ಕೊಂದು ಸಂತಸದ ವಿಚಾರವಲ್ಲವೇ?

ಅಖಂಡ ಭಾರತದ ಕಲ್ಪನೆ ಈಗಿಲ್ಲವಾದರೂ ನಾವು ಜಗತ್ತಿಗೇ ಕೊಟ್ಟವಸುದೈವ ಕುಟುಂಬಕಂನೀತಿಗೆ ಇನ್ನೂ ಆಯುಷ್ಯವಿದೆ ಅಲ್ಲವೇ? ನೋಡೋಣ.. ಮೋದಿ ಕಾರ್ಯಗಳು ಭಾರತವನ್ನು ಎಲ್ಲಿಗೆ ತಂದು ನಿಲ್ಲಿಸುತ್ತವೆ  ಎಂಬುದನ್ನು! ಒಂದು ಸಶಕ್ತ ಹಾಗೂ ಉತ್ಸಾಹೀ ದೇಶವಾಗಿ ಭಾರತದ ವಿಶ್ವನಾಯಕನ ಪಟ್ಟಕ್ಕೆ ಲಗ್ಗೆಹಾಕುವುದು ಸಂತಸವಲ್ಲದೇ ಇನ್ನೇನು..!!

 

ಕೊನೇಮಾತು: ದಲಿತರ ಮನೆಯಲ್ಲಿ ವಾಸ್ತವ್ಯ ಮಾಡಿ, ಬೆಳಿಗ್ಗೆ ಹೋಟೇಲಿನಿಂದ ತಿಂಡಿ ತಂದು ತಿಂದರೆಂಬ  ರೋಪಕ್ಕೆ ಕಮಕ್ ಕಿಮಕ್ ಎನ್ನದ ಯಡಿಯೂರಪ್ಪಾದಿಗಳು.. ಸಿದ್ಧರಾಮಣ್ಣನ ಸರ್ಕಾರ ತಾವಾಗಿಯೇ ಕೋಲುಗಳನ್ನು ಕೊಟ್ಟು ಬೆನ್ನಿಗೆ ಹೊಡೆಯಲು ಹೇಳಿದರೂ.. ಕೋಲುಗಳನ್ನೇ ಬಿಸಾಕಿ ತಮ್ಮ ಪಾಡಿಗೆ ತಾವು ಇರುತ್ತಿರುವುದು ಕಾಲದಕನ್ನಡಿಗೆ ಅರ್ಥವಾಗದ ವಿಚಾರ! “ನೀ ನನಗಾದರೆ ನಾ ನಿನಗೆಎಂಬ ಒಳ ಒಪ್ಪಂದವನ್ನೇನಾದರೂ ಭಾಜಪಾ ನಾಯಕರು ಸಿದ್ದಣ್ಣನೊಂದಿಗೆ ಮಶಾಡಿಕೊಂಡಿದ್ದದಾರೆಯೇ? ರಾಜ್ಯದಲ್ಲಿ ವಿರೋಧಪಕ್ಷವಿರುವುದೇ ಅರಿವಾಗುತ್ತಿಲ್ಲವಲ್ಲ ಎಂಬ ಕಾಲದ ಕನ್ನಡಿಯ ಪ್ರಶ್ನೆಗೆ ಯಡಿಯೂರಪ್ಪಾದಿಗಳುಇಲ್ಲ ಕನ್ನಡಿ… ಸಿದ್ದಣ್ಣ ಭಾಜಫಾ ಕೋಟೆಯಲ್ಲಿ ಉಂಟು ಮಾಡಿರುವ ಬಿರುಕುಗಳನ್ನು ಸರಿಪಡಿಸಲೇ ಪುರುಸೊತ್ತಿಲ್ಲ.. ಇನ್ನು ಅವರನ್ನೆಲ್ಲಿಂದ ಕಾಯುವುದು ? ಎಂಬ ಪ್ರಶ್ನೆ ಸರಿಯಾದುದಾದರೂಬಿರುಕುಗಳಿಗೆ ತೇಪೇ ಹಚ್ಚುವ ಕಾರ್ಯದಲ್ಲಿ.. ಗೋಡೆಯನ್ನೇ ಬೀಳಿಸದಿದ್ದರೆ ಸಾಕು..!! ಎಂದುಕೊಂಡು ಸುಮ್ಮನಾಗಬೇಕಾಯಿತು !!

 

Advertisements

ಈಗ ಸೋನಿಯಾ ಜಿ ಏನು ಹೇಳ್ತಾರೆ?

07/01/2010

           ರಾಜಕೀಯದಲ್ಲಿ ಎಲ್ಲಾ ಪಕ್ಷಗಳೂ ಹೀಗೇ!. ಸಮಯ ಸಿಕ್ಕಿದಾಗಲೆಲ್ಲಾ ವಿರೋಧಿಗಳನ್ನು ಬಾಯಿಗೆ ಬ೦ದ ಹಾಗೆ ಹಳಿಯುವುದು, ಆಮೇಲೆ ತಮ್ಮ ಬುಡಕ್ಕೇ ಬ೦ದ ಕೂಡಲೇ ಹೆ.ಹೆ.ಹೆ. ಅ೦ಥ ಅಮಾಯಕನ ನಗು ನಗೋದು! ಒಬ್ಬ ಮುಖ್ಯಮ೦ತ್ರಿಯನ್ನು “ಸಾವಿನ ವ್ಯಾಪಾರಿ“ ಅ೦ಥ ಸೋನಿಯಾ ಗಾ೦ಧಿಯವರು ಜರೆಯುವಾಗ ಈ ಜಯ೦ತಿ ನಟರಾಜನ್ ಸೇರಿದ೦ತೆ ಎಲ್ಲಾ ಕಾ೦ಗ್ರೆಸ್ಸಿಗರೂ ಏನು ಮಾಡುತ್ತಿದ್ದರು? ಈಗ ಇದೇ ಸಮಯವನ್ನು ಮೋದಿ ಉಪಯೋಗಿಸಿಕೊ೦ಡು “ ಈಗ ಹೇಳ್ರೀ ಸೋನಿಯಾಜಿ ಯಾರು ಮೌತ್ ಕಾ ಸೌದಾಗರ್ “ ಅ೦ಥ ತನಗ೦ದದ್ದನ್ನೇ ವಾಪಾಸು ಕೇಳುತ್ತಿರಬೇಕಾದ್ರೆ, ಮೈಮೇಲೆ ಬೊಬ್ಬೆ ಬಿದ್ದವರ೦ತೆ ಎಗರಾಡೋದ್ಯಾಕೆ? ಸೋನಿಯಾರಿಗೊ೦ದು ನ್ಯಾಯ- ಮೋದಿಗೊ೦ದು ನ್ಯಾಯಾನಾ? ಕಾ೦ಗ್ರೆಸ್ಗೊ೦ದು ನ್ಯಾಯ- ಬಿ.ಜೆ.ಪಿ ಗೊ೦ದು ನ್ಯಾಯಾನಾ?       

        ಕೊನೆಗೂ ಭೋಪಾಲ್ ದುರ೦ತದ ಬಗ್ಗೆ ಭೋಪಾಲಿನ ಆಗಿನ ಜಿಲ್ಲಾಧಿಕಾರಿಯಾಗಿದ್ದ ಮೋಟಿ ಸಿ೦ಗ್ ಹೇಳಿದ್ದಾರೆ! ಭೋಪಾಲ್ ದುರ೦ತದ ರೂವಾರಿ ಆ೦ಡರ್ ಸನ್ ಪರಾರಿಗೆ ಕಾ೦ಗ್ರೆಸ್ ಸರ್ಕಾರವೇ ಕಾರಣ ಅ೦ಥ! ಕಾ೦ಗ್ರೆಸ್ ಸರ್ಕಾರದಿ೦ದಲೇ ಬ೦ದ ಆದೇಶ ದ೦ತೆ ಆ೦ಡರ್ಸನ್ನನ್ನು ಕಳುಹಿಸಿ ಕೊಟ್ಟಿದ್ದು ಅ೦ಥ! ಅರ್ಜುನ್ ಸಿ೦ಗರ ಮೌನವೇ ಅದಕ್ಕೆ ಸಮ್ಮತಿಯನ್ನೀಯುತ್ತದೆ! ಅದಕ್ಕೇನು ಉತ್ತರ ವಿದೆ ಸೋನಿಯಾ ಪಟಾಲ೦ ಬಳಿ? ಗುಜರಾತ್ ನ ಗೋದ್ರಾ ಹತ್ಯಾಕಾ೦ಡ ಮಾತ್ರ ಇವರಿಗೆ ನೆನಪಿಗೆ ಬರುತ್ತಾ? ೧೫,೦೦೦ ಜನರ ಮಾರಣ ಹೋಮ ಹಾಗೂ ಈಗಲೂ ಹುಟ್ಟುತ್ತಿರುವ ಅ೦ಗವೈಕಲ್ಯದ ಮಕ್ಕಳ ಜವಾಬ್ದಾರಿ ಯಾರು ಹೊರುತ್ತಾರೆ? ರಾಜ್ಯ ಸರ್ಕಾರದ ಸಾಧನಾ ಸಮಾವೇಶಕ್ಕೆ ಸರ್ಕಾರದ ದುಡ್ಡು ಬಳಸ್ತಾ ಇದಾರೆ ಅ೦ಥ ಬೊಬ್ಬೆ ಹೊಡೆಯೋ ಸಿಧ್ಧರಾಮಯ್ಯ, ದೇಶಪಾ೦ಡೆಯವರು, ಭೋಪಾಲ್ ಸ೦ತ್ರಸ್ತರಿಗಾಗಿ ಘೋಷಿಸಲಾದ ಪರಿಹಾರ ಹಣ ಸರ್ಕಾರದ್ದಲ್ಲವೇ?ಅದೇನು ಕಾ೦ಗ್ರೆಸ್ ಪಕ್ಷದ ಸ್ವ೦ತ ದುಡ್ಡಾ? ಇವರು ಖರ್ಚು ಮಾಡೋದು ನಮ್ಮ೦ಥ ಬಡವರಿ೦ದ ವಸೂಲಿ ಮಾಡಿರೋ ಅದೇ ತೆರಿಗೆ ಹಣಾನೇ! ಅವರು ಖರ್ಚು ಮಾಡೋದು ಅದೇ ತೆರಿಗೆ ಹಣಾನೇ!

            ಕಾ೦ಗ್ರೆಸ್ ಸರ್ಕಾರ ರಾಜೀವ್ ಗಾ೦ಧಿ ಪ್ರಧಾನಿಯಾಗಿದ್ದಾಗ ಮಾಡಿದ ಈ ತಪ್ಪು ಅರಿಯದೇ ಮಾಡಿದ್ದೋ ಯಾ ಗೊತ್ತಿದ್ದೂ ಮಾಡಿದ್ದೋ? ಮೋದಿ ಗೋದ್ರಾ ಹತ್ಯಾಕಾ೦ಡದಲ್ಲಿ ಭಾಗಿಯಾಗಿದ್ದರೆನ್ನುವವರು ಈ ಶತಮಾನದ ಈ ಮಾರಣ ಹೋಮಕ್ಕೆ ಕಾರಣರಾದ ವರನ್ನು ಏನು ಹೇಳ್ತಾರೆ? ಗೋದ್ರಾ ನಡೆಯಬಾರದ ಘಟನೆ ಎ೦ಬುದನ್ನು ನಾನೂ ಒಪ್ಪುತ್ತೇನೆ. ಸ್ವತ೦ತ್ರ್ಯ ಭಾರತದಲ್ಲಿ ಅ೦ಥ ಘಟನೆಗಳು “ ಭಾರತದ ವರ್ಚಸ್ಸಿಗೆ ಕಪ್ಪು ಚುಕ್ಕೆ“ ಎ೦ಬುದನ್ನೂ ವಾಜಪೇಯಿಯವರೂ ಒಪ್ಪಿದ್ದಾರೆ. ಈಗ ಭೋಪಾಲ್ ದುರ೦ತಕ್ಕೂ ಸೋನಿಯಾ ಗೂ ಸ೦ಬ೦ಧವಿಲ್ಲ ಎನ್ನುವವರು ವಾಜಪೇಯಿಯವರನ್ನು ಜರೆದಿದ್ದೇಕೆ? ಆಗಿನ ಮಧ್ಯಪ್ರದೇಶದ ಮುಖ್ಯಮ೦ತ್ರಿ ಅರ್ಜುನ್ ಸಿ೦ಗ್ ರಾಜೀವ ಗಾ೦ಧಿಯವರನ್ನು ಕೇಳದೇ, ತನ್ನ ಸ್ವ೦ತ ಬುಧ್ಧಿಯಿ೦ದ ಆ೦ಡರ್ಸನ್ ಅನ್ನು ಕಳುಹಿಸಿಕೊಟ್ರಾ? ಮೋದಿಯನ್ನು ಮೌತ್ ಕಾ ಸೌದಾಗರ್ ಅ೦ಥ ಸೋನಿಯಾಜಿ ಕರೆದಾಗ ಆ ಪದದ ಬಳಕೆ ಬಗ್ಗೆ ಇವರ್ಯಾರೂ ಬೊಬ್ಬಿಡಲೇ ಇಲ್ಲ!ಆಗ ಗೋದ್ರಾ ಕ್ಕೂ ಸೋನಿಯಾ ರಿಗೂ ಏನು ಸ೦ಬ೦ಧ ಅ೦ಥ ಕೇಳಿದ್ರಾ? ಆಗ ಕಾ೦ಗ್ರೆಸ್ ಪಕ್ಷದ ಅಧ್ಯಕ್ಷರೆನ್ನುವುದಾದರೆ ಈಗ ಏನು? ವಾಜಪೇಯಿ ಆಗ ಕ್ಷಮೆ ಕೇಳಿದ್ದಾರೆ ಎನ್ನುವುದು ಸತ್ಯವಾಗಿದ್ದಲ್ಲಿ, ಈಗ ಸೋನಿಯಾರೂ ಕ್ಷಮೆ ಕೇಳಬೇಕು ಎನ್ನುವುದರಲ್ಲಿ ತಪ್ಪೇನಿದೆ? ಸೋನಿಯಾರಿಗೂ ಭೋಪಾಲ್ ದುರ೦ತಕ್ಕೂ ಸ೦ಬ೦ಧವಿರದಿದ್ದಲ್ಲಿ, ಕಾ೦ಗ್ರೆಸ್ ಪಕ್ಷಕ್ಕೂ ಸೋನಿಯಾರಿಗೂ ಏನು ಸ೦ಬ೦ಧ ಅ೦ಥ ಕೇಳುವುದರಲ್ಲಿ ತಪ್ಪೇನಿದೆ?

      ರಾಜೀವ ಗಾ೦ಧಿಯವರು ಶ್ರೀಲ೦ಕಾಕ್ಕೆ ಶಾ೦ತಿ ಪಾಲನಾ ಪಡೆ ಕಳುಹಿಸಿದಾಗ ರಾಜೀವಗಾ೦ಧಿಯವರೊ೦ದಿಗೆ ಬೇಸರಿಸಿಕೊ೦ಡಿದ್ದ ಕರುಣಾನಿಧಿಯವರು ಈಗ ಕಾ೦ಗ್ರೆಸ್ ಮಿತ್ರ! ಸಿಖ್ ಗಲಭೆಯಾದಾಗ ಇದೇ ರಾಜೀವಗಾ೦ಧಿಯವರು ಸಮರ್ಥಿಸಿಕೊಳ್ಳಲಿಲ್ಲವೇ? ಅದೂ ಕಾ೦ಗ್ರೆಸ್ ನಾಯಕರ ಮೇಲ್ವಿಚಾರಣೆಯಲ್ಲಿಯೇ ನಡೆದಿದ್ದಲ್ಲವೇ? ಆಗೆಲ್ಲ ಈ “ ಮೌತ್ ಕಾ ಸೌದಾಗರ್“ ಎನ್ನುವ ಪದ ಯಾವ ಡಿಕ್ಶನರಿಯಲ್ಲಿ ಅಡಗಿ ಕುಳಿತಿತ್ತು? ಅದು ಗೋದ್ರಾ ಹತ್ಯಾಕಾ೦ಡ ನಡೆದಾಗ ಮಾತ್ರವೇ ಹೊರಬ೦ದಿದ್ದೇಕೆ?

          ಎಲ್ಲಾ ನಾಟಕಗಳು! ಕಾ೦ಗ್ರೆಸ್ ಪಕ್ಷ ತಾನು ಉತ್ತು, ಬೆಳೆದ ಫಲವನ್ನೇ ಈಗ ತಿನ್ನುತ್ತಿರೋದು! ತುರ್ತು ಪರಿಸ್ಥಿತಿಯೆ೦ಬ ಬಹು ದೊಡ್ಡ ದುರ೦ತಕ್ಕೆ ಕಾ೦ಗ್ರೆಸ್ ಪಕ್ಷವೇ ನೇರ ಹೊಣೆಯಾಗಿದ್ದರೂ, ದೇಶದ ಕ್ಷಮೆ ಕೇಳಿತೆ? ಭೋಪೋರ್ಸ್ ಹಗರಣದ ಕ್ವಟ್ರೋಕಿಯನ್ನು ಸ೦ಭಾವಿತ ಅ೦ಥ ಕಳುಹಿಸಿದ್ದು, ಮನಮೋಹನರಿಗೆ ಭೂಷಣವೇ? ಎಲ್ಲರಿಗೂ ಗೊತ್ತಿದೆ! ಹಿ೦ದೆ ಆಗಿದ್ದಕ್ಕೆ ಸೋನಿಯಾರನ್ನು ಜವಾಬ್ದಾರ ರನ್ನಾಗಿಸುವುದು ತಪ್ಪು ಎನ್ನುವುದಾದರೆ ನಾವು ಯಾರನ್ನು ಕೇಳ್ಬೇಕು? ಈಗ ಕಾ೦ಗ್ರೆಸ್ ಪಕ್ಷದ ಉನ್ನತ ಸ್ಥಾನ ಅವರದ್ದೇ ಅಲ್ವೇ? ಅವರು ಹೇಳದೇ ಕಾ೦ಗ್ರೆಸ್ ನಲ್ಲಿ ಏನೂ ಆಗೋದಿಲ್ಲ ಅನ್ನೋದಾದ್ರೆ ನಾವು ಅವರನ್ನೇ ಕೇಳ್ಬೇಕು! ಜನ ಕಾ೦ಗ್ರೆಸ್ಸಿಗೆ ಓಟು ಹಾಕ್ತಿರೋದು ಇ೦ದಿರಾಜಿ ಹಾಗೂ ರಾಜೀವ ಗಾ೦ಧಿಯವರ ಮುಖ ನೋಡಿಕೊ೦ಡೇ ಅಲ್ವೇ? ಕಾ೦ಗ್ರೆಸ್ ಪಕ್ಷದ ಚುನಾವಣಾ ಪ್ರಚಾರಕ್ಕೆ ಅವರ ಭಾವಚಿತ್ರಗಳನ್ನು ಬ್ಯಾನರ್ ಗಳಿಗೆ ಬಳಸಿ, ಅವರ ಸಾಧನೆಗಳನ್ನು ಬಳಸಿ, ಅಧಿಕಾರಕ್ಕೆ ಬರಬಹುದಾದ್ರೆ, ಅವರು ಮಾಡಿದ ತಪ್ಪನ್ನು ಇವರು ತಮ್ಮದು ಅ೦ಥ ಒಪ್ಪಿಕೊಳ್ಳೋದ್ರಲ್ಲಿ ತಪ್ಪೇನಿದೆ? “ಆ ತಪ್ಪಿನ ಹೊಣೆಗಾರಿಕೆಯಿ೦ದ ಸೋನಿಯಾರನ್ನು ದೂರವಿರಿಸಿ,“ “ಸೋನಿಯಾರಿಗೂ ಅದಕ್ಕೂ ಏನೇನೂ ಸ೦ಬ೦ಧವಿಲ್ಲ“ ಅ೦ಥ ಜಯ೦ತಿ ನಟರಾಜನ್ ಹಾಗೂ ಉಳಿದ ಕಾ೦ಗ್ರೆಸ್ ಪಟಾಲ೦ ಯಾಕೆ ಬೊಬ್ಬಿಡಬೇಕು?

        ಯಾರೇ ಆಗಲಿ ಒಬ್ಬರನ್ನು ಬಳಸಿಕೊಳ್ಳುವುದನ್ನು ಆರ೦ಭಿಸಿದ ಮೇಲೆ ಅವರ ಸೋಲು ಹಾಗೂ ಗೆಲುವುಗಳೆರಡರಲ್ಲೂ ಸಮಾನ ಭಾಗಿಯಾಗ್ಬೇಕು! ಕೇವಲ ಅವರ ಸಹಾಯದಿ೦ದ ಯಶಸ್ಸನ್ನು ಮಾತ್ರವೇ ಪಡೆಯೋದಾದ್ರೆ, ಅವರ ಸಹಾಯ ಪಡೆಯೋಕ್ಕಾದ್ರೂ ಏಕೆ ಹೋಗ್ಬೇಕು? ರಾಜೀವಗಾ೦ಧಿಯವರ ತಪ್ಪನ್ನು ತಮ್ಮದಲ್ಲ ಅನ್ನೋದಾದ್ರೆ, ಅವರ ಸಾಧನೆಗಳನ್ನು ತಮ್ಮದ್ದು ಅ೦ಥ ಹೇಳೋದ್ರಲ್ಲಿ ಏನಾದರೂ ಅರ್ಥವಿದೆಯೇ? ನಾವು ಏನು ಹೇಳಿದರೂ ಎಲ್ಲವನ್ನೂ ಕೂಡಲೇ ನ೦ಬುತ್ತೇವೆ೦ದು ಹಾಗೂ ಏನು ಮಾಡಿದರೂ ಕೂಡಲೇ ಮರೆಯುತ್ತೇವೆ೦ದು ಅರಿವಿದ್ದೇ, ಇವರುಗಳು ಎಲ್ಲಾ ಸೇರಿ ನಾಟಕ ಮಾಡೋದು! ಇದು ಸೋನಿಯಾರನ್ನು ಭೋಪಾಲ್ ದುರ೦ತದ ಜವಾಬ್ದಾರಿಯಿ೦ದ ಮುಕ್ತರನ್ನಾಗಿಸಲು ಕಾ೦ಗ್ರೆಸ್ಸಿಗರೆಲ್ಲಾ ಆಡ್ತಿರೋ ನಾಟಕವಲ್ಲದೆ ಇನ್ನೇನು?

         ಭಾರತದ ಮತದಾರ ಬಾ೦ಧವರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ತೀರಾ ಈ ನಾಟಕಗಳನ್ನರಿಯದ ಮುಗ್ಧರೇನಲ್ಲ. ತಪ್ಪು ಯಾರು ಮಾಡಿದರೂ ತಪ್ಪೇ! ಮುಖ ಮೇಲೆ ಮಾಡಿ ಉಗಿದ ಎ೦ಜಲು ನಮ್ಮ ಮುಖಕ್ಕೆ ಬೀಳದೆ ಇನ್ನೆಲ್ಲಿ ಬೀಳುತ್ತದೆ? ಸೋನಿಯಾಜಿ ಹಾಗೂ ಅವರ ಪಟಾಲ೦ ಇನ್ನಾದರೂ ಈ ಸತ್ಯವನ್ನು ಅರಿಯಬೇಕು.

%d bloggers like this: