ಅಮಾವಾಸ್ಯೆ… ಹನಿಗಳು


1

ಚಂದ್ರ ಕರೆದ .. ಬಾ ಇಲ್ಲಿ ಬೆಳದಿಂಗಳೇ..

ಹೂಂ ಬಂದೆ.. ಇರು.. ಎನ್ನುತ್ತ ಮಗ್ಗಲು ಹೊರಳಿದಾಗ

ಚಂದ್ರನಿಗೆ ಕಂಡಿದ್ದು ಅಮಾವಾಸ್ಯೆ..!!

2

ಗಿಂಡಿಯ ತುಂಬಾ ಕ್ಷೀರ ಸಾಗರ

ದೇವರ ಪ್ರಸಾದವೆಂದು ಸ್ಡೀಕರಿಸಿದ್ದು

ಪರಸ್ಪರ ಒಪ್ಪಿತ ಪರಸಂಗ !!

3

“ಕರುಣಾಳು ಬಾ ಬೆಳಕೇ ಮಸುಕಿದೀ ಮಬ್ಬಿನಲಿ”

ಎನ್ನುತ್ತಾ ಕರೆಯುತ್ತಿದ್ದವನು

ಇದ್ದಕಿದ್ದಂತೆ ಮೂಕನಾದದ್ದು ಏಕೆಂದರೆ

ಮತ್ತೊಬ್ಬಳು ಅಂಧೆ  ಅವನ ಕೈ ಹಿಡಿದಾಗ !!

4

ಅವಳು ಎದೆಯಲ್ಲಿ ಬಿತ್ತಿ ಹೋದ ಸಾವಿರ

ನೆನಪುಗಳೆಲ್ಲವೂ ರಕ್ತದಲ್ಲಿ ಬರೆದ ಅಕ್ಷರಗಳಂತಿದ್ದರೂ

ಬರೆಯುವಾಗಿದ್ದ ತಾಳ್ಮೆ ಅಳಿಸುವಾಗ ಇರಲಿಲ್ಲ..!!

5

ಅಲ್ಲಲ್ಲಿ ಕಳೆದುಹೋದ ಮಾತುಗಳೆಲ್ಲವೂ

ಒಂದರ ಮೇಲೊಂದರಂತೆ  ನೆನೆಪಿಗೆ ಬರುತ್ತಿದ್ದಂತೆ

 ಅವಳು ಹೇಳಿದ್ದು ಕೇಳಿಸಿತು.. “ ಇವತ್ತು ಉಪವಾಸ ” !!

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: