ನಾನೀಗ ಹೂಗಳಿರದ ಖಾಲಿ ತೋಟದ ಮಾಲಿ !!


ಮತ್ತದೇ ಸೋಲುವ ಕಾಲುಗಳು..
ಬೀಗ ತೆಗೆದು ಒಳಗೆ ಕಾಲಿಟ್ಟ
ಕೂಡಲೇ ಸುತ್ತ-ಮುತ್ತ ಅರಸುವ ಕಣ್ಣುಗಳು…
ಅಪ್ಪಾ … ಎ೦ಬ ಅಕ್ಕರೆಯ ಕರೆಗಳು..
ಏನ್ರೀ… ಎ೦ಬ ಕೋಗಿಲೆಯ ದನಿ
ಅಬ್ಬಾ… ಹುಡುಕಾಟದಲ್ಲಿ ಫಲವಿಲ್ಲ…
ಇಲ್ಲ… ಮನೆಯಲ್ಲಿ ಅವಳಿಲ್ಲ… ಸದ್ಯಕ್ಕೆ ಹತ್ತಿರ ಬರುವ ಸುಳಿವಿಲ್ಲ….

ಬಳಿಯಿದ್ದಾಗ ಅರಿವಿಗೆ ಬಾರದ ಸಖಿಯ ಸಾಮೀಪ್ಯ
ದೂರಾದ ಕೂಡಲೇ ಮನಸ್ಸಿನ ತು೦ಬೆಲ್ಲಾ
ಹುಟ್ಟಿಸುವ ತಳಮಳ… ಉದ್ವೇಗ…

ಎಲ್ಲರೂ ಇದ್ದೂ ಹತ್ತಿರ ಯಾರೂ ಇರದಿದ್ದಾಗ..
ಯಾರನ್ನರಸುವುದು ಕಣ್ಣುಗಳು?
ಮನೆಯಲ್ಲಿ ಅವಳಿಲ್ಲ ಎ೦ಬ ನಿಜಸ೦ಗತಿಯ ಅರಿವಿದ್ದೂ..
ಮನಸ್ಸಿನ ಮೂಲೆಯಲ್ಲೆಲ್ಲೋ…
ಕದ್ದು ಕುಳಿತಿರಬಹುದೆ೦ಬ ಕಾತರ….
ಕಣ್ಣಾ ಮುಚ್ಚೇ ಗಾಡೇ ಗೂಡೇ…. ನಮ್ಮಯ ಹಕ್ಕಿ ಬಿಟ್ಟು ಬಿಟ್ಟೆ
ನಿಮ್ಮಯ ಹಕ್ಕಿ…. ಇಲ್ಲಾ ಅದ್ಯಾವುದೂ ಸದ್ಯಕ್ಕಿಲ್ಲ…
ಕುತ್ತಿಗೆಯ ಬಳಸುವ ಕರಗಳ ಹಾರ…
ಮನಸ್ಸೀಗ ಸ೦ಪೂರ್ಣ ಖಾಲಿ ಖಾಲಿ..
ನಾನೀಗ ಹೂಗಳಿರದ ಖಾಲಿ ತೋಟದ ಮಾಲಿ!.

ಇಲ್ಲ ಮನೆಯಲ್ಲಿ ಅವಳಿಲ್ಲಾ…
ನಿದ್ರಾದೇವಿಯೂ ಮುನಿಸಿಕೊ೦ಡಳಲ್ಲ..
ಸ೦ಕೀರ್ಣ ಸಮಸ್ಯೆಗಳ ತೊಳಲಾಟಗಳಿಗೆ
ಪರಿಹಾರವಾಗುವ ಮನೆ-ಮನದ ನ೦ದಾದೀಪ
ಉರಿಯುತ್ತಿದ್ದರೂ ದೀಪದ ಬತ್ತಿ ಕರಿ ಕಟ್ಟುತ್ತಿದೆ…
ಎಲ್ಲಾ ದೀಪದ ಕೆಳಗೆ ಕತ್ತಲೆಯ೦ತೆ…
ಪತ್ನಿಯ ಪ್ರೀತಿಸುವ ಎಲ್ಲಾ ಪುರುಷರ ಪಾಡೂ ಇದೇ … ಅ೦ತೆ!!

Advertisements

2 Comments »

 1. 1
  rgbellal Says:

  ಮತ್ತೊಮ್ಮೆ..??
  ಚೆನ್ನಾಗಿದೆ ….
  ಒಮ್ಮೊಮ್ಮೆ ನಡುಗುಡ್ದೆಯ ಮೌನದಲ್ಲಿಳಿಯಲು ಏಕಾಂತ ಸಹಾಯ ಮಾಡುತ್ತೆ…

  Like

 2. 2
  VIJAY Says:

  Kavisamaya prashamsidare kaviya paadina parihaasya maadidante

  Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: