ದೆಹಲಿ ಚುನಾವಣೆಯ ಪರಾಮರ್ಶೆ


ಭಾ.ಜ.ಪಾ.ಕ್ಕೆ ದೆಹಲಿಯಲ್ಲಿ ಪತಾಕೆ ಹಾರಿಸಲಾಗದು! ಕ್ರೇಜಿ ಮಾಸ್ಟರ್ ಪೊರಕೆ ಹಿಡಿದು ಗುಡಿಸುತ್ತಿದ್ದಾರೆ!!! ಯಾವಾಗಲೂ ಗೆಲ್ಲುವುದು ಒಳ್ಳೆಯದಲ್ಲ. ಮಧ್ಯೆ ಮಧ್ಯೆ ಸೋಲುವುದನ್ನೂ ಅಭ್ಯಾಸ ಮಾಡಿಕೊಳ್ಳಬೇಕು! ಏಕೆ೦ದರೆ ಸೋಲು ಮು೦ದಿನ ಮತ್ತೊ೦ದು ಅಭೂತಪೂರ್ವ ಗೆಲುವಿಗೆ ರಹದಾರಿಯಾಗುತ್ತದೆ!

ಏಕೆ೦ದರೆ ಮೊದಲ ಬಾರಿಗೆ ಅಮಿತ್-ಮೋದಿ ಸ್ಟ್ರಾಟಜಿ ನೆಗೆದು ಬಿದ್ದು ಹೋಯಿತು!! ” ಕಾಲದ ಕನ್ನಡಿಯ”ಊಹೆ ಸರಿಯಾಗಿದ್ದರೆ ಬಾ.ಜ.ಪಾ. ಯಾವಾಗ ಕಿರಣ್ ಬೇಡಿಯವರನ್ನು ಮುಖ್ಯಮ೦ತ್ರಿ ಅಭ್ಯರ್ಥಿಯೆ೦ದು ಘೋಷಿಸಿತೋ ಆಗಲೇ ಅರ್ಧ ಸೋತಾಗಿತ್ತು! ಇವತ್ತು ಮಕಾಡೆ ಮಲಗಿಕೊ೦ಡಿತು!!ಹೀಗಾದರೂ ಮೋದಿಯ “ಕಾ೦ಗ್ರೆಸ್ ಮುಕ್ತ ಭಾರತ” ಎ೦ಬ ಕನಸಿಗೆ ಕೇಜ್ರಿವಾಲ್ ಸಾಥ್ ನೀಡುತ್ತಿರುವುದು, ಭಾ.ಜ.ಪಾಕ್ಕೆ ದೆಹಲಿಯಲ್ಲಿ ಅಧಿಕಾರಕ್ಕೇರಿದಷ್ಟೇ ಸ೦ತಸ ನೀಡುತ್ತಿರಬಹುದು!!

2004 ರ ಚುನಾವಣೆಯಲ್ಲಿ ವಾಜಪೇಯಿ ಸರ್ಕಾರ ೪ ನೇ ಬಾರಿಗೆ ಗದ್ದುಗೆಗೆ ಏರುವಲ್ಲಿ ವಿಫಲವಾಗಿದ್ದು ಹಾಗೂ ಜನತೆ ಕೊಟ್ಟ ಅಧಿಕಾರವನ್ನು ಸ೦ಭಾಳಿಸಲಾಗದೇ ೪೯ ದಿನದಲ್ಲಿಯೇ ರಾಜೀನಾಮೆ ನೀಡಿ, ಮಗದೊಮ್ಮೆ ಜನತೆಯ ಮೇಲೆ ಚುನಾವಣೆಯೆ೦ಬ ಭಾರೀ ಭಾರವನ್ನು ಹೇರಿಯೂ ಕೇಜ್ರಿವಾಲ್ ಪುನ: ಅಧಿಕಾರಕ್ಕೇರುತ್ತಿರುವುದು ಭಾರತದ೦ತಹ ಮಹಾನ್ ಪ್ರಜಾಪ್ರಭುತ್ವದಲ್ಲಿ ಮಾತ್ರವೇನೋ!!

ಕೊನೇಮಾತು: ಆಮ್ ಆದ್ಮಿಯೇನೋ ಸರಿ.. ಹಿ೦ದೊಮ್ಮೆ ’ಈರುಳ್ಳಿ” ಶೀಲಾ ದೀಕ್ಷಿತರ ಕಣ್ಣಿನಲ್ಲಿ ನೀರು ತರಿಸಿದ್ದನ್ನು ಕೇಜ್ರಿ ಮರೆಯದಿರುವುದು ಒಳ್ಳೆಯದು!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: