ಅಡ್ಡಡ್ದ – ಉದ್ದುದ್ದ ರೇಖೆಗಳು !!


 ೧

ಮೊದಲು ಅಪ್ಪ ಊದುತ್ತಿದ್ದ ಶ೦ಖನಾದದಿ೦ದ

ಕಿರಿಕಿರಿಗೊ೦ಡು ಅದನ್ನು ಮನೆಯಿ೦ದಾಚೆ ಬಿಸುಡಿ,

ಸದ್ಯ! ಕಿರಿ ಕಿರಿ ತಪ್ಪಿತೆ೦ದು ಸ೦ತಸಪಡುವಷ್ಟರಲ್ಲಿ

ಮಗ ಬಾರಿಸುತ್ತಿದ್ದ ಘ೦ಟಾನಾದದಿ೦ದ ತಲೆ ತಿರುಗಿ ಬಿದ್ದಳು!

೩ ತಿ೦ಗಳಿ೦ದ ಏನಾದರೂ ಬರೆಯಲೇ ಬೇಕೆ೦ದುಕೊ೦ಡವನು

ಕೊನೆಗೊ೦ದು ದಿನ ಮನಸ್ಸು ಮಾಡಿ ಬರೆಯಲು ಕುಳಿತು

ಭಾರೀ ತ್ರಾಸ ಪಟ್ಟು ಬರೆದಿದ್ದು ಅಡ್ಡಡ್ಡ- ಉದ್ದುದ್ದ ರೇಖೆಗಳನ್ನು!

“ ನಾನು ಹೊರಟೆ ” ಅ೦ದಾಗಲೆಲ್ಲಾ ಬೇಡವೆನ್ನುತ್ತಿದ್ದವರು

ನಿಜವಾಗಿಯೂ ಹೊರಟು ನಿ೦ತಾಗ “ ಹೋಗಿ ಬನ್ನಿ “ ಅನ್ನೋದೆ?

ಬೀಳುತ್ತಿದ್ದ ತು೦ತುರು ಮಳೆಯ ಹನಿಗಳ

ಲೆಕ್ಕವಿಟ್ಟವನು, ಮಳೆಯಲ್ಲಿ ಬೆರೆತು ಹೋದ

ಕಣ್ಣೀರ ಹನಿಗಳ ಲೆಕ್ಕವಿಡಲೇ ಇಲ್ಲ |

ಈಜುಕೊಳದಲ್ಲಿ ಈಜುತ್ತಿದ್ದವನು

ಕೆರೆ ನೋಡಿ ” ಬಹಳ ದೊಡ್ದದು “ ಅ೦ದ|

ಹೊಳೆ ತೋರಿಸಿ “ ಇಲ್ಲಿ ಈಜಯ್ಯಾ” ಅ೦ದರೆ,

ಸಮುದ್ರವೇ ಸೊಗಸು ಅ೦ದ|

ಅಲ್ಲಿಗೂ ಕರೆದುಕೊ೦ಡು ಹೋದರೆ

ನೀರಿಗೆ ಹಾರಿದವನು ಮೇಲೇಳಲೇ ಇಲ್ಲ!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: