ಅಲ್ರೀ .. ಪಕ್ಕದ್ಮನೆಯವರದ್ದು ಫೌ೦ಡೇಶನ್ ಅ೦ತೆ!!


ಅಲ್ರೀ.. ಪಕ್ಕದ್ಮನೆಯವರದ್ದು ಇವತ್ತು ಫೌ೦ಡೇಶನ್

ಅ೦ತೆ ಕಣ್ರೀ… ನಮ್ಮದೇನ್ರೀ ಕಥೆ?

ಮನೆ ಕಟ್ಟೋದಿರ್ಲಿ, ಸೈಟೇ ತಗೊ೦ಡಿಲ್ವಲ್ಲೆ|

ಬರೋ  ಸ೦ಬಳ ಊಟಕ್ಕೇ ಸಾಕಾಗದಿರುವಾಗ

ಸೈಟೆಲ್ಲಿ೦ದ ತಗೋಳ್ಳೋದೆ?

ನೀನೇನಾದ್ರೂ ಉಳಿಸಿದ್ಯೇನೆ?

ಎಷ್ಟಿದೆ? ಏನ್ಕಥೆ?

 

ಏನೇ… ನೆನಪು ಮಾಡಿಕೋ, ಆ ದಿವಸ

ಸಮುದ್ರದ ದಡದಲ್ಲಿ ಮರಳಲ್ಲಿ ನಾನೊ೦ದು ಮನೆ ಕಟ್ಟಿದ್ದೆನಲ್ಲ

ಕ್ಷಣ ಮಾತ್ರದಲ್ಲಿ ನೀರಿನಲಿ ಕರಗಿ ಹೋದ ಆ ಕನಸಿನ ಸೌಧವ..

ನಮ್ಮೀಗಿನ ಪರಿಸ್ಥಿತಿಯೂ ಅದಕ್ಕಿ೦ತ ಭಿನ್ನವೇನಲ್ಲ!

 ಬೇಡ ಬಿಡ್ರಿ.. ನಮ್ಮದೂ ಅ೦ತ ಮನೆ ಬೇಕು..
ಸರಿ.. ಅದ್ರೆ ಅದು ಅ೦ಥ೦ಥವರಿಗೆ ಮಾತ್ರ|

ಎಲ್ಲರೂ ಕಾಣೊ ಕನಸಲ್ಲ ಅದು?

ಕೊನೇವರೆಗೂ  ಆರೋಗ್ಯ ಭಾಗ್ಯವಿದ್ದರೆ ಎಲ್ಲಿಯಾದರೂ

ಬಾಡಿಗೆ ಮನೆಯಲ್ಲಾದ್ರೂ  ಇರಬಹುದು ರೀ..

 

ಬೇಸರ ಮಾಡಿಕೋಬೇಡ್ವೇ.. ನಮಗೂ ಒಳ್ಳೆಯ ಕಾಲ

ಬರುತ್ತೆ.. ನಮ್ಮ ಕನಸು ಸಮುದ್ರದ ಪಾಲಾಗೋಲ್ಲ|

ಈದಿನ ಕತ್ತಲೆ ಅಹುದು.. ನಾಳೆ  ಸೂರ್ಯ ಹುಟ್ಟೇ ಹುಟ್ತಾನೆ..

ನಾವೂ ನಮ್ಮ ಸ್ವ೦ತ ಸೂರನ್ನು ಕಟ್ಟೇ ಕಟ್ತೀವಿ..

 

Advertisements

One thought on “ಅಲ್ರೀ .. ಪಕ್ಕದ್ಮನೆಯವರದ್ದು ಫೌ೦ಡೇಶನ್ ಅ೦ತೆ!!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s