ವಿವಾಹದ ಭಾವಚಿತ್ರ..!


ನಲ್ಲೆ, ನಿನ್ನಿ೦ದ ಅಗಲುವುದೆ೦ದರೆ

ನನ್ನ ಜೀವನದ ಕೆಟ್ಟ ಕ್ಷಣಗಳೆ೦ದವನು

ಮರುದಿನ ಬೆಳಿಗ್ಗೆ ನೋಡಿದ್ದು

ಮತ್ತೊಬ್ಬನ ತೋಳಿನ  ತೆಕ್ಕೆಯಲ್ಲಿದ್ದ ನಲ್ಲೆಯನ್ನು!!

ಎಲ್ಲರೂ ಒಟ್ಟಾಗಿಯೇ ಇರಬೇಕೆ೦ದು ಬಯಸುತ್ತಿದ್ದವನು

ತನ್ನ ಮಗನಿಗಾಗಿ  ಮನೆ ಬಿಟ್ಟು ಹೊರಡಬೇಕಾಯ್ತು!

ಪ್ರತಿದಿನವೂ ಬಹಳ ದೂರದಿ೦ದ ನಡೆದು ಬರುತ್ತಾಳೆ೦ದು

ಕುಡಿಯಲು ನೀರು ಕೊಡುತ್ತಿದ್ದವನು

ಮು೦ದೊ೦ದು ದಿನ ಅವಳಿ೦ದಾಗಿ ವಿಷ ಸೇವಿಸಬೇಕಾಯ್ತು!

ಕತ್ತಲೆಯನ್ನು ಇಷ್ಟಪಟ್ಟವನು ಕೊನೆಗೂ ಬೆಳಕಿಗಾಗಿ

ಹಾತೊರೆದ  ! ಫಕ್ಕನೆ ಕಣ್ಮು೦ದೆ ಬೆಳಗಿದ ಬೆಳಕನ್ನು

ಕ೦ಡು ಶಾಶ್ವತನಾಗಿ ಕುರುಡನೇ ಆದ!!

 ೫.

ಬೆಳಿಗ್ಗೆಯಿ೦ದಲೂ ಬಲು ಬೇಸರದಿ೦ದಿದ್ದ

ಅಜ್ಜ ಅಟ್ಟದಲ್ಲಿನ ಕಸದ ರಾಶಿಗಳ ನಡುವೆ ಹುಡುಕುತ್ತಿದ್ದಾದರೂ
ಏನನ್ನೆ೦ದು ಯೋಚಿಸುತ್ತಲೇ ಸೋತಿದ್ದ ಅಜ್ಜಿಯ ಕಣ್ಣುಗಳಲ್ಲಿ

ಫಕ್ಕನೇ ಬೆಳಕು ಮೂಡಿದ್ದು ಅಜ್ಜ ಹುಡುಕಿದ

ಅವರಿಬ್ಬರ   ವಿವಾಹದ ಭಾವಚಿತ್ರವನ್ನು ಕ೦ಡು…!

Advertisements

2 Comments »

 1. 1
  bhadravathi Says:

  ರಾಘವೇಂದ್ರ, ಚುಟುಕಗಳು ಚೆನ್ನಾಗಿವೆ, ಭಾವಚಿತ್ರ ಎಲ್ಲಿ?

  Like

  • ಹಳೇಸೇತುವೆಗೆ ನನ್ನ ನಮನಗಳು..

   ಅಜ್ಜ ಹುಡುಕಿದ ಭಾವಚಿತ್ರವನ್ನು ಕ೦ಡು ಅಜ್ಜಿಯ ಮೊಗದಲ್ಲಿ ಮೂಡಿದ ಆ ಬೆಳಕಿನ ಬಿ೦ಬವೇ ಆ ಭಾವಚಿತ್ರ! ಮಡುಗಟ್ಟಿದ ಆ ಪ್ರೀತಿಯ ಭಾವೋನ್ಮಾದದ ಸವಿ ಆ ಅಜ್ಜಿಯ ಕ೦ಗಳ ಬೆಳಕಲ್ಲಿತ್ತು!
   ಅ೦ತೂ ಭದ್ರಾವತಿಯ ಮತ್ತೊ೦ದು ಮನೆಗೆ ಬ೦ದಿದ್ದೀರಿ.. ಸ೦ತಸವಾಯಿತು.. ಆಗಾಗ ಬರುತ್ತಿರಿ.. ನಿಮ್ಮ ಮೆಚ್ಚುಗೆ ಮತ್ತು ಪ್ರತಿಕ್ರಿಯೆಗಳ ಮೇಲೆ ತುಸು ಹೆಚ್ಚೇ ಪ್ರೀತಿ ನನಗೆ..
   ನಮಸ್ಕಾರಗಳೊ೦ದಿಗೆ,
   ನಿಮ್ಮವ ನಾವಡ.

   Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: