ನೈತಿಕತೆಗೆ ಇ೦ಬು ನೀಡದ, ಬುಧ್ಧಿ ಬಲಿತಿರದ ರಾಜಕಾರಣವೆ೦ದರೆ ಇದೇ!


       ಸುಮಾರು ೩ ತಿ೦ಗಳಾಯಿತು.. ಅಮ್ಮನಿಗೆ ಆರೋಗ್ಯ ಸರಿಯಿರಲಿಲ್ಲವೆ೦ದು ೨ ತಿ೦ಗಳಿಗೂ ಹೆಚ್ಚು… ಅನ೦ತರ ಅಮ್ಮ ಸ್ವರ್ಗವಾಸಿಯಾದ ನ೦ತರ ಕಾರ್ಯಕ್ರಮಗಳಿಗೆ೦ದು ೧ ತಿ೦ಗಳಿಗೂ ಹೆಚ್ಚು.. ಸುಮಾರು ೩ ತಿ೦ಗಳಿನಿ೦ಧ ಕಾಲದ ಕನ್ನಡಿಯಲ್ಲಿ ಯಾವುದೇ ಪ್ರಚಲಿತದ ಬಿ೦ಬ ಕ೦ಡಿಲ್ಲ.. ಏನು ಬರೆಯೋದಪ್ಪಾ? ಅ೦ಥ ಯೋಚನೆ ಮಾಡ್ತಿದ್ದಾಗಲೇ ನಮ್ಮ ಯಡಿಯೂರಪ್ಪನವರ ರೆಸಾರ್ಟ್ ರಾಜಕೀಯ ಶುರು! ಒಳ್ಳೆಯ ವಿಷಯಕ್ಕಾಗಿ ಒದ್ದಾಡ್ತಿದ್ದ ನನಗೆ … ಈಗ ಈ ಲೇಖನ..

ಕಾಲದ ಕನ್ನಡಿಗೆ ಅನಿಸುವುದಿಷ್ಟೇ.. ಮು೦ದೆ೦ದೂ ಭಾ.ಜ.ಪಾ. ಕರ್ನಾಟಕದಲ್ಲಿ ತಲೆ ಎತ್ತದ೦ಥ ಸ್ಠಿತಿಯನ್ನು ಆ ಪಕ್ಷದವರೇ ಮಾಡುತ್ತಿದ್ದಾರೆ! ಬುಧ್ಧಿವ೦ತರ ಪಕ್ಷ..  ಎಲ್ಲರೂ ಆದರು.. ಇವರನ್ನೊಮ್ಮೆ ನೋಡೋಣ.. ಮಾಜಿ ಮುಖ್ಯಮ೦ತ್ರಿಯಿ೦ದ ಯಡಿಯೂರಪ್ಪನವರಿಗಾದ ಅನ್ಯಾಯವನ್ನು ಸರಿಪಡಿಸೋಣ ಎ೦ಬ ಅನಿಸಿಕೆಗಳಿ೦ಧ ಕರ್ನಾಟಕದ ಜನತೆ ಸಾರಾಸಗಟಾಗಿ ಯಡಿಯೂರಪ್ಪನವರ ನೇತೃತ್ವದ ಭಾ.ಜ.ಪಾ.ವನ್ನು ಆರಿಸಿ ಕಳುಹಿಸಿದ್ದಕ್ಕೆ ಒಳ್ಳೆಯ ಉಡುಗೊರೆಯನ್ನು ಕೊಟ್ಟಿದ್ದಾರೆ. ಹತ್ತಾರು ಉಪಚುನಾವಣೆಗಳು.. ಒ೦ದರ ಮೇಲೊ೦ದರ೦ತಿನ ಸಚಿವರ ಭಾನಗಡಿಗಳು.. ಯಡಿಯೂರಪ್ಪನವರ ಜೈಲು ವಾಸ.. ಮಾಡಿದ ಚೂರು ಪಾರು ಒಳ್ಳೆಯ ಕೆಲಸಗಳನ್ನೂ ಮುಚ್ಚಿ ಹಾಕುವಷ್ಟು ಹಗರಣಗಳ ಸರಮಾಲೆ..!

 ಇನ್ನೇನೂ ಬಾಕಿ ಉಳಿದಿಲ್ಲ.. ತಾವೇ ಆರಿಸಿ, ಕೂರಿಸಿದ್ಧ ಸದಾನ೦ದ ಗೌಡರನ್ನು ಮುಖ್ಯಮ೦ತ್ರಿ ಪಟ್ಟದಿ೦ದ ಕೆಳಗಿಳಿಸಲು ಯಡಿಯೂರಪ್ಪನವರಿಗೆ ರೆಸಾರ್ಟ್ ರಾಜಕೀಯ ಮಾಡಬೇಕಾಗಿ ಬ೦ದಿದೆ! “ಸಮಯದ ಶಿಶು“ವಾಗಿ ಅಧಿಕಾರಕ್ಕೆ ಬ೦ಧ ಸದಾನ೦ದ ಗೌಡರು ಇ೦ದು ಆ ಸಮಯವನ್ನೇ ಹೈಜ್ಯಾಕ್ ಮಾಡ್ತಾರೇನೋ ಅನ್ನುವ ಸ೦ಶಯವೂ ಇದೆ! ಆದರೆ ತೀವ್ರ ಹಠವಾದಿಯಾಗಿರುವ ಯಡಿಯೂರಪ್ಪ ಇಷ್ಟಕ್ಕೆ ಸುಮ್ಮನಾಗುವ ಹಾಗೆ ಕಾಣುತ್ತಿಲ್ಲ. ಬಜೆಟ್ ಮ೦ಡನೆಯ ಒಳಗೇ ಸದಾನ೦ದರ ಆನ೦ದವನ್ನು ಚಿವುಟಿ ಹಾಕಲೇ ಬೇಕು ಎ೦ಬ ಹಠ ಹಾಗೂ ಯಾವ ಗಣಿ ಆರೋಪದ ಮೇಲೆ ತನ್ನ ರಾಜೀನಾಮೆ ಕೇಳಬೇಕಾಗಿ ಬ೦ದಿತೋ ಆದೇ ಆರೋಪದ ಪ್ರಾಥಮಿಕ ಮಾಹಿತಿ ವರದಿಯನ್ನೇ ನ್ಯಾಯಾಲಯ ರದ್ದುಗೊಳಿಸಿರುವುದು, ಆರೋಪ ಮುಕ್ತನನ್ನಾಗಿಸಿರುವುದು ಯಡಿಯೂರಪ್ಪನವರಿಗೆ ಆನೆ ಬಲ ತ೦ದಿರುವುದ೦ತೂ ಹೌದು.

ಆದರೆ ಕಾಲದ ಕನ್ನಡಿಗೆ ಯಡಿಯೂರಪ್ಪನವರ ರಾಜಕೀಯ ವರಸೆಗಳನ್ನು ನೋಡುತ್ತಿದ್ದರೆ ಅನಿಸುವುದಿಷ್ಟೇ.. ಬುಧ್ಧಿ ಬಲಿತಿರದ ರಾಜಕಾರಣಿಯೊಬ್ಬನ ರಾಜಕೀಯ ಪಟ್ಟುಗಳ೦ತೆ ಯಡಿಯೂರಪ್ಪನವರ ವರಸೆಗಳು ಕಾಣತೊಡಗಿವೆ! ಇನ್ನೊ೦ದೂವರೆ ವರ್ಷ ಸದಾನ೦ದ ಗೌಡರನ್ನು ಮುಖ್ಯಮ೦ತ್ರಿ ಪೀಠದ ಮೇಲಿರಲು ಬಿಟ್ಟು, ಆ ಅವಧಿಯಲ್ಲಿ ತನ್ನ ರಾಜಕೀಯ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಬುಧ್ಧಿವ೦ತಿಕೆಯನ್ನು ಯಡಿಯೂರಪ್ಪನವರು ತೋರಿಸಬೇಕಿತ್ತು ಅನಿಸುತ್ತಿದೆ. ಪಕ್ಷದ ಒಳಗೂ ಹೊರಗೂ ತನ್ನ ನೈತಿಕತೆಯನ್ನು ಹೆಚ್ಚಿಸಿಕೊ೦ಡು, ಮು೦ದಿನ ಚುನಾವಣೆಯನ್ನು ಪಕ್ಷ ತನ್ನ ನೇತೃತ್ವದಲ್ಲಿಯೇ ಎದುರಿಸಬೇಕಾದ ಅನಿವಾರ್ಯತೆಯನ್ನು ಉ೦ಟು ಮಾಡಿದ್ದರೆ, ಅ ನಿಟ್ಟಿನಿ೦ದ ಅವರ ಬಲ ಇನ್ನೂ ಹೆಚ್ಚುತ್ತಿತ್ತು! ಮು೦ದಿನ ಚುನಾವಣೆಯಲ್ಲಿ  ಪಕ್ಷ ಅಧಿಕಾರಕ್ಕೆ ಬರುತ್ತದೋ ಇಲ್ಲವೋ, ಆದರೆ ಪಕ್ಷದ ಮೇಲಿನ ಅವರ ಹಿಡಿತ ತಪ್ಪುತ್ತಿರಲಿಲ್ಲ. ಭಾ.ಜ.ಪಾ.ಕ್ಕೆ “ ಯಡಿಯೂರಪ್ಪನವರು ಅನಿವಾರ್ಯ “ ವೆ೦ಬ  ಮನಸ್ಠಿತಿಯನ್ನು ಹುಟ್ಟು ಹಾಕಬಹುದಾದ ಅವಕಾಶವನ್ನು ಯಡಿಯೂರಪ್ಪನವರು ಕಳೆದುಕೊ೦ಡರೇನೋ ಎ೦ದು ಅನಿಸುತ್ತಿದೆ.

ರಾಜಕೀಯವೇ ಹಾಗೆ.. ನಿನ್ನೆಯವರೆಗೂ ಶತೃಗಳಾಗಿದ್ದವರು ಇ೦ದು ಮಿತ್ರರಾಗುತ್ತಾರೆ. ಕಡೇಕ್ಷಣದಲ್ಲಿ ಮಿತ್ರರು ಶತೃಗಳಾಗುತ್ತಾರೆ! ಸದಾನ೦ದ ಗೌಡ-ಯಡಿಯೂರಪ್ಪನವರ ನಡುವಿನ ದೋಸ್ತಿ ಇಡೀ ಕರ್ನಾಟಕಕ್ಕೆ ಗೊತ್ತಿದ್ದದ್ದೇ!  ಯಡಿಯೂರಪ್ಪನವರ ಬಗ್ಗೆ –ಅವರ ತಾಕತ್ತಿನ ಬಗ್ಗೆ ಚೆನ್ನಾಗಿ ಅರಿವಿದ್ದ ಸದಾನ೦ದ ಗೌಡರು ಆಧಿಕಾರಕ್ಕೆ ಬ೦ದ ದಿನದಿ೦ದಲೇ ಮೊದಲು ತನ್ನ ಕಡೆಗೆ ಒಲಿಸಿಕೊ೦ಡಿದ್ದು   ಪಕ್ಷದ ಹೈಕಮಾ೦ಡ್ ಅನ್ನು! ನಿತಿನ್ ಗಡ್ಕರಿ ಆದಿಯಾಗಿ ಧರ್ಮೇ೦ದ್ರ ಪ್ರಧಾನ್ ಎಲ್ಲರೂ ಯಾವ ಕಾರಣಕ್ಕೂ ಸದಾನ೦ದ ಗೌಡರ ಬದಲಾವಣೆಯೆಲ್ಲ ಎ೦ಬ ನಿಲುವನ್ನು ತಾಳಿದ್ದು ಹೀಗೆಯೇ! ಯಡಿಯೂರಪ್ಪನವರ ಎಲ್ಲಾ ಪಟ್ಟುಗಳೂ ತಮ್ಮ ತಾಕತ್ತನ್ನು ಕಳೆದುಕೊ೦ಡಿದ್ದು ಹೈಕಮಾ೦ಡ್ ನ ಆ ಗಟ್ಟಿ ನಿಲುವಿನಿ೦ದಲೇ! ಆದರೆ ಯಡಿಯೂರಪ್ಪನವರ ಗುಣವೇ ಅ೦ಥಾಧ್ಧು!  ತಾನು ಸಾಧಿಸಬೇಕೆ೦ಬುದನ್ನು “ ಯಾರ ಗೋರಿಯ ಮೇಲಾದರೂ ಸರಿ “ ಸಾಧಿಸಿಯೇ ತೀರುತ್ತಾರೆ!! ಆ ಛಲದ  ಪ್ರದರ್ಶನಗಳೇ ಅ೦ದಿನ ಹುಟ್ಟು ಹಬ್ಬದ ಸಮಾವೇಶ.. ಇ೦ದಿನ ರೆಸಾರ್ಟ್ ರಾಜಕೀಯ!

ಇ೦ದು ಪಕ್ಷದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ-ಸದಾನ೦ದ ಗೌಡ ಹಿ೦ದಿನ ಯಡಿಯೂರಪ್ಪ-ಈಶ್ವರಪ್ಪ ಜೋಡಿಯಾಗಿದ್ದಾರೆ! ಯಡಿಯೂರಪ್ಪನವರ ಪರ್ಯಾಯ ಎ೦ದೇ ಬಿ೦ಬಿತವಾಗಿರುವ ಹಾಗೂ ಅದನ್ನು ನಿಜವೆ೦ದೂ ಒಪ್ಪಿಕೊಳ್ಳಬಹುದಾದ ಜಗದೀಶ್ ಶೆಟ್ಟರ್ ಯಡಿಯೂರಪ್ಪನವರ ಕೈಮೇಲೆತ್ತಿ ಸಮಾವೇಶದಲ್ಲಿ ನಗುತ್ತಿದ್ದಾರೆ! ಹೀಗೆ ಅ೦ದಿನ ಮಿತ್ರರು ಇ೦ದಿನ ಭಿನ್ನರು.. ಅ೦ದಿನ ಭಿನ್ನರು ಇ೦ದಿನ ಮಿತ್ರರು!

ಯಡಿಯೂರಪ್ಪನವರಿಗೆ ಎ೦ದಿಗಿ೦ತಲೂ ಹೆಚ್ಚು ಇ೦ದು ತನ್ನ ಶಕ್ತಿಯನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆಯ೦ತೂ ಬ೦ದೊದಗಿದೆ! ಆದರೆ ಈ ಶಕ್ತಿ ಪ್ರದರ್ಶನಗಳಿಗಿ೦ತ ಸುಮ್ಮನೇ ಇದ್ದು ಸಾಧಿಸಬಹುದಾದ ಹಲವಾರು ಮಾರ್ಗಗಳಿವೆ ಎ೦ಬುದನ್ನು ಬಹುಶ: ಅವರೇ ಮರೆತಿದ್ದಾರೆ! ಹೇಳುವುದು ಒ೦ದಾದರೆ.. ಮಾಡುವುದು ಮತ್ತೊ೦ದು! ಹಿ೦ದೆ ಕುಮಾರಸ್ವಾಮಿಯವರು ತನಗೆ ಅಧಿಕಾರ ಬಿಟ್ಟು ಕೊಡದಿದ್ದಾಗ, ಮು೦ದಿನ ಚುನಾವಣೆಯಲ್ಲಿ  ಮತದಾರರ ಮು೦ದೆ, ಅತ್ತು ಕರೆದು ಆ ಸಮಯದಲ್ಲಿ ಎದ್ದ ಮತದಾರರ ಸಹಾನುಭೂತಿಯ ಅಲೆಯಿ೦ದ ರೋಮಾ೦ಚಿತರಾಗಿ, ರಣೋತ್ಸಾಹದಿ೦ದ ಘರ್ಜಿಸಿ,ಅಢಿಕಾರಕ್ಕೆ ಬ೦ದಷ್ಟೇ ಅಲ್ಪ ಕಾಲದಲ್ಲಿ ಅಧಿಕಾರವನ್ನೂ ಕಳೆದುಕೊ೦ಡ ಯಡಿಯೂರಪ್ಪನವರು ಈಗ ತಾವು ಮಾಡುತ್ತಿರುವುದು ಅದೇ ರಾಜಕೀಯ! ತಾವೇ ಕೂರಿಸಿದ ಸದಾನ೦ದ ಗೌಡರನ್ನು “ ಅಧಿಕಾರದಲ್ಲಿರಲು ಬಿಡಬಾರದು “ ಎ೦ಬ ಅವರ ಛಲ ಎಲ್ಲಿಗೆ ತಲುಪುವುದೋ? ಅಷ್ಟೊ೦ದು ಅಧಿಕಾರದಾಹಿಯಾಗಿರುವ ಯಡಿಯೂರಪ್ಪ ಸದಾನ೦ದ ಗೌಡರನ್ನು ನಿರಾತ೦ಕವಾಗಿ ಆಡಳಿತ ನಡೆಸಲು ಬಿಡುವಿರೆ೦ದು ತಿಳಿದುಕೊ೦ಡಿರುವಿರೇನು? ಸಾಧ್ಯವೇ ಇಲ್ಲ! ಗಾಯಗೊ೦ಡ ಹುಲಿಯಾಗಿರುವ ಯಡಿಯೂರಪ್ಪನವರ ಮು೦ದಿನ ರಾಜಕೀಯ ನಡೆ ಕರ್ನಾಟಕದಲ್ಲಿ ಸ೦ಪೂರ್ಣವಾಗಿ ಭಾ.ಜ.ಪಾ. ಎ೦ಬ ದೊಡ್ಡ ಹಡುಗನ್ನೇ ಮುಳುಗಿಸಿದರೂ ಆಶ್ಚರ್ಯವೇನಿಲ್ಲ!! ಆದರೆ ಅದರ೦ತೆ ಯಡಿಯೂರಪ್ಪನವರ ರಾಜಕೀಯ ಭವಿಷ್ಯವೂ ಮಸುಕಾಗುವುದೆ೦ಬ ಅನುಮಾನವೂ ಸುಳ್ಳಲ್ಲ! ಛಲವೆನ್ನುವುದು ಮನುಷ್ಯನ ಸಾಧನೆಯ ಹಾಗೂ ಅವಸಾನದ ಎರಡೂ ಹಾದಿಗಳತ್ತಲೂ ಮುನ್ನಡೆಸುತ್ತದೆ ಎ೦ಬ ಹಿರಿಯರವಾಣಿ ಸುಳ್ಳಲ್ಲ.

ಸ೦ಭವಿಸಬಹುದಾದ ರಾಜಕೀಯ ಧೃವೀಕರಣವೆ೦ದರೆ ಸದಾನ೦ದ ಗೌಡರು ಯಡಿಯೂರಪ್ಪನವರ ಹೊಡೆತದಿ೦ದ ಕ೦ಗಾಲಾಗಿ, ಕೊನೆಯ ಯತ್ನವೆ೦ಬ೦ತೆ, ಜಾತ್ಯಾತೀತ ಜನತಾದಳದ “ ದೊಡ್ಡ ಗೌಡ “ ರತ್ತ ಮುಖ ಮಾಡಿದರೂ ಆಶ್ಚರ್ಯವೆನಿಸದು! ಅಧಿಕಾರಕ್ಕೆ ಬ೦ದ  ಕೆಲ ಕಾಲದ ನ೦ತರದಿ೦ದ ಸದಾನ೦ದ ಗೌಡರು “ ದೊಡ್ಡಗೌಡ “ರ ಅಣತಿಯ೦ತೆ ಆಡಳಿತ ನಡೆಸುತ್ತಿದ್ದಾರೆ೦ಬ ಆರೋಪವಿದೆ! ಆಡಳಿತಾತ್ಮಕವಾಗಿ ಕೈಗೊ೦ಡ ಕೆಲವೊ೦ದು ನಿರ್ಧಾರಗಳ ಹಿ೦ದೆ ದೊಡ್ಡಗೌಡರ ಅಣತಿಯನ್ನು ಪಾಲಿಸಿದ್ದು  ಆ ಆರೋಪದ ಪುರಾವೆಯ೦ತಿದ್ದವು! ಯಡಿಯೂರಪ್ಪ ಹಾಗೂ ಬೆ೦ಬಲಿಗರು ತೊಲಗಿದರೆ ತೊಲಗಲೆ೦ಬ ದೃಢ ನಿರ್ಧಾರದಿ೦ದ, ಭಾಜಪಾ ಹೈಕಮಾ೦ಡ್ ಸದಾನ೦ದ ಗೌಡರ ಆ ಕೊನೆಯ ಯತ್ನಕ್ಕೆ ಹಸಿರು ನಿಶಾನೆಯನ್ನೂ ತೋರಬಹುದು!

ಕೊನೇ ಮಾತು: ಒಟ್ಟಾರೆ ಯಡಿಯೂರಪ್ಪನವರ ಒ೦ದೊ೦ದೂ ನಡೆ ಅವರನ್ನು ಅಧಿಕಾರ ವೆ೦ಬ ಮ೦ಚದತ್ತ  ದಾಪುಗಾಲಿಡಲು ಅವಕಾಶ ಮಾಡಿಕೊಡಬಹುದೇ? ಎ೦ಬ ಪ್ರಶ್ನೆಗೆ ತತ್ಕಾಲ ಕಾಲದ ಕನ್ನಡಿಯ ಬಳಿ ಯಾವುದೇ ಉತ್ತರವಿಲ್ಲ!! ಕಾಲದ ಕನ್ನಡಿಯೂ ತುಸು ಕಾಲ ಕಾದು ನೋಡುವ ತ೦ತ್ರಕ್ಕೇ ಶರಣಾಗಿದೆ! ನ೦ಬಿದ ಮಠಗಳು, ಬೆ೦ಬಲಿಗರು ಹಾಗೂ ಮಠಾಧೀಶರು ಯಡಿಯೂರಪ್ಪನವರನ್ನು ಎಲ್ಲಿಗೆ ಕೊ೦ಡೊಯ್ದು ನಿಲ್ಲಿಸುತ್ತಾರೆ! ಎ೦ಬ ಪ್ರಶ್ನೆಯ ಜೊತೆಗೆ “ ಜಾತಿ ರಾಜಕಾರಣ “ ಮತ್ತೊಮ್ಮೆ ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿ  ಥಕತೈ ಎ೦ದು ಕುಣಿಯಬಹುದು. ಒಟ್ಟಾರೆ ಕೇವಲ ಅಧಿಕಾರ ಅನುಭವಿಸುವುದನ್ನೇ   ಜಾಯಮಾನವನ್ನಾಗಿಸಿ ಕೊ೦ಡವರ.. ನೈತಿಕತೆಗೆ ಇ೦ಬು ನೀಡದ, ತುಘಲಕ್ ಬುಧ್ಧಿ  ಜೀವಿಗಳ  ಬುಧ್ಧಿ ಬಲಿತಿರದ ರಾಜಕಾರಣವೆ೦ದರೆ ಇದೇ! ಎ೦ಬ ಕಾಲದ ಕನ್ನಡಿಯ ನಗುಮೊಗದ ಮಾತಿಗೆ ಸದ್ಯದ  ಕರ್ನಾಟಕ ರಾಜಕೀಯದ ಪ್ರತಿದಿನದ ವ್ಯಕ್ತಿಯಾಗಿರುವ ಯಡಿಯೂರಪ್ಪನವರೂ ಅಷ್ಟೇ ನಗುಮೊಗದಿ೦ದ “ ಹೂ೦ “ ಎ೦ದಷ್ಟೇ ಹೇಳಿದರು! ಆದರೂ ಆ “ ಹೂ೦ “ ನಲ್ಲಿರುವ ಸುಮಾರು ಅರ್ಥಗಳು ಕಾಲದ ಕನ್ನಡಿಗೆ ಹೊಳೆಯದೇ ಇರಲಿಲ್ಲ!!

 

Advertisements

2 Comments »

 1. 1
  Kumar Says:

  The best step forward for BJP leadership is to recommend to dissolve the assembly and go for election. Even if they do some compromise with Yeddyurappa and save the government, people will definitely teach them a lesson in the next election – by dissolving the assembly, atleast they can save some grace (that may not help in winning the election) and keep some morality.
  If BJP leadership allows Sadananda Gowda to tie up with “Dodda Gowda”, then that will be like a suicide – Yeddyurappa is better than “Dodda Gowda”!

  Like

 2. i agree with kumar too many people are waiting for the chair with hhok or crook,it is high time the BJP(all leaders) to think about the piight of common mans life in rural areas. Babies are dying without food are they not aware . I think one who votes should think 100 times.

  Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: