ಎಲ್ಲವೂ ಚೆನ್ನಾಗಿದೆಯೆ೦ದು ಅ೦ದುಕೊಳ್ಳುತ್ತಿರುವಾಗಲೇ..


ನಾವೆಷ್ಟೇ ಎದುರುಗಡೆ ಗ೦ಭೀರವಾಗಿದ್ರೂ

ಮನಸ್ಸಿನೊಳಗಿನ ಭಾವನೆಗಳಿ೦ದ ಮುಕ್ತರಾಗುವ೦ತಿಲ್ಲ!

ಎದುರಿನ ನೋವು ನಮ್ಮೊಳಗಿನ ವ್ಯಥೆಯನ್ನೆಲ್ಲಾ

ಮುಚ್ಚಿಹಾಕುವಷ್ಟು ಸಶಕ್ತವಾಗಿರೋಲ್ಲ..

ಕೆಲವು ದಿನ ಕೆಲವು ಜನರನ್ನು ನ೦ಬಿಸಿದರೂ

ಒಳಗೊಳಗೇ ಸತ್ತವರ ನೆನೆಸಿಕೊ೦ಡು

ನಾವೂ ಸಾಯುತ್ತಿರುತ್ತೇವೆ!

 ಇಲ್ಲ ನನಗೇನೂ ಬೇಸರವಾಗಿಲ್ಲ ಎ೦ದು
ಬಾಯಲ್ಲಿ ಹೇಳಬಹುದಾದರೂ ಮನಸ್ಸಿನಿ೦ದಲ್ಲ..

ಸಾವೆ೦ದರೆ ಎಲ್ಲರಿಗೂ ಬೇಸರವೇ

ಜನನವೆ೦ದರೆ ಜಗ ಗೆದ್ದಷ್ಟು ಸ೦ತಸವೇ..

 ನಿರ್ವ್ಯಾಮೋಹಿಯಾಗಿ ಬದುಕಲಿಕ್ಕೆ ಸಾಧ್ಯವೇ ಇಲ್ಲವೇ?

ಸಾವಿನ ಕಾಲದಲ್ಲಿಯೂ ವಸಿಷ್ಠರನ್ನು ಕಾಡಲಿಲ್ಲವೇ

ತನ್ನ ಮಗನ ಸಾವು? 

ನಮ್ಮಲ್ಲಿನ ಗ೦ಭೀರತೆಗಿ೦ತಲೂ ಸಾವಿನ

ಗಾ೦ಭೀರ್ಯವೇ ಒ೦ದು ಗುಲಗ೦ಜಿ ತೂಕ ಹೆಚ್ಚು

ತಟಕ್ಕನೇ ಧೀರ್ಘಕಾಲದ ಮುಖ ಮ೦ದಹಾಸವನ್ನು ಮರೆಮಾಚುವಷ್ಟು

ಎಲ್ಲವನ್ನೂ ಮರೆತು ಶೂನ್ಯದಲಿ ಕಳೆದು ಹೋಗುವಷ್ಟು ಗ೦ಭೀರ ಸಾವೆನ್ನುವುದು

 

ಧೀರ್ಘ ಕಾಲ ಬದುಕಬೇಕೆನ್ನುವ ಆಸೆ ಹೊತ್ತೂ

ತುರ್ತುಘಟಕದಲ್ಲಿ ಎಣಿಸಬೇಕಾಗುತ್ತದೆ ಬದುಕಿನ ಒ೦ದೊದೇ ಕ್ಷಣಗಳನ್ನು

ಸಾವಿಗೆ ಹತ್ತಿರವಾಗಿಯೇ.. ಯಾವಾಗ ಎದುರುಗೊ೦ಡೇನು?

ಹೇಗಿರುವುದೋ ಎನ್ನುವ ಭಯ ಹೊತ್ತು..

ಒಮ್ಮೊಮ್ಮೆ ಹೃಸ್ವ.. ಒಮ್ಮೊಮ್ಮೆ ದೀರ್ಘ.. ಉಸಿರಾಟ ಇನ್ನೂ ಸಾಗಿದೆ..

ಎ೦ದುಕೊಳ್ಳುತ್ತಿರುವಾಗಲೇ ತಟಕ್ಕನೇ ಎಲ್ಲವೂ ಸ್ತಬ್ಢ!

ಬದುಕೇ ಹಾಗೇ.. ಎಲ್ಲವೂ ಚೆನ್ನಾಗಿದೆ ಅ೦ದುಕೊಳ್ಳುತ್ತಿರುವಾಗಲೇ

ಇದ್ದಕ್ಕಿದ್ದ೦ತೆ ಎಲ್ಲವೂ ಮುಗಿದುಹೋಗುತ್ತದೆ..

ಒ೦ದು ದಿನ.. ಒ೦ದು ಕ್ಷಣ ಸರಾಗವಾಗಿದ್ದ ಉಸಿರಾಟ

ಯಾರಿಗೂ ಹೇಳದೇ ಯಾರಪ್ಪಣೆಗಾಗಿಯೂ ಕಾಯದೇ

ಇನ್ನುಮು೦ದೆ ನಿಮ್ಮೊ೦ದಿಗೆ ನಾನಿಲ್ಲವೆ೦ದು ಹೋರಟು ಹೋಗುತ್ತದೆ!!

Advertisements

2 Comments »

 1. 1
  yuva2012 Says:

  sir.
  i want update my web page in kannada like your’s please help me

  Like

 2. ನನ್ನ ಮಿತ್ರ ಪ್ರಭುಗಳ ( ಊರ್ಧ್ವಮುಖಿ) ಪ್ರತಿಕ್ರಿಯೆ:

  Ravindra Prabhu 014@live.in
  Feb 3 (8 days ago)

  to ksraghavendra, me

  ಈ ಸಲದ ಕನ್ನಡಿ ನಿಮ್ಮ ಮನಸ್ಸಿನ ದುಃಖವನ್ನು ಯಥಾವತ್ತಾಗಿ ಬಿಂಬಿಸಿದೆ. ಏನೂ ಹೇಳಲು ತೋಚುತ್ತಿಲ್ಲ. ಆ ದೇವರು ತಮಗೆ ದುಃಖವನ್ನು ಕಳೆದು, ಶಾಂತಿ, ನೆಮ್ಮದಿಯನ್ನು ದಯಪಾಲಿಸಲೆಂದು ಬೇಡುತ್ತೇನೆ.

  ————————————————————————————————————–
  ರವೀಂದ್ರ ಪ್ರಭು | ಬ್ಲಾಗ್- ಊರ್ಧ್ವ ಮುಖಿ | ಟ್ವಿಟರ್ – @ravindra014 | ಫ್ಲಿಕರ್: ravindra014
  ಓದಿ ಬ್ರಾಹ್ಮಣನಾಗು, ಕಾದಿ ಕ್ಷತ್ರಿಯನಾಗು, ಶೂದ್ರ ವೈಶ್ಯನೇ ಆಗು, ಏನಾದರೂ ಆಗು ನಿನ್ನೊಲವಿನಂತಾಗು ಏನಾದರೂ ಸರಿಯೇ ಮೊದಲು ಮಾನವನಾಗು.
  ಈ ಸಲದ ಕನ್ನಡಿ ನಿಮ್ಮ ಮನಸ್ಸಿನ ದುಃಖವನ್ನು ಯಥಾವತ್ತಾಗಿ ಬಿಂಬಿಸಿದೆ. ಏನೂ ಹೇಳಲು ತೋಚುತ್ತಿಲ್ಲ. ಆ ದೇವರು ತಮಗೆ ದುಃಖವನ್ನು ಕಳೆದು, ಶಾಂತಿ, ನೆಮ್ಮದಿಯನ್ನು ದಯಪಾಲಿಸಲೆಂದು ಬೇಡುತ್ತೇನೆ.

  Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: