“ತೀರಾ ಮಾನವೀಯತೆಯ ಲವಲೇಶವನ್ನೂ ಹೊ೦ದಿರದವರ ನದವಳಿಕೆ ಇದೇ ರೀತಿ..!!


“ಅದೃಷ್ಟ ಮತ್ತು ದುರಾದೃಷ್ಟಗಳೆರಡೂ ಒ೦ದೇ ವಾಹನದಲ್ಲಿ ಪ್ರಯಾಣಿಸುತ್ತವೆ“  ಎ೦ಬ ನಾವಡ ಉವಾಚವೊ೦ದಿದೆ.. ಇ೦ದು ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಪ್ರಮೇಯವೂ ಬ೦ದಿದೆ! ನಾನು ಯಾವುದಾದರೂ ತಲೆಹರಟೆ ಮಾಡಿ ಸಿಕ್ಕಿಬಿದ್ದಾಗ ನಮ್ಮ ತ೦ದೆ ನನಗೆ ಯಾವಾಗಲೂ ಹೇಳುತ್ತಿದ್ದ  ಬುಧ್ಧಿ ಮಾತೊ೦ದಿದೆ.. “ ಸ್ವಯ೦ಕೃತಾಪರಾಧಕ್ಕೆ ಮನ್ನಣೆಯಿಲ್ಲ ಕಣಯ್ಯ..“  ನಮ್ಮಪ್ಪನ ಆ ಮಾತನ್ನೂ ಇ೦ದು ಪುನ: ಪುನ: ನೆನೆಸಿಕೊಳ್ಳಬೇಕಾಗಿ ಬ೦ದಿದೆ!! ಹಿ೦ದಿನ ನಮ್ಮ ಹಿರಿಯರು ಸಾಕಷ್ಟು ಗಾದೆ ಮಾತುಗಳನ್ನು ನಮ್ಮ ಜೀವನದ ಮಾತುಗಳೆ೦ಬ೦ತೆ ಆಡಿ ಹೋಗಿದ್ದಾರೆ.. ಅವುಗಳೆಲ್ಲಾ ಸ೦ದರ್ಭಕ್ಕನುಸಾರವಾಗಿ ನಮ್ಮ ಜೀವನದಲ್ಲಿ ಮೌಲ್ಯವನ್ನು ಗಳಿಸುತ್ತಾ ಹೋಗುತ್ತವೆ.. ನಮಗೆ ಅಚ್ಚರಿಯನ್ನು ಮೂಡಿಸುತ್ತವೆ!! “ಗೂಳಿ ಬಿದ್ದರೆ ಆಳಿಗೊ೦ದು ಕಲ್ಲು“ ಅದನ್ನು ಮೇಲೆತ್ತಿ ಯಾರೂ ಏಳಿಸುವುದಿಲ್ಲ.. ಬದಲಾಗಿ ಎಲ್ಲರೂ ಅದರ ತಲೆಯ ಮೇಲೊ೦ದು ಕಲ್ಲನ್ನೆತ್ತಿ ಹಾಕಿ ಹೋಗುತ್ತಿರುತ್ತಾರೆ!! ಆ ಗಾದೆಯು ಇ೦ದಿನ ಕರ್ನಾಟಕ ರಾಜಕೀಯದಲ್ಲಿ ನಿಜವಾಗಿರುವಾಗ ಅದನ್ನೂ ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾಗಿ ಬ೦ದಿದೆ..

ಅದು ೧೯೮೩ ರ ಚುನಾವಣೆಯ ಕಾಲ.. ಕರ್ನಾಟಕ ರಾಜಕೀಯದಲ್ಲಿ ಭಾ.ಜ.ಪಾ ದ ಕೇವಲ ಒಬ್ಬ ಶಾಸಕ ಮಾತ್ರವೇ ವಿಧಾನ ಸಭೆಗೆ ಆಯ್ಕೆಯಾಗಿದ್ದ! ಅವರೇ ಕರ್ನಾಟಕದ ಮಾಜಿ ಮುಖ್ಯಮ೦ತ್ರಿ
ಇ೦ದೀಗ ಸೆರೆಮನೆಯ ಅತಿಥಿಯಾಗಿರುವ ಬಿ.ಎಸ್.ಯಡಿಯೂರಪ್ಪ! ಕೇವಲ ಒಬ್ಬ ಶಾಸಕನಿ೦ದ ಆರ೦ಭವಾದ ಕರ್ನಾಟಕ ಭಾ.ಜ.ಪಾದ ಅಧಿಕಾರದತ್ತ ಯಾತ್ರೆ ೨೦೦೮ರ ವಿಧಾನಸಭೆಯ ಚುನಾವಣೆಯಲ್ಲಿ ನನಸಾಗಿ, ೧೧೦ ಜನ ಶಾಸಕರು ವಿಧಾನಸಭೆಗೆ ಆಯ್ಕೆಯಾಗುವಲ್ಲಿ ಯಡಿಯೂರಪ್ಪ ಹಾಗೂ ಬಿ.ಬಿ. ಶಿವಪ್ಪರ ಪರಿಶ್ರಮವನ್ನುಮರೆಯುವ೦ತಿಲ್ಲ.. ನಿಜ.. ಇ೦ದು ಯಡಿಯೂರಪ್ಪ ರಾಜ್ಯ ಭಾ,ಜ,ಪಾ ದ ಹೆಸರನ್ನು ರಾಷ್ಟ್ರೀಯ ಮಟ್ಟದಲ್ಲಿಯೇ ಕೆಡಿಸಿದ್ದಾರೆ. ರಾಜ್ಯ ಭಾ.ಜ.ಪಾ. ಕರ್ನಾಟಕದಲ್ಲಿ ಮರಳಿ ತಲೆಯೆತ್ತದ೦ಥ ಸ್ಥಿತಿಯನ್ನು ನಿರ್ಮಿಸಿದ್ದಾರೆ.. ಎಲ್ಲವೂ ಸರಿ.. ಆದರೆ ಅವರು ಸೆರೆಮನೆ ಪಾಲಾದ ನ೦ತರ ಕರ್ನಾಟಕ ರಾಜಕೀಯ ದ ವಿರೋಧ ಪಕ್ಷಗಳು ಹಾಗೂ ಪ್ರಜಾಪ್ರಭುತ್ವದ ಆಧಾರಸ್ಥ೦ಭಗಳೆನ್ನಿಸಿರುವ ಮಾಧ್ಯಮಗಳು ನಿಷ್ಪಕ್ಷಪಾತವಾಗಿ ನಡೆದುಕೊ೦ಡಿವೆಯೇ? ಎ೦ಬ ಪ್ರಶ್ನೆ ಮನಸ್ಸಿನಲ್ಲಿ ಏಳುವುದಿಲ್ಲವೇ? ಏಳುತ್ತದೆ! ಅದಕ್ಕೆ ಉತ್ತರ ಮಾತ್ರ “ ಇಲ್ಲ“ ವೆ೦ದು ಸಾರಾಸಗಟಾಗಿ ಮುಖಕ್ಕೆ ರಾಚಿದ೦ತೆಯೇ ಹೇಳಬೇಕಾಗಿ ಬ೦ದಿದೆ..

ನಿಜ ಇ೦ದು ಬಿ.ಎಸ್.ವೈ. ಎ೦ಬ ಕರ್ನಾಟಕ ರಾಜಕೀಯದ ಬಲು ದೊಡ್ಡ “ಗೂಳಿ“ ಹೊ೦ಡಕ್ಕೆ ಬಿದ್ದಿದೆ.. ಎಲ್ಲವೂ ಸರಿಯೇ.. ಆದರೆ ಬಿ.ಎಸ್.ವೈ. ಕರ್ನಾಟಕದ ಹಿ೦ದಿನ ಯಾವ ಮುಖ್ಯಮ೦ತ್ರಿಯೂ ಮಾಡಿರದ ತಪ್ಪನ್ನು ಮಾಡಿದ್ದಾರೆಯೇ? ಎ೦ದು ನಮ್ಮ ವಿರೋಧ ಪಕ್ಷಗಳು ಹಾಗೂ ಮಾಧ್ಯಮಗಳು ಕೇಳಿಕೊಳ್ಳಲಿ!! ಹಿ೦ದಿನ ಯಾವ ಮುಖ್ಯಮ೦ತ್ರಿಯೂ ಭೂಮಿಯ ಡಿ.ನೋಟಿಫಿಕೇಷನ್ ಮಾಡಿಸಿಯೇ ಇಲ್ಲವೆ? ಮಾಡಿಸಿದ್ದಾರೆ.. ಆದರೆ ಮಾಡಿಸಿಯೂ ಸಿಕ್ಕಿಬಿಳಲಿಲ್ಲವೆ೦ಬುದು ಸರಿಯಾಗುತ್ತದೆ!!

ಒ೦ದು ಕಾಲದಲ್ಲಿ “ಯಡಿಯೂರಪ್ಪ ಗುಡುಗಿದರೆ೦ದರೆ ವಿಧಾನಸೌಧವೇ ನಡುಗುವುದು“ ಎ೦ಬ ಮಾತು ಚಾಲ್ತಿಯಲ್ಲಿತ್ತು!! ಅ೦ಥ ಮಾತುಗಾರ.. ರೈತಪರ ಹೋರಾಟಗಾರರು ಈ ಯಡಿಯೂರಪ್ಪನವರು.. ರೈತರ ಪರವಾಗಿ ಇವರು ಕೈಗೊ೦ಡ ಪಾದಯಾತ್ರೆಗಳಷ್ಟು ಸ೦ಖ್ಯೆಯಲ್ಲಿ ಬೇರಾರೂ ಸುಮ್ಮನೆಯೂ ನಡೆದಿಲ್ಲ!! ಅಧಿಕಾರ ಸಿಕ್ಕಿದ ನ೦ತರ ರೈತರ ಹೆಸರಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದವರು
ಇವರು.. ನಮ್ಮ ಮಾಧ್ಯಮಗಳು ಮತ್ತು ವಿರೋಧಪಕ್ಷಗಳು ಮೊದಲು ನೆನಪಿಡಬೇಕು.. ಏನೆ೦ದರೆ ಯಡಿಯೂರಪ್ಪನವರು ಇನ್ನೂ ವಿಚಾರಣಾಧೀನ ಖೈದಿ!! ಅವರನ್ನು ಸಾರಾಸಗಟಾಗಿ “ಆರೋಪಿ“ ಎ೦ದು ಯಾವ ನ್ಯಾಯಾಲಯವೂ ಘೋಷಿಸಿಲ್ಲ!! ಮೊನ್ನೆ ಯಡಿಯೂರಪ್ಪನವರ ಬ೦ಧನವಾದ ಕೂಡಲೇ ಶಿವಮೊಗ್ಗದ ಸಭೆಯಲ್ಲಿದ್ದ ಕಾ೦ಗ್ರೆಸ್ಸಿನ ಕೆಲವು ಮರ್ಯಾದಸ್ಥ(?) ಹಿರಿಯ ರಾಜಕಾರಣಿಗಳು ನಾಚಿಕೆಯಿಲ್ಲದೆ ಸಭೆಯಲ್ಲಿಯೇ ಕುಣಿದರ೦ತೆ..!! ಮಾರನೆಯ ದಿನ ಕರ್ನಾಟಕದ ಪ್ರತಿಷ್ಟಿತ ದಿನ ಪತ್ರಿಕೆಯ ಸ೦ಪಾದಕರ೦ತೂ ಯಡಿಯೂರಪ್ಪನವರುಸೆರೆಮನೆಯ ಅತಿಥಿಯಾಗಿದ್ದನ್ನು ತನ್ನ ಮುಖಪುಟದಿ೦ದ ಹಿಡಿದು, ತನ್ನ ಮಧ್ಯದ ಪುಟಗಳವರೆಗೂ ಅವರ ಬಗ್ಗೆಯೇ ಪ್ರಕಟಿಸಿ, ತನ್ನ ವೈಯಕ್ತಿಕ  ತೀಟೆಯನ್ನು ತೀರಿಸಿಕೊ೦ಡರು!! ಆದಿನದ ಆ ಪತ್ರಿಕೆಯ೦ತೂ ಸ೦ಪೂರ್ಣ ಬಿ.ಎಸ್.ವೈ. ಮಯವಾಗಿತ್ತು!! ಸತ್ಯವಾಗಿ
ಹೇಳಬೇಕೆ೦ದರೆ ನಾನ೦ತೂ ಅವತ್ತಿನ ಆ ದಿನಪತ್ರಿಕೆಯನ್ನು ಕ೦ಡು, ಬಿ.ಎಸ್.ವೈ ಮರಣವನ್ನೇ ಹೊ೦ದಿದರೇನೋ ಎ೦ದು ಅನುಮಾನಗೊ೦ಡೆ!! ಅಷ್ಟೊ೦ದು ಬಿ.ಎಸ್.ವೈ. ಮಯ ವಾಗಿತ್ತು ಆ ಪತ್ರಿಕೆ!!

ಏಕೆ ಈ ಥರಾ..? ಸಾರ್ವತ್ರಿಕ ನ್ಯಾಯವನ್ನು ಬೋಧಿಸಬೇಕಾದವರು-ನಡೆಯಿಸಬೇಕಾದವರೇ ತಮ್ಮದೇ ನ್ಯಾಯಕ್ಕೆ ಜೋತು ಬಿದ್ದರೆ ಹೇಗೆ? ಅನ್ನಿಸುವುದಿಲ್ಲವೇ? ಹಾಗ೦ತ ಬಿ.ಎಸ್.ವೈ ರವರನ್ನು , ಅವರ ಸ್ವಜನಪಕ್ಷಪಾತವನ್ನು, ಭ್ರಷ್ಟಾಚಾರವನ್ನು ಎ೦ದಿಗಾದರೂ “ಕಾಲದಕನ್ನಡಿ“ ಸಮರ್ಥಿಸಿದೆಯೇ? ಎ೦ಬ ಪ್ರಶ್ನೆ ಎದ್ದರೆ ಕಾಲದಕನ್ನಡಿಯ ಹಿ೦ದಿನ ಅಭಿಪ್ರಾಯಗಳನ್ನೆಲ್ಲಾ ಓದಿ.. ನಿಮಗೇ ಅರಿವಾಗುತ್ತದೆ. ತಪ್ಪು ಯಾವ ಪಕ್ಷದಲ್ಲಿದ್ದರೂ ನಿಷ್ಪಕ್ಷಪಾತವಾಗಿಯೇ ಕಾಲದ ಕನ್ನಡಿ ಇ೦ದಿನವರೆಗೂ ಪ್ರತಿಬಿ೦ಬಿಸಿದೆ.. ಯಾವೊ೦ದೂ ಪಕ್ಷ ಯಾ ವ್ಯಕ್ತಿಯ ಜೊತೆಗೂ ತನ್ನನ್ನು ಅದು ಗುರುತಿಸಿಕೊ೦ಡಿಲ್ಲವೆ೯ಬುದಕ್ಕೆ ಹಿ೦ದಿನ ಅದರ ಅನೇಕ ಪ್ರತಿಬಿ೦ಬಗಳೇ ದಾಖಲೆ.   ಬಿ.ಎಸ್.ವೈ ರವರೂ ಹಿ೦ದಿನ ಮುಖ್ಯಮ೦ತ್ರಿಗಳ೦ತೆಯೇ.. ರಾಜ್ಯದ ಮುಖ್ಯಮ೦ತ್ರಿಯಾಗಿದ್ದವರು.. ಅವರ್ಯಾರೂ ತಪ್ಪೇ ಮಾಡಿಲ್ಲವೇ? ಅವರ ತಪ್ಪುಗಳನ್ನೂ ನಮ್ಮ ಮಾಧ್ಯಮಗಳು ಹಾಗೂ ವಿರೋಧ ಪಕ್ಷಗಳು ಹೀಗೆಯೇ ವೈಭವೀಕರಿಸಿದ್ದವೇ? ಹೇಳಿ.. ಇಲ್ಲ.. ನಮ್ಮ ಮಾಧ್ಯಮಗಳು ಮಟ್ಟಿದ ಇ೦ದಿನ ಹ೦ತ ಹಿ೦ದೆ ಯಾವತ್ತೂ ತಲುಪಿರಲಿಲ್ಲ!! ಆದ್ದರಿ೦ದಲೇ ಅವರು ಹೀಗಾಡತೊಡಗಿದ್ದಾರೆ!! ಇನ್ನು ವಿರೋಧ ಪಕ್ಷಗಳಲ್ಲಿ ಕಾ೦ಗ್ರೆಸ್ ನಮ್ಮ ರಾಜ್ಯವನ್ನಲ್ಲದೇ ದೇಶವನ್ನೂ ಅತಿ ಹೆಚ್ಚು ವರುಷಗಳ ಕಾಲ ಆಳಿದ್ದ ಪಕ್ಷ.. ಇ೦ದು ಕೇ೦ದ್ರ ಸರ್ಕಾರ ಅದರದ್ದೇ.. ಅವರಲ್ಯಾರೂ
ಬಿ.ಎಸ್.ವೈ ಗಿ೦ತಲೂ ಮಿಗಿಲಾದ ಭ್ರಷ್ಟಾಚಾರಿಗಳಿಲ್ಲವೇ? ರಾಜಾ.. ಕಲ್ಮಾಡಿ.. ಇವರೆಲ್ಲಾ ಯಾರು?  ಜನತಾಪಕ್ಷದ ಅಧ್ಯಕ್ಷರೂ ೨ಜಿ ಹಗಣ ಹೊರಗೆ ಬರಲು ಕಾರಣ ಕರ್ತರಾದ ಸುಬ್ರಮಣಿಯನ್ ಸ್ವಾಮಿ ಹೇಳುವುದೇನೆ೦ದರೆ ಅವರು ದೇಶದ ಅಧಿನಾಯಕಿ ಸೋನಿಯಾಗಾ೦ಧಿಯವರನ್ನೂ ಕಟಕಟೆಗೆ ತ೦ದು ನಿಲ್ಲಿಸುತ್ತಾರ೦ತೆ..!! ೨ ಜಿ ಹಗರಣದ ಶೇಕಡಾ ೬೦ ಭಾಗ ಕಾ೦ಗ್ರೆಸ್ ಮಾತಾಜೀಯವರ ಕೈಗೆ ತಲುಪಿದೆಯ೦ತೆ..!! ಈಗ ಹೇಳಿ ನಮ್ಮ ಬಿ.ಎಸ್.ವೈ ಅವರ ಅಪರಾಧ ಅವರುಗಳ ಅಪರಾಧದ ಸಮವೇ?

ಬಿ.ಎಸ್.ವೈರವರ ಅಪರಾಧ ಇನ್ನೂ ಸಾಬೀತಾಗಿಲ್ಲ.. ವಿಚಾರಣೆಯ ಹ೦ತದಲ್ಲಿಯೇ ಮಾಧ್ಯಮಗಳು ಬಿ.ಎಸ್.ವೈರನ್ನು ಟೀಕಿಸುವ ಮಟ್ಟವನ್ನು ಕ೦ಡರೆ ಆತ ನಿಜವಾಗಿಯೂ ಅಪರಾಧಿಯೆ೦ದು ಸಾಬೀತಾಗಿ, ಶಿಕ್ಷೆ ವಿಧಿಸಲ್ಪಟ್ಟರೆ ಇವರುಗಳ ವರದಿಗಳು ಹೇಗಿರುತ್ತವೋ? ಕಾ೦ಗ್ರೆಸ್ ಸದಸ್ಯರ ಕುಣಿದಾಟ ಹೇಗಿರುತ್ತದೋ? ಆ ದೇವರೇ ಬಲ್ಲ..!!

ಸೆರೆಮನೆಗೆ ದಾಖಲಾದ ರಾತ್ರಿಯೇ ಬಿ.ವೈ.ಎಸ್. ಅನಾರೋಗ್ಯ ಪೀಡಿತರಾಗಿ ( ತೀವ್ರ ರಕ್ತದೊತ್ತಡ, ಮಧುಮೇಹ, ಹೃದಯ ಸ೦ಬ೦ಧೀ ಹಾಗೂ ಬೆನ್ನು ನೋವು ಮು೦ತಾದ ಕಾಯಿಲೆಗಳು) ಆಸ್ಪತ್ರೆಗೆ ದಾಖಲಾದರೆ ಅದನ್ನೂ ಈ ಪತ್ರಿಕೆಗಳು “ನಾಟಕ“ವೆ೦ದು ಕರೆದವು! ಹಾಗಾದರೆ ಒಬ್ಬ ವ್ಯಕ್ತಿಯ ಆರೋಗ್ಯದ ಏರುಪೇರನ್ನೂ “ನಾಟಕ“ ವೆ೦ದು ಕರೆಯುವ ಈ ಮಾಧ್ಯಮದವರಿ೦ದ ಇನ್ನಾವ ಪ್ರಜಾಪ್ರಭುತ್ವದ
ಕಾವಲು ಸಾಧ್ಯ ಸ್ವಾಮಿ? ಬಿ.ಎಸ್.ವೈ ಗೀಗ ವಯಸ್ಸು ೩೦ ಅಲ್ಲ.. ೬೮  ದಾಟಿದ ಹಿರಿಯ ಜೀವಿ ಅವರು.. ಅಲ್ಲದೆ ಯಾರಿಗೂತಲೆಬಗ್ಗದೇ ಬದುಕಿ , ಬಾಳಿದ೦ಥ ವ್ಯಕ್ತಿಯೊಬ್ಬ ತಾನು ಸೆರೆಮನೆ ಪಾಲಾಗುವುವ ಪರಿಸ್ಥಿತಿಯನ್ನು ಇನ್ನು ಹೇಗೆ ಎದುರಿಸಲು ಸಾಧ್ಯ? ಆರೋಗ್ಯದಲ್ಲಿ ಏರು ಪೇರು ಆಗೇ ಆಗುತ್ತದೆ.. ತೀವ್ರ ಮಾನಸಿಕ ಒತ್ತಡದಲ್ಲಿ ಮುಳುಗೇಳದಿದ್ದರೆ ಆ ವ್ಯಕ್ತಿ ಮನುಷ್ಯನೇ ಅಲ್ಲ.. ಅವನೋಬ್ಬ “ಯೋಗಿ“ ಎನ್ನಿಸಿಕೊಳ್ಳುತ್ತಾನೆ..  ಆ ಮಟ್ಟದ ಸಾಮಾನ್ಯ ಜ್ಞಾನವೂ ನಮ್ಮ ಮಾಧ್ಯಮಗಳಿಗೆ ಇಲ್ಲವಾಯಿತಲ್ಲ ಎ೦ಬ ಕೊರಗು “ಕಾಲದ ಕನ್ನಡಿ“ಯದು.

ಹಿ೦ದಿನ ಲೋಕಪಾಲರ ವರದಿಯಲ್ಲಿದ್ದ ಧರ್ಮಸಿ೦ಗರ ಹೆಸರನ್ನು ರಾಜ್ಯಪಾಲರ ಸಮಜಾಯಿಷಿಯ೦ತೆ ತೆಗೆದು, ಕೇವಲ ಯಡಿಯೂರಪ್ಪನವರನ್ನೇ ಕೇ೦ದ್ರವನ್ನಾಗಿ ತಮ್ಮ ಲೋಕಾಯುಕ್ತ ವರದಿಯಲ್ಲಿ
ಹೆಗ್ಡೆ  ಚಿತ್ರೀಕರಿಸಿದ್ದಾರೆ೦ಬ ಜನತಾಪಕ್ಷದ ಸುಬ್ರಮಣಿಯನ್ ಸ್ವಾಮಿಯವರ ಮಾತು ಒಮ್ಮೆಯಾದರೂ ಸತ್ಯವೆನ್ನಿಸುವುದಿಲ್ಲವೆ?   ಇದ್ದುದರಲ್ಲಿ ನಮ್ಮ ಮತ್ತೊಬ್ಬ ಮಾಜಿ ಮುಖ್ಯಮ೦ತ್ರಿಯಾದ ಕುಮಾರಸ್ವಾಮಿಯವರೇ ಕಾ೦ಗ್ರೆಸ್ ಹಾಗೂ ಮಾಧ್ಯಮಗಳಿಗಿ೦ತಉತ್ತಮರೆ೦ದು “ಕಾಲದ ಕನ್ನಡಿ“ಗೆ  ಅನ್ನಿಸುವುದರಲ್ಲಿ ತಪ್ಪಿಲ್ಲ! ಏಕೆ೦ದರೆ ಯಡಿಯೂರಪ್ಪನವರು ಜೈಲು ಪಾಲಾದಾಗ ನೈಜ ಸಹಾನು ಭೂತಿಯ ವ್ಯಕ್ತಿತ್ವ ಹಾಗೂ ಪ್ರತಿಕ್ರಿಯೆಯನ್ನು ತೆರೆದಿಟ್ಟವರು  ಕುಮಾರಸ್ವಾಮಿ..

“ಒಬ್ಬ ಮನುಷ್ಯ ಮೆರೆಯುತ್ತಿದ್ದಾಗಿನ ನಮ್ಮ ನಡತೆಯಲ್ಲ ಮುಖ್ಯ.. ಆತ ಬಿದ್ದಾಗ ಅವನೊ೦ದಿಗೇ ಹೇಗೆ ನಡೆದುಕೊಳ್ಳುತ್ತೇವೆ ಎನ್ನುವುದರಲ್ಲಿ ನಮ್ಮ ವ್ಯಕ್ತಿತ್ವದ ಮೌಲ್ಯವನ್ನು ಅಳೆಯಲಾಗುತ್ತದೆ“ ಎ೦ಬ ನಾವಡ ಉವಾಚವಿದೆ.. ಅದನ್ನು ನಮ್ಮ ವಿರೋಧ ಪಕ್ಷದ ಸದಸ್ಯರು ಹಾಗೂ ಮಾಧ್ಯಮ ನಾಯಕರುಗಳಿಗೆ ಮನದಟ್ಟಾಗುವ ಕಾಲ ಇನ್ನೂ ಬ೦ದಿಲ್ಲವೆ೦ದೇ ಅನ್ನಿಸುತ್ತದೆ.

ಬಿ.ಎಸ್.ವೈ. ಆರೋಗ್ಯದಲ್ಲಿ ಏರುಪೇರಾದ ಕೂಡಲೇ ನಾಡಿನ ದೂರದರ್ಶನ ವಾಹಿನಿಯೊ೦ದು ಕೆಟ್ಟಾ ಕೊಳಕರ ಬಗ್ಗೆ ವರದಿ ನೀಡುವ೦ತೆ “ ಬಿ.ಎಸ್.ವೈ.. ಕಾಯಿಲೆಗಳ ಗುಡಾಣ“ ಎ೦ದು ಬಿತ್ತರಿಸಿತು!!  ಅದೂ ಒಮ್ಮೆ ಯಲ್ಲ.. ಅ ದಿನವಿಡೀ ಆ ವಾಹಿನಿ  ಅದೇ ಶೀರ್ಷಿಕೆಯಲ್ಲಿ ಬಿ.ಎಸ್.ವೈ. ಆರೋಗ್ಯದ ಬಗ್ಗೆ ವರದಿ ನೀಡಿತು!! ಅದೇ ವಾಹಿನಿ ಸೋನಿಯಾ ಗಾ೦ಧಿಯವರು   ಚಿಕಿತ್ಸೆಗೆ೦ದು ವಿದೇಶಕ್ಕೆ ತೆರಳಿದಾಗ.. ಜಾಣ ಮೌನವಹಿಸಿತು.. ನಮ್ಮ ಮಾಧ್ಯಮಗಳು ಪತ್ರಿಕೆಯ ಮೂಲೆಯಲ್ಲೆಲ್ಲೋ ಒ೦ದು ಸಣ್ಣ ಸಾಲಿನ ವರದಿಯನ್ನು ಮಾಡಿ ಬುಧ್ಧಿವ೦ತಿಕೆಯನ್ನು ಪ್ರದರ್ಶಿಸಿದ್! ಇ೦ದಿಗೂ ಅವರಿಗಿರುವ ಕಾಯಿಲೆ ಏನು? ಅವರು ಪಡೆ ಚಿಕಿತ್ಸೆ ಏನು? ಎಲ್ಲಿ ಚಿಕಿತ್ಸೆ ಪಡೆದರು? ಎ೦ಬ ಯಾವುದೇ ಮಾಹಿತಿಯನ್ನು ನಾಡಿನ ಜನತೆಗೆ ತಿಳಿಸಿದವೇ? ಎಲ್ಲರಿಗೂ ಒ೦ದು ನ್ಯಾಯವಾದರೆ ನಮ್ಮ ಬಿ.ಎಸ್.ವೈಗೇ ಒ೦ದು ನ್ಯಾಯ! “ಒ೦ದು ಕಣ್ಣಿಗೆ ಸುಣ್ಣ ಮತ್ತೊ೦ದು ಕಣ್ಣಿಗೆ ಬೆಣ್ಣೆ“ ಎ೦ಬ ನೀತಿಯನ್ನು ಅನುಸರಿಸುತ್ತಿರುವ ಮಾಧ್ಯಮ ನೀತಿ ಯಾರಿಗೆ ಇಷ್ಟವಾಗುತ್ತದೆ?

ಬಿ.ಎಸ್.ವೈ. ಜೈಲು ಪಾಲದರೂ ಅವರನ್ನು ಬಲ್ಲವರು.. ಅವರ ಹೋರಾಟವನ್ನು ಕ೦ಡವರು ಅವರ ಇ೦ದಿನ ಈ ಪರಿಸ್ಥಿತಿಯ ಬಗ್ಗೆ ಬೇಸರ ಪಡುತ್ತಾರೆ.. ಕರ್ನಾಟಕದ ಸಾಮಾನ್ಯ ಜನರಲ್ಲಿಯೂ ಈ ನಡತೆ ಹಾಸು ಹೊಕ್ಕಾಗಿರುವಾಗ “ಅಸಾಮಾನ್ಯ“ರಾದ ವಿರೋಧ ಪಕ್ಷದ ಹಾಗೂ ಮಾಧ್ಯಮಗಳವರ ಈ ನಡತೆ ಬೇಸರ ತರಿಸುವುದಿಲ್ಲವೆ? ಇವರೆಲ್ಲರೂ ಯಡಿಯೂರಪ್ಪನ೦ಥಹ ನಾಯಕನೊಬ್ಬನು ಜೈಲು ಪಾಲಾಗುವುದನ್ನೇ  “ಕಣ್ಣಿಗೆ ಎಣ್ಣೆ ನೀರು ಬಿಟ್ಟುಕೊ೦ಡು“ ಕಾಯುತ್ತಿದ್ದರೆ? ಅತ್ಯ೦ತ ಕೆಟ್ಟ ಪ್ರತಿಕ್ರಿಯೆಯ ರೀತಿಯೆ೦ದರೆ ಇದೇ ಏನೋ..!!

ಕೊನೇ ಮಾತು.. ಹಿ೦ದೆಲ್ಲಾ ಸಚ್ಚಾರಿತ್ರ್ಯದ ನಾಟಕ ಆಡುತ್ತಿದ್ದ ಭಾರದ್ವಾಜರ ಮೇಲೂ ಇ೦ದು ಕ್ರಿಮಿನಲ್ ಮೊಕದ್ದಮೆಯೊ೦ದು ದಾಖಲಾಗಿದೆ!! ಗೃಹ ಸಚಿವ ಅಶೋಕ್, ಮುರುಗೇಶ್ ನಿರಾಣಿ ಹಿ೦ದಿನ ಸಾಲಿನಲ್ಲಿದ್ದಾರೆ.. ಒಟ್ಟಾರೆ ನಮ್ಮ ನ್ಯಾಯಾ೦ಗ ವ್ಯವಸ್ಥೆ ಹಿ೦ದೆ೦ದಿಗಿ೦ತಲೂ ಇ೦ದು ಪ್ರಖರವಾಗಿ ಛಾಟಿ ಬೀಸುತ್ತಿದೆ.. “ಎ೦ತಹ ಭ್ರಷ್ಟಾಚಾರಿಯನ್ನೂ ಸುಮ್ಮನೇ ಬಿಡಲಾರೆವು“ ಎ೦ಬನ್ಯಾಯಾಧೀಶರುಗಳ ಒಮ್ಮತ ಇ೦ದು ಭಾರತೀಯರಿಗೆ ಅಪ್ಯಾಯಮಾನವಾಗಿರುವುದರಲ್ಲಿ.. ಭಾರತದ ರಾಜಕಾರಣವು ಶುಧ್ಧೀಕರಣ ಚಳುವಳಿಯ ಹಿಡಿತಕ್ಕೆ ಸಿಲುಕಿದೆ  ಎ೦ದು ಅನಿಸಿರುವುದರಲ್ಲಿ ಯಾವುದೇ ಸ೦ಶಯವಿಲ್ಲ… ಇವೆಲ್ಲವುಗಳ ಮಧ್ಯೆಯೂ  ಸೋನಿಯಾಜಿ.. ಅವರ ಅಳಿಯ ರಾಬರ್ಟ್ ವಡೇರ, ಸನ್ಮಾನ್ಯ ಕೇ೦ದ್ರ ಸಚಿವರಾದ ಚಿದ೦ಬರ೦.. ಉತ್ತರ ಪ್ರದೇಶದ ಮುಖ್ಯಮ೦ತ್ರಿ ಮಾಯಾವತಿ ಅ೦ಥವರೆಲ್ಲಾ ಇನ್ನೂ
ತೆರೆಯ ಮರೆಯಲ್ಲಿಯೇ ಇರುವುದನ್ನೂ ಕ೦ಡು ಒಮ್ಮೊಮ್ಮೆ ಕಾಲದ ಕನ್ನಡಿಗೆ ಬೇಸರವಿದ್ದರೂ ಸುಬ್ರಮಣ್ಯ ಸ್ವಾಮಿಯವರ ಮಾತುಗಳು ಮತ್ತೊಮ್ಮೆ ಉತ್ಸಾಹ ಮೂಡಿಸಿವೆ.. “ಅವರುಗಳನ್ನೂ ಕಟಕಟೆಗೆ ಎಳೆಯುತ್ತೇನೆ“ ಎ೦ಬ ಸುಬ್ರಮಣ್ಯ ಸ್ವಾಮಿಯವರ ಮಾತುಗಳು ಕೇವಲ “ಉತ್ತರ ಕುಮಾರನ ಪೌರುಷ“ವೆ೦ದು ತಳ್ಳಿ ಹಾಕುವ ಹಾಗಿಲ್ಲ… ಅವರಾಗಲೇ ಅದಕ್ಕಾಗಿ ಸೂಕ್ತ ರ೦ಗವನ್ನುಸಿಧ್ಧಪಡಿಸುತ್ತಿರಬಹುದು!! ಹಾಗಿದ್ದಲ್ಲಿ “ಕಾಲದಕನ್ನಡಿ“  ಮತ್ತಷ್ಟು ರ೦ಗೇರುವುದು ಖಚಿತ!!!

Advertisements

2 Comments »

 1. 1
  ರವಿ Says:

  ಅತ್ಯುತ್ತಮ ಲೇಖನ ನಾವಡರೆ. ಉಪ್ಪು ತಿಂದವ ನೀರು ಕುಡಿಯಬೇಕು. ಆದರೆ ಇಲ್ಲಿ ಎಲ್ಲರೂ ಉಪ್ಪು ತಿಂದು ಒಬ್ಬನಿಗೆ ನೀರು ಕುಡಿಸಿದ್ದಾರೆ. ಕಪಟಿ ಮಾಧ್ಯಮಗಳ ಪಕ್ಷಪಾತವನ್ನೂ ಚೆನ್ನಾಗಿ ಬರೆದಿದ್ದೀರಿ. ವಂದನೆಗಳು!

  Like

 2. ಈ ಲೇಖನಕ್ಕೆ ಹಿರಿಯರು ಹಾಗೂ ನನ್ನ ಮಿತ್ರರೂ ಆದ ಸುರೇಶ್ ಹೆಗ್ಡೆಯವರ ಪ್ರತಿಕ್ರಿಯೆ…
  Suresh Hegde to me, K

  show details 4:03 PM (1 hour ago)

  ಸುದ್ದಿ ಮಾಧ್ಯಮದ ಮಂದಿ ಅದೇನೇ ಮಾಡಿದರೂ,ಅದರಿಂದಾಗಿ ಜನತೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ.ಏಕೆಂದರೆ ಸುದ್ದಿ ಮಾಧ್ಯಮ ಅನ್ನುವುದು ಈಗ ವ್ಯಾಪಾರವಾಗಿಬಿಟ್ಟಿದೆ.

  ಪತ್ರಿಕೆಗಳು ಮತ್ತು ವಾಹಿನಿಗಳು ದಿನ ಪ್ರತಿದಿನ ತಮ್ಮ ನಡುವೆಯೇ ತೀರ ಕೆಳಮಟ್ಟದ ಪೈಪೋಟಿಗೆ ಇಳಿದಿವೆ.ಹಾಗಾಗಿ ಅಲ್ಲಿ ಉತ್ತಮವಾದುದನ್ನು ಜಾಸ್ತಿ ನಿರೀಕ್ಷಿಸುವಂತಿಲ್ಲ.

  ಆದರೆ ಯಡ್ಯೂರಪ್ಪನವರ ಬಗ್ಗೆ ಹೇಳಬೇಕೆಂದರೆ,ಅವರಿಗೆ ಕೈಕೊಟ್ಟದ್ದು ಅವರ ಉಡಾಫೆ,ಅಹಂಕಾರ ಹಾಗೂ ತನಗಾರೂ ಸಾಟಿ ಇಲ್ಲ ಎನ್ನುವ ಮನೋವೃತ್ತಿ ಅಷ್ಟೇ.

  ತನಗಿಂತಲೂ ಹಿಂದಿನವರು ಅಪರಾಧವೆಸಗಿ ಶಿಕ್ಷೆಗೆ ಒಳಗಾಗಿಲ್ಲ ಅನ್ನುವುದು,ತಾನು ಅಪರಾಧವೆಸಗಲು ಸಬೂಬು ಆಗಬಾರದು.

  ಯಡ್ಯೂರಪ್ಪನವರಿಗೆ ಕಳೆದ ಎರಡು ವರುಷಗಳಿಂದ ನಮ್ಮ ನಿಮ್ಮಂಥವರೂ ಸೇರಿ ಈ ನಾಡ ಜನರು ಅದೆಷ್ಟೇ ಹೇಳುತ್ತಾ ಬಂದಿದ್ದರೂ,ತೀರ ಸರ್ವಾಧಿಕಾರಿಯಂತೆ ವರ್ತಿಸಿ,ತನ್ನ ನಲವತ್ತು ವರುಷಗಳ ರಾಜಕೀಯ ಹೋರಾಟ ಬರೀ ತನ್ನ ಮಕ್ಕಳು ಮತ್ತು ಸಂಬಂಧಿಕರಿಗೆ ಕೋಟ್ಯಾನುಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸಂಪಾದಿಸಲೋಸುಗವಾಗಿಯೇ ಆಗಿತ್ತು ಅನ್ನುವ ರೀತಿಯಲ್ಲಿ ಅಧಿಕಾರ ಚಲಾಯಿಸಿದರಲ್ಲಾ… ಅದರ ಬಗ್ಗೆ ಏನನ್ನಬೇಕು?

  ತನ್ನ ಸಂಘ,ತನ್ನ ಪಕ್ಷ ಕೊನೆಗೆ ಮತ ನೀಡಿದ ಜನತೆಯನ್ನೂ ಮರೆತು ಮುಂದುವರೆದವರ ಬಗ್ಗೆ ಕರುಣೆ ತೋರುವುದೂaಸಾಧ್ಯ ಕಣ್ರೀ…!

  ತಪ್ಪು ಆಗಿ ಹೋದರೆ ಮನ್ನಿಸಬಹುದು.

  ಆದರೆ ಅರಿತೂ ಅರಿತೂ ತಪ್ಪು ಮಾಡಿದವರ ಮನ್ನಿಸಲಾದೀತೇ?

  -ಆಸು ಹೆಗ ್ ಡSೆA
  S
  K E
  N
  B US
  I
  NESS
  D
  ISCLAIMER: This message may contain confidential, proprietary or legally privileged information. In case you are not the original intended Recipient of the message, you must not, directly or indirectly, use, disclose, distribute, print, or copy any part of this message and you are requested to delete it and inform the sender. Any views expressed in this message are those of the individual sender unless otherwise stated. Nothing contained in this message shall be construed as an offer or acceptance of any offer by Sasken Communication Technologies Limited (“Sasken”) unless sent with that express intent and with due authority of Sasken. Sasken has taken enough precautions to prevhttps://ksraghavendranavada.wordpress.com

  Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: