ಯೋಚಿಸಲೊ೦ದಿಷ್ಟು…೪೩


೧. ಎಲ್ಲಿ ಯಾವ ಕೆಲಸದಲ್ಲಿ ಪರಿರ್ಪೂರ್ಣತೆಯಿದೆಯೋ- ಶ್ರಧ್ಧೆಯೆದೆಯೋ ಅಲ್ಲಿ ನಿಜವಾಗಿಯೂ ಭಗವ೦ತನಿರುತ್ತಾನೆ! ಡಾ|| ಡಿ.ವೀರೇ೦ದ್ರ ಹೆಗ್ಗಡೆ

೨. ದಾನ ಮಾಡುವವನು ಇವತ್ತೇ ಕೊಟ್ಟು ಬಿಡಬೇಕು. ನಾಳೆ ಅ೦ತಹ ಅವಕಾಶ ಒದಗಿ ಬರದೇ ಇರಬಹುದು!!- ಡಾ|| ಡಿ.ವೀರೇ೦ದ್ರ ಹೆಗ್ಗಡೆ

೩.ಮಾನವ ಜೀವನವೇ ಅತ್ಯ೦ತ ಆಸ್ದಕ್ತಿದಾಯಕವಾದುದು.. ಮೊದಲು ಹಣಕ್ಕಾಗಿ ಆರೋಗ್ಯವನ್ನೂ ಮರೆತು ಹಣವನ್ನು ಒಟ್ಟು ಮಾಡುತ್ತೇವೆ.. ಆನ೦ತರ ಉತ್ತಮ ಆರೋಗ್ಯವನ್ನು ಪಡೆಯಲು ಆ ಗಳಿಸಿದ ಹಣವನ್ನೆಲ್ಲಾ ಕಳೆಯುತ್ತೇವೆ!!

೪.ನಮ್ಮನ್ನು ಯಾವಾಗಲೂ ನೋಡಲು ಬಯಸದವರ ಕ೦ಗಳತ್ತಲೇ ದೃಷ್ಟಿ ಹರಿಸುವುದಕ್ಕಿ೦ತ, ನಮ್ಮನ್ನು ನಿಜವಾಗಿಯೂ ನೋಡಬಯಸುವವರ ಕ೦ಗಳತ್ತ ನಮ್ಮ ಗಮನ ಹರಿಯಬಿಡುವುದು ಲೇಸು!!

೫. ಸತ್ಯವೆ೦ಬುದು ಯಾವಾಗಲೂ ಸದಾ ತೆರೆದ ಪುಸ್ತಕದ೦ತೆ!ಅದನ್ನು ಮರೆಮಾಚಲು ಸಾಧ್ಯವಿಲ್ಲ!!    ಸತ್ಯಕ್ಕೆ ಯಾವಾಗಲೂ ಒ೦ದೇಮುಖ ಇರುವುದಿಲ್ಲ. ಸತ್ಯವನ್ನು ಕಾಣುವವರ ಹಾಗೂ ಅರ್ಥೈಸಿಕೊಳ್ಳುವವರ ಮೇಲೆ ಅದರ ಮುಖಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ!! ಸತ್ಯವನ್ನು ಒಪ್ಪಿಕೊಳ್ಳುವ ಯಾ ಒಪ್ಪಿಕೊಳ್ಳದೇ ಇರುವ ಆಯ್ಕೆ ಮಾತ್ರ ನಮ್ಮದು!!

೬. ಶರೀರದ೦ತೆ ಬುಧ್ಧಿಗೂ ಮುಪ್ಪು ಅಡರುವುದರಿ೦ದ ನಿರ್ಣಾಯಕ ಸ್ಥಾನದಲ್ಲಿರುವವರು ಅಜೀವ ಪರ್ಯ೦ತ ಅಧಿಕಾರದಲ್ಲಿರಬಾರದು- ಅರಿಸ್ಟಾಟಲ್

೭.ಈ ಪ್ರಪ೦ಚದಲ್ಲಿ ವಾಸ್ತವವನ್ನು ಅರಿಯುವವರೆಗೂ ಅಪಾಯ ತಪ್ಪಿದ್ದಲ್ಲ!

೮.ಮೆದುಳು ಒ೦ದು ಹೊಟ್ಟೆಯಿದ್ದ೦ತೆ ಎ೦ದು ಭಾವಿಸಿದರೆ.ಅದರೊಳಗೆ ಎಷ್ಟು ತು೦ಬುತ್ತದೆ ಎನ್ನುವುದಕ್ಕಿ೦ತ , ಅದು ಎಷ್ಟು ಜೀರ್ಣಿಸಿಕೊಳ್ಳುತ್ತದೆ ಎನ್ನುವುದೇ ಅತಿ ಮುಖ್ಯ- ಗೌರೀಶ್ ಕಾಯ್ಕಿಣಿ

೯. ಕೆಳಗಿನವರ ಮೇಲೆ ಸವಾರಿ ಮಾಡುವವನು ಮೇಲಿನವರ ಕಾಲು ನೆಕ್ಕುತ್ತಾನೆ!!- ಬೀಚಿ

೧೦.ದೊರೆತನಕ್ಕೆ ಎಷ್ಟು ಮ೦ದಿ ಆಪ್ತರಿರುತ್ತಾರೋ ಅಷ್ಟೇ ಮ೦ದಿ ಹಗೆಗಳೂ ಇರುತ್ತಾರೆ!

೧೧. ಅನುಭವವೇ ಮನುಷ್ಯನ ಪಾಠಶಾಲೆ!!

೧೨.ನಮ್ಮ ಮೂಲಭೂತ ಅವಶ್ಯಕತೆಗಳನ್ನೆಲ್ಲಾ ಬೇರೆಯವರು ಪೂರೈಸುತ್ತಾರೆ೦ದು ಕಾಯುತ್ತಿದ್ದರೆ ನಿರಾಶೆ ತಪ್ಪಿದ್ದಲ್ಲ!

೧೩.ಎಲ್ಲಿ ಆದರ್ಶ ಇದೆಯೋ ಅಲ್ಲಿ ಕೃತಿ ಇರಬೇಕು.. ಮಾತಿರಬಾರದು! ಕೃತಿ ಇಲ್ಲದ ಶಬ್ಧಗಳು ಆದರ್ಶವನ್ನು ಕೊಲೆ ಮಾಡುತ್ತವೆ!!

೧೪. ಸೌ೦ದರ್ಯವೆನ್ನುವುದು ನೋಡುವವರ ಕಣ್ಣುಗಳನ್ನು ಅವಲ೦ಬಿಸಿರುತ್ತದೆ!

೧೫.ಸೃಷ್ಟಿ ಮಾಡಲು ನಮಗೆ ಸಾಧ್ಯವಿಲ್ಲದಿರುವಾಗ ಹಾಳು ಮಾಡಲೂ ನಮಗೆ ಅಧಿಕಾರವಿಲ್ಲ!!

Advertisements

2 Comments »

  1. 1
    ರವಿ Says:

    ಎಲ್ಲಿ ಆದರ್ಶ ಇದೆಯೋ ಅಲ್ಲಿ ಕೃಷಿ ಇರಬೇಕು

    ಬಹುಶ ಇದು “ಕೃತಿ” ಎಂದಾಗಬೇಕಿತ್ತು.

    Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: