ಏಕೆ೦ದರೆ ಕನ್ನಡಿಯ ಗಾಜು ಒಡೆದಂತಿದೆ!!!


ಮನಸ್ಸಿನ ಮೂಲೆಯಲ್ಲೆಲ್ಲೋ ಬುಧ್ಧನ ನಗು

ಹನಿ-ಹನಿಯ೦ತೆ ತೊಟ್ಟಿಕ್ಕುತ್ತಿರುವ ನಳದ ನೀರು

ಸದ್ಯಕ್ಕೆ ಜ್ಞಾನೋದಯವೆ೦ದರೆ ನೀರಿನ ಟ್ಯಾ೦ಕು ತು೦ಬಿದ೦ತೆ…

 

ಜಿರಿಜಿರಿ ಮಳೆ ಸದಾ ಬೀಳುತ್ತಿದ್ದರೂ 

ತೊಟ್ಟಿಕ್ಕುತ್ತಲೇ ಇರುವ ನಳದ ನೀರಿನಿ೦ದ

 ಆಗಾಗ ಟ್ಯಾ೦ಕು ತು೦ಬಿದಂತೆ ಕಂಡರೂ

ಟ್ಯಾ೦ಕಿಯೊಳಗಿನ ಸಣ್ಣ ರ೦ಧ್ರದಿ೦ದ ನೀರು ಸದಾ ಪೋಲು!!

ನೀರು ತೊಟ್ಟಿಕ್ಕುತ್ತಲೇ ಇದೇ.. ತೂತಿನಿ೦ದ ನೀರು ಹೊರಬೀಳುತ್ತಲೇ ಇದೆ!!

 

ಭೋಧಿವೃಕ್ಷದ ಸುತ್ತೆಲ್ಲಾ ಅಯೋಮಯವೆನ್ನಿಸುವ ಸು೦ಟರಗಾಳಿ

ಧ್ಯಾನಕ್ಕೆ ಕೂತ ಬುಧ್ಧನ ಮನವೆಲ್ಲಾ ಅಲ್ಲೋಲ ಕಲ್ಲೋಲ

ನಳವನ್ನು ನಿಲ್ಲಿಸಿದರೆ ಬೆಳಿಗ್ಗೆ ಸ್ನಾನಕ್ಕೆ ನೀರಿಲ್ಲ…

ಟ್ಯಾ೦ಕು ತು೦ಬುವ ಹಾಗಿಲ್ಲ!!

 

ಮನದ ತು೦ಬೆಲ್ಲಾ  ಏನೋ ಒ೦ದು ರೀತಿಯ ವ್ಯಾಕುಲತೆ, ಅಕ್ಕರೆ

ಆರೈಕೆಗಾಗಿ ಸದಾ ಬಯಸುವ ಮನದೊಳಗೆ

 ಸ೦ಸಾರ ಭೀತಿ- ಸನ್ಯಾಸ ಸ್ವೀಕರಿಸುವ ಭ್ರಾಂತಿ!

 

ಕಾಲಕ್ಕಿಲ್ಲ ಉತ್ತರ.. ಕನ್ನಡಿಯಲ್ಲಿ ಕ೦ಡದ್ದು

ಬೇರಾರದ್ದೋ ಮುಖ! ನನ್ನದೂ ಅಲ್ಲ-ಬುಧ್ಧನದೂ ಅಲ್ಲ!!

ಕಾಲದ ಕನ್ನಡಿಯಲ್ಲೀಗ ಯಾವ ಪ್ರತಿಬಿ೦ಬ ವೂ ಕಾಣಲು ಅಸಾಧ್ಯ…

 ಏಕೆ೦ದರೆ ಕನ್ನಡಿಯ ಗಾಜು ಒಡೆದಂತಿದೆ!!!

Advertisements

2 Comments »

 1. 1
  ರವಿ Says:

  ನಮಸ್ಕಾರ ನಾವಡರೆ, ಬಹಳ ಬಹಳ ಇಷ್ಟವಾದ ನಿಮ್ಮ ಬರಹ. “ಹನಿ-ಹನಿಯ೦ತೆ ತೊಟ್ಟಿಕ್ಕುತ್ತಿರುವ ನಳದ ನೀರು”, “ಆಗಾಗ ಟ್ಯಾ೦ಕು ತು೦ಬಿದಂತೆ ಕಂಡರೂ ಟ್ಯಾ೦ಕಿಯೊಳಗಿನ ಸಣ್ಣ ರ೦ಧ್ರದಿ೦ದ ನೀರು ಸದಾ ಪೋಲು!!” ಸಾಲುಗಳು ಇಷ್ಟವಾದವು. ಬಹಳ ಇಷ್ಟವಾದ ಸಾಲು – “ಟ್ಯಾ೦ಕು ತು೦ಬುವ ಹಾಗಿಲ್ಲ!!” – ಖಂಡಿತವಾಗಿಯೂ ಹೌದು.

  Like

 2. Dear Raghavendranna,
  nice blog…. i loved reading your poetry… lots more to read on your blog…. will follow u…. 🙂
  Regards,
  vinu

  Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: