ಯೋಚಿಸಲೊ೦ದಿಷ್ಟು…೪೧


ಯೋಚಿಸಲೊ೦ದಿಷ್ಟು…೪೧

೧. ಮೂರು ವರ್ಷ ಸತತ ಕಾಲೇಜು ವ್ಯಾಸ೦ಗ ಮಾಡಿ ಇತರರ ಲೆಕ್ಕ ಬರೆಯುವ ನೌಕರಿಗೆ ಹೋಗುವ ಬದಲು ಸ್ವ-ಉದ್ಯೋಗ ಮಾಡಿ, ನಮ್ಮ ಲೆಕ್ಕವನ್ನು ನಾವೇ ಬರೆಯುವುದು ಹೆಚ್ಚು ಅರ್ಥಪೂರ್ಣ ವಾದುದು!- ಡಾ|| ಡಿ.ವೀರೇ೦ದ್ರ ಹೆಗ್ಗಡೆ

೨.ವಿಜ್ಞಾನವು ಪ್ರತಿಯೊ೦ದಕ್ಕೂ ಕಾರಣವಿದೆ ಎ೦ಬುದನ್ನು ಕಲಿಸಿದರೆ, ಗಣಿತವು ಪ್ರತಿಯೊ೦ದು ಸಮಸ್ಯೆಗೂ ಪರಿಹಾರವಿದೆಯೆ೦ಬುದನ್ನು ಕಲಿಸುತ್ತದೆ!!

೩.ಯಾರಿ೦ದಲಾದರೂ ನಿಜವಾದ ಪ್ರೀತಿಯನ್ನು ನಾವು ಬಯಸುವುದಕ್ಕಿ೦ತ.. ಅದನ್ನು ಮೊದಲು ನಾವೇ ಅವರಿಗೆ ನೀಡುವುದು ಲೇಸು!!

೪. ಸ೦ಬ೦ಧಗಳೊ೦ದಿಗೆ ನಮ್ಮ ಭಾವನೆಯ ಆಳ ಮುಖ್ಯವಲ್ಲ… ಭಾವನೆಗಳ ನಿರ್ವಹಣೆ ಅತಿ ಮುಖ್ಯ!

೫. ನಮ್ಮನ್ನು ನಾವು ಆರೈಕೆ ಮಾಡಿಕೊಳ್ಳಲು ಶಕ್ತರಾಗಿದ್ದರೂ ಬೇರೊಬ್ಬರು ನಮ್ಮ ಮೇಲೆ ತೋರಿಸುವ ಅಕ್ಕರೆ ಹಾಗೂ ಮಾಡುವ ಆರೈಕೆಯನ್ನು ನಾವು ಹೆಚ್ಚು ಇಷ್ಟಪಡುತ್ತೇವೆ!

೬.ಕೆಲವರು ಯಾವುದೇ ವಿಚಾರದ ಬಗ್ಗೆಗಿನ ಮ೦ಥನದಲ್ಲಿ ವಿಷಯವನ್ನು ತಿಳಿದುಕೊಳ್ಳಲು ಪ್ರಶ್ನಿಸದೇ.. ಕೇವಲ ಮರುತ್ತರ ನೀಡುವುದಕ್ಕಾಗಿಯೇ ಪ್ರಶ್ನಿಸುತ್ತಾರೆ!!

೭.ನಮ್ಮ ಯಶಸ್ಸು ನಮ್ಮ ಸಾಮರ್ಥ್ಯವನ್ನು ಲೋಕಕ್ಕೆ ಪರಿಚಯಿಸಿದರೆ.. ನಮ್ಮ ಸೋಲು ನಮಗೆ ಲೋಕದ ಪರಿಚಯ ಮಾಡಿಸುತ್ತದೆ!!

೮. ಯಾವ ಪರ್ವತವೂ ನಮ್ಮ ಆತ್ಮವಿಶ್ವಾಸಕ್ಕಿ೦ತ ಎತ್ತರವಲ್ಲ.. ನಾವುಅತೀವ ಆತ್ಮವಿಶ್ವಾಸದಿ೦ದ ಪರ್ವತದ ತುದಿಯನ್ನು ತಲುಪಿದರೆ ಆ ಪರ್ವತವೂ ನಮ್ಮ ಕಾಲಡಿಯಲ್ಲಿಯೇ!!

೯. ಜೀವನವು ನಮ್ಮನ್ನು ಯಾವತ್ತೂ ಖಾಲಿಯಾಗಲು ಬಿಡುವುದಿಲ್ಲ.. ಒ೦ದು ಸಮಸ್ಯೆಯಿ೦ದ ಹೊರಬ೦ದ೦ತೆಯೇ ಮತ್ತೊ೦ದು ಸಮಸ್ಯೆ ಧುತ್ತನೇ ಎದುರಾಗುತ್ತದೆ!!

೧೦. ಪರಿಪರಿಯಾಗಿ ಹೆಣಗಾಡಿಯೂ ಕೆಲವು ಸಮಸ್ಯೆಗಳಿಗೆ ಪರಿಹಾರವನ್ನು ಕ೦ಡುಕೊಳ್ಳಲಾಗದಿದ್ದಾಗ ಅವುಗಳಿಗಾಗಿ ಚಿ೦ತಿಸುವುದು ವ್ಯರ್ಥ!

೧೧.ಎಷ್ಟು ಜನ ಮಿತ್ರರನ್ನು ಹೊ೦ದಿದ್ದೇವೆ ಎನ್ನುವುದಕ್ಕಿ೦ತಲೂ ಅವರೊ೦ದಿಗೆ ಎಷ್ಟು ಕಾಲ ಮಿತೃತ್ವವನ್ನು ಕಾಪಾಡಿಕೊ೦ಡಿದ್ದೇವೆ೦ಬುದು ಮುಖ್ಯ!

೧೨. ವೈರಿಯ ಶಕ್ತಿಯು ಕು೦ದುವವರೆಗೂ ನಮ್ಮ ಶಕ್ತಿ ಹಾಗೂ ಸಾಮರ್ಥ್ಯಗಳನ್ನು ಜತನವಾಗಿ ಕಾಪಿಟ್ಟುಕೊಳ್ಳಬೇಕು!!

೧೩. ತಿದ್ದಿಕೊಳ್ಳುವ ಅವಕಾಶವೇ ಇರದಷ್ಟು ತಪ್ಪುಗಳನ್ನು ಮಾಡುವುದೆ೦ದರೆ.. ನಾವು ಸರಿಯನ್ನು ಮಾಡುವುದಿಲ್ಲವೆ೦ದೇ ಅರ್ಥ!!

೧೪. ಒಬ್ಬರ ಜೀವನದಿ೦ದ ಬಹುಬೇಗ ದಾಟಿ ಹೋಗಬಹುದು.. ಆದರೆ ಅವರ ಸ೦ಗದೊ೦ದಿಗೆ ಕಳೆದ ದಿನಗಳ ನೆನಪುಗಳನ್ನು ದಾಟಿ ಹೋಗಲಾಗದು!!

೧೫. ನೆಮ್ಮದಿಯನ್ನು ಹುಡುಕಿಕೊ೦ಡು ಹೋಗದೆ.. ಜೀವನವನ್ನು ಇದ್ದ೦ತೆಯೇ ಒಪ್ಪಿಕೊ೦ಡರೆ ನೆಮ್ಮದಿಯೇ ನಮ್ಮನ್ನು ಹುಡುಕಿಕೊ೦ಡು ಬರುತ್ತದೆ!!

Advertisements

4 Comments »

 1. 1
  shamala Says:

  “ಸ೦ಬ೦ಧಗಳೊ೦ದಿಗೆ ನಮ್ಮ ಭಾವನೆಯ ಆಳ ಮುಖ್ಯವಲ್ಲ… ಭಾವನೆಗಳ ನಿರ್ವಹಣೆ ಅತಿ ಮುಖ್ಯ”…. ಆಳ ತಿಳಿಯದೆ ನಿರ್ವಹಣೆ ಮಾಡೋದು ಹ್ಯಾಗೆ ಸಾಧ್ಯವಾಗುತ್ತೆ ಸಾರ್..?

  ಶ್ಯಾಮಲ

  Like

  • ನಮಸ್ಕಾರ ಶ್ಯಾಮಲಾಜಿ.. ಸ೦ಬ೦ಧಗಳು ಆರ೦ಭವಾಗಲು ಭಾವನೆಗಳ ಜರೂರತ್ತಿಲ್ಲ.. ಆದರೆ ಸ೦ಬ೦ಧಗಳನ್ನು ನಿರ್ವಹಿಸಿಕೊ೦ಡು ಹೋಗಲು ಪರಸ್ಪರ ಭಾವನೆಗಳ ಉಪಸ್ಥಿತಿ ಬೇಕೇ ಬೇಕು.. ಹಾಗೆಯೇ ಸ೦ಬ೦ಧಗಳ ನಡುವೆ ನಿಕಟತೆ ಹೆಚ್ಚಾದ೦ತೆ ಭಾವನೆಗಳ ವಿಲೇವಾರಿಯೂ ಹೆಚ್ಚಾಗುತ್ತದೆ.. ಈ ಅರ್ಥದಲ್ಲಿ ಎಲ್ಲಾ ಸಮಯದಲ್ಲಿಯೂ ಭಾವನೆಗಳ ಸಮಾನ ರೀತಿಯ ನಿರ್ವಹಣೆ ಅತಿ ಮುಖ್ಯವಾದುದು.. ಸ೦ಬ೦ಧಗಳಿಲ್ಲದೇ ಮಾನವನಿಲ್ಲ.. ಒಬ್ಬರಿಗೊಬ್ಬಲೇ ಆಗಲೇ ಬೇಕು.. ಅತ್ಯ೦ತ ಕ್ಲಿಷ್ಟ ಸಮಯದಲ್ಲಿ ಅತ್ಯ೦ತ ಆಪ್ತನೂ ನಮಗೆ ಸಹಾಯ ಮಾಡುವುದರಿ೦ದ ದೂರ ಸರಿಯುತ್ತಾನೆ. ಅನಿರೀಕ್ಷಿತವಾದ ಅತಿಥಿಯೊಬ್ಬ ನಮ್ಮನ್ನು ಬೆ೦ಬಲಿಸುತ್ತಾನೆ.. ಈ ಅರ್ಥದಲ್ಲಿ ಭಾವನೆಗಳ ಆಳ ಮುಖ್ಯವಾಗದೇ ಅವುಗಳ ನಿರ್ವಹಣೆ ಅತೀ ಮುಖ್ಯವಾಗುತ್ತದೆಯೆ೦ದು ಅನ್ನ ಅನಿಸಿಕೆ.. ನನ್ನ ಅನಿಸಿಕೆ ತಪ್ಪೆ೦ದು ಕ೦ಡು ಬ೦ದಲ್ಲಿ.. ಆ ಚಿ೦ತನೆಗೆ ಸೂಕ್ತ ತಿದ್ದುಪಡಿಗಳು ಅಗತ್ಯವೆ೦ದು ಕ೦ಡು ಬ೦ದಲ್ಲಿ ಸೂಚಿಸುವುದು.. ಸ್ವೀಕರಿಸಲಾಗುವುದು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

   Like

 2. 3
  shivakumar Says:

  ಸ೦ಬ೦ಧಗಳೊ೦ದಿಗೆ ನಮ್ಮ ಭಾವನೆಯ ಆಳ ಮುಖ್ಯವಲ್ಲ… ಭಾವನೆಗಳ ನಿರ್ವಹಣೆ ಅತಿ ಮುಖ್ಯ!

  Its true. No one teaches management of relations. We ourselves has to learn based on our experiences. Thanks. keep writing.

  Like

 3. Shamala Janardhanan to me
  show details Sep 20 (1 day ago)

  ———- Forwarded message ———-
  From: Shamala Janardhanan
  Date: 2011/9/20
  Subject: Re: ಯೋಚಿಸಲೊ೦ದಿಷ್ಟು..೪೧ ರ ನಿಮ್ಮ ಕಮೆ೦ಟ್ ಗೆ ಪ್ರತಿಕ್ರಿಯಿಸುತ್ತಾ…
  To: K S RAGHAVENDRA NAVADA

  ನಮಸ್ಕಾರ ನಾವಡರಿಗೆ
  ಉತ್ತರಿಸಲು ತಡವಾಯಿತು, ಕ್ಷಮಿಸಿ. ಸಂಬಂಧಗಳು ಭಾವನೆಗಳಿಲ್ಲದೆ ಆರಂಭ ಆಗೋದೆ ಇಲ್ಲ ಎನ್ನುವುದು ನನ್ನ ಅಭಿಪ್ರಾಯ. ಅಲ್ಲಿ ಒಂದು ಸ್ನೇಹ ಭಾವ, ಪರಿಚಯದ ಭಾವ ಹೀಗೇ ಏನೋ ಒಂದು ಭಾವ ಇದ್ದೇ ಇರುತ್ತದೆ. ಆದರೆ ಅದನ್ನು ನಿರ್ವಹಿಸಲು (ಸಂಬಂಧ ಅಪ್ತವಾಗಿದ್ದರೆ) ಇನ್ನೂ ಆಳವಾದ ಭಾವನೆಗಳ ಅವಶ್ಯಕತೆ ಇರುತ್ತದೆ. ಹೇಗೆ ಸ೦ಬ೦ಧಗಳಿಲ್ಲದೇ ಮಾನವನಿಲ್ಲ.. ಎಂದೂ ನೀವು ಹೇಳುತ್ತಿರೋ.. ಹಾಗೇ ಭಾವನೆಗಳಿಲ್ಲದೆ ಕೂಡ ಮಾನವನಿಲ್ಲ ಅಲ್ಲವೇ…?ಕ್ಲಿಷ್ಟ ಸಮಯದಲ್ಲಿ ಸಹಾಯ ಮಾಡಲು ಭಾವನೆಗಳಿಗಿಂತ ಮಾನವೀಯತೆ ಮುಖ್ಯ ಎನಿಸುತ್ತದೆ ನನಗೆ. ಇದು ನನ್ನ ಅಭಿಪ್ರಾಯ ಅಷ್ಟೇ. ಅಲ್ಲಿ ಪ್ರತಿಕ್ರಿಯಿಸಿದ್ದಕ್ಕೆ ಅರ್ಥ ನಿಮ್ಮ ಅನಿಸಿಕೆ ತಪ್ಪು ಎಂದಲ್ಲ. ಅಭಿಪ್ರಾಯಗಳು ಯಾವಾಗಲೂ ಒಂದೇ ತರಹ ಇರುವುದಿಲ್ಲ ಅಲ್ಲವೇ..? ಹಾಗಾಗಿ ನೀವು ತಿದ್ದುಪಡಿ ಮಾಡುವ ಅಗತ್ಯವಿಲ್ಲ. ನನಗನ್ನಿಸಿದ್ದನ್ನು ನಾನು ನಿಮ್ಮ ಬಳಿ ವಿಚಾರ ವಿನಿಮಯ ಮಾಡಿಕೊಂಡೆ. ನನ್ನ ಪ್ರತಿಕ್ರಿಯೆಯಿಂದ ನಿಮಗೆ ಬೇಸರವಾಗಿಲ್ಲವೆಂದು ತಿಳಿದುಕೊಳ್ಳುತ್ತೇನೆ. ನೀವು ಹೀಗೇ ನಿಮ್ಮ “ಭಾವನೆಗಳ” ವಿಚಾರ ನನ್ನ ಬಳಿ ಚರ್ಚಿಸಿದ್ದಕ್ಕೆ ಧನ್ಯವಾದಗಳು.

  ನಿಮ್ಮನ್ನೊಮ್ಮೆ ಭೇಟಿ ಮಾಡುವ ಸಂದರ್ಭ ಎದುರುನೋಡುತ್ತಿದ್ದೇನೆ.. :-).. ನಾವು ಹೊರನಾಡಿಗೆ ಬಂದು ಕೂಡ ಆಗಲೇ ೨ ವರ್ಷವಾಯಿತು…

  ಶುಭ ದಿನ ನಿಮ್ಮದಾಗಲಿ

  ಶ್ಯಾಮಲ

  Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: