ಇನ್ನೇನು ಅವಳು ಬರುವ…


 ಇನ್ನೇನು ಅವಳು ಬರುವ ದಿನ ಹತ್ತಿರವಾಗುತ್ತಿದೆ..

ಮತ್ತೊಮ್ಮೆ ಜೋಗುಳದ ಸದ್ದು ಶುರುವಾಗುವ

ದಿನಗಳ ಕನಸು ಕಾಣುತ್ತಲಿದ್ದೇನೆ..

ಆ ಸದ್ದಿನಲ್ಲಿ ನನ್ನ ಬಾಲ್ಯದ ದಿನಗಳ

ನೆನಪಿಗಾಗಿ ಕಾತರಿಸುತ್ತಿದ್ದೇನೆ…

 

ಇನ್ನೇನು ಅವಳು ಬರುವ ದಿನ ಹತ್ತಿರವಾಗುತ್ತಿದೆ…

ಶೇಷುವಿನೊ೦ದಿಗಿನ ಹುಡುಗಾಟದ ಪುನರಾರ೦ಭದ

ದಿನಗಳ ಕನಸು ಕಾಣುತ್ತಲಿದ್ದೇನೆ..

ಆಗಾಗ ಜೂಟ್ ಆಟ.. ಮತ್ತೊಮ್ಮೆ ಲತ್ತೆ..

ದಿನಕ್ಕೆರಡು ಬಾರಿ ಆ ಆ ಇ ಈ..

ಮಲಗಿದ ಕ೦ದನ ವದನಕ್ಕೊ೦ದು ಮುತ್ತು..

 

ಇನ್ನೇನು ಅವಳು ಬರುವ ದಿನ ಹತ್ತಿರವಾಗುತ್ತಿದೆ..

ಆರು ತಿ೦ಗಳ ವಿರಹದ ದಿನಗಳ ದೂರಾಗುವಿಕೆಯ

ಕನಸು ಕಾಣುತ್ತಲಿದ್ದೇನೆ..

ದಿನ ತು೦ಬ ಪ್ರೀತಿಯ ಒರತೆ..ಆಗಾಗ ಪಿರಿ-ಪಿರಿ

ರಚ್ಚೆ ಹಿಡಿದ ಮಕ್ಕಳ೦ತೆ..

ಸುಖದ ನಡುವಿನ ಕಿರಿ-ಕಿರಿಯಿ೦ದಾಗುವ ಆಭಾಸಗಳ

ಕ೦ಡು ಮನದೊಳಗೇ ನಗುವ ದಿನಗಳ

ಪುನರಾಗಮನದ ಸ೦ತಸದಲ್ಲಿದ್ದೇನೆ..

 

 ಇನ್ನೇನು ಅವಳು ಬರುವ ದಿನ  ಹತ್ತಿರವಾಗುತ್ತಿದೆ..

ಮೂರು ತಿ೦ಗಳ ಮುದ್ದುವಿನೊ೦ದಿಗೆ..

ಭಣ-ಭಣವೆನಿಸುತ್ತಿದ್ದ ಮನೆ-ಮನಗಳೀಗ

ಮತ್ತೊಮ್ಮೆ ನ೦ದಗೋಕುಲವಾಗಬಹುದಾದ

ಕನಸಿನಲ್ಲಿದ್ದೇನೆ.. ಮುದ್ದು ಕೂಸಿನ ಮಾತುಗಳನ್ನಾಲಿಸುವ

ಸುಖದ ನಿರೀಕ್ಷೆಯಲ್ಲಿದ್ದೇನೆ….

Advertisements

1 Comment »

  1. 1
    ರವಿ Says:

    ಆಗಲೇ ಮೈಮರೆತಿರುವಂತಿದೆ ನಾವಡರು.. 🙂 ಶುಭಾಷಯಗಳು.

    Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: