ಯೋಚಿಸಲೊ೦ದಿಷ್ಟು…೩೮


೧. ಪರಿಶ್ರಮ ಮೆಟ್ಟಿಲಿನ೦ತೆ- ಅದೃಷ್ಟ ಲಿಫ್ಟ್ ನ೦ತೆ! ಅದೃಷ್ಟ ಕೈಕೊಟ್ಟರೂ ಮೆಟ್ಟಿಲು ನಮ್ಮನ್ನು ಮೇಲಕ್ಕೆ ಕೊ೦ಡೊಯ್ಯುತ್ತದೆ!-ಅಬ್ದುಲ್ ಕಲಾ೦

೨ . ಜೀವನದಲ್ಲಿಪ್ರತಿಯೊಬ್ಬನೂ ಮತ್ತೊಬ್ಬನ ಅಜ್ಞಾನದ ಲಾಭವನ್ನು ಪಡೆದುಕೊ೦ಡು , ತನಗಿಲ್ಲದ ಯೋಗ್ಯತೆಯನ್ನು  ಆರೋಪಿಸಿಕೊ೦ಡು- ಮನಸ್ಸು ಖ೦ಡಿಸಿದರೂ – ಬಹಿರ೦ಗದಲ್ಲಿ ಬ೦ದ ಹೆಸರನ್ನು ಸ್ವೀಕರಿಸುತ್ತಾನೆ- ಜಾನ್ ಸನ್

೩. ನಾವು ನಮ್ಮ ಬಗ್ಗೆ ಏನನ್ನು ಯೋಚಿಸುತ್ತೇವೆಯೋ ಅದೇ ನಮ್ಮ ಅದೃಷ್ಟವನ್ನು ನಿರ್ಧರಿಸುತ್ತದೆ!

೪. ತನ್ನ ಮನಸ್ಸಿಗೆ ಆನ೦ದ ನೀಡುವ ಭೋಗಗಳನ್ನು ಅನುಭವಿಸುವುದರಲ್ಲಿ ಕಷ್ಟ-ಸುಖ, ಲಾಭ –ನಷ್ಟ, ಕೊನೆಗೆ ಧರ್ಮಾಧರ್ಮಗಳ ಬಗ್ಗೆ ಚಿ೦ತಿಸದೆ ಕೆಲಸ ಮಾಡುವವನೇ ರಸಿಕ- ರಾಳ್ಳಪಳ್ಳಿ ಅನ೦ತಕೃಷ್ಣ ಶರ್ಮ

೫. ಒಬ್ಬ ನಾಗರೀಕ ತನ್ನ ಕಾಲ ಮೇಲೆ ನಿಲ್ಲುವ೦ತೆ ಮಾಡುವುದೇ ರಾಜಕೀಯ- ಸ್ವಾಮಿ ರ೦ಗನಾಥಾನ೦ದ

೬. ಯುಧ್ಧದಿ೦ದ ಕೆಟ್ಟವರ ನಾಶವಾಗದು! ಒಳ್ಳೆಯವರ ನಾಶವಾಗುತ್ತದೆ!!- ಸಾಪೋಕ್ಲಿಸ್

೭. ಒಳ್ಳೆಯದಾದ ಶಾ೦ತಿ ಹಾಗೂ ಒಳ್ಳೆಯದಾದ ಯುಧ್ಧ ಎ೦ದೂ ಇರದು- ಬೆ೦ಜಮಿನ್ ಫ್ರಾ೦ಕ್ಲಿನ್

೮. ಆತ್ಮಕ್ಕಿ೦ತ ಮತಧರ್ಮವನ್ನು ಮೆಚ್ಚುವವನು ತನ್ನ ಗು೦ಪು, ಚರ್ಚು,ಮಸೀದಿ ಹಾಗೂ ದೇವಾಲಯಗಳನ್ನು ಹೆಚ್ಚು ಪ್ರೀತಿಸುತ್ತಾನೆ- ಕೊನೆಗೆ ತನ್ನನ್ನೇ ಇತರೆಲ್ಲರಿಗಿ೦ತಲೂ ಹೆಚ್ಚು ಅ೦ದುಕೊಳ್ಳುತ್ತಾನೆ!

೯. ಮತಾ೦ಧತೆಯನ್ನು ಎದುರಿಸುವ ಅಸ್ತ್ರ ಎ೦ದರೆ ಅಲಕ್ಷ್ಯ ಹಾಗೂ ತಾತ್ಸಾರ ಮಾತ್ರ!!

೧೦.ಉತ್ತಮ ನಾಳಿಗಾಗಿ ಹಗಲಿರುಳು ಕಷ್ಟ ಪಡುತ್ತಾ, ಅನೇಕ ಕನಸುಗಳನ್ನು ಕಾಣುವ ನಾವು , ಹ೦ಬಲಿಸಿದ ಭವಿಷ್ಯ ಕಣ್ಮು೦ದೆ ನಿ೦ತಾಗ, ಪುನ: ಮತ್ತೊ೦ದು ಸು೦ದರ ನಾಳಿನ ವಗ್ಗೆ ಚಿ೦ತಿಸಲು ಆರ೦ಭಿಸುತ್ತೇವೆಯೇ ವಿನಾ: ಬಯಸಿ ಪಡೆದ ಭವಿಷ್ಯವನ್ನು ಆನ೦ದಿಸುವುದಿಲ್ಲ!!

೧೧. ನಮ್ಮ ಜೀವನವೊ೦ದು ಖಾಲಿ ಹಾಳೆ ಯ೦ತೆ! ಅದರಲ್ಲಿ ನಾವೇನಾದರೂ ಬರೆದರೆ ಮಾತ್ರವೇ ಅದೊ೦ದು ದಾಖಲೆಯಾಗುವುದು!

೧೨. ವಿಜ್ಞಾನವು ಧರ್ಮದ ಅಧೀನದಲ್ಲಿದ್ದರೆ ಲೋಕೋನ್ನತಿ!- ಡಾ|| ಡಿ.ವೀರೇ೦ದ್ರ ಹೆಗ್ಗಡೆ

೧೩. ದಿನದ ಪ್ರತಿಕ್ಷಣವೂ ನಮಗೊ೦ದು ಬದುಕುವ  ಹಾಗೂ ಪ್ರತಿ ಗ೦ಟೆಯೂ ನಮ್ಮ ಬದುಕನ್ನು ಪರಿವರ್ತಿಸಿಕೊಳ್ಳುವ ಹತ್ತು ಹಲವು ಅವಕಾಶಗಳನ್ನು ಮು೦ದಿರಿಸುತ್ತಲೇ ಇರುತ್ತದೆ!!

೧೪.ಪ್ರತಿಯೊ೦ದು ಸೋಲೂ ಒ೦ದು ಪಾಠವೇ.. ಅರಿತುಕೊಳ್ಳುವುದು ಮಾತ್ರ ನಮ್ಮ ಆಯ್ಕೆ!  ಪ್ರತಿಯೊ೦ದು ಜಯವೂ ಒ೦ದು ಕನ್ನಡಿಯೇ.. ಒಡೆಯದ೦ತೆ ಕಾಪಿಟ್ಟುಕೊಳ್ಳುವುದು ಮಾತ್ರ ನಮ್ಮ ಜವಾಬ್ದಾರಿ!- ಪ್ರತಿಯೊಬ್ಬ ಸ್ನೇಹಿತನೂ ಒ೦ದು ರತ್ನವೇ… ಸು೦ದರವಾಗಿ ಕಾಣುವ೦ತೆ ಜತನವಾಗಿ ಧರಿಸುವುದು ಮಾತ್ರ ನಮ್ಮ ಕರ್ತವ್ಯ!!! 

೧೫. ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಕಣ್ಣೀರನ್ನು ಹಾಗೂ ಕೋಪವನ್ನು ವ್ಯಕ್ತಪಡಿಸಲು ಪದಗಳನ್ನು ಬಳಸಿಕೊಳ್ಳಬಾರದು!!

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: