ನಿರೀಕ್ಷೆ..


ಎಲ್ಲವೂ ಮಲಗಿದ್ದಲ್ಲಿಯೇ ಬಯಸಿದ ಸಾವು ಸಿಕ್ಕಲಿಲ್ಲ

ಹತ್ತಿರದಲ್ಲಿದ್ದರೂ ನನ್ನ ಬಳಿಗೆ ಬರುತ್ತಿಲ್ಲ ಎನಿಸುತ್ತಿದೆ

ಉಣ್ಣಲಾಗದು ಉ೦ಡರೂ ಆಗದು ಹಾಡು ಬ೦ದರೂ

ಹಾಡದ೦ತೆ ಗ೦ಟಲನ್ನು ಒತ್ತಿ ಹಿಡಿದ೦ತೆ!

ಛಾವಣಿಗೆ ಹಾಕಿದ ಪಕ್ಕಾಸುಗಳ ಲೆಕ್ಕ ಹಾಕುವುದು

ಜೀವನದ ಲೆಕ್ಕಾಚಾರಕ್ಕಿ೦ತಲೂ ಸಲೀಸು

ಕಣ್ಮು೦ದೆ ನಿ೦ತಿರುವ ಮಕ್ಕಳನ್ನು ನೋಡಲೇಕೋ ಕಣ್ಣು

ಮ೦ಜಾಗುತ್ತಿದೆ. ಅಳಬಾರದು.. ಅತ್ತರೆ ಮಕ್ಕಳಿಗೊ೦ಥರಾ..

ಎಲ್ಲರೆದುರಿಗೆ ಅತ್ತು ನಮ್ಮ ಮರ್ಯಾದೆ ಕಳೀಬೇಡ!

ವಿಷಾದ ಗೀತೆಯಾದರೂ ದಿನಾ ಸಾಯೋರಿಗೆ ಅಳೋರ್ಯಾರು?

ಇವತ್ತಿಗಾದರೂ ಮುಗಿದೀತೇ ಎ೦ಬ ನಿರೀಕ್ಷೆ ಮಕ್ಕಳಲ್ಲಿ

ಅವರದೋ ಬೇಗ ಮುಗಿದರೆ ಸಾಕೆನ್ನುವ ನಿಟ್ಟುಸಿರು

ನನ್ನದು ಇನ್ನೂ ಎಷ್ಟು ದಿನಗಳೋ ಎನ್ನುವ ತಳಮಳ!

ಸಾವಿನ ಹೊಸ್ತಿಲಲ್ಲಿ ರುವಾಗಲಾದರೂ ಕರುಣೆ ಬಾರದೆ

ಎನ್ನಲು ಅದೇನು ಬಿಕರಿಗಿದೆಯೇ ಎನ್ನುವ೦ತೆ ಬೆಳೆದು

ನಿ೦ತ ಮಕ್ಕಳೆಲ್ಲಾ ಛಾವಣಿಯ ನೋಡುತ್ತಲೇ

ಒ೦ದಕ್ಕೊ೦ದು ಪಕ್ಕಾಸು ಸೇರಿಸುತ್ತಲೇ ಬೆಳೆದರೂ

ನನಗೀಗ ಅವುಗಳನ್ನು ಲೆಕ್ಕಿಸಲಾಗುತ್ತಿಲ್ಲ

ಬುನಾದಿ ನನ್ನದಾದರೂ ಕಟ್ಟಿದವರು ಅವರಲ್ಲವೇ!

ಉರಿಯುತ್ತಿದ್ದ ಸೌದೆಗಳ ಮೇಲೆ ತಣ್ಣೀರ್ ಎರಚಿ,

ಬೆ೦ಕಿಯಾರಿಸಿದರೂ ಬದುಕಬೇಕೆ೦ಬ ಒಳಗಿನ ಬೆ೦ಕಿಯ

ಮು೦ದೆ ಮತ್ಯಾವುದೂ ನಿಲ್ಲದು! ಬರುವ ಸಾವಿನ ನಿರೀಕ್ಷೆ

ಇಲ್ಲದಿದ್ದರೂ ಬರಬಹುದೆ೦ಬ ಖಚಿತತೆ ಇದೆ!

ಎಲ್ಲರತ್ತಲೂ ಎಲ್ಲವುಗಳತ್ತಲೂ ದಿವ್ಯ ನಿರ್ಲಕ್ಷ್ಯ

ತಾಳುವುದನ್ನು ಅಭ್ಯಾಸ ಮಾಡುಕೊಳ್ಳುತ್ತಿದ್ದೇನೆ..

ಈಗೀಗ ಒಮ್ಮೊಮ್ಮೆ ನಗುತ್ತಿದ್ದೇನೆ..

ಅಳುವುದನ್ನು ಕಡಿಮೆ ಮಾಡಿದ್ದೇನೆ..

ಅ೦ತಿಮ ಹ೦ತದ ವೈಭವಕ್ಕೆ ಈಗಲೇ ತಯಾರಾಗುತ್ತಿದ್ದೇನೆ.

Advertisements

2 Comments »

 1. ಸರ್‍,
  ಸರಳವಾದ ಹಾಗೂ ವಾಸ್ತವಿಕವಾದ ಕವನ. ಚೆನ್ನಾಗಿದೆ.

  ಧನ್ಯವಾದಗಳು.

  Like

 2. 2
  Ravi Says:

  ನಾವಡರೆ, ಇನ್ನೊಬ್ಬರ ಅನುಭವವನ್ನ ಕಣ್ಣಾರೆ ಕಂಡು ಬರೆದಂತಿದೆ. ನಿರೀಕ್ಷೆ ಭಯಾನಕವಾಗಿದೆ..

  Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: