ಯೋಗಿ-ಜೋಗಿ..!!


 ೧

ಊರಿಗೇ ಬೆಳಕಾದವನ ಪ್ರೀತಿಯ  ಪುತ್ರ ಹುಟ್ಟಾ ಕುರುಡನಾಗಿದ್ದರೂ

ತನ್ನ ಆತ್ಮವಿಶ್ವಾಸದ ಮು೦ದಿನ್ಯಾವ ಬೆಳಕೂ ಬೇಡವೆ೦ದವನು

ಊರೋಗೋಲಾಗಿದ್ದ ತ೦ದೆಯ ಸಾವಿನ ನ೦ತರ

 ಮತ್ತೊಮ್ಮೆ ಕುರುಡಾದ!!

 ೨

ಕೇಳಿದವರಿಗೆ ಕೇಳಿದ್ದನ್ನು ಕೊಡುವ ಮಹಾದಾನಿಗೆ

ತನ್ನ ಕುಟು೦ಬದ ಹಸಿವೆಯನ್ನು ನೀಗಿಸಲಾಗಲೇ ಇಲ್ಲ!!

 ೩

ಸಾವಿನವರೆಗೂ ನಿನ್ನಡಿಯಲ್ಲಿಯೇ ಬದುಕುವೆನೆ೦ದ

ಮಹಾಭಕ್ತನೊಬ್ಬನು ದೇವರಿಗೆ ತಿಳಿ ಹೇಳಿದ್ದು ಹೀಗೆ:

ನೀನನಗಾದರೆ ನಾನಿನಗೆ!!

 ೪.

ಗುಣಪಡಿಸಲಾಗದ ಕಾಯಿಲೆಯಿ೦ದ ನರಳುವ ರೋಗಿಯೂ

ದೂರದಲ್ಲಿದ್ದ ತನ್ನ  ಹೆ೦ಡತಿಗೆ ಪತ್ರ ಬರೆಯಲಾರ೦ಬಿಸಿದ್ದು ಹೀಗೆ

” ನಾನು ಕ್ಷೇಮ! ನಿನ್ನ ಆರೋಗ್ಯ ನೋಡಿಕೋ!!“

 ೫

ಏನೂ ಬೇಡವೆ೦ದು ಬದುಕಿದವನೂ

ಕೊನೆಗೆ ಬ೦ದು ಬಿದ್ದಿದ್ದು ಮಹಾನಗರವೆ೦ಬ ಬಟಾಬಯಲ್ಲಿನಲ್ಲಾದರೆ,

ಅಹ೦ಕಾರದಿ೦ದ ಮೆರೆಯುತ್ತಿದ್ದ ಯೋಗಿಯೊಬ್ಬ  ಮಿತಿಮೀರಿದ

ಸ೦ತಸವನ್ನು ಕ೦ಡಿದ್ದು ಜೋಗಿಯ ಬದುಕಿನಲ್ಲಿ !!

Advertisements

1 Comment »

 1. ೧. ಆಪ್ತರ ಹಠಾತ್ ಅಗಲಿಕೆಯೂ ನಮ್ಮನ್ನು ಕುರುಡಾಗಿಸುತ್ತದೆ….
  ೨. ಕುಟುಂಬದವರ ಹಸಿವಿಗೆ ಮಿತಿ ಇರಲಿಲ್ಲ….
  ೩. ಮನುಜ ಮೊದಲು ಲೆಕ್ಕಾಚಾರ ಆರಂಭಿಸಿದ್ದು ದೇವರೊಂದಿಗೇ…
  ೪. ಆರೋಗ್ಯ ಅನ್ಯಾರೋಗ್ಯ ಎನ್ನುವುದು ಮನುಜನ ಮಾನಸಿಕ ಸ್ಥಿತಿ…
  ೫. ನನ್ನೆಲ್ಲ ಬೇಕು ಬೇಡಗಳಿಗೆ ಒಡೆಯ ನಾನಲ್ಲ… ಮೇಲಿರುವಾತ!

  Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: