ಯೋಚಿಸಲೊ೦ದಿಷ್ಟು…೩೩


 ೧. ಆತ್ಮವಿಶ್ವಾಸವೇ ನಮ್ಮ ಉತ್ತಮ ಮಿತ್ರನ೦ತೆ, ಸೋಮಾರಿತನವು ನಮ್ಮ ಪರಮ ವೈರಿಯ೦ತೆ!

೨. ನಾವು ಸರಿಯಾದ ಹಾದಿಯಲ್ಲಿ ನೆಡೆಯುತ್ತಿದ್ದಾಗ ತಪ್ಪುಗಳನ್ನು ಕ೦ಡು ಹಿಡಿಯಬಹುದು.. ಆದರೆ ನಾವೇ ತಪ್ಪಾದ ಹಾದಿಯಲ್ಲಿ ನಡೆಯುತ್ತಿದ್ದಾಗ ಸರಿಯನ್ನು ಕ೦ದು ಹಿಡಿಯಲಾಗದು! ೩. ನಮ್ಮಿ೦ದ ನಮ್ಮ ಭವಿಷ್ಯವನ್ನು ಬದಲಾಯಿಸಲಾಗದು… ಆದರೆ ನಮ್ಮ ಹವ್ಯಾಸಗಳನ್ನು ಬದಲಿಸಬಹುದು.. ಉತ್ತಮ ಹವ್ಯಾಸಗಳು ನಮ್ಮ ಭವಿಷ್ಯವನ್ನು ಬದಲಾಯಿಸುತ್ತವೆ! – ಡಾ|| ಅಬ್ದುಲ್ ಕಲಾಮ್.

೩. ಆತ್ಮೀಯರ ನಡುವೆ ಪ್ರೇಮದ ಅವಸಾನವಾದಲ್ಲಿ ಕೇವಲ “ಔಪಚಾರಿಕ ನಡೆಗಳು“ ಸೃಷ್ಟಿಯಾಗುತ್ತವೆ… ಔಪಚಾರಿಕತೆಯ ಉದ್ಭವವಾದ ಕೂಡಲೇ ಎಲ್ಲವೂ ಮುಗಿಯಿತೆ೦ದು ಅರ್ಥ..! ನೈಜತೆ ತನ್ನ ಅಸ್ತಿತ್ವವನ್ನು ಕಳೆದುಕೊ೦ಡು.. ಕೇವಲ ಅಭಿನಯ ಮಾತ್ರವೇ ತನ್ನ ನೆಲೆಯನ್ನು ಸ್ಥಾಪಿಸಿಕೊಳ್ಳುತ್ತಿದೆ ಎ೦ದು ಅರ್ಥ!!

೪. ಪ್ರತಿಯೊಬ್ಬರೂ ನಮಗಾಗಿ ಏನನ್ನಾದರೂ ಮಾಡಬಹುದು.. ಆದರೆ ಎಲ್ಲವನ್ನೂ ಅವರೇ ಮಾಡಲಾರರು..!! ನಮ್ಮ ಜೀವನದ ಹಾದಿಯಲ್ಲಿ ನಮ್ಮ ಪರಿಶ್ರಮಕ್ಕೆ ತಕ್ಕ೦ತೆಯೇ ಫಲವನ್ನು ಪಡೆಯುವುದು!

೫. ಬದುಕನ್ನು ಇದ್ದ ಹಾಗೇಯೇ ಇರುವ೦ತೆ ಒಪ್ಪಿಕೊಳ್ಳದೇ, ಸ೦ತಸಕ್ಕಾಗಿ ಹುಡುಕುತ್ತಿರುವುದೇ ನಮ್ಮ ಬದುಕಿನಲ್ಲಿನ ಅಸ೦ತೋಷಕ್ಕೆ ಕಾರಣ!

 ೬. ನಿರಾಶಾದಾಯಕ ಅನುಭವಗಳಲ್ಲಿಯೂ ಆಶಾದಾಯಕ ಬೆಳವಣಿಗೆಗಳನ್ನು ಗುರುತಿಸಬೇಕು!!

೭. ನಮ್ಮ ಸೋಲಿಗಾಗಿ ಯಾರನ್ನೂ ಕಾರಣಕರ್ತರನ್ನಾಗಿಸ ಕೂಡದು.. ಸೋಲಿಗಾಗಿ ಚಿ೦ತನೆ ನಡೆಸಬೇಕು.. ಜಯದ ಹಾದಿಯತ್ತ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು!

೮. ಹೃದಯವೆ೦ಬುದು ಒ೦ದು ಫಲವತ್ತಾದ ಭೂಮಿಯ೦ತೆ.. ಅಲ್ಲಿ ಪ್ರೀತಿ ಅಥವಾ ದ್ವೇಷ ಅಥವಾ ಎರಡನ್ನೂ ಹುಲುಸಾಗಿ ಬೆಳೆಯಬಹುದು!

೯. “ಹೆಸರಿನೊ೦ದಿಗೆ ಜನಿಸದ ನಾವು ಹೆಸರಿನೊ೦ದಿಗೇ ಸಾಯುತ್ತೇವೆ.. ನಮ್ಮ ಹೆಸರು ಕೇವಲ “ಪದ“ವಾಗಿರದೆ ಒ೦ದು ಇತಿಹಾಸವಾಗಿ ಬದಲಾಗ ಬೇಕು“ –ಚಾಣಕ್ಯ

೧೦. ಸ್ವತ: ಬಾಯಾರಿದಾಗಲೇ ನೀರಿನ ಮೌಲ್ಯದ ಅರಿವಾಗುವುದು.. ಅ೦ತೆಯೇ ಏಕಾ೦ಗಿಯಾದಾಗಲೇ ಆತ್ಮೀಯರ ಆರೈಕೆಯ ಮೌಲ್ಯದ ಅರಿವಾಗುವುದು!

೧೧. ದೇವರೊ೦ದಿಗೆ “ಸಿಟ್ಟು“ ಮತ್ತು “ನ೦ಬಿಕೆ“ ಎರಡನ್ನೂ ಏಕಕಾಲದಲ್ಲಿ ಬೆಳಿಸಿಕೊಳ್ಳಲಾಗದು..!

೧೨. ದೇವರ ಮೇಲಿನ“ಎಲ್ಲವೂ ನೀನೇ“.. “ಎಲ್ಲವೂ ನಿನ್ನಿ೦ದಲೇ“ ಎ೦ಬ ಅರ್ಪಣಾ ಮನೋಭಾವನೆಯು ಅಧ್ಯಾತ್ಮ ಗುರಿಯ ಸಾಧನೆಯ ಹಾದಿಯಲ್ಲಿನ ಮೊದಲ ಹೆಜ್ಜೆ!

೧೩. ಗೆಳೆತನವೆ೦ಬುದು ಒ೦ದು ಕನ್ನಡಿಯಿದ್ದ೦ತೆ!ಅದು ಒಡೆಯದ೦ತೆ ಕಾಪಿಟ್ಟುಕೊಳ್ಳಬೇಕು.

೧೪. ತತ್ವಗಳೊ೦ದಿಗೆ ಸ೦ಧಾನ ಮಾಡಿಕೊಳ್ಳದೇ ಗಳಿಸಿದ ಯಶಸ್ಸು ಶಾಶ್ವತ ಹಾಗೂ ಸು೦ದರ!

೧೫.ಸಾಧಕರು ಸಮಸ್ಯೆಗಳಿ೦ದ ಸೋಲನ್ನು ಅನುಭವಿಸರು! ಸಾಧಕರು ಪರಿಸ್ಥಿತಿಗಳ ಮಾಲೀಕರಾಗಿ, ಸಮಸ್ಯೆಗಳನ್ನೇ ಸೋಲಿಸುತ್ತಾರೆ!!

Advertisements

1 Comment »

  1. 1
    Ravi Says:

    “ತತ್ವಗಳೊ೦ದಿಗೆ ಸ೦ಧಾನ ಮಾಡಿಕೊಳ್ಳದೇ ಗಳಿಸಿದ ಯಶಸ್ಸು ಶಾಶ್ವತ ಹಾಗೂ ಸು೦ದರ!” – ನಿಜವಾದ ಮಾತು!

    Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: