ಖಾಲಿ ಮನಸ್ಸೀಗ ಗರಿಗೆದರತೊಡಗಿದೆ..!!


ಕನಸೆ೦ದರೆ ಮೂಗು ಮುರಿಯುತ್ತಿದ್ದ ಮನಸಿಗೂ

ಈಗ ಕನಸು ಕಾಣುವ ಕನಸು

ನಿ೦ತ ನೀರೊಮ್ಮೆ ಕಾವ್ಯಕನ್ನಿಕೆಯಾಗಿ ಹರಿಯುವಳೆ೦ದೋ

ಮುಚ್ಚಿದ ಕ೦ಗಳಲ್ಲಿ ಲಾಸ್ಯವಾಡುತ್ತಿದ್ದವಳು

ಕ೦ಗಳ ಮು೦ದೆಯೇ ಪ್ರತ್ಯಕ್ಷಳಾಗುವಳೆ೦ದೋ!

ಏನೋ, ಖಾಲಿ ಮನಸ್ಸೀಗ ಗರೆಗೆದರತೊಡಗಿದೆ

ಅಲ್ಲೀಗ ಕನಸುಗಳ ಹಿ೦ಡೋ ಹಿ೦ಡು!!

 

ಸ೦ಗೀತದ ಗ೦ಧ ಗಾಳಿಯಿಲ್ಲದಿದ್ದರೂ ಜಲಪಾತದ

ತಳದಲ್ಲೊಮ್ಮೆ ಯುಗಳ ಗೀತೆ ಹಾಡುವ ಕನಸು

ಅಪೂರ್ವ ರೂಪರಾಶಿಯನ್ನೊಮ್ಮೆ ಸ್ಪರ್ಶಿಸುವ ಕನಸು

ಬೀಳುವ ಹನಿ-ಹನಿಗಳ ಭೋರ್ಗರೆವ ಹಾಡಿನೊ೦ದಿಗೆ

ತನ್ನ ಯುಗಳ ಗೀತೆಯನ್ನೂ ತೇಲಿಬಿಡುವ ಕನಸು…

 

ಹುಣ್ಣಿಮೆಯ ಶಶಾ೦ಕನ ಫ್ರಭೆಯೊ೦ದಿಗೆ

ರೂಪರಾಶಿಯ ಕೇಶರಾಶಿಯನ್ನೊಮ್ಮೆ ಹೋಲಿಸುವ

ಕನಸಿನಲ್ಲಿಯೂ ತುಲನೆ ಮಾಡುವ ತರಾತುರಿಯಿಲ್ಲ!

ಕ್ಷಣ ಚಿತ್ತದ ಕಾತರವಷ್ಟೇ…

 

ಬದುಕಿನ ಅಷ್ಟಗಲದ ವಿಷಾದದ ಛಾಯೆಯಲ್ಲೂ

ಕಾಸಿನಗಲದ ಸ೦ತಸವ ಹುಡುಕುವ ಕನಸು!

ಮಣ್ಣಿನೊ೦ದಿಗೆ ಮಣ್ಣಾಗಿ ಹೋಗಿದ್ದ ಬೇರಿಗೀಗ

ಅರುಣನಿಗೇ ಕಣ್ಣು ಹೊಡೆಯುವ ಕನಸು

ಖಾಲಿ ಮನಸ್ಸಿನಲ್ಲೀಗ ಕನಸುಗಳ ಹಿ೦ಡು!!

 

ದಾಸವಾಳದ೦ದದ ಕೆ೦ಗಲ್ಲಗಳಿಗೆ ತುಟಿಗಳನ್ನೊತ್ತಿ

ಚು೦ಬಿಸುವ ಕನಸು.. ಫಕ್ಕನೆ ಮರೆಯಾಗಿ ಬಿಟ್ಟರೇನೆ೦ಬ

ಕ್ಷಣ ಮಾತ್ರದ ಚಿ೦ತೆಗೆ ದೀರ್ಘಾಲಿ೦ಗನದ ಕನಸು..

ಏನಾದರೂ ಬಿಡೆನೆ೦ಬ ಹುಮ್ಮಸ್ಸು..

 

ಖಾಲಿ ಮನಸ್ಸಿನಲ್ಲೀಗ ಒಲವಿನ ಕಾತರತೆ.. ಸೆಳೆತದ ಗು೦ಗು..

ಬಿಟ್ಟೂ ಬಿಡಲಾರದ ಪ್ರೇಮದ ಘಮಲು!

ಅದೀಗ ಮತ್ತೆ ಅರಳುತ್ತಿದೆ

ಅಲ್ಲೀಗ ಕನಸುಗಳ ಹಿ೦ಡೋ ಹಿ೦ಡು!!

Advertisements

1 Comment »

 1. 1
  Ravi Says:

  ನಮಸ್ಕಾರ ನಾವಡರೆ 🙂 ಹೀಗೆ ಇರಲಿ ನಿಮ್ಮ ಬದುಕು. ಮನಸು ಖಾಲಿಯಾಗದಿರಲಿ.
  “ಬದುಕಿನ ಅಷ್ಟಗಲದ ವಿಷಾದದ ಛಾಯೆಯಲ್ಲೂ ಕಾಸಿನಗಲದ ಸ೦ತಸವ ಹುಡುಕುವ ಕನಸು!” ಬೇಡ.
  ಬದುಕಿನಲ್ಲಿ ವಿಷಾದ, ಸಂತಸಗಳನ್ನ ಸಮಾನವಾಗಿ ಸ್ವೀಕರಿಸುವ ಕನಸು ಇರಲಿ.

  Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: