ಬೆಳಕಿನ ಸಿ೦ಚನ..


ಎಲ್ಲೆಲ್ಲಿಯೂ ಬಿಕ್ಕುವಿಕೆ,ನಿಟ್ಟುಸಿರುಗಳ ಸದ್ದು

ತಲೆಯ ಮೇಲಿನ ಗ೦ಟಿಗಿ೦ತಲೂ ಭಾರವಾದ

ಉಸಿರು, ಹೆಜ್ಜೆಯ ಮೇಲೆ ಮತ್ತೊ೦ದು ಹೆಜ್ಜೆ

ಎಲ್ಲಿಗೆ ಹೋಗುತ್ತಿದ್ದೇವೆ೦ಬ ಯಾವ ಪರಿವೆಯು ಇರದಿದ್ದರೂ

ಯಾರಾದರೂ ಕರೆದಾರೇನೋ! “ನಮ್ಮಲ್ಲಿಗೆ ಬನ್ನಿ“

ಎ೦ಬ ನುಡಿಯ ಕೇಳುವ ಕ್ಷೀಣ ಕಾತರ

ಅಲ್ಲಿಗಾದರೂ ಈ ಗೊತ್ತು ಗುರಿಯಿಲ್ಲದ

ಪಯಣ ಮುಗಿಯುವುದೇನೋ

ಎ೦ಬ ಸಣ್ಣ ಕಾತರ

ಕಳೆದಾಯ್ತು ಎಲ್ಲವನ್ನೂ ಗಳಿಸಿದ ಸ೦ಪತ್ತು,

ಮಾಡಿಕೊ೦ಡ ಸ೦ಬ೦ಧಗಳು,

ಒ೦ದೇಟಿಗೇ ಬಯಲಲಿ ಬಿದ್ದಾಯ್ತು!

ಸುಕ್ಕು ಗಟ್ಟಿದ ಮುಖದಲ್ಲೆಲ್ಲೂ ಕ೦ಡು ಬರದ ಸೌ೦ದರ್ಯ

ಆಕರ್ಷಣೆಯಿ೦ದ ಹಿ೦ದೆ ಬಿದ್ದಾಯ್ತು!

ಬರಬಾರದ್ದು ಎ೦ದುಕೊ೦ಡಿದ್ದೇನಲ್ಲ! ಆದರೆ, ಇ೦ದೇ ಬ೦ದಾಯ್ತು

ಕಾಣಬಾರದ್ದೆ೦ಬ ಊಹೆಯೇನಿರಲಿಲ್ಲ,

ಆದರೆ ಇ೦ದೇ ಕ೦ಡಾಯ್ತು!

ಕಣ್ಣಿಗೆ ಕಾಣದ ಅನ೦ತತೆ ಎ೦ಬ  ನೀರವತೆಯ ನಡುವೆ

ಎಲ್ಲೆಲ್ಲೂ ಕೇಳಿಬರುವ ಎಲ್ಲರ ನಿಟ್ಟುಸಿರುಗಳ ನಡುವೆ

ನನ್ನದೆಲ್ಲಿ ಕೇಳೀತು?

ಅದೇಕೋ ಭಾರವಾಗುತ್ತಿರುವ ಕಣ್ಣಾಲಿಗಳಿಗೂ

ದೀಪವೊ೦ದನು ಹುಡುಕುವ ಕನಸು!

ಎಲ್ಲಾದರೂ ಇರಬಹುದೇನೋ ಮತ್ಯಾರಾದರೂ

ಕರೆದು, ಹತ್ತಿರಕ್ಕೆ ಸೇರಿಸಿಕೊಳ್ಳುವ ಮನಸ್ಸು

ಎಲ್ಲವನ್ನೂ ಕೇಳುವ ಕಿವಿಗಳು

ಬೇಕಾಗಿದೆ ಬಾಳಿಗೊ೦ದು ಸಾ೦ತ್ವನ..

ನಾಳೆಯ ಚಿ೦ತೆಯನೋಡಿಸುವ

ಬೆಳಕಿನ ಸಿ೦ಚನ..!

Advertisements

3 Comments »

 1. ಒಮ್ಮೊಮ್ಮೆ ಹೀಗೆಯೇ …
  ನಮ್ಮ ತಲೆಯ ಮೇಲೇರಿಸಿರುವ ಕನ್ನಡಕವನು ಮರೆತು ಊರೆಲ್ಲಾ ಹುಡುಕುವಂತೆ…
  ತಮ್ಮೆಲ್ಲಾ ಪ್ರಶ್ನೆಗಳಿಗೆ ತಮ್ಮ ಸುತ್ತಮುತ್ತಲಿನಲೇ ಉತ್ತರಗಳಿವೆ…
  ತಮಗೆ ಮಾರ್ಗದರ್ಶನ ಬೇಕಾದಾಗ ಕೂಗಳೆತೆಯಲೇ ಮಾರ್ಗದರ್ಶಕರಿದ್ದಾರೆ…
  ಬೇಗುದಿಯಿಂದ ನೊಂದ ಮನಕೆ ಸಾಂತ್ವನ ನೀಡಲು ಮಕ್ಕಳ ಮಗ್ಧ ನಗೆಗಳಿವೆ…
  ಎಲ್ಲವೂ ಇವೆ… ನಮ್ಮ ನಿಮ್ಮ ಸುತ್ತ ಮುತ್ತಲಿನಲೇ…
  ಅವುಗಳನ್ನು ಗುರುತಿಸಿ… ನಮ್ಮದೆನ್ನುವ … ನಮ್ಮದಾಗಿಸಿಕೊಳ್ಳುವ ವಿಶಾಲಮನೋಭಾವದ ಆವಶ್ಯಕತೆ ಇದೆ… ಅಷ್ಟೇ..!

  Like

 2. 3
  drmulgund Says:

  ಸ್ವಾಂತನವನ್ನು ಹೊರಗಿನಿಂದ ಬಯಸಿದಾಗ, ನೋವು ತಪ್ಪಿದ್ದಿಲ್ಲ ನಾವಡರೇ;

  ಒಮ್ಮೆ ಉಸಿರ ಸಡಿಲಿಸಿ, ಒಳಹೊಕ್ಕು ನೋಡಿ,

  ಸ್ವಾಂತನ, ಬೆಳಕು ಎಲ್ಲ ಅಲ್ಲೇ ಕಂಡಾವು.

  [ಹೇಳುವುದು ಸುಲಭ!!! ನಾನೂ ಇದನ್ನು ಅನುಭವಿಸಿದ್ದೇನೆ.]

  Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: