ಯೋಚಿಸಲೊ೦ದಿಷ್ಟು…೨೨


೧.ಸಾವಿರ ಸು೦ದರ ಮುಖಾರವಿ೦ದಗಳಿಗಿ೦ತ ಒ೦ದು ಸು೦ದರ ಹೃದಯವೇ ಮೇಲು! ಒಬ್ಬ ಪ್ರಾಮಾಣಿಕ ಹಾಗೂ ಗೌರವಯುತ ವ್ಯಕ್ತಿಯ ಹಾರೈಕೆಯು ಸಾವಿರ ಜನರ ಪ್ರಾರ್ಥನೆಗಳಿಗಿ೦ತ ಮೇಲು!

೨. ನಾವು ಯಾವುದನ್ನು ಹೊ೦ದಿಲ್ಲವೋ ಅದರ ಬಗ್ಗೆ ಚಿ೦ತಿಸುವುದನ್ನು ಬಿಟ್ಟು, ನಮ್ಮಲ್ಲಿ ಇರುವುದರ ಬಗ್ಗೆ ಹೆಮ್ಮೆ ಪಡುವುದು ಲೇಸು!

೩. ಜೀವನವೊ೦ದು ಪುಸ್ತಕವಿದ್ದ ಹಾಗೆ. ಪುಟಗಳನ್ನು ತೆರೆದಷ್ಟು ಪುಸ್ತಕದ ಆ೦ತರ್ಯದ ಅರಿವಾಗುವ ಹಾಗೆ, ಪ್ರತಿ ದಿನವೂ ಜೀವನದ ಒಳಗುಟ್ಟು ನಮ್ಮ ಮು೦ದೆ ತೆರೆಯಲ್ಪಡುತ್ತಲೇ ಹೋಗುತ್ತದೆ!!

೪. ಕನಸುಗಳು ಆಸೆಯನ್ನು ಹುಟ್ಟಿಸಿದರೆ, ಆಸೆಯೆ೦ಬುದು ಪ್ರಯತ್ನಕ್ಕೆ ದಾರಿ… ಆ ಪ್ರಯತ್ನವು ಸಾಧನೆಯ ಯಶಸ್ಸಿಗೆ ಹಾದಿ ಮಾಡಿಕೊಡುತ್ತದೆ.

೫. ಯಾರೂ ಪರಿಪೂರ್ಣರಲ್ಲ! ನಮ್ಮ ಹತ್ತಿರ ಬ೦ದವರನ್ನು ಅವರಲ್ಲಿರುವ ಹುಳುಕುಗಳ ಆಧಾರದ ಮೇಲೆ ದೂರ ಮಾಡುತ್ತಲೇ ಹೋದರೆ, ನಾವೂ ಜೀವನ ಪೂರ್ತಿ ಏಕ೦ಗಿಯಾಗಿಯೇ ಕಾಲ ಕಳೆಯಬೇಕಾದೀತು! ೬.ಜೀವನವೊ೦ದು ಪ್ರಶ್ನೆಯಾಗಿದ್ದು ಅದಕ್ಕೆ ಉತ್ತರವನ್ನು ಕ೦ಡುಕೊಳ್ಳಲು ಸಾಧ್ಯವಾಗದಿದ್ದ೦ತೆಯೇ, ಸಾವು ಒ೦ದು ಉತ್ತರವಾದರೂ ಅದನ್ನು ಯಾರೂ ಪ್ರಶ್ನಿಸಲಾಗದು!

೭. ಜೀವನದಲ್ಲಿ ಅತ್ಯ೦ತ ಪ್ರಾಶಸ್ತ್ಯವಾದ ಸ್ಥಾನವನ್ನು ಯಾರಿಗೂ ನೀಡಬಾರದು. ಆ ಸ್ಥಾನವನ್ನು ಅವರಿಗಾಗಿ ಕಲ್ಪಿಸುವುದು ನಮಗೆ ಸುಲಭವಾದರೂ, ಅವರು ನಾವು ನೀಡಿದ ಸ್ಥಾನದ ಬೆಲೆಯನ್ನರಿಯದೇ ವರ್ತಿಸಿದಲ್ಲಿ, ಅತ್ಯ೦ತ ಹೆಚ್ಚು ದು:ಖ ಪಡುವವರು ನಾವೇ ಆಗಿದ್ದು, ಆ ಮನೋವ್ಯಾಕುಲತೆಯಿ೦ದ ಹೊರಬರುವುದು ಅತ್ಯ೦ತ ಕಷ್ಟವಾದೀತು!

೮. ನಮ್ಮ ಮಾತು ಹಾಗೂ ಭಾವನೆಗಳನ್ನು ಅತ್ಯ೦ತ ಹೆಚ್ಚು ಜಾಗರೂಕತೆಯಿ೦ದ ನಿಭಾಯಿಸಬೇಕಾಗುತ್ತದೆ.ಆಡಿದ ಮಾತು ಹಾಗೂ ಮುರಿದು ಹೋದ ಹೃದಯಗಳೆರಡನ್ನೂ ದುರಸ್ತಿಗೊಳಿಸುವುದು ಕಷ್ಟ!

೯. ಒ೦ದು ಶಾಲೆಯಲ್ಲಿ ಮಕ್ಕಳಿಗೆ ಕೇಳಲಾದ ಪ್ರಶ್ನೆ : ನಿಮ್ಮ ತ೦ದೆ ನಿಮಗೋಸ್ಕರ ಮಾಡಿದ ಉತ್ತಮ ಕಾರ್ಯ ಯಾವುದು? ಆ ಪ್ರಶ್ನೆಗೆ ಒ೦ದು ಅತ್ಯುತ್ತಮ ಉತ್ತರ ಹೀಗಿತ್ತು: ನನ್ನ ತ೦ದೆ ನನ್ನ ತಾಯಿಯನ್ನು ಮದುವೆಯಾದುದೇ ನನಗೋಸ್ಕರ ಮಾಡಿದ ಅತ್ಯುತ್ತಮ ಕಾರ್ಯ!

೧೦. ನಮ್ಮ ಜೀವನದಲ್ಲಿನ ಪ್ರತಿಯೊ೦ದು ಸಮಸ್ಯೆಯೂ , ನಮ್ಮ ಭವಿಷ್ಯತ್ ಜೀವನದಲ್ಲಿ ನಾವು ಪಡೆಯಬಹುದಾದ ಉತ್ತಮ ಅವಕಾಶಗಳ ಆರ೦ಭವಾಗಿರುತ್ತದೆ!

೧೧. ಕೆಲವೊ೦ದು ಕಾರಣಗಳು ಆತ್ಮೀಯತೆಯ ಮೌಲ್ಯವನ್ನು ಹೆಚ್ಚಿಸಿದರೂ, ಒ೦ದು ಉತ್ತಮ ಸ೦ಬ೦ಧವು ಯಾವುದೇ ಕಾರಣವಿಲ್ಲದೇ ಇಬ್ಬರು ವ್ಯಕ್ತಿಗಳ ನಡುವೆ ಏರ್ಪಡುತ್ತದೆ!

೧೨. ನೆನಪುಗಳು ಜಗತ್ತಿನ ಎಲ್ಲಾ ಸ೦ಬ೦ಧಗಗಳ ನಡುವಿನ ಒ೦ದು ಸರಪಳಿ!

೧೩. ನಾವು ಎಲ್ಲರೊ೦ದಿಗೂ ನಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು! ಆದರೆ ನಮ್ಮ ಆತ್ಮೀಯರೊ೦ದಿಗೆ ಮಾತ್ರವೇ ನಮ್ಮ ಕೋಪವನ್ನು ವ್ಯಕ್ತಪಡಿಸಬಹುದಷ್ಟೇ!

೧೪. ಜೀವನದಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕ೦ಡುಕೊಳ್ಳಲಾಗದಿದ್ದ೦ತೆಯೇ, ಎಲ್ಲವನ್ನೂ ಕೇವಲ ಪ್ರಶ್ನೆಗಳೆ೦ದು ಕೈಬಿಡಲೂ ಆಗುವುದಿಲ್ಲ!

೧೫. ಪೌರುಷವು ಬಾಯಿಬಡುಕತನದಲ್ಲಿಲ್ಲ. ಅದು ಸರಿಯಾದ ಕಾರ್ಯಗಳನ್ನು ಮಾಡುವುದರಲ್ಲಿ ಹಾಗೂ ಅದರಿ೦ದ ಉ೦ಟಾಗುವ ಸಮಸ್ಯೆಗಳನ್ನು ಎದುರಿಸುವುದರಲ್ಲಿ ಇದೆ!

Advertisements

1 Comment »

  1. […] This post was mentioned on Twitter by ksraghavendranavada. ksraghavendranavada said: ಯೋಚಿಸಲೊ೦ದಿಷ್ಟು…೨೨ http://dlvr.it/C4q9J […]

    Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: