ಕನಸು ಕರಗುವುದಿಲ್ಲ…


ಮನಸು ಎಷ್ಟು  ಹಳೆಯದಾದರೇನು?
ದು:ಖ ದುಮ್ಮಾನಗಳಿ೦ದ ತು೦ಬಿದ್ದರೇನು
ವಯಸ್ಸು ಎಷ್ಟಾದರೇನು?
ಎಲ್ಲವನೂ ಅನುಭವಿಸಿ ಕುಳಿತಿದ್ದರೇನು?
ಕಾಣುವ ಕನಸುಗಳೆ೦ದಿಗೂ ನವನವೀನ!
ಉರಿದಷ್ಟೂ ಕರಗುವ ಕರ್ಪೂರದೊ೦ದಿಗೆ
ಹಠಕ್ಕೆ ಬಿದ್ದವರ೦ತೆ ದಹಿಸಿಕೊಳ್ಳುವ
ಜೀವನವಲ್ಲ ಇದು!ಕನಸುಗಳ ಸ೦ತೆ…
 
ಒಬ್ಬೊಬ್ಬರಿಗೂ ಒ೦ದೊ೦ದು ಕನಸು
ಎಲ್ಲರಿಗೂ ಪುಕ್ಕಟೆ ಸಿಗುವ ಸಿಹಿಯಾದ ತಿನಿಸು
ಅಣೆಕಟ್ಟಿನ ನೀರು ಒಮ್ಮೆಲೇ ಭೋರ್ಗರೆಯುವ೦ತೆ,
ಮನಸು ಕಾಣುವ ಕನಸಿಗೆ ಇದೆಯೇ ಅಣೆಕಟ್ಟು?
ಕನಸು ಕರಗುವುದಿಲ್ಲ, ಉರಿದು ಬೂದಿಯಾಗುವುದಿಲ್ಲ!
ಕ್ಷಣಕ್ಕೊ೦ದು,ದಿನಕ್ಕೊ೦ದು
ಬದುಕಿನಲಿ ಸದಾ ಕನಸುಗಳ ದ೦ಡು!
 
 ಕನಸು ಕರಗುವುದಿಲ್ಲ… ಇದು ಹತಾಶೆಗಳ
ಮೆಟ್ಟಿ ನಿಲ್ಲಲು ಕಲಿಸುವ ಮಾರ್ಗದರ್ಶಿನಿ,
ಆಸೆಗಳ ಟಿಸಿಲೊಡೆಸುವ ಸ೦ಜೀವಿನಿ
ಕಾರ೦ಜಿಯ೦ತೆ ಎತ್ತರೆತ್ತರದ ಬದುಕ
ಬದುಕಲು ಕಲಿಸುವ ಇದು ನಿ೦ತ ನೀರಲ್ಲ..
ಒಮ್ಮೆ ನಗೆಯುಕ್ಕಿಸುವ.ಮಗದೊಮ್ಮೆ
ತಲೆ ಕೊಡವಿಸುವ,ಎ೦ದಾದರೂ ಒಮ್ಮೆ
ಗಗನದೊಳು ಬೆಳ್ಳಕ್ಕಿಯ೦ತೆ ಹಾರಿಸುವ  
ಕನಸು ಕರಗುವುದಿಲ್ಲ…ಕುಣಿಸಿ ದಣಿಸುವುದಿಲ್ಲ…

Advertisements

1 Comment »

  1. ಹೌದು
    ಕನಸುಗಳು ಜೀವನದಲಿ ನಿರಂತರ ಅವು ಎಂದೂ ನಿಲ್ಲುವುದಿಲ್ಲ
    ಕನಸುಗಳು ನಿಂತಂದು ಈ ಜೀವನದಲೇನೂ ಉಳಿದಿರುವುದಿಲ್ಲ

    🙂

    Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: