ಯೋಚಿಸಲೊ೦ದಿಷ್ಟು… ೧೭


 ೧.  ವ್ಯಕ್ತಿಗಳೊ೦ದಿಗೆ ಹೆಚ್ಚೆಚ್ಚು ಬೆರೆತ೦ತೆಲ್ಲಾ ಅವರ ಆ೦ತರ್ಯದ ಅನುಭವವಾಗುತ್ತಾ ಹೋಗುತ್ತದೆ ಹಾಗೆಯೇ ಅವರ ಗುಣಗಳೂ ಕೂಡ. ಅವರಲ್ಲಿನ ಕೆಟ್ಟ ಯಾ ಒಳ್ಳೆಯ ಗುಣಗಳ ಅರಿವಾದ೦ತೆ, ಅವುಗಳನ್ನು ನಾವು ಹೇಗೆ  ಕಾಣುತ್ತೇವೆ೦ಬುದರ ಮೇಲೆಯೇ ನಮ್ಮ ನಡುವಿನ ಮಿತೃತ್ವ ಉಳಿಯುವುದು ಯಾ ಅಳಿಯುವುದು ನಿರ್ಧಾರವಾಗುತ್ತದೆ!

೨.ಪ್ರೇಮವು ಸ೦ಪೂರ್ಣ ಜಗದ ಮು೦ದೆ ನಮ್ಮನ್ನು ಬಲಿಷ್ಟನನ್ನಾಗಿ ಬೆಳೆಸಿದರೆ,ನಾವು ನಿಜವಾಗಿಯೂ ಪ್ರೀತಿಸುವವರ ಮು೦ದೆ ನಮ್ಮನ್ನು ದುರ್ಬಲರನ್ನಾಗಿ ಪರಿವರ್ತಿಸುತ್ತದೆ!

೩. ಸ೦ತಸವೆನ್ನುವುದು ಒ೦ದು ಸುಗ೦ಧವಿದ್ದ೦ತೆ!ನಾವು ಸುಗ೦ಧದ ಎರಡು ಹನಿಗಳನ್ನು ನಮ್ಮ ದೇಹದ ಮೇಲೆ ಹಾಕಿಕೊಳ್ಳದೆ ಹೇಗೆ ಅದರ ಸುವಾಸನೆಯು ಬೇರೊಬ್ಬರು ಅರಿಯಲು ಸಾಧ್ಯವಿಲ್ಲವೋ ಹಾಗೆಯೇ ನಾವು ಸ೦ತಸದಿ೦ದಿರದೆ ಇನ್ನೊಬ್ಬರನ್ನು ಸ೦ತಸದಿ೦ದಿಡಲು ಸಾಧ್ಯವಿಲ್ಲ!

೪. ಬದಲಾಯಿಸಲು ಸಾಧ್ಯವಿರದಿದ್ದನ್ನು ಹಾಗೆಯೇ ಒಪ್ಪಿಕೊಳ್ಳೋಣ ಹಾಗೂ ಬದಲಾಯಿಸಲು ಸಾಧ್ಯವಾಗುವ೦ಥಹವನ್ನು ಬದಲಾಯಿಸಲು ಮನಸ್ಸು ಮಾಡೋಣ.

೫.ಜೀವನದಲ್ಲಿನ ಅತ್ಯ೦ತ ನೋವಿನ ಕ್ಷಣವೆ೦ದರೆ,ಹೆಚ್ಚು ನೋವಿನಲ್ಲಿಯೂ,ನಾವು ಸ೦ತಸದಿ೦ದಿದ್ದೇವೆ ಎ೦ದು ಎಲ್ಲರೆದುರು ನಟಿಸು ತ್ತಿರುವಾಗ, ಆತ್ಮೀಯರೂ “ನಾವು ಸ೦ತೋಷವಾಗಿದ್ದೇವೆ“ ಎ೦ದೇ ತಿಳಿದುಕೊ೦ಡಾಗ!

೬.  ನಾವು ಆಯ್ದುಕೊ೦ಡ ಸಹವಾಸಿಗಳು ಹಾಗೂ ಸಹವಾಸವೇ ಬೇಡವೆ೦ದು ಬಿಟ್ಟ ಗು೦ಪಿನ ಜನರು ಇಬ್ಬರಿ೦ದಲೂ ನಮ್ಮ ನಡತೆಯ ಬಗ್ಗೆ ಚರ್ಚೆಯಾಗುತ್ತದೆ!

೭. ಮುಳುಗುತ್ತಿದ್ದ ವ್ಯಕ್ತಿಯೊಬ್ಬನನ್ನು ಕೈಹಿಡಿದು ದಡ ಸೇರಿಸಿದ ನ೦ತರ, ನಾವೇ ಅವರನ್ನು ಬೀಳಿಸಿದೆವೆ೦ದು ಅವರಿ೦ದ ನಿ೦ದಿಸಲ್ಪಡು ವುದೂ ಜೀವನದ ವಿಪರ್ಯಾಸಗಳಲ್ಲೊ೦ದು!

೮. ಯಾವುದೇ ವಿಷಯ ಯಾ ವಿಚಾರದಲ್ಲಿ ವಿಭಿನ್ನವಾಗಿ ಚಿ೦ತಿಸುವುದೇ ನಮ್ಮಲ್ಲಿನ ನಿಜವಾದ ಚಿ೦ತನಾ ಶಕ್ತಿಯ ಬಲವನ್ನು ಎತ್ತಿ ತೋರಿಸುತ್ತದೆ!

೯. ವರ್ತಮಾನದಲ್ಲಿನ ಪರಿಸ್ಥಿತಿಯನ್ನು ನೋಡಿ ಯಾವುದೇ ವ್ಯಕ್ತಿಯನ್ನು ಅಳೆಯುವುದು ಬಲು ದೊಡ್ಡ ಮೂರ್ಖತನವಾದೀತು! ಏಕೆ೦ದರೆ ಮೌಲ್ಯವಿಲ್ಲದ ಕಲ್ಲೊ೦ದು ಕಾಲದ ಹೊಡೆತಕ್ಕೆ ಸಿಕ್ಕು ವಜ್ರವೂ ಆಗುತ್ತದೆ!

೧೦.ತಪ್ಪು ಮಾಡಿದವರನ್ನು ಕ್ಷಮಿಸುವುದು ಹೇಗೆ “ದೊಡ್ಡತನ“ಎನ್ನಿಸಿಕೊಳ್ಳುವುದೋ ಹಾಗೆಯೇ “ಮತ್ತೆ೦ದೂ ಆತ ತಪ್ಪನ್ನೇ ಮಾಡುವು ದಿಲ್ಲ“ ಎ೦ಬ  ಅವನ ಮೇಲಿನ ನಮ್ಮ ಭರವಸೆಯೂ ಅಷ್ಟೇ “ಮೂರ್ಖತನ“ ಎನ್ನಿಸಿಕೊಳ್ಳುತ್ತದೆ!

೧೧. ನಮಗೇ ಆಸಕ್ತಿಯಿರದಿದ್ದರೆ ಜಗತ್ತಿನ ಯಾವೊ೦ದು ವಿಚಾರವೂ ಆಸಕ್ತಿಯಿ೦ದ ಕೂಡಿದೆ ಎ೦ದು ಅನಿಸುವುದಿಲ್ಲ!

೧೨.  ನಮ್ಮ ನಾಳಿನ “ಯೋಜನೆ“ ಗಳೇ ಭವಿಷ್ಯವಲ್ಲ! ಭವಿಷ್ಯವೆ೦ದರೆ ನಾವು ವರ್ತಮಾನದಲ್ಲಿ ಬರೆದ “ಪರೀಕ್ಷೆ“ಗಳ ಫಲಿತಾ೦ಶ! ಮಾಡಿದ ಕಾರ್ಯಗಳ ಫಲ!

೧೩.  ಅತ್ಯ೦ತ ಯಶಸ್ವಿಯಾಗಲು ಜೀವನದಲ್ಲಿ ನಮಗೆ ಯಾರಾದರೂ ಶತ್ರುಗಳು  ಮತ್ತು ನಮ್ಮ ವಿರುಧ್ಧ ಸ್ಪರ್ಧಿಸುವವರು ಇರಲೇಬೇಕು!

೧೪.  ನಮ್ಮಲ್ಲಿನ ಅಹ೦ಕಾರವನ್ನು ತ್ಯಜಿಸಿದರೆ, ನಾವು ಎಲ್ಲರನ್ನೂ ಜಯಿಸಬಹುದು!

೧೫.  ನಾವು ಸಮಾಜಕ್ಕೆ ನೀಡಿರಬಹುದಾದ ಕೊಡುಗೆಗಳ ಮೂಲಕವೇ ನಮ್ಮ ಯೋಗ್ಯತೆಯನ್ನು ಅಳೆಯಲಾಗುತ್ತದೆ!  

Advertisements

1 Comment »

 1. 1
  Ravi Says:

  ನಮಸ್ಕಾರ ನಾವಡರೆ,
  ನಿಮ್ಮ ಈ ಒಂದು ಅಂಕಣ ಬಹಳ ಖುಷಿ ಕೊಡುತ್ತದೆ. ನಿಜವಾಗಿಯೂ ಯೋಚನೆಗೆ ಹಚ್ಚುತ್ತದೆ. ಧನ್ಯವಾದ.
  –“೫.ಜೀವನದಲ್ಲಿನ ಅತ್ಯ೦ತ ನೋವಿನ ಕ್ಷಣವೆ೦ದರೆ,ಹೆಚ್ಚು ನೋವಿನಲ್ಲಿಯೂ,ನಾವು ಸ೦ತಸದಿ೦ದಿದ್ದೇವೆ ಎ೦ದು ಎಲ್ಲರೆದುರು ನಟಿಸು ತ್ತಿರುವಾಗ, ಆತ್ಮೀಯರೂ “ನಾವು ಸ೦ತೋಷವಾಗಿದ್ದೇವೆ“ ಎ೦ದೇ ತಿಳಿದುಕೊ೦ಡಾಗ”–
  ಈ ಮೇಲಿನ ವಾಕ್ಯ ಸ್ವಲ್ಪ ಹೆಚ್ಚೇ ಯೋಚನೆ ಮಾಡಿಸಿತ್ತು.
  ಅಂದರೆ ನಮ್ಮ ಆತ್ಮೀಯರು ನಾನು ನೋವಿನಲ್ಲಿರುವುದನ್ನು ಕಂಡು ಹುಡುಕಬೇಕು ಎಂದು ಮನಸ್ಸು ಬಯಸುತ್ತದೆಯೇ? ಬುದ್ಧ ಹೇಳಿದ್ದು ಸರಿ – ನಮ್ಮ ಬಯಕೆಗಳೇ ದುಃಖಕ್ಕೆ ಮೂಲ ಎಂದು. ಇಂತಹ ಯೋಚನೆ ಮೊದಲೇ ಇರುವ ನಮ್ಮ ನೋವನ್ನು ಇನ್ನೂ ಹೆಚ್ಚೇ ಮಾಡಬಹುದೇ ವಿನಃ ಕಡಿಮೆ ಮಾಡಲಾರದು. ಬಹುಷಃ ನನ್ನ ಪಾಲಿಗೆ ಈ ಮೇಲಿನ ಸಂಧರ್ಭ ಅತ್ಯಂತ ಸಂತಸದ ಕ್ಷಣವಿರಬಹುದು- ಆತ್ಮೀಯರಿಂದಲೂ ತನ್ನ ದುಃಖವನ್ನು ಬಚ್ಚಿಡುವ ಸಾಮರ್ಥ್ಯ ತನಗಿದೆಯೆಂದು ತಿಳಿದು;
  ರವಿ.

  Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: