ಬೆಳಕಿದು ಬರಿ ಬೆಳಕಲ್ಲವೋ ..!


ಬೆಳಕಿದು ಬರಿ ಬೆಳಕಲ್ಲವೋ ,

ಇದು ದಡ ಸೇರಿಸುವ ನೌಕೆ,

ಮುಖದ ಮ೦ದಹಾಸಕೆ ಅದ್ಯಾವುದು ಸಾಟಿ?

ಆದರೆ ಹೃದಯದೊಳಗೆ ಬೆಳಕಿಲ್ಲದಿದ್ದರೆ

ಮೊಗಾರವಿ೦ದದ ಸೊಗಸಿಗೇನು ಬೆಲೆ?

ಒಲೆಯೊಳಗಿನ ಬೆಳಕಲ್ಲ,ಅದು ಅಗ್ನಿ

ದೀಪದಡಿಯಲ್ಲೂ ಕತ್ತಲೆಯೇ,

ಆದರದು ಕೊಟ್ಟು ಗೆಲ್ಲುವ ಕಲೆ

ಬಡತನದ ಬೆ೦ಕಿಯೊಳಗೆ ಬಯಕೆಗಳನ್ನೆಲ್ಲವನು

ಸುಟ್ಟು,ಆವಾಹಿಸಲು ಅದೇ ಬೆಳಕನು

ಮರೆಸದೇ ಬಡತನದ ಬೆ೦ಕಿಯನು

ದಾರಿದೀಪವಾಗದೇ ಭವಿಷ್ಯದ ಬಾಳಕಾ೦ತಿಗೆ

ಹೃದಯದೊಳಿನ ಸಿರಿತನಕೆ ಹೆದ್ದಾರಿಯಾಗದೇ!

 

ಅ೦ಧನೊಬ್ಬನೂ ಬೆಳಕಾಗುವುದಿಲ್ಲವೇ

ಹೃದಯದೊಳು ಅ೦ಧಕಾರ ಕವಿದಿದ್ದವರಿಗೆ,

ಸದಾ ನಗುನಗುತಲೇ ಅಪಕಾರ ಮಾಡುವವರಿಗೆ,

ದೀಪದ ಬೆಳಕನು ಕ೦ಡೂ ಕಾಣದ೦ತೆ

ಬೆ೦ಕಿಯ೦ದರಿತವರಿಗೆ,ಬೆ೦ಕಿಯನೇ ಬಾಳಿನ

ದೀಪವೆ೦ದು ಅರಿತವರಿಗೆ ಕಾಣದು ದೀಪಾವಳಿಯ ಚೆಲುವು

ಆಕಾಶ ಬುಟ್ಟಿಗಳ ಸೊಗಸು,

ಕತ್ತಲೆಯಲ್ಲಿಯೂ ಹೊಳೆಯುವ ನಕ್ಷತ್ರಗಳ ಬೆಳಕು

ಮನದೊಳಗಿನ ಜ್ಯೋತಿಯ ಪ್ರಖರ ಕಿರಣಗಳು

ಅರ್ಥವಾಗದು ಅ೦ತರ೦ಗದ ಮೃದ೦ಗವೊ೦ದು

ಹೊಡೆಯುತ್ತಿರುವ ಮಾನವೀಯತೆಯ ತನನಗಳು.

Advertisements

1 Comment »

  1. 1
    Santhosh Acharya Says:

    ಆಕಾಶ ಬುಟ್ಟಿಗಳ ಬೆಳಕು ಮನದೊಳಗೂ ಹಬ್ಬಲಿ ಬೆಳಕಾಗಿ
    ಬದುಕಲು ಮರೆತು ಹೋದವರಿಗೆಲ್ಲಾ ದಾರಿ ತೋರಲಿ ದೀಪಧಾರಿಯಾಗಿ

    Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: