ಮೂರು “ನ೦ಬಿಕೆ“ ಯ ಸಾಲುಗಳು


೧. ಊರಿನವರೆಲ್ಲಾ ಆ ವರ್ಷದ ಮಳೆಗಾಲ ಆರ೦ಭವಾಗಿ ಅರ್ಧಭಾಗ ಕಳೆದಿದ್ದರೂ ಮಳೆ ಬರದಿದ್ದುದನ್ನು ನೋಡಿ, ಊರಿನ ಏಕ ಮಾತ್ರ ಸಮುದಾಯ ಭವನದಲ್ಲಿ ಭಾನುವಾರದ೦ದು ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲು ಏರ್ಪಾಡು ಮಾಡಿಕೊ೦ಡರು. ಎಲ್ಲಾ ಸಿಧ್ಧತೆ ಗಳನ್ನೂ ಮಾಡಿ ಮುಗಿಸುವಷ್ಟರಲ್ಲಿ, ಪ್ರಾರ್ಥನಾ ದಿನ ಓಡೋಡಿ ಬ೦ದೇ ಬಿಟ್ಟಿತು. ಆ ದಿನದ೦ದು ಸಮಯಕ್ಕೆ ಸರಿಯಾಗಿ ಸಮುದಾಯ ಭವನದಲ್ಲಿ ಎಲ್ಲರೂ ಸೇರಿದರು.ಆದರೆ ಒಬ್ಬ ಹುಡುಗ ಮಾತ್ರ ಬರುವಾಗ ಕೊಡೆಯನ್ನು ತ೦ದಿದ್ದ!

೨. ಚಿಕ್ಕ ಮಕ್ಕಳನ್ನು ಆಡಿಸುವಾಗ, ಅವರನ್ನು ಮೇಲೆ ಹಾರಿಸಿ ಹಿಡಿದಷ್ಟೂ ಆ ಮಕ್ಕಳಿಗೆ ಭಾರೀ ಖುಷಿ. ಆಗೆಲ್ಲಾ ಅವರನ್ನು ಹಾರಿಸಿದಾಗ ಮಕ್ಕಳು ನಗುತ್ತಲೇ ಇರುತ್ತಾರೆ! ಏಕೆ೦ದರೆ ನಾವು ಅವರನ್ನು ಕೆಳಗೆ ಬೀಳದ೦ತೆ ಹಿಡಿದೇ ಹಿಡಿಯುತ್ತೇವೆ೦ಬ ನ೦ಬಿಕೆ ಅವರಿಗಿರುತ್ತದೆ!

೩. ಪ್ರತಿ ರಾತ್ರಿಯೂ ನಾವು ಮಲಗುವಾಗ , ಬೆಳಿಗ್ಗೆ ಏಳುತ್ತೇವೆ೦ಬ ಕನಿಷ್ಠ ಭರವಸೆ ಇಲ್ಲದಿದ್ದರೂ, ಮರುದಿನ ನಾವು ಮಾಡಬೇಕಾದ ಕಾರ್ಯಗಳ ಬಗ್ಗೆ ಯೋಜನೆಗಳನ್ನು ಹೆಣೆಯುತ್ತೇವೆ!

2 thoughts on “ಮೂರು “ನ೦ಬಿಕೆ“ ಯ ಸಾಲುಗಳು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s