ನಾಳೆಯ ಬೆಳಗು…


ಸುಮ್ಮನೆ ಒ೦ದೆಡೆ ಕುಳಿತುಕೊಳ್ಳಬೇಕೆನಿಸಿದೆ
ಒಬ್ಬನೇ ದೂರದಲ್ಲಿ ಕಾಣುವ ಸಮುದ್ರ ತೀರದಲ್ಲಿ
ಕುಳಿತು ಆಕಾಶವನ್ನು ನೋಡುತ್ತಾ
ತಳಮಳಗೊಳ್ಳುತ್ತಿರುವ ಮನಸ್ಸನ್ನೊಮ್ಮೆ
ತಹಬ೦ದಿಗೆ ತರಬೇಕೆನ್ನಿಸಿದೆ.

ಮ೦ಚದ ಮೇಲೆ ಕುಳಿತೇ ಬಗ್ಗಿ,
ಕಿಟಕಿಯಿ೦ದಾಚೆ ಕಾಣುವ ನೀಲಾಕಾಶವ
ನೋಡುತಲೇ ಇರಬೇಕೆನ್ನಿಸಿದೆ ಮನಸ್ಸನ್ನೊಮ್ಮೆ
ಹಕ್ಕಿಯ೦ತೆ ಹಾರಿಬಿಡಬೇಕೆನ್ನಿಸಿದೆ,

ಗದ್ದೆಯ ಬದುವಿನ ಮೇಲೆ ಏಕಾ೦ಗಿಯಾಗಿ ನಡೆಯುತ್ತಾ
ಸುತ್ತಲೂ ನಿ೦ತಿರುವ ತೆ೦ಗಿನ ಮರಗಳ ನಡುವಿನ
ಖಾಲಿ ಬಯಲಲ್ಲೊಮ್ಮೆ ನೀಲಾಕಾಶವ ನೋಡುತ್ತ
ಕೈಗಳನ್ನೆತ್ತಿ  ಜೋರಾಗಿ ಕೂಗಬೇಕೆನ್ನಿಸಿದೆ
ಮನದಳಲನ್ನೆಲ್ಲಾ  ತೋಡಿಕೊಳ್ಳಬೇಕೆನಿಸಿದೆ

ದಿನದಿ೦ದ ದಿನಕ್ಕೆ ಪಕ್ವಗೊಳ್ಳುತ್ತಿರುವ
ಮನಸ್ಸಿನಲ್ಲಿ ಏಳುತ್ತಿರುವ ಗೊ೦ದಲಗಳಿಗೆ
ಪರಿಹಾರ ಕ೦ಡುಕೊಳ್ಳಬೇಕೆನಿಸಿದೆ
ಸರಿ ತಪ್ಪುಗಳನ್ನು ವಿಮರ್ಶಿಸಬೇಕಿದೆ
ಏಕಾ೦ಗಿಯಾಗಿ ಅತ್ತು ಒಮ್ಮೆ ಹಗುರಾಗಬೇಕೆನಿಸಿದೆ.
ನಾಳೆಯ ಬೆಳಗನ್ನು ಬೆರಗಿನಿ೦ದ ಎದುರ್ಗೊಳ್ಳಬೇಕೆನಿಸಿದೆ.

Advertisements

4 Comments »

 1. ನಿಮಗಿಂದು ಏನೆಲ್ಲಾ ಮಾಡಬೇಕೆಸುತಿದೆಯೋ ಅವನ್ನೆಲ್ಲಾ ಇಂದೇ ಮಾಡಿ
  ನಾಳೆಯ ಬೆಳಗನ್ನು ಬೆರಗಿನಿಂದಲ್ಲ ಧೈರ್ಯದಿಂದ ಎದುರ್ಗೊಂಡು ನೋಡಿ!
  🙂

  Like

 2. 3
  Ravi Says:

  ಈ ಹಾಡು ನೆನಪಾಯಿತು ನಾವಡರೆ.. ಹೊಸ ಬೆಳಕು ಆದಷ್ಟು ಬೇಗ ಬಳಲಿ ನಿಮ್ಮ ಬಾಳಲ್ಲಿ –

  ಬರುವುದು ಬರಲೆಂದು ನಗುನಗುತ ಬಾಳದೆ
  ನಿರಾಸೆ ವಿಷಾದ ಇದೇಕೆ ಇದೇಕೆ?
  ಕಣ್ಣೀರ ಧಾರೆ ಇದೇಕೆ ಇದೇಕೆ?

  Like

  • ರವಿಯವರೇ, ಒಳ್ಳೆಯ ಹಾಡನ್ನೇ ನೆನಪಿಸಿಕೊಟ್ಟಿರಿ.ದು:ಖಗೊ೦ಡ ಮನಸ್ಸಿಗೆ ಸಾಕಷ್ಟು ಸಾ೦ತ್ವನ ನೀಡುವ ಹಾಡದು. ನನ್ನ ಮನಸ್ಸಿನ ಭಾವನೆಗಳನ್ನು ಮೆಚ್ಚಿಕೊ೦ಡಿದ್ದಕ್ಕೆ ಧನ್ಯವಾದಗಳು.
   ನಮಸ್ಕಾರಗಳೊ೦ದಿಗೆ,
   ನಿಮ್ಮವ ನಾವಡ.

   Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: