ಶಿವರಾಮ ಕಾರ೦ತರ ಯಕ್ಷಗಾನ ಬ್ಯಾಲೆಯ ಸಿ.ಡಿ.ಗಳು ಲಭ್ಯ…


ಶಿವರಾಮ ಕಾರಂತರಂತಹ ಬಹುಮುಖಿ ವ್ಯಕ್ತಿತ್ವವು ವಿಶ್ವದೆಲ್ಲೆಡೆ ಪರಿಚಯವಾಗಬೇಕು ಹಾಗೂ ಅವರ ಎಲ್ಲ ಸಾಹಿತ್ಯ ಹಾಗೂ ಚಿಂತನೆಗಳುಉಚಿತವಾಗಿ ಜಗತ್ತಿನೆಲ್ಲೆಡೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ http://www.shivaramkarantha.in ಎಂಬ ವೆಬ್ ಸೈಟನ್ನು ಸೃಜಿಸಲಾಗಿದೆ. ಈ ವೆಬ್ ಸೈಟಿನ ಮೂಲಕ ಶಿವರಾಮ ಕಾರಂತರ ಸುಮಾರು ನಲವತ್ತು ಸಾವಿರ ಪುಟಗಳಷ್ಟು ಸಾಹಿತ್ಯ, ಹತ್ತು ಸಾವಿರ ಪುಟ ಗಳಷ್ಟು ಹಸ್ತಪ್ರತಿಗಳು,ವಿಡಿಯೋಗಳು, ಚಿತ್ತಗಳು ಜಗತ್ತಿನೆಲ್ಲೆಡೆ ಉಚಿತವಾಗಿ ವೀಕ್ಷಿಸಲು ಹಾಗೂ ಓದಲು ಜಗತ್ತಿನೆಲ್ಲೆಡೆ ಲಭ್ಯ ವಾಗಲಿವೆ.ಈ ವೆಬ್ ಸೈಟಿನ ಜೊತೆ ಶಿವರಾಮ ಕಾರಂತರ ವಿಶಿಷ್ಟ ಹಾಗೂ ಜಗದೇಕ ಸೃಷ್ಟಿಯಾದ ಯಕ್ಷಗಾನ ಬ್ಯಾಲೆಯ ಸಿಡಿ ಗಳು ಅಭಿಮಾನಿಗಳಿಗೆ ಲಭ್ಯವಿವೆ. ಈ ಸಿ.ಡಿಗಳು ಅತ್ಯಂತ ಅಪರೂಪದವುಗಳಾಗಿದ್ದು ಜಗತ್ತಿನ ಯಾವ ಭಾಗದಲ್ಲೂ ಲಭ್ಯವಿಲ್ಲ. ಕಾರಂತರ ವೆಬ್ ಸೈಟ್ ನ ವಿನ್ಯಾಸದ ಹಾಗೂ ಅಭಿವೃದ್ಧಿಯ ವೆಚ್ಚಕ್ಕಾಗಿ ಈ ಸಿಡಿಗಳ ಮಾರಾಟದಿಂದ ಬರುವ ಸಂಪೂರ್ಣ ಹಣ ವನ್ನು ವಿನಿಯೋಗಿಲು ಉದ್ದೇಶಿಸಲಾಗಿದೆ.ಸಿಡಿಗಳಲ್ಲಿ ಸ್ವತಃ ಕಾರಂತರೇ ನಿರ್ದೇಶಿಸಿದ ಹಾಗೂ ವಿವರಣೆ ನೀಡಿದ ಯಕ್ಷಗಾನ ಬ್ಯಾಲೆಗಳ ವಿಡಿಯೋ ಇವೆ. ಒಂದು ಸೆಟ್ ನಲ್ಲಿ ಐದು ಸಿಡಿಗಳಿದ್ದು ಸಿಡಿಗಳಲ್ಲಿರುವ ವಿಡಿಯೋಗಳು ಹೀಗಿವೆ,

೧. ರಾಮಾಯಣ

೨. ಗಯನ ಚರಿತ್ರೆ

೩. ಕನಕಾಂಗಿ ಕಲ್ಯಾಣ.

೪. ಚಿತ್ರಾಂಗದಾ.

೫. ನಳದಮಯಂತಿ.

ಈ ಸಿಡಿ ಗಳು ಅತ್ಯಂತ ನಿಯಮಿತ ಸಂಖ್ಯೆಯಲ್ಲಿ ಮಾತ್ರ ಲಭ್ಯವಿದ್ದು ಮೊದಲು ಬಂದವರಿಗೆ ಆದ್ಯತೆ ಮೇಲೆ ನೀಡಲಾಗುತ್ತದೆ. ಒಂದು ಸೆಟ್ ನಲ್ಲಿ ಐದು ಸಿಡಿಗಳಿದ್ದು ಒಂದು ಸೆಟ್ ನ ಬೆಲೆ ರೂ.೫೦೦/- ಮಾತ್ರ.   ಮನೆಗೆ ಸಿಡಿ ಗಳನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುವುದು. ಸಿ.ಡಿ.ಗಳು ಬೇಕಾದವರು ಸ೦ಪರ್ಕಿಸಿ:

ಈ ಮೇಲ್: thesalimath@gmail.com

ಚರವಾಣಿ: ೯೪೮೧೩೬೦೫೦೧

(ಮಾಹಿತಿ: ಶ್ರೀ ಹರ್ಷ ಸಾಲೀಮಠ್) 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: