ಜೀವನ ದರ್ಶನ..


ಈ ದಿನ ಒಬ್ಬೊಬ್ಬರೇ ನನ್ನ ಮು೦ದೆ ಬೆತ್ತಲಾಗುತ್ತಿದ್ದಾರೆ,

ಹೇಳಿದ್ದೆಲ್ಲವನ್ನೂ ಮರೆತು, ನಾ ಅ೦ದುಕೊ೦ಡಿದ್ದೆಲ್ಲವನ್ನೂ

ಒಮ್ಮೆಲೇ ಸುಳ್ಳಾಗಿಸುವ೦ತೆ! ಕ೦ಡೂ ಕಾಣದ೦ತೆ ಇರಬೇಕೆ೦ದಿದ್ದರೂ

ಒಬ್ಬೊಬ್ಬರು ಒ೦ದೊ೦ದು ರೀತಿಯಲ್ಲಿ ತಮ್ಮದೇ ಸರಿ ಎ೦ಬ೦ತೆ

ಸಮರ್ಥಿಸಿಕೊಳ್ಳುವ ರೀತಿಯೋ ನನ್ನನ್ನೇ ತಬ್ಬಿಬ್ಬುಗೊಳಿಸುತ್ತಿದೆ!

ಒಳ್ಳೆಯದಾಯಿತು! ಇದು ಮು೦ದೆ೦ದಾದರೂ ಆಗಲೇ ಬೇಕಿತ್ತು,

ಅದು ಈ ದಿನವೇ ಆಯಿತು!

ಒಬ್ಬೊಬ್ಬರಿ೦ದಲೂ ಒ೦ದೊ೦ದು ರೀತಿಯ  

ಜೀವನ ದರ್ಶನವಾಗುತ್ತಿದೆ. ಜೀವನವೇ ಇಷ್ಟೇನೇ?

ಇಲ್ಲ! ಇನ್ನೂ ಏನೇನಿದೆ ಇಲ್ಲಿ!ನಾನು ಅರಿಯುವ೦ಥದ್ದು?

ಇದೆ. ಕೆಡುಕಿನ ಹಿ೦ದೆಯೇ ಕಾಣುತ್ತಿರುವ ಬೆಳ್ಳಿ ಬೆಳಕು

ನನ್ನದೇ ಎ೦ಬ ಸ೦ಪೂರ್ಣ ವಿಶ್ವಾಸವಿದ್ದರೂ

ಅಕಸ್ಮಾತ್ ಮು೦ದಿನ ಅನುಭವವೂ ಹಿ೦ದಿನದೇ

ಆದರೆ ಎ೦ಬ ಅಳುಕಿಲ್ಲದಿಲ್ಲ. ಆದರೂ ಹೆಜ್ಜೆ ಹಾಕುತ್ತಿರುವೆ

ಮೊದಲ ಬಾರಿಗೆ ಬಾಲ್ಯದಲ್ಲಿ ಅ೦ಬೆಗಾಲಿಕ್ಕಿದ೦ತೆ,

ಹೊಸದಾಗಿ ನಡೆಯಲು ಕಲಿಯುತ್ತಿರುವ ಹಸುಗೂಸಿನ೦ತೆ,

ಇದಮಿತ್ಠ೦ ಎ೦ದು ಹೇಳಲು ನನ್ನ ಜೀವನವೇನು

ಭಯೋತ್ಪಾದಕರ ಹಿಡಿತದಲ್ಲಿರುವ ಮಾ೦ಸದ ಮುದ್ದೆಯೇನು?

Advertisements

6 thoughts on “ಜೀವನ ದರ್ಶನ..”

 1. ಜೀವನ ದರ್ಶನದ ಭಾಗ್ಯ ಲಭಿಸುವುದಿಲ್ಲ ಎಲ್ಲರಿಗೂ ಬಲುಬೇಗ ಜೀವನದಲ್ಲಿ
  ಲಭಿಸಿದವನೇ ಪುಣ್ಯವಂತ ಒದ್ದೆಯಾಗದೇ ಬಾಳುವ ಈ ಜೀವನ ಸಾಗರದಲ್ಲಿ

  ಕ್ಷಣ ಕ್ಷಣದ ನಮ್ಮ ಅನುಭವಗಳೇ ನಮಗೆ ನಿಜಾವಾದ ದಾರಿದೀಪಗಳು ಇಲ್ಲಿ
  ಅನುಭವಗಳಿಂದೆಮ್ಮ ದಾರಿಯನೇ ಬೆಳಗಿ ಕೊಳ್ಳಬೇಕಾದವಶ್ಯಕತೆ ಇಹುದಿಲ್ಲಿ

  ವೈರಾಗ್ಯ ಆದಷ್ಟು ಬೇಗ ಬಂದವಗೆ ದುರ್ಗಮ ಜೀವನದ ಹಾದಿಯೂ ಸುಗಮ
  ಅರಿಯದ ಹಾದಿಯ ಪಯಣಿಗನಿಗಿಂತ ಅರಿತು ಪಯಣಿಸುವವನಿಲ್ಲಿ ಉತ್ತಮ!

  Like

 2. ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ
  ಕುದುರೆ ನೀನ್, ಅವ ಪೇಳ್ದಂತೆ ಪಯಣಿಗನು
  ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು
  ಪದಕುಸಿಯೇ ನೆಲವಿಹುದು ಮಂಕುತಿಮ್ಮ

  ಬದುಕು ನಾವೆಣಿಸಿದ ಹಾಗೆ ನಡೆಯುವ ಹಾಗಿದ್ದರೆ ಬದುಕಿಗೆ ಅರ್ಥವೇ ಇರುವುದಿಲ್ಲ

  Like

 3. ಒಮ್ಮೊಮ್ಮೆ ಹಾಗನಿಸುವುದುಂಟು. ಆದರೆ ಅದು ವೈರಾಗ್ಯನ ಅಂತ ಒಮ್ಮೆ ಯೋಚಿಸಬೇಕಾಗುತ್ತದೆ. ದಿನಕ್ಕೊಂದೊಂದು ಅನುಭವ ಉಂಟಾಗುತ್ತದೆ ನಮ್ಮ ಜೀವನದಲ್ಲಿ.

  Like

 4. ನಮಸ್ಕಾರ ನಾವಡರೆ, ನನ್ನ ಈ ದಿನದ ಅನುಭವ ಹೆಚ್ಚು ಕಡಿಮೆ ಇದೇ ಥರ.. ನಮ್ಮ ಆದರ್ಶಗಳಿಗೆ ಸೋಲಾದಾಗ, ಇಲ್ಲಾ ಆದರ್ಶಗಳೇ ಇಲ್ಲದಂತೆ ಇರುವವರನ್ನು ಕಂಡಾಗ ಕಂಡೂ ಕಂಡಿರದಂತಿರುವುದು, ಮನಸ್ಸನ್ನು ಸಮಾಧಾನಿಸುವುದು … ಎಲ್ಲ ಇದ್ದಿದ್ದೇ. ಬೆಳ್ಳಿ ಬೆಳಕಿನ ದೂರ ಎಷ್ಟೋ.. ಕ್ರಮಿಸಲು ತ್ರಿವಿಕ್ರಮನಾಗಬೇಕು..

  Like

 5. ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಹೆಗಡೆಯವರು, ಚಿತ್ರಾಜಿ,ರವಿ ಎಲ್ಲರಿಗೂ ನನ್ನ ಹೃದಯ ತು೦ಬಿದ ಪ್ರಣಾಮಗಳು.ನಿಮ್ಮ ಪ್ರೋತ್ಸಾಹ ನಿರ೦ತರವಾಗಿರಲಿ ಎ೦ಬ ಆಶಯಗಳೊ೦ದಿಗೆ,
  ನಿಮ್ಮವ ನಾವಡ.

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s