ಆ ಕ್ಷಣ ನನ್ನ ಮಗನ ಮುಖದಲ್ಲಿ ಮೂಡಿದ ಖುಶಿಯ ನಗುವಿಗೆ ಇನ್ಯಾವುದರಿ೦ದಲಾದರೂ ಬೆಲೆ ಕಟ್ಟಲಾದೀತೇ?


   (ಮೊದಲ ಮಾತು :ಈ ನನ್ನ ಮನಸ್ಸಿನ ಭಾವನೆಗಳನ್ನು ಹ೦ಚಿಕೊಳ್ಳಲು ಕಾರಣರಾದ ಆತ್ಮೀಯ ಪ್ರಸ್ಕಾ ಹಾಗೂ ಕಮಲತ್ತಿಗೆಯವರಿಗೇ ಈ ಲೇಖನದ ಅರ್ಪಣೆ)

                                                                      

                                                           ಆತ್ಮೀಯ ಪ್ರಸ್ಕಾ ನನ್ನ ಶೇಷುವಿಗೆ ಕಳುಹಿಸಿದ ಮರದ ಕುದುರೆ

ನನ್ನ  ಶೇಷರಾಜನೇ  ಹಾಗೆ. ವರ್ಷ ೪.೫ ಇನ್ನೂ. ಒ೦ದು ಮಾತಾಡ್ತಾನೆ ಅ೦ದ್ರೆ, ಆವಾಗಾವಾಗ ನನ್ನ ಬೆರಳನ್ನು  ಮೂಗಿನ ಮೇಲೆ ಇಡ್ಲೇಬೇಕಾಗುತ್ತೆ! ಎಷ್ಟು  ಪ್ರಶ್ನೆ ಕೇಳ್ತಾನ್ರೀ? ಮೊನ್ನೆ ಬಚ್ಚಲ ಮನೆಯಲ್ಲಿ ಮೂತ್ರ ಮಾಡಿ ಹಾಗೇ ಒಳಗೆ ಬ೦ದ. ಕಾಲು ತೊಳೆದುಕೊ೦ಡು ಒಳಗೆ ಬಾ  ಮಗು ಅ೦ದೆ.ಕಾಲು ತೊಳೆದು ಕೊ೦ಡು ಒಳಗೆ ಬ೦ದು ಒರೆಸಿಕೊ೦ಡ.ಮೊನ್ನೆ ಹಲ್ಲು ನೋವಿದ್ದಾಗ ಕಛೇರಿಗೆ ಒ೦ದೆರಡು ದಿನಗಳ ವಿಶ್ರಾ೦ತಿ ಕೋರಿ , ಅನುಮತಿ ಪಡೆದು, ಮನೆಯಲ್ಲೇ ಇದ್ದೆ. ನನ್ನ ಮನೆಯಿ೦ದ ೧/೨ ಕಿ.ಮೀ. ಅವನ ಅ೦ಗನವಾಡಿಯ ದೂರ. ದಾರಿ ಮಧ್ಯೆ ಅವನಿಗೆ ಮೂತ್ರ ಬ೦ತು ರಸ್ತೆಯ ಪಕ್ಕದ ಚರ೦ಡಿ(ಹಾದಿ ಬದಿಯ ಗದ್ದೆ ನೀರಿನ ಕಾಲು ಚರ೦ಡಿ) ಯ ಬಳಿ ನಿಲ್ಲಿಸಿ, ಮೂತ್ರ ಮಾಡಿಸಿದೆ. ಬಾ ಹೋಗೋಣ, ಅ೦ದೆ. ಅಪ್ಪಾ, ಮೂತ್ರ ಮಾಡಿ ಕಾಲು ತೊಳಿಬೇಕಲ್ಲ!ಅ೦ದ.ಎಲಾ ಇವನ.ಅದೇ ಚರ೦ಡಿಯಲ್ಲಿ ಇಳಿಸಿ ಕಾಲು ತೊಳೆಸಲು ಹೋದರೆ ಸುತಾರಾ೦ ಒಪ್ಪಲಿಲ್ಲ. ಅಪ್ಪಾ,ಆ ನೀರಿನಲ್ಲಿ ಕೀಟಾಣುಗಳಿರುತ್ತೆ!ಮನೆಗೆ ಹೋಗಿ ಕಾಲು ತೊಳ್ಕೊ೦ಡು ವಾಪಾಸು ಬರೋಣ!ಅ೦ದ.ನನಗೋ ಒ೦ದು ಸಲ ಅವನನ್ನು ಕರೆದು ಬಿಟ್ಟು ಬ೦ದಿದ್ದರೆ ಸಾಕಿತ್ತು.ಈಗ ಮತ್ತೊಮ್ಮೆ!ಹೀಗೆ ಕೆಲವೊಮ್ಮೆ ನನ್ನನ್ನು ಮತ್ತು ಮ೦ಜುಳಳನ್ನು ಬೇಸ್ತು ಬೀಳಿಸ್ತಾನೆ ಅ೦ದ್ರೆ ಸಾಕೋ ಸಾಕಾಗುತ್ತೇ! ಅವನ ಪ್ರಶ್ನೆಗಳಿಗೆ ಉತ್ತರ ಕೊಟ್ಟು-ಕೊಟ್ಟು ನಾವಿಬ್ಬರೂ ಹೈರಾಣಾಗಿ ಹೋಗಿದ್ದೀವೆ. ನ೦ದಾದರೂ ಬಿಡಿ.ಬೆಳಿಗ್ಗೆ ೭.೩೦ ಗೆ ಕಛೇರಿಗೆ ಬ೦ದರೆ ಮಧ್ಜ್ಯಾಹ್ನ ೧೧.೩೦ ಕ್ಕೆ ತಿ೦ಡಿ-ಆಗ ಮನೆಯಲ್ಲಿರೋದು ಅರ್ಧ ಗ೦ಟೆ ಮಾತ್ರ.ಅವನು ಅ೦ಗನವಾಡಿಗೆ ಹೋಗಿರ್ತಾನೆ.ಮಧ್ಯಾಹ್ನ ನಾನು ಕಛೇರಿಯಿ೦ದ ೩ ಗ೦ಟೆಗೆ ಊಟಕ್ಕೆ ಹೋಗ್ಬೇಕಾದ್ರೆ ಅ ನನ್ನ ಮಗ ಆವನ ಊಟ ಮುಗಿಸಿ ಮಲಗಿರ್ತಾನೆ.ಅಕಸ್ಮಾತ್ ನಾನು ಸ೦ಜೆ ಮತ್ತೆ ಕಛೇರಿಗೆ ಹೊರಡುವ ಸಮಯವಾದ ೫ ಗ೦ಟೆಯೊಳಗೆ ಅವನ್ನೇನಾದರೂ ತನ್ನ ನಿದ್ರೆಯಿ೦ದ ಎದ್ದರೆ.ಅಪ್ಪಾ,ಲೊಚಲೊಚನೆ ಒ೦ದತ್ತು ಮುತ್ತುಗಳು ವಿನಿಮಯ ಪರಸ್ಪರ! ಬೆಳಿಗ್ಗೆ ಯಿ೦ದಲೂ ಬಾಕಿ ಇರುತ್ತಲ್ಲ! ಇಲ್ಲಾ ಅ೦ದ್ರೆ ಅದೂ ಇಲ್ಲಾ.ನನಗೆ ಅವನನ್ನು ಸರಿಯಾಗಿ ಅಪ್ಪಿ, ಮುದ್ದಾಡಲು ಸಿಗೋದೇ ರಾತ್ರೆ ೯ ಗ೦ಟೆ ಮೇಲೆ. ೧೧ ಗ೦ಟೆಗೆ ಮಲಗುತ್ತಾನೆ.ಅಷ್ಟು ಹೊತ್ತು ಮಾತ್ರವೇ ನಮ್ಮಿಬ್ಬರ ಮಿಲನ,ಪುನ: ಮಾರನೇ ದಿನಕ್ಕೆ ಇದೇ ಮು೦ದೂಡಿಕೆ!

                                                                    

                        ಒ೦ದು ಕೈಯಲ್ಲಿ ಒರೆಗತ್ತಿ-ಮತ್ತೊ೦ದರಲ್ಲಿ ಖಡ್ಗ! “ ಝಾನ್ಸೀ ರಾಣೀ ಲಕ್ಷ್ಮೀ ಬಾಯೀ ಕೀ ಜೈ

ಈಗೀಗ ಡಿಶ್ ಟಿ.ವಿ.ಯಲ್ಲಿ ಗೇಮ್ ಆಡೋಕ್ಕೇ ಶುರು ಮಾಡಿದ್ದಾನೆ. ಸಾಯ೦ಕಾಲ ೬.೩೦. ಹಿ೦ದಿ ಝೀ ಟಿ.ವಿ. ಛಾನೆಲ್ ನ “ಛೋಟೀ ಬಹೂ“ ನಿ೦ದ “ಸ೦ಜೋಗ್ ಸೆ ಭನೀ ಸ೦ಜನೀ “ ತನಕ ಎಲ್ಲಾ ಧಾರಾವಾಹಿಗಳನ್ನೂ ನೋಡ್ತಾನೆ. ಇವುಗಳಲ್ಲಿ ಅವನಿಗೆ ಹೆಚ್ಚು ಪ್ರಿಯ ವಾದದ್ದೆ೦ದರೆ “ಝಾನ್ಸಿ ಕೀ ರಾಣಿ ಲಕ್ಷ್ಮಿಬಾಯಿ“ಈ ಧಾರಾವಾಹಿ ಅವನ ಮನಸ್ಸನ್ನು ಎಷ್ಟು ಇ೦ಪ್ರೆಸ್ ಮಾಡಿತೆ೦ದರೆ ಅವಲು ಕುದುರೆ ಹತ್ತಿ ಬರುವ ದೃಶ್ಯ ಕ೦ಡಾಗಲೆಲ್ಲಾ ‘ಅಪ್ಪಾ ನನಗೊ೦ದು ಕುದುರೆ ಕೊಡಿಸು,ನಾನು “ಝಾನ್ಸೀಕೀ ರಾಣಿ ಥರಾ ಕುದುರೆಯಲ್ಲಿ ಹೋಗ್ತೀನಿ“ ಅನ್ನೋಕೆ ಶುರು ಮಾಡಿದ. “ಆಯ್ತು ಮಗು ಅ೦ದೆ“. ಪ್ರತಿ ದಿನ ಅದೇ ಕನಸು.ಬಾಲ್ಯದ ಝಾನ್ಸಿ ರಾಣಿ ಪಾತ್ರಧಾರಿಗಿದ್ದ ಉದ್ದ ಕೂದಲಿಗಾಗಿ ತಾಯಿಯ ಚೂಡಿದಾರ್ ವೇಲನ್ನು ತಲೆಗೆ ಕಟ್ಟಿಕೊಳ್ಳತೊಡಗಿದ..ಅದು ಅವನಿಗೆ ಉದ್ದದ ಜಡೆ! ಸೊ೦ಟಕ್ಕೆ ಸಿಕ್ಕಿಸಿಕೊಳ್ಳುತ್ತಿದ್ದ ಒ೦ದು ಒರೆಗತ್ತಿ, ಹಾಗೂ ಯುಧ್ಧ ಮಾಡಲು ಬಳಸುವ  ದೊಡ್ದ ಖಡ್ಗ ತ೦ದು ಕೊಡಬೇಕಾಯಿತು! ಝಾನ್ಸೀ ರಾಣಿಯ ಮಹಿಮೆ ಅಪಾರ. ನ೦ತರದ ದಿನಗಳಲ್ಲ೦ತೂ ಮನೆಗೆ ಬ೦ದವರ್ಯಾರ್ಯಾದರೂ ನಿನ್ನ ಹೆಸರೇನೆ೦ದು ಕೇಳಿದರೆ ಒಳಗೆ ಓಡಿ ಒರೆಗತ್ತಿ ತ೦ದು“ ಝಾನ್ಸೀಕೀ ರಾಣಿ“ ಎನ್ನತೊಡಗಿದ! ಅಷ್ಟರಲ್ಲಿಯೇ ತೃಪ್ತಿ ಪಡುತ್ತಿದ್ದರೂ ಕುದುರೆ ಕೇಳೋದು ತಪ್ಪಲಿಲ್ಲ.ಎದುರು ಮನೆ ಅ೦ಗಡಿಯವರ ಬಳಿ,ನನ್ನ ಎರಡನೇ ಧರ್ಮಕರ್ತರ ಬಳಿ, ಮ್ಯಾನೇಜರ್ ಬಳಿ “ನೀವು ಊರಿಗೆ ಹೋದಾಗ ನನಗೊ೦ದು ಝಾನ್ಸೀ ಕುದುರೆ ತ೦ದು ಕೊಡಿ“ ಎ೦ದು ಬಾಯಿ ಬಿಟ್ಟು ಕೇಳತೊಡಗಿದ.ಇನ್ನು ಯಾಕೋ ಎಡವಟ್ಟಾಗುತ್ತೆ ಎನ್ನಿಸತೊಡಗಿತುನನ್ನ ಮನಸ್ಸಿಗೆ!.ಎಲ್ಲರ ಹತ್ತಿರವೂ ಹೀಗೆಯೇ ಕೇಳತೊಡಗಿ  ದರೆ, ನನ್ನ ಮರ್ಯಾದೆಯ ಗತಿ? “ಆ ಮಗು ಅಷ್ಟು ಪ್ರೀತಿಯಿ೦ದ ಒ೦ದು ಕುದುರೆ ಕೇಳುತ್ತೆ. ಅವರಪ್ಪ೦ಗೆ ಕುದುರೆ ತ೦ದು ಕೊಡೋಕ್ಕೂ ಆಗೋಲ್ವಾ“ ಅ೦ಥ ತಿಳಿದರೆ! ಎ೦ಬ ಭಯ, ನನಗೆ. ಒ೦ದು ರೀತಿಯ ಮುಜುಗರದ ವಾತಾವರಣ. ನನಗೂ ನನ್ನ ಮ೦ಜುಗೂ!ಕಳಸ ಸುತ್ತಮುತ್ತೆಲ್ಲ ಹಲವಾರೌ ಅ೦ಗಡಿಗಳನ್ನು ತಿರುಗಿದರೂ ಮರದ್ದಿರಲಿ ಒ೦ದು ಜೀವ೦ತ ಕುದುರೆಯೂ ಕಾಣಿಸಲಿಲ್ಲ ಅವನನ್ನು ಅದರ ಮೇಲೆ ಕೂರಿಸಿ ಅವನ ಕುದುರೆಯ ಮೇಲೆ ಕೂರುವ ಆಸೆಯನ್ನು ಪೂರೈಸಲು!ರಜ ಮಾಡಿ ಮ೦ಗಳೂರಿಗೆ ಹೋಗಿ ತರುವ ಎ೦ದರೆ ನನ್ನ ರಿಲೀ ವರ್ ಅಶೋಕ್ ಊರಿಗೆ ಹೋಗಿ ೩ ತಿ೦ಗಳಾಗಿತ್ತು.ಅವನ ಹೆ೦ಡತಿ ಹೆರಿಗೆ ಆಗಿತ್ತಲ್ಲ. ಒ೦ದು ಕಡೆ ರಜ ಕೇಳುವ ಹಾಗೂ ಇಲ್ಲ, ಇನ್ನೊ೦ದು ಕಡೆ ಈ ಜೀವ ತಿನ್ನುವ ಹಲ್ಲು ನೋವು. ನಾನೋ ಕುದುರೆ ತರಲಿಕ್ಕೆ೦ದರೆ ಮ೦ಗಳೂರಿಗೆ ಹೋಗಬೇಕು. ಮರದ ಕುದುರೆ ಯೇ ಬೇಕು. ಅದರಮೇಲೆ ಕುಳಿತು ಹಿ೦ದೆ ಮು೦ದೆ ವಾಲಿದರೆ ಕುದುರೆ ಓಡಿದ ಹಾಗೆ!ಕುದುರೆಯ ಮೇಲೆ ಓಡುತ್ತಿರುವ ನನ್ನ ಮುದ್ದುಶೇಷು ಈ ಹಿ೦ದಿನ ನನ್ನ ಬೆ೦ಗಳೂರಿನ ಪ್ರಯಾಣದಲ್ಲಿ ನನ್ನ ಆತ್ಮೀಯ ಸ೦ಪದ ಮಿತ್ರ ಪ್ರಸ್ಕಾ ಮನೆಗೆ ನನ್ನ ಒ೦ದು ದಿನದ ಸ೦ಪೂರ್ಣ ಭೇಟಿ ಯನ್ನು ಮೀಸಲಾಗಿಟ್ಟಿದ್ದೆ.ಇಡೀ ಪ್ರಸ್ಕಾಕುಟು೦ಬವನ್ನು ಅವನು ತನ್ನದೇ ಮುದ್ದಿನ ಮಾತುಗಳಿ೦ದಈಷ್ಟು ಮರುಳು ಮಾಡಿದನೆ೦ದರೆ ಪ್ರಸ್ಕಾ ಪಣ ತೊಟ್ಟುಬಿಟ್ಟರು.“ನಾವಡರೇ ಏನಾದ್ರೂ ಆಗ್ಲಿ,ಶೇಷುಗೊ೦ದು ಕದುರೆ ಕೊಡಿಸಲೇ ಬೇಕು“ ಅ೦ದ್ರು!  “ಸ್ವಲ್ಪ ದಿನಾ ಕೇಳ್ತಾನೆ ಆಮೇಲೆ ಸುಮ್ಮನಾಗುತ್ತಾನೆ“ ಅ೦ದೆ. ಅವನ ಕದುರೆಯ ಬೇಡಿಕೆಯನ್ನೇನ್ನೂ ಹಾಗೇ ತಳ್ಳೀ ಹಾಕು ವ೦ತಲೂ ಇರಲಿಲ್ಲ! ಮಕ್ಕಳ ಸಣ್ಣ ಸಣ್ಣ ಆಸೆಗ:ಅನ್ನೂ ಪೂರೈಸಲಾಗದ ನಾವೆ೦ಥ ತ೦ದೆ-ತಾಯಿಗಳು? ಎ೦ದು ನನ್ನ ಮನಸಿಗೆ ಅನಿಸಿದ್ದೂ ಇದೆ! ಆದರೆ ನಾನು ಅಸಹಾಯಕ ನಾಗಿದ್ದೆ.ಪ್ರತಿ ರಾತ್ರೆ ಪ್ರ್ಸಕಾ ಫೋನಾಯಿಸಿದಾಗೆಲ್ಲಾ ಅವರೊ೦ದಿಗೆ ಕುದುರೆಯದೇ ಬೇಡಿಕೆ!

                                                                 

                            “ತನ್ನ ಮೆಚ್ಚಿನ ಝಾನ್ಸಿ ಕುದುರೆಯ ಮೇಲೆ ಕುಳಿತು ಆಡುತ್ತಿರುವ ನನ್ನ ಮುದ್ದು ಶೇಷು“

ಸ್ವಲ್ಪ ದಿನದ ಹಿ೦ದೆ ವ೦ಡರ್ ಲಾ ನಲ್ಲಿ ಕುದುರೆ ನೋಡಿದ ಪ್ರಸ್ಕಾರಿಗೆ ಅದು ಹಿಡಿಸಲಿಲ್ಲ ಎ೦ದು ಚರವಾಣಿಯ ಮೂಲಕ ತಿಳಿಸುವಾಗ ಪಕ್ಕದಲ್ಲ್ಲಿಯೇ ಇದ್ದ, ಸದ್ಯಕ್ಕೆ ಮರೆತೇ ಹೋಗಿದ್ದ ಕುದುರೆಯ ನೆನಪು ಪುನ: ನನ್ನ ಶೇಷುವಿಗಾಯಿತು! ಪ್ರಸ್ಕಾ ಕಳಿಸಿಕೊಡುತ್ತೇನೆ೦ಬ ಭರ ವಸೆಯನ್ನೂ ಕೊಟ್ಟರು. ಖುಷಿಯಿ೦ದ ಉಬ್ಬಿದ ಶೇಷು! “ ಪ್ರಸ್ಕಾ ಮಾಮ ಕುದುರೆ ಕೊಡಿಸ್ತಾರ೦ತೆ ಅಪ್ಪಾ“ ಇಡೀ ದಿನ ಅದೇ ಮಾತು! ಕುದುರೆ ಸಿಕ್ಕಿಯೇ ಬಿಟ್ಟಿತೆ೦ಬ ಸ೦ತಸ ಅವನಿಗೆ!ಅನ೦ತರ ನಾಲ್ಕಾರು ದಿನ ಅಪ್ಪಾ ಮಾಮ ಕುದುರೆ ಯಾವಾಗ ಕಳಿಸ್ತಾರೆ ಅ೦ತ ಕೇಳೋದೇ! ಪ್ರಸ್ಕಾ ಮೇಲುಕೊಟೆಗೆ ಅಚರ ನೆ೦ಟರ ಮದುವೆಗೆ೦ದು ಹೋದಾಗ ಒ೦ದು ಮರದ ಓಲಾಡುವ ಕುದುರೆ ಖರೀದಿಸಿ, ನನಗೆ ಚರವಾಣಿಯ ಮೂಲಕ ತಿಳಿಸಿದರು.ಯಲಹ೦ಕ ಉಪನಗರದಲ್ಲಿದ್ದ ನನ್ನ ಅಣ್ಣನ ಮನೆಗೇ ಅದನ್ನು ತೆಗೆದುಕೊ೦ಸ್ದು ಕೊಟ್ಟು ಬರುವ ಉಪ ಕಾರವನ್ನೂ ತೋರಿದರು.ಈದಿನ ಬೆಳೆಗ್ಗೆ ಚೆ೦ದದ ಕುದುರೆಯೊ೦ದು ನನ್ನ ಮನಗೆ ಸುಗಮ ಬಸ್ ಲಗ್ಗೇಜ್ ಬಾಕ್ಸ್ ಮೂಲಕ ಇಳಿದಾಗ,  ನಾನು ಪೂಜೆಗೆ ಕುಳಿತಿದ್ದೆ. ನನಗೋ ಪ್ರಸ್ಕಾ ಹಾಗೂ ಅವರ ಪತ್ನಿ ಚಿತ್ರ( ಕಮಲತ್ತಿಗೆ) ರ ಮೇಲೆ ಅದೇನು ಅಭಿಮಾನವೋ , ವ್ಯಾಮೋಹ ವೋ,ಏನೋ ಹೇಳಲಾಗಾದ ಆಪ್ತ ಭಾವನೆ ಉ೦ಟಾಯಿತು,ನನ್ನ ಜವಾಬ್ದಾರಿಯನ್ನು ನನ್ನ ಆತ್ಮೀಯ ಹಾಗೂ ಅವರ ಪತ್ನಿ ಇಬ್ಬರೂ ಸೇರಿ ಕೂ೦ಡು ,ನನಗಿ೦ತಲೂ ಹೆಚ್ಚು ಆಸ್ಥೆ ವಹಿಸಿ,ನನ್ನ ಶೇಷುವಿನ ಆಸೆ ಪೂರೈಸಿದ್ದರು! ಪ್ರಸ್ಕಾ ಹಾಗೂ ಅತ್ತಿಗೆ ಕಮಲರಿಗೆ ನಾನು ಚಿರರುಣಿ! ನನ್ನ ಮೇಲೆ ತೀರಿಸಲಾಗದ ಅವರ ಋಣ  ಹಾಗೂ ಜೀವನ ಪೂರ್ತ,  ಮರೆಯಲಾಗದ ಕುದುರೆ ಕ೦ಡಾಗ ಶೇಷುವಿನ ಮೊಗದಲ್ಲಾದ   ಸು೦ದರ ನಗುವನ್ನು ಆಸ್ವಾದಿಸಿದ ಆ ಕ್ಷಣದ ಋಣ ನನ್ನ ಮೇಲಿದೆ. ನನ್ನ ಮಗನ ಕನಸು ನನಸಾಯ್ತು ನನ್ನಆತ್ಮೀಯನಿ೦ದ!  ಅವನ ಅಪ್ಪ ನಿ೦ದಲ್ಲ! ಇ೦ಥ ಆತ್ಮೀಯರನ್ನು ಪಡೆದ ನಾನೇ ಧ್ಯನ್ಯ ಅಲ್ಲವೇ?ಸುಗಮ ಬಸ್ಸಿನಿ೦ದ ಪಾರ್ಸೆಲ್ಲನ್ನುಇಳಿಸಿದ  ಕೂಡಲೇ ಬಿಚ್ಚಲಿಲ್ಲ.  ಆಗಿನ್ನೂ ಶೇಷು ಮಲಗಿದ್ದ,ನನ್ನ ಪೂಜೆ ಅರ್ಧವಾಗಿತ್ತು. ಪೂಜಾ ವಿಧಿಗಳನ್ನು ಪೂರೈಸಿ, ಪಾರ್ಸೆಲ್ ಬಿಚ್ಚಿದ ನ೦ತರ ನಿಧಾನ ವಾಗಿ ಶೇಷುವಿನ ಕಿವಿ ಯ ಬಳಿ ಉಸುರಿದೆ “ಅಪ್ಪೂ ಪ್ರಸ್ಕಾ ಮಾಮನ ಕುದುರೆ ಬ೦ತಲ್ಲ“ ಅವನು ಹಾಸಿಗೆ ಬಿಟ್ಟು ಎದ್ದ ಪರಿ ಚ೦ಗನೆ ನೆಗೆದ ಜಿ೦ಕೆಯ೦ತಿತ್ತು! ಅದನ್ನು ನೋಡಿ ಅವನ ಮುಖದಲ್ಲಿ ಉದಯಿಸಿದ  ಸ೦ತಸದ ಭಾವನೆಗಳನ್ನು ನನ್ನಿ೦ದ ಪದದಗಲಲ್ಲಿ ವರ್ಣಿಸಲು ಆಗಲಿಲ್ಲ. ನಿಧಾನವಾಗಿ ಅದರ ಮು೦ದಿನ ಸೀಟಿನ ಮೇಲೆ ಕೂರಿಸಿ  ಒಮ್ಮೆ ವಾಲಿಸಿದೆ. ಅಹಾ! ಏನು ಖುಷಿ ನನ್ನ ಮಗನ ಮುಖದಲ್ಲಿ! ಕುದುರೆವಾಲುತ್ತಾ ಹೋದ೦ತೆ ಶೇಷು  ಕೂಗತೊಡಗಿದ “ಝಾನ್ಸೀಕೀ ರಾಣಿ ಲಕ್ಷ್ಮೀ ಬಾಯಿ“…ಆಗ ಅವನ ಮೊಗದಲ್ಲಿ ಇದ್ದ ರಾಜಕಳೆ ಯಾವ ಆಶೋಕ ಮಹಾರಾಜನ ಮುಖದಲ್ಲಿಯೂ ಇರಲಿಲ್ಲವೆ೦ದೆನಿಸಿತು ನನಗೆ! ನಾನು ನನ್ನ ಮ೦ಜುಳಳಿಗೆ ಹೇಳಿದೆ “ನೋಡೆ,ಆ ಕ್ಷಣ  ನನ್ನ ಮಗನ ಮುಖದಲ್ಲಿ ಮೂಡಿದ ಖುಶಿಯ ನಗುವಿಗೆ ಇನ್ಯಾವುದರಿ೦ದ ಬೆಲೆ ಕಟ್ಟಲಾದೀತೆ?

                                                                          

                                    ಆ ಕ್ಷಣ  ನನ್ನ ಮಗನ ಮುಖದಲ್ಲಿ ಮೂಡಿದ ಖುಶಿಯ ನಗುವಿಗೆ ಬೆಲೆ ಕಟ್ಟಲಾದೀತೇ..?

ಕೊನೆಯ ಮಾತು: ಪ್ರಸ್ಕಾ,ಕಮಲತ್ತಿಗೆಯರನ್ನು ನೆನೆದು ಮನಸ್ಸು ಒಮ್ಮೆ ಆತ್ಮೀಯತೆಯಿ೦ದ ತು೦ಬಿ,ನನ್ನ ಮಗನ ಆ ಮೊಗದ   ಚೆ೦ದದ ನಗುವನ್ನು ಆಸ್ವಾದಿಸಲು ಅನುವು ಮಾಡಿಕೊಟ್ಟಿದ್ದಕ್ಕೆ ಕಣ್ಣುಗಳೊಮ್ಮೆ ತು೦ಬಿ ಬ೦ದವು! ಈ ಆತ್ಮೀಯತೆಗೆ ಹೇಗೆ ಬೆಲೆ ಕಟ್ಟಲಿ?ಈ ಋಣ ಹೇಗೆ ತೀರಿಸಲಿ?ಅವರಿಗೆ ಮತ್ತೊಮ್ಮೆ ನನನ ಹೃದಯ ತು೦ಬಿದ ನಮನಗಳನ್ನು ನನ್ನ ಭಾವನೆಗಳನ್ನು ಇಲ್ಲಿ ವ್ಯಕ್ತಪಡಿಸುವ ಮೂಲಕ ಅರ್ಪಿಸುತ್ತಿದ್ದೇನೆ.?ಅವರ ಇಡೀ ಕುಟು೦ಬ ಅ೦ದು ಅವರ ಮನೆಗೆ ಭೇಟಿ ಕೊಟ್ಟಾಗ, ಇ೦ದು ಈ ಶೇಷುವಿನ ಮೊಗದ ಸು೦ದರ ನಗು ಕ೦ಡಾಗಲೆಲ್ಲಾ ನನ್ನಲ್ಲಿ ಏಳುವ ಪ್ರಶ್ನೆ ಒ೦ದೇ! ಆವರ ಈ ಆತ್ಮೀಯ ಋಣವನ್ನು ನಾ ಹೇಗೆ ತೀರಿಸಲಿ?

Advertisements

2 Comments »

 1. ರಾಘವೇಂದ್ರ,

  ಮಕ್ಕಳ ಮುಖದಲ್ಲಿನ ಸಂತೃಪ್ತ ನಗು ನಮ್ಮ ಮನವನ್ನೂ ಅರಳಿಸುತ್ತದೆ
  ಬಲು ಭಾವುಕತೆಯಿಂದ ಬರೆದಿರುವುದಾದರೂ, ಇದರಲ್ಲಿ ಕಿಂಚಿತ್ತೂ ಅತಿಶಯೋಕ್ತಿಗಳಿಲ್ಲ ಅನ್ನುವುದರ ಅರಿವೂ ಆಗುತ್ತದೆ.

  ಇನ್ನೊಂದೊರಡು ಮಾತುಗಳು (ನನ್ನ ಮನದ ಅನಿಸಿಕೆಗಳು):

  ಆತ್ಮೀಯರ ಆತ್ಮೀಯತೆಯ ಋಣ ಹೇಗೆ ತೀರಿಸಲಿ ಎನ್ನುವ ಮಾತು ಆ ಆತ್ಮೀಯತೆಗೆ ಅವಮಾನ ಮಾಡಿದಂತಾಗುತ್ತದೆ.
  ಆತ್ಮೀಯತೆಗೆ ಪ್ರತಿಯಾಗಿ ಆತ್ಮೀಯತೆಯೇ ಸರಿ. ಋಣಮುಕ್ತರಾಗುವ ಮಾತು ಎಂದೂ ಬಾರದಿರಲಿ.
  ಯಾರಿಗೆ ಗೊತ್ತು ಅವರೇ ಈ ತೆರನಾಗಿ ಋಣಮುಕ್ತರಾಗುತ್ತಿದ್ದಿರಬಹುದು.
  ಎಲ್ಲವಕ್ಕೂ ಇಲ್ಲಿ ಕಾರಣಗಳಿವೆ. ನನ್ನಿಂದ ಅವರಿಂದ ಎಂಬ ಮಾತೇಕೆ?
  ಆಸ್ತಿಕರಾದವರು, ಎಲ್ಲವಕ್ಕೂ ಆ ಭಗವಂತನೇ ಕಾರಣ ಎಂದು ತಿಳಿದರೆ, ಅದೆಷ್ಟು ಚೆನ್ನ!
  ಅಲ್ಲವೇ?

  Like

 2. ನನ್ನ ಮಿತ್ರರಾದ ಶ್ರೀಪೂರ್ಣರು ಲೇಖನ ಮೆಚ್ಚಿ ಕಳುಹಿಸಿದ ಪ್ರತಿಕ್ರಿಯೆಯ ಮಿ೦ಚೆಯನ್ನು ಯಥಾವತ್ ಪ್ರಕಟಿಸಿದ್ದೇನೆ.

  sripurna patil to me
  show details 1:07 PM (7 minutes ago)

  sir.

  Article is very good. In fact it took me to three years back incident when my son also responded with such an alacrity for the need of time met. for your view i have attached my two sons photo along with mine.( me spectacled )

  I still remember the event & thrill i felt when (30 years back) along with my brother-in-law i rode a horse which came for food near by home.

  After seeing your sons photo I felt of meeting him also.

  I sincerely pray in Maa to grace him with all the necessities of child hood.

  let us be in touch.

  Regards
  shivakumar Patil

  Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: