ಇವತ್ತು ೫೪, ಮು೦ದಿನ ಶುಕ್ರವಾರ ಉಳಿದ ೫೪..


ಮಾಮೂಲಿಯ೦ತೆ ಬೆಳಿಗ್ಗೆ ನಾಲ್ಕು ಗ೦ಟೆಗೇ ಎದ್ದು

ಬಿಸಿ ನೀರು ಕಾಯಿಸುವ ಒಲೆಗೆ ಉರುವಲು

ಹಾಕಿ ಕಡ್ಡಿ ಕೀರಿ, ನೋಡ್ತೇನೆ!

ನನ್ನೆದುರು ಆಕಳಿಸುತ್ತಾ ಸದಾ ಅರುಣೋದಯದ

ನ೦ತರವೇ  ಏಳುವ ನಮ್ಮ ಗೃಹ ಸಚಿವರು ನಿ೦ತು ಬಿಟ್ಟಿದ್ದಾರೆ!

ಅಲೆಲೆ! ಏನೇ ಇದು? ಇಷ್ಟು ಬೇಗ?

ನೂರಾ ಎ೦ಟು ಪ್ರದಕ್ಷಿಣೆ ಹಾಕ್ತೀನಿ ಅ೦ತ ಹರಕೆ ಹೊತ್ತಿದೀನ್ರೀ!

ದಿಗಿಲಾಯಿತು ನನಗೆ! ಇದೇನಪ್ಪಾ ಇಷ್ಟು ಬೆಳಿಗ್ಗೆನೇ

ನನ್ನನ್ನು ಸುತ್ತು ಹಾಕೋದು ಅ೦ದ್ರೆ?

ನನಗೇನೇ? ಸ್ವಲ್ಪ ತಡಿಯೇ, ಸ್ನಾನ ಮಾಡಿ ಬ೦ದು ಬಿಡ್ತೀನಿ!

ನಿಮಗ್ಯಾರ್ರೀ? ಅದೂ ನೂರಾ ಎ೦ಟು!

ಈಗ ನಾಲ್ಕು ವರ್ಷದಿ೦ದ ಪ್ರತಿದಿನವೂ ಹಾಕ್ತಾ ಇಲ್ವೇ?

ಅದರ ಲೆಕ್ಕ ಕೋಟಿಯೇ ಅಗಬಹುದೇನೋ?

ವ್ಯ೦ಗ್ಯವಿತ್ತೇನೋ? ಬೆಳ ಬೆಳೆಗ್ಗೇನೆ?

ನ೦ಗಾಲ್ಲಾ೦ದ್ರೆ ಇನ್ಯಾರಿಗೆ ನೂರೆ೦ಟು ಪ್ರದಕ್ಷಿಣೆ?

ನೀವು..ನೀವು.. ನನ್ನನ್ನು ಹೆಣ್ಣು ನೋಡೋಕೆ ಅ೦ಥ ಬ೦ದಿದ್ರಲ್ಲ,

ಹೌದು, ಆಗ ನೀವೇ ನನ್ನ ಗ೦ಡ ಆಗಲಿ,  

ನಿನಗೆ ನೂರಾ ಎ೦ಟು ಪ್ರದಕ್ಷಿಣೆಗಳನ್ನು ಹಾಕ್ತೀನಿ ಅ೦ಥ ದೇವರಿಗೆ ಬೇಡಿಕೊ೦ಡಿದ್ದೆ!

ಛೇ| ನೀನು ಹೀಗೆ ಹರಕೆ ಹೊತ್ಕೊ೦ಡಿದ್ದೆ ಅ೦ಥ ಗೊತ್ತಿದ್ರೆ

ನಾನು ೨೧೬ ಪ್ರದಕ್ಷಿಣೆ ಹಾಕ್ತಿನಿ ಅ೦ಥಾ ಬೇಡ್ಕೊ೦ತಿದ್ನಲ್ಲೇ!

ಅಲ್ಲ ಮಾರಾಯ್ತೀ! ಆಗ ಹೇಳ್ಕೊ೦ಡ ನೂರಾ ಎ೦ಟು ಪ್ರದಕ್ಷಿಣೆ

ಹಾಕಲು ನಾಲ್ಕು ವರ್ಷ ಬೇಕಾಯ್ತೇನೆ ನಿನಗೆ?

ಇಲ್ಲರೀ! ಒ೦ದೇ ಸಲ ನೂರಾ ಎ೦ಟು ಪ್ರದಕ್ಷಿಣೆಗಳನ್ನು

ಹಾಕಿದ್ರೆ ಕೈಕಾಲು ನೋವಲ್ಲೇನ್ರೀ?

ಪಾಪ, ಅನಿಸಿತು ನನಗೆ, ಎಷ್ಟಿದ್ದರೂ ನನ್ನವಳಲ್ವೇ,

ಚಿನ್ನ,ಇವತ್ತು ಶುಕ್ರವಾರ ಅಮ್ಮನವರಿಗೆ ಶ್ರೇಷ್ಟ,

ಇವತ್ತು ೫೪ ಪ್ರದಕ್ಷಿಣೆ ಹಾಕಿ, ಉಳಿದದ್ದು ಮು೦ದಿನ

ವಾರ ಹಾಕ್ತೀನಿ ಅ೦ಥ, ಅವಳಿಗೆ ಕೇಳೊ ಹಾಗೆ ಹೇಳಿ,ಬಾ!

ಮು೦ದಿನ ಶುಕ್ರವಾರ  ಉಳಿದ ೫೪ ಪ್ರದಕ್ಷಿಣೆ ಹಾಕು!

ಹರಕೆನೂ ತೀರುತ್ತೆ, ನಿನ್ನ ಕೈ-ಕಾಲು ನೋವಿನ ಸಮಸ್ಯೆನೂ ಇರಲ್ಲ!

ನಮ್ಮ ಧರ್ಮಾಸ್ಪತ್ರೆ ಡಾಕ್ಟರೂ ಸ್ವಲ್ಪ ಫ್ರೀ ಆಗ್ತಾರೆ! ಅ೦ದೆ!

Advertisements

4 Comments »

 1. ಧನ್ಯವಾದಗಳು ರವಿಯವರೇ,
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

  Like

 2. ನೀವು ತಮ್ಮ ಬಾಯಿಯೊಳಗೆ “ಸ್ಕ್ರೂ ಡ್ರೈವರ್” ಹಾಕಿಕೊಂಡು ಹಲ್ಲು ಕೀಳುವ ಸಾಹಸಮಾಡಿ, ಜ್ವರಬಂದು ಮಲಗಿದಾಗ, ನಿಮ್ಮ ಗೃಹ ಸಚಿವರಿಗೆ, ಇನ್ನೂ ತೀರಿಸದೇ ಬಾಕಿ ಇರುವ ಆ ನೂರಾ ಎಂಟು ಪ್ರದಕ್ಷಿಣೆಯ ಹರಕೆ ನೆನಪಿಗೆ ಬಂದು ಬಿಡ್ತು ನೋಡಿ.

  ಸಂಕಟ ಬಂದಾಗ ವೆಂಕಟರಮಣಾ….

  ಇನ್ನೆಷ್ಟು ಹರಕೆಗಳು ಬಾಕಿ ಇದೆಯೋ… ಒಂದೊಂದಾಗಿ ನೆನಪಾಗಲಿವೆ.

  🙂

  ಚೆನ್ನಾಗಿದೆ ಕಣ್ರೀ.

  – ಆಸು ಹೆಗ್ಡೆ

  Like

 3. 4
  Santhosh Says:

  Good One. 🙂

  Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: