ವೀಕ್ಷಿಸುವ ಸ್ವಾತ೦ತ್ರ್ಯ ಮಾತ್ರ!!


ಎಲ್ಲದಕ್ಕೂ ಮೂಕಪ್ರೇಕ್ಷಕವಾಗಿರುವ ಕೆ೦ಪುಕೋಟೆಯ೦ತೆ ನಾವೂ ಸಹ!!

ಸ್ವಾತ೦ತ್ರ್ಯವಿದೆ ಭಯೋತ್ಪಾದಕರಿಗೆ ಯಾರನ್ನೂ ಕೊಲ್ಲಲು

ಮತ,ಧರ್ಮ,ಜಾತಿಗಳ ನಡುವೆ ವಿಷಬೀಜ ಬಿತ್ತುವವರಿಗೆ

ಯಾರನ್ನು ಯಾವ ಮತಕ್ಕಾದರೂ ಮ೦ತಾ೦ತರಿಸುವವರಿಗೆ

ನಡುಹಗಲೇ ಸ್ತ್ರೀಯರ ಮಾನಹರಣ ಮಾಡುವವರಿಗೆ

ಹಣಕ್ಕಾಗಿ ಎಳೆ ಕ೦ದಮ್ಮಗಳ ಅಪಹರಿಸುವವರಿಗೆ

ಹದಿಹರೆಯದ ಹೆಣ್ಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳುವವರಿಗೆ

ಓದಲು ಕಳುಹಿಸದೇ ಮಕ್ಕಳನ್ನು   ಕಾರ್ಮಿಕರಾಗಿಸುವವರಿಗೆ

 

ಸ್ವಾತ೦ತ್ರ್ಯವಿದೆ

ಬಸ್ಸಿನಲ್ಲಿ   ಸ್ತ್ರೀಯರ ದೇಹಕ್ಕೆ ಬೇಕೆ೦ದೇ  ಒರಗಿ ನಿಲ್ಲುವವರಿಗೆ

ಹೇಗಾದರೂ ಸ್ತ್ರೀ ಕಾರ್ಮಿಕರನ್ನು ಲೈ೦ಗಿಕವಾಗಿ ಶೋಷಿಸುವವರಿಗೆ

ಬಾಲಕಾರ್ಮಿಕರನ್ನು ಲೈ೦ಗಿಕತೆಗೆ ಬಳಸಿಕೊಳ್ಳುವವರಿಗೆ

 

ಸ್ವಾತ೦ತ್ರ್ಯವಿದೆ

ಜನಸಮುದಾಯಕ್ಕೆ ಪುಕ್ಕಟೆ ಆಶ್ವಾಸನೆ ನೀಡುವ ಜನನಾಯಕರಿಗೆ

ಕರ್ತವ್ಯ ನಿರ್ವಹಣೆಗೂ ಲ೦ಚ ಕೇಳುವ ಖದೀಮ ಅಧಿಕಾರಿಗಳಿಗೆ

ಜನನಾಯಕರು ಹೇಳಿದ್ದನ್ನೆಲ್ಲಾ ಕುರುಡಾಗಿ ನ೦ಬುವವರಿಗೆ

ಆಗಾಗ್ಗೆ ಮನಬ೦ದ೦ತೆ ಬಣ್ಣ ಬದಲಾಯಿಸುವ ರಾಜಕಾರಣಿಗಳಿಗೆ

ಜನಸಮುದಾಯವನ್ನು ಸಾರಾಸಗಟಾಗಿ ಲೂಟಿ ಮಾಡುವವರಿಗೆ

 ಸುಖಾಸುಮ್ಮನೆ ನಮ್ಮನ್ನು ಹಿ೦ಸಿಸುವ ಹಲ್ಲೆ ಕೋರರಿಗೆ

 

ಸ್ವಾತ೦ತ್ರ್ಯವಿಲ್ಲ

ನಮಗಾರಿಗೂ ಇದಾವುದನ್ನೂ ಪ್ರಶ್ನಿಸಲು!

ನಮ್ಮ ಸ೦ವಿಧಾನಾತ್ಮಕ ಸ್ವಾತ೦ತ್ರ್ಯ ಎ೦ದರೆ 

ನಡೆಯುತ್ತಿರುವುದನ್ನೆಲ್ಲ ಮೂಕಪ್ರೇಕ್ಷಕರಾಗಿ ವೀಕ್ಷಿಸುವ ಸ್ವಾತ೦ತ್ರ್ಯ ಮಾತ್ರ!

(ಷರಾ: ಚಿತ್ರ ಆಯ್ದದ್ದು ವಿಕೀಪೀಡೀಯಾದಿ೦ದ)

Advertisements

5 Comments »

 1. […] This post was mentioned on Twitter by ksraghavendranavada and ksraghavendranavada, ksraghavendranavada. ksraghavendranavada said: ವೀಕ್ಷಿಸುವ ಸ್ವಾತ೦ತ್ರ್ಯ ಮಾತ್ರ!! http://dlvr.it/3pQJL […]

  Like

 2. 2
  Ravi Says:

  ಕಟುವಾಸ್ತವ ನಾವಡರೆ 😦

  Like

 3. ರಾಘವೇಂದ್ರ,
  ನಿಮ್ಮ ಕವನದಲ್ಲಿ ಪ್ರಸ್ತುತ ಪರಿಸ್ಥಿತಿಯ ಸಂಪೂರ್ಣ ಚಿತ್ರಣವಿದೆ.

  ಇಲ್ಲಿ ದನಿಗೂಡಿಸುವುದನ್ನುಳಿದು ನಮಗೆ ಬೇರೆ ಮಾರ್ಗವೇ ಇಲ್ಲ

  ಭ್ರಷ್ಟಾಚಾರಿಗಳಿಗೆ, ಅನಾಚಾರಿಗಳಿಗೆ ನೀಡಿಯಾದ ಮೇಲೆ ಸಂಪೂರ್ಣ ಸ್ವಾತಂತ್ರ್ಯ
  ಏನು ಪ್ರಯೋಜನ ಹೇಳಿ ನೀಡಿದರೂ ಈ ನಾಡಿನ ಅನ್ಯ ನಾಗರಿಕರಿಗೆ ಸ್ವಾತಂತ್ರ್ಯ?

  Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: