ನಾನೊಬ್ಬನೇ ಹೊರಡಲೇ..


ಅ೦ತೂ ಇ೦ತೂ ಹುಡುಕಿದೆ
ಕೊನೆಗೂ ಈ ಬಸ್ ನಿಲ್ದಾಣವನ್ನು
ಬಸ್ಸು ಬರಬೇಕಷ್ಟೇ!
ಜನರೆಲ್ಲಾ ಹೇಳಿದ್ದರು, ಈ ನಿಲ್ದಾಣದಲಿ
ಬಸ್ಸು ಸಿಕ್ಕೇ ಸಿಗುತ್ತೆ  ಅ೦ತ
ಆದ್ರೆ ಇಷ್ಟೋತ್ತಾದ್ರೂ ಬ೦ದೇ ಇಲ್ಲವಲ್ಲಾ?
ಈ ಮೊದಲೇ ಬ೦ದು ಹೋಗಾಯ್ತೇ?
ಅಥವಾ ಬರೋದೇ ಇಲ್ವೇ?
ಆದರೆ, ನನಗೆ ನ೦ಬಿಕೆಯಿದೆ
ಬ೦ದೇ ಬರುತ್ತೆ ಬಸ್ಸು ಅ೦ತ
ಎದುರಿಗೆ ಸಿಕ್ಕಿದವರೆಲ್ಲಾ ಹೇಳಿದ್ದರು,
ನಾವೂ ಬರ್ತೀವಿ ಕೆಲಸ ಮುಗಿಸಿ ನಿನ್ನ ಜೊತೆ ಅಂತ!
ಯಾರೂ ಕಾಣ್ತಿಲ್ಲ, ಎಲ್ಲಿ ಹೋದರು ಎಲ್ಲಾ?
ಎಲ್ಲರಿಗೂ ಇವತ್ತೇ ಕೆಲಸವೇ?
ಯಾರೂ ಬರೋಲ್ಲ ಅನ್ನಿಸುತ್ತೆ,
ಅವಳಾದ್ರೂ ಬರ್ಬೇಕಿತ್ತು!
ಅವಳಿಗೂ ಬೇರೆಲ್ಲಿಗೋ ಹೋಗಬೇಕ೦ತೆ
ಮಕ್ಕಳೆಲ್ಲ ಎಲ್ಲಿ ಹೋದರು?
ಇನ್ನೊಮ್ಮೆ ಕೇಳಬೇಕಿತ್ತು
ಬರ್ತೀರಾ ನನ್ನ ಜೊತೆ ಅಂತ;
ಈಗಲೇ ಬಸ್ಸು ಬ೦ದರೆ?
ನಾನೊಬ್ಬನೇನಾ ಇಡೀ ಬಸ್ಸಿಗೆ?
ಯಾರಾದ್ರೂ ಇದ್ರೆ ಚೆನ್ನಾಗಿರ್ತಿತ್ತು,
ಇನ್ನೂ ಸ್ವಲ್ಪ ಹೊತ್ತು ಕಾಯುತ್ತೇನೆ,
ಬೇರೆ ಯಾರಾದರೂ ಬರಬಹುದು;
ಅಯ್ಯೋ, ಬಸ್ಸು ಬ೦ದೇ ಬಿಡ್ತಲ್ಲಾ!
ನಾನೊಬ್ಬನೇ ಇಡೀ ಬಸ್ಸಿಗೆ!

 

Advertisements

4 Comments »

 1. 1
  Ravi Says:

  ಹೋಲಿಕೆ ತುಂಬಾ ಚೆನ್ನಾಗಿದೆ! ಧನ್ಯವಾದ

  Like

 2. ಧನ್ಯವಾದಗಳು ರವಿಯವರೆ.

  Like

 3. ಬಯಸಿಯೋ ಬಯಸದೆಯೋ ಹೊರಡಬೇಕು ಒಬ್ಬೊಬ್ಬರೇ ನಾವು
  ಯಾರೂ ಬರುವುದಿಲ್ಲ ಎಷ್ಟೇ ಗೋಳಾಡಿದರೂ ಬಂದಾಗ ಸಾವು

  ಜೀವನದ ಈ ಸತ್ಯವನು ಆದಷ್ಟು ಬೇಗ ಅರಿತು ಬಾಳಿದರೆ ಕ್ಷೇಮ
  ಕ್ಷಣ ಪ್ರತಿಕ್ಷಣ ನಮ್ಮ ಎಲ್ಲಾ ಕರ್ತವ್ಯಗಳಲಿ ಇರಲಿ ದೇವರ ನಾಮ

  Like

 4. ಒಪ್ಪತಕ್ಕ ಮಾತು,ಧನ್ಯವಾದಗಳು.ಮನಸ್ಸಿಗೊ೦ದು ಸಮಾಧಾನ ನೀಡಿದೆ.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

  Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: