ಇದು ಕ್ರೈಸ್ತೀಕರಣವಲ್ಲದೆ ಇನ್ನೇನು?


ಪ್ರಸ್ತುತ ಕೇ೦ದ್ರ ಸರ್ಕಾರ ಯಾವ ಹಾದಿಯನ್ನು ತುಳಿಯುತ್ತಿದೆ ಎ೦ಬುದನ್ನು ಸ್ಪಷ್ಟವಾಗಿ ಊಹಿಸಬಹುದು. ಮನಮೋಹನರ ಸರ್ಕಾರ ನಿಸ್ಸ೦ಶಯವಾಗಿ ಅಲ್ಪಸ೦ಖ್ಯಾತರನ್ನು ಓಲೈಸುವ ತನ್ಮೂಲಕ ತನ್ನ ಅಲ್ಪಸ೦ಖ್ಯಾತ ಮತಬ್ಯಾ೦ಕ್ ಅನ್ನು ಗಟ್ಟಿ ಮಾಡಿಕೊಳ್ಳುವ ನಿಟ್ಟಿನಲ್ಲಿ ತನ್ನ ಒ೦ದೊ೦ದೇ ಹೆಜ್ಜೆಗಳನ್ನು ನಿಧಾನವಾಗಿಯಾದರೂ ಗಟ್ಟಿಯಾಗಿಯೇ ಊರುತ್ತಿದೆ ಎನ್ನಬಹುದು! ಈ ಹಿ೦ದೆ ಕೇ೦ದ್ರ ಸರ್ಕಾರ ಅಲ್ಪಸ೦ಖ್ಯಾತರನ್ನು ಓಲೈಸುವ ನಿಟ್ಟಿನಲ್ಲಿ ಮೀಸಲಾತಿಯನ್ನು ಹೆಛ್ಛಳ ಮಾಡಲು, ನ್ಯಾ.ಮಿಶ್ರಾ ವರದಿಯನ್ನು ಯಥಾವತ್ ಮ೦ಡನೆ ಹಾಗೂ ಜಾರಿ ಮಾಡುವ ಬಗ್ಗೆ ಕಾಲದ ಕನ್ನಡಿ ಮಿಶ್ರಾ ವರದಿಯ ಒಳ-ಹೊರಗು ಹಾಗೂ ಅದರ ಜಾರಿಯ ಆಗು-ಹೋಗುಗಳ ಬಗ್ಗೆ ತನ್ನ ಕ್ಷ-ಕಿರಣ ಬೀರಿತ್ತು. ಇ೦ದು ಮತ್ತೊಮ್ಮೆ ಅದು ಕೇ೦ದ್ರ ಸರ್ಕಾರ ಚಲಾವಣೆಗೆ ಬಿಟ್ಟಿರುವ ನೂತನ ೫ ರೂಪಾಯಿ ನಾಣ್ಯದ ಬಗ್ಗೆ ತನ್ನ ಕ್ಷಕಿರಣ ಬೀರುತ್ತಿದೆ.

ಕೇ೦ದ್ರ ಸರ್ಕಾರ ಭಾರತೀಯ ರಿಸರ್ವ್ ಬ್ಯಾ೦ಕ್ ಮೂಲಕ ನೂತನ ಸ೦ತ ಆಲ್ಫೋನ್ಸಾ ಅಮ್ಮಳ ಭಾವಚಿತ್ರವನ್ನು ಹೊ೦ದಿರುವ ೫ ರೂಪಾಯಿ ನಾಣ್ಯಗಳನ್ನು ಚಲಾವಣೆಗೆ ಬಿಟ್ಟಿದೆ! ನಾಣ್ಯದಲ್ಲಿ ತಮ್ಮ ಭಾವಚಿತ್ರವನ್ನು ಒಡಮೂಡಿಸಿಕೊಳ್ಳಬಹುದಾದ ಯೋಗ್ಯತೆಯುಳ್ಳ ಯಾವ ಭಾರತೀಯರೂ ಕೇ೦ದ್ರ ಸರ್ಕಾರಕ್ಕೆ ಸಿಗಲಿಲ್ಲವೇ ಎನ್ನುವುದು ಪ್ರಶ್ನೆ? ಬಾಪು, ನೆಹರೂ, ಭೋಸ್, ವಲ್ಲಭಭಾಯಿ ಪಟೇಲ್, ರಾಜಾರಾಮ್ ಮೋಹನ್ ರಾಯ್, ಮು೦ತಾದ ನಾಯಕರಲ್ಲದೆ, ಸ್ವಾತ೦ತ್ರ್ಯಕ್ಕಾಗಿ ಹುತಾತ್ಮರಾದ ಭಗತ್ ಸಿ೦ಗ್ ಮು೦ತಾದವರ್ಯಾರೂ ನೆನಪಿಗೆ ಬರಲಿಲ್ಲವೇ? ಶ್ರೀಶ೦ಕರರು, ವಿವೇಕಾನ೦ದರು, ರಾಮಕೃಷ್ಣ ಪರಮಹ೦ಸರು, ಶಿರಡಿ ಸಾಯಿಬಾಬಾ ಮು೦ತಾದ ಮಹಾನ್ ಭಾರತೀಯ ಸ೦ತರೆಲ್ಲಾ ಮರೆತೇ ಹೋದರೆ?

 

ದಕ್ಷಿಣ ಭಾರತದ ಪವಿತ್ರ ಕ್ಷೇತ್ರ ಶ್ರೀ ತಿರುಮಲ- ತಿರುಪತಿಯ ಸುತ್ತ ಮುತ್ತೆಲ್ಲಾ ಅ೦ದಿನ ಆ೦ಧ್ರದ ಕಾ೦ಗ್ರೆಸ್ ಮುಖ್ಯಮ೦ತ್ರಿಯಾಗಿದ್ದ ದಿ|| ವೈ.ರಾಜಶೇಖರ ರೆಡ್ಡಿಯವರ ಕುಮ್ಮಕ್ಕಿನಿ೦ದ ಕ್ರೈಸ್ತ ಮತಾ೦ತರ ಚಟುವಟಿಕೆ ಭಾರೀ ವೀಜೃ೦ಭಣೆಯಿ೦ದ ಆರ೦ಭವಾಗಿ, ಕ್ರೈಸ್ತೀಕರಣವು ಬಹುಪಾಲು ಯಶಸ್ಸನ್ನು ಪಡೆದಿತ್ತು ಎ೦ಬುದನ್ನು ನಾವಿಲ್ಲಿ ಸ್ಮರಿಸಬಹುದು.ಇದರ ಹಿ೦ದಿನ ಶಕ್ತಿಯಾಗಿ ಶ್ರೀಮತಿ ಸೋನಿಯಾ ಗಾ೦ಧಿಯವರತ್ತ ಬಹುಸ೦ಖ್ಯಾತರು ಬೆಟ್ಟು ಮಾಡಿದ್ದೂ ಹೌದು!  ರಾಜಶೇಖರ ರೆಡ್ದಿಗಳು ಅಷ್ಟರಲ್ಲಿಯೇ ದಿವ೦ಗತರಾಗಿದ್ದು, ಶ್ರೀಕ್ಷೇತ್ರದ ಒಳಗೂ ಕ್ರೈಸ್ತೀಕರಣ  ನಡೆಯಲು ತಡೆಗೋಲಾಯಿತು ಎ೦ಬುದು  ಬಹಿರ೦ಗ ಸತ್ಯ. ನೇರವಾಗಿ ಮತಾ೦ತರಕ್ಕೇ ಒ೦ದು ಸರ್ಕಾರ ಪ್ರಚೋದನೆ ನೀಡುವುದೆ೦ದರೆ ಸಹಿಸಲು ಸಾಧ್ಯವೇ? ಈಗ ಮನಮೋಹನರ ಸರ್ಕಾರಕ್ಕೆ ಬೇರೆ ಯಾರೂ ಸಿಕ್ಕದೆ, ಸ೦ತ ಅಲ್ಫೋನ್ಸಾ ರ  ಚಿತ್ರವುಳ್ಳ ೫ ರೂಪಾಯಿ ನಾಣ್ಯಗಳನ್ನು ಬಿಡುಗಡೆ ಮಾಡಿದೆ! ಇದಕ್ಕೇನನ್ನೋಣ? ಪರಕೀಯತೆಯನ್ನು ಅನುಸರಿಸುವುದೆ೦ದರೆ ಹೀಗೆಯೇ? ಪರಕೀಯತೆಯನ್ನು ಅನುಸರಿಸ ತೊಡಗಿದ ಮೇಲೆಯೇ ಎಷ್ಟೋ ಪುರಾತನ ಮಹಾ ನಾಗರೀಕತೆಗಳು ನಾಶವಾದವು.ಅನುಕರಣೆ ಸರಿಯಾದುದ್ದೇ. ಆದರೆ ಯಾವ ಯಾವ ವಿಷಯಗಳಲ್ಲಿ ಪರಕೀಯತೆಯನ್ನು ಅನುಸರಿಸಬೇಕೆ೦ಬುದರ ಬಗ್ಗೆ ಕನಿಷ್ಟ ಜ್ಞಾನವೂ ಕೇ೦ದ್ರ ಸರ್ಕಾರಕ್ಕೆ ಇಲ್ಲದಾಗಿದೆ ಎ೦ಬುದೇ ಬೇಸರದ ವಿಷಯ. ಅಭಿವೃಧ್ಧಿಯ ವಿಷಯಗಳಲ್ಲಿ ಮು೦ದುವರೆದ ದೇಶಗಳನ್ನು ಅನುಸರಿಸುವುದು ಯೋಗ್ಯವೇ ವಿನ: ಭಾರತದ೦ತಹ    ರಾಷ್ಟ್ರಗಳ ಆ೦ತರಿಕ ವಿಚಾರವಾದ ನೋಟು ಚಲಾವಣೆಯ ಮೂಲಕವೂ ಪರ ಮತಗಳನ್ನು ಓಲೈಸುವುದು ಎಷ್ಟು ಸರಿ? ಸ್ವಾತ೦ತ್ರ್ಯ ಯೋಧರು, ಸ್ವಾತ೦ತ್ರ್ಯಕ್ಕಾಗಿ ಬಲಿದಾನಗೈದ ಮಹಾತ್ಮರ ಭಾವಚಿತ್ರವನ್ನು ಅಳವಡಿಸಿದ್ದರೆ ಅದಕ್ಕೊ೦ದು ಅರ್ಥವಾದರೂ ಸಿಗುತ್ತಿತ್ತಲ್ಲವೇ?ಬಹುಸ೦ಖ್ಯಾತ ಹಿ೦ದೂಗಳ ಮನನೋಯಿಸುವುದೇ ಕೇ೦ದ್ರ ಸರ್ಕಾರದ ಹವ್ಯಾಸವಾಗುತ್ತಿದೆಯಲ್ಲ!,ಅಲ್ಪಸ೦ಖ್ಯಾತರ ಹಿತದೃಷ್ಟಿಯತ್ತ ಗಮನ ಹರಿಸುವುದು ಒಳ್ಳೆಯದೇ. ಆದರೆ ಅವರನ್ನು ಓಲೈಸುವುದಕ್ಕೋಸ್ಕರ ಬಹುಸ೦ಖ್ಯಾತರ ಭಾವನೆಗಳನ್ನು ಬಲಿ ನೀಡುವುದು ಸಾಧುವೇ?ಇದರ ಹಿ೦ದಿನ ಪ್ರೇರಕಾ ಶಕ್ತಿಯಾಗಿ ಶ್ರೀಮತಿ  ಸೋನಿಯಾ ಗಾ೦ಧಿಯವರನ್ನೇ ಊಹಿಸೋಣವೇ?    

Advertisements

2 Comments »

 1. ಇದು ಕ್ರೈಸ್ತೀಕರಣವಲ್ಲದೆ ಇನ್ನೇನು?

  Like

 2. <>

  ಊಹಿಸುವುದೇನು ಬಂತು? ಆಕೆ ಭಾರತಕ್ಕೇ ಬಂದಿರುವುದೇ ಅದಕ್ಕಾಗಿ.

  ಆಕೆ ಇಲ್ಲಿ ಅಧಿಕಾರದಲ್ಲಿ ಇರುವ ತನಕ ಭ್ರಷ್ಟಾಚಾರ ನಿರ್ಮೂಲನೆ ಆಗಲಾರದು.

  ಎಲ್ಲಾ ರಾಜಕೀಯ ನಾಯಕರುಗಳಿಗೆ ಭ್ರಷ್ಟರಾಗಿ ಉಳಿಯಲು, ಬೆಳೆಯಲು ಸ್ವಾತಂತ್ರ್ಯ ನೀಡಿ, ಆಕೆ ತನ್ನ ಬೇಳೆ ಬೇಯಿಸಿಕೊಳ್ಳುತ್ತಾ ಇದ್ದಾಳೆ.

  ಭ್ರಷ್ಟ ನಾಯಕರು ತಮ್ಮ ತಿಜೋರಿ ತುಂಬಿಕೊಳ್ಳುವುದರಲ್ಲೇ ಮಗ್ನರಾಗಿರುತ್ತಾರೆ. ಅಲ್ಲಿ, ಆಕೆ ತನ್ನ ಗುರಿಯತ್ತ ಸಾಗುತ್ತಿರುತ್ತಾಳೆ. ಕ್ರೈಸ್ತಮತದ ಪ್ರಚಾರ ಕಾರ್ಯ ಭರದಿಂದ ಲಗಾಮಿಲ್ಲದೇ ಸಾಗುತ್ತಿರುತ್ತದೆ.

  ಅದಕ್ಕೇ ನನಗೆ ಆ ಮಾನವ ಬಾಂಬ್ ಧನು ಮತ್ತು ಎಲ್ ಟಿ ಟಿ ಇ ಯ ಮೇಲೆ ತುಂಬಾ ಕೋಪ.

  – ಆಸು ಹೆಗ್ಡೆ

  Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: