ದೂರದ ಗೆಳೆಯನಿಗೆ…


 ಗೆಳೆಯ, ನೀ ಎ೦ದು ಬರುವೆ?

ಇ೦ದೇಕೋ ನಿನ್ನ ನೆನಪಾಗುತ್ತಿದೆ.

ದೂರವಾಣಿ-ಚರವಾಣಿಗಳಿದ್ದರೂ,

ನಿನ್ನ ನೋಡಲೇ ಬೇಕೆನ್ನಿಸುತ್ತಿದೆ.

ಸತತ ಮೂರು ದಿನಗಳ ವಿರಾಮ!

ನಿನ್ನ ಕ್ರಿಯೆ-ಪ್ರತಿಕ್ರಿಯೆಗಳಿಗೆ

ಹಾಕಿದೆಯಾ ಅಲ್ಪವಿರಾಮ?

ಕ೦ಡರೂ, ಅದು ನಿನ್ನ ಭಾವಚಿತ್ರ !

ನೀನಲ್ಲವಲ್ಲ! ಎದುರು ನೋಡುವ

ಇ೦ಗಿತವೇನೂ ಶಮನವಾಗುವುದಿಲ್ಲವಲ್ಲ!

ಒಮ್ಮೆ ನೋಡಿದರೆ ಸಾಕು!

ಮು೦ದಿನ ಘಳಿಗೆಗೂ ಬೇಕು!

 ಆ ನೆನಪು ನನ್ನ ಮು೦ದಿನ

ಕ್ಷಣಗಳನ್ನು ಸಹನೀಯಗೊಳಿಸಬಲ್ಲುದು!

ಕ್ಷಣ-ಮರುಕ್ಷಣಗಳ ನಡುವೆ

ಸದಾ ನಿನ್ನ ನೆನಪು

ನನಗೊ೦ದು ದಾರಿದೀಪ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: