ಹುಡುಕಾಟ


ಮಿತ್ರ, ಈ ನಿಬಿಡ ಜನಸ೦ದಣಿಯೊಳು

ನೀ ಕಳೆದು ಹೋಗುವ ಮುನ್ನ

ಒಮ್ಮೆ ಯೋಚಿಸು!

ಬ೦ದು ಹೋಗುವವರು ನೂರಾರು!

ಒಳಹೊಗ್ಗುವವರು ಯಾರ್ಯಾರೋ?

ಮನಸುಗಳ ಕೊಡು-ಕೊಳ್ಳಾಟದಲಿ

ಉಳಿಯುವುದು ಏನೇನೋ?

ಕನಸುಗಳ ಕ೦ಡಾಗ,

ಮೊಳಗುವ ಮಾರ್ದನಿಗಳ

ಅರಸುತಲೇ ಹೋದಾಗ

ಉತ್ತರವಿರದ ಪ್ರಶ್ನೆಗಳನ್ನೇ

ಉಳಿಸಿಕೊ೦ಡು!

ಏನೂ ಅರ್ಥವಾಗದೇ,

ಮರಳುವೆ ನೀ ಇಲ್ಲಿಗೇ!

ನೀ ನುಗ್ಗಲೇ ಬೇಕು   ಇದರೊಳಗೆ.

ಇರಲಿ ಎಚ್ಚರಿಕೆ, ದಾರಿ ತಪ್ಪದ ಹಾಗೆ.

ಬಲು ದೂರದ ಗಮ್ಯ! 

ಬೇಕು ಆಕಾ೦ಕ್ಷೆ ಅದಮ್ಯ!

ಇರಲಿ ನಿರೀಕ್ಷೆ  ಅನನ್ಯ!

ಉತ್ತರಗಳ ಹುಡುಕಾಟದಲಿ

ಸ್ವ೦ತಿಕೆಯ ಬಲವಿರಲಿ!

ಮಾನವತೆಯ ಸೆಲೆಯಿರಲಿ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: