ಸನ್ನಾಹ


ತಲೆ ಬಗ್ಗಿಸಿ ನೆಲ ನೋಡುತ,

ಹೆಬ್ಬೆರಳಲಿ ನೆಲ ಕೆರೆಯುತ,

ನನ್ನತ್ತ ನೋಡುವ ನಿನ್ನ ನೋಟದಲಿ,

ಪಕ್ಕವೇ ಮಲಗಿದ್ದರೂ, ಹೊರಳಿ ಹೊರಳಿ

ನನ್ನತ್ತ ಬೀಸುವ ನಿನ್ನ ಕಿರುಗಣ್ಣ ನೋಟದಲಿ,

ಜಿಟಿ – ಜಿಟಿ ಮಳೆಯಲಿ,

ಢವ-ಢವ ಎದೆಯಲಿ!

ಬೆಚ್ಚನೆಯ ಸ್ಪರ್ಶ,

ನಿಮುರುವ ರೋಮ!

ಫಕ್ಕನೇ ಕಾಣುವ ಮಿ೦ಚಿನ೦ತೆ,

ಛಕ್ಕನೇ  ಜಿಗಿಯುವ ಚಿಗರೆಯ೦ತೆ,

ಆಗಾಗ ತಲೆಯೆತ್ತುವ ಬಯಕೆಯ ಬೆ೦ಕಿಗೆ,   

ತುಪ್ಪ ಸುರಿಯುವ ಮದನನ೦ತೆ!

ಮಿಲನಕೆ ಕರೆಯುವ ಸನ್ನಾಹವೇ ನಲ್ಲೆ?

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s