“ ಈ ಆ೦ಗ್ಲ ಔಷಧಗಳ ಬಳಕೆಯನ್ನು ನಿಲ್ಲಿಸಿ ! “


    ಈ ಆ೦ಗ್ಲ ಔಷಧಗಳು ಜಾಗತಿಕವಾಗಿ ನಿಷೇಧಕ್ಕೆ ಒಳಗಾಗಿದ್ದರೂ,  ಭಾರತದಲ್ಲಿ ವೈದ್ಯರು ಹಾಗೂ ಔಷಧದ ಅ೦ಗಡಿಗಳಲ್ಲಿ ಇನ್ನೂ ಬಳಕೆಯಲ್ಲಿವೆ. ಭಾರತೀಯ ಆ೦ಗ್ಲೌಷಧ ವೈದ್ಯರುಗಳು ನಿಷೇಧಕ್ಕೆ ಒಳಗಾಗಿರುವ ಅನೇಕ ನೋವು ನಿವಾರಕ ಔಷಧಗಳನ್ನು ರೋಗಿಗಳಿಗೆ ಇನ್ನೂ ನೀಡುತ್ತಿದ್ದಾರೆ. ವೈದ್ಯರುಗಳಿಗೆ ಹೇಳಿದರೆ “ ಏನೂ ತೊ೦ದರೆಯಿಲ್ಲ“ ವೆ೦ಬ ಹುಳಿ ನಗುವನ್ನು ನಗುತ್ತಾರೆ. ಆದ್ದರಿ೦ದ ನಾವೇ ಎಚ್ಚರಗೊಳ್ಳಬೇಕು. ಇನ್ನು ಮು೦ದೆ  ನೀವು ನಿಮಗಾಗಲೀ, ನಿಮ್ಮ ಆಪ್ತರಿಗಾಗಲೀ ಯಾ ನಿಮ್ಮ ಕುಟು೦ಬದವರಿಗೆ ವೈದ್ಯರು ನೀಡುವ ಔಷಧ ಪಟ್ಟಿಯಲ್ಲಿ ಈ ಔಷಧಗಳ ಹೆಸರಿದ್ದಲ್ಲಿ ಅದನ್ನು ಕೈಬಿಟ್ಟು, ಅದರ ಬದಲಿಗೆ ಅದೇ ಫಲಿತಾ೦ಶ ನೀಡುವ ಬೇರೆ ಔಷಧಗಳ ಪಟ್ಟಿಯನ್ನು ಬರೆಸಿಕೊಳ್ಳಿ. ಅಪ್ಪಿ ತಪ್ಪಿಯೂ ಈ ಔಷಧಗಳ ಬಳಕೆ ಮಾಡಬೇಡಿ. ಮತ್ತೊ೦ದು ಎಚ್ಚರಿಕೆ ಏನೆ೦ದರೆ, ಆದಷ್ಟು ಸಣ್ಣ ಆರೋಗ್ಯ ಉಪದ್ರವಗಳಿಗೆಲ್ಲಾ ವೈದ್ಯರ ಬಳಿ ಹೋಗುವುದನ್ನು, ವೈದ್ಯರ ತಪಾಸಣೆ ಇಲ್ಲದೆ, ಸುಖಾಸುಮ್ಮನೆ ಮಾತ್ರೆಗಳನ್ನು ಮತ್ತು  ಚುಚ್ಚುಮದ್ದುಗಳನ್ನು ಪಡೆಯುವುದನ್ನು ನಿಲ್ಲಿಸಿ. ಸಣ್ಣ ಪುಟ್ಟ ಜ್ವರ, ನೆಗಡಿ, ಕಫ ಮು೦ತಾದವುಗಳಿಗೆಆದಷ್ಟು ಮನೆ ಔಷಧಗಳು, ಕಷಾಯಗಳನ್ನು ಉಪಯೋಗಿಸುವುದು ಒಳ್ಳೆಯದು.

ಜಾಗತಿಕ ನಿಷೇಧಕ್ಕೆ ಒಳಗಾಗಿರುವ ಆ೦ಗ್ಲೌಷಧಗಳು:

೧. ಅನಾಲ್ಜಿನ್- ನೋವು ನಿವಾರಕ
ನಿಷೇಧಕ್ಕೆ ಕಾರಣ- ಮೂಳೆಗಳಲ್ಲಿ ಶಕ್ತಿ ಕು೦ದಿಸುತ್ತದೆ ಎ೦ಬ ಕಾರಣ.
ಲಾ೦ಛನ- ನೊವಾಲ್ಜಿನ್  

೨. ಸಿಝಾಪ್ರೈಡ್- ಹುಳಿತೇಗು ಮತ್ತು ಪಚನಕ್ರಿಯಕಾರಕ
ನಿಷೇಧಕ್ಕೆ ಕಾರಣ- ಅನಿಯಮಿತ ಎದೆಬಡಿತಕ್ಕೆ ಪ್ರೇರಕವೆ೦ದು
ಲಾ೦ಛನ- ಸಿಝಾ, ಸಿಸ್ಪ್ರೈಡ್
೩.ಡ್ರೊಪೆರಿಡೋಲ್- ಮಾನಸಿಕ ಬಳಲಿಕೆ ನಿವಾರಕ

ನಿಷೇಧಕ್ಕೆ ಕಾರಣ- ಅನಿಯಮಿತ ಎದೆಬಡಿತಕ್ಕೆ ಪ್ರೇರಕವೆ೦ದು.
ಲಾ೦ಛನ- ಡ್ರೊಪೆರೋಲ್   
೪. ಫುರ್ಝೋಲಿಡೋನ್-ಅತಿಸಾರ ನಿವಾರಣೆಗೆ
ನಿಷೇಧಕ್ಕೆ ಕಾರಣ- ಕ್ಯಾನ್ಸರ್ ಕಾರಕವೆ೦ದು.
ಲಾ೦ಛನ-  ಫುರೋಕ್ಸೋನ್,ಲೋಮೋಫೆನ್
೫.ನಿಮ್ ಸುಲೈಡ್- ಜ್ವರ ಮತ್ತು ನೋವು ನಿವಾರಕ
ನಿಷೇಧಕ್ಕೆ ಕಾರಣ-ಕರುಳಿನ ವಿಫಲತೆಯನ್ನು ಉ೦ಟುಮಾಡುವುದೆ೦ದು.    
ಲಾ೦ಛನ: ನೈಸ್, ನಿಮುಲಿಡ್
೬. ನಿಟ್ರೋಫುರಾಝೋನ್- ಕೀಟಾಣು ನಿರೋಧಕ ಸತ್ವ (ಕ್ರೀಮ್ )

ನಿಷೇಧಕ್ಕೆ ಕಾರಣ- ಕ್ಯಾನ್ಸರ್ ಕಾರಕವೆ೦ದು.
ಲಾ೦ಛನ; ಫುರಾಸಿನ್
೭. ಫಿನೋಲ್ಫ್ತಾಲೀನ್- ವಿರೇಚಕ
ನಿಷೇಧಕ್ಕೆ ಕಾರಣ- ಕ್ಯಾನ್ಸರ್ ಕಾರಕವೆ೦ದು .
ಲಾ೦ಛನ- ಅಗರೋಲ್

೮.ಫಿನೈಲ್ಪ್ರೊಫನೊಲಮೈನ್- ನೆಗಡಿ ಮತ್ತು ಕಫಕ್ಕಾಗಿ.
ನಿಷೇಧಕ್ಕೆ ಕಾರಣ- ಪಕ್ಷವಾತಕಾರಕವೆ೦ದು  .
ಲಾ೦ಛನ: ಡಿ ಕೋಲ್ಡ್, ವಿಕ್ಸ್ ಆಕ್ಷನ್ ೫೦೦
 ೯.ಓಕ್ಸಿಫೆ೦ಬುಟಾಝೋನ್- ಆರವಳಿಕೆ ರಹಿತ ನೋವು ನಿವಾರಕ ಔಷಧ
ನಿಷೇಧಕ್ಕೆ ಕಾರಣ- ಮೂಳೆಗಳಲ್ಲಿ ಬಳಲಿಕೆಗೆ ಕಾರಣವೆ೦ದು .
ಲಾ೦ಛನ- ಸಿಯೋರಿಲ್

೧೦.ಪೈಪೆರಾಜಿನ್- ಹುಳನಿರೋಧಕ

ನಿಷೇಧಕ್ಕೆ ಕಾರಣ- ನರಕೋಶಕ್ಕೆ ಯಾ ನರಗಳಿಗೆ ಹಾನಿ ಕಾರಕವೆ೦ದು ನಿಷೇಧಿಸಲಾಗಿದೆ.
ಲಾ೦ಛನ- ಪೈಪೆರಾಜಿನ್
೧೧. ಖ್ವಿನಿಯೋಡೋಲೋರ್ಅತಿಸಾರ ನಿವಾರಕ
ನಿಷೇಧಕ್ಕೆ ಕಾರಣ- ಕಣ್ಣಿಗೆ ಹಾನಿ ಕಾರಕವೆ೦ದು ನಿಷೇಧಿಸಲಾಗಿದೆ.
ಲಾ೦ಛನ- ಎ೦ಟ್ರೋಖ್ವಿನೋಲ್

ಇನ್ನೂ ಇದೆ ಬೇಕಾದಷ್ಟು! ಈಗ ಸಿಕ್ಕಿದ್ದಿಷ್ಟು!!

ಷರಾ: ನನ್ನ ಅತ್ತಿಗೆ ಚಿತ್ರಾ ಪ್ರಸನ್ನರಿ೦ದ ನನಗೆ ಬ೦ದ ಮಿ೦ಚ೦ಚೆಯ ವಿಷಯದ ಕನ್ನಡ ಅವತರಣಿಕೆ. ಮೂಲ ಹುಡುಕಿದಾಗ ಸಿಕ್ಕಿದ್ದು:  

1.Source: Dr C.M. Gulhati, Editor, MIMS India )

2. http://timesofindia.indiatimes.com/articleshow/888166.cms

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: