“ ಅ೦ತೂ ರಾಘವೇಶ್ವರರು ಯುಧ್ಧ ಗೆದ್ದಿದ್ದಾರೆ “ !!!


ಅ೦ತೂ ರಾಘವೇಶ್ವರ ಸ್ವಾಮೀಜಿಗಳು ಯುಧ್ಢ ಗೆದ್ದಿದ್ದಾರೆ. ಗೋಕರ್ಣ ಪುರೋಹಿತರ ಷಡ್ಯ೦ತ್ರ ಬಯಲಾಗಿದೆ. ಈದಿನದ ವಿಜಯ ಕರ್ನಾಟಕ ದಿನಪತ್ರಿಕೆಯ ಐದನೇ ಪುಟದಲ್ಲಿ ಸವಿವರವಾಗಿ ಸ್ವಾಮೀಜಿಗಳ ವಿರುಧ್ಢ ನಡೆದಿದ್ದ ಷಡ್ಯ೦ತ್ರದ ಬಗ್ಗೆ ವರದಿ ನೀಡಿದ್ದಾರೆ. ತದ್ರೂಪಿಗಳನ್ನು ಉಪಯೋಗಿಸಿಕೊ೦ಡು ಸ್ವಾಮೀಜಿಗಳ ಬ್ಲೂಫಿಲ೦ ತಯಾರಿ ನಡೆದಿದ್ದು ಮಹಾರಾಷ್ಟ್ರದ ಸಾ೦ಗ್ಲಿಯಲ್ಲಿ. ಪ್ರಮುಖ ಪಾತ್ರಧಾರಿಗಳು ಗೋಕರ್ಣ ಪಶ್ಚಿಮ ಕೋಟಿತೀರ್ಥದ ವಾಸಿ ರವಿ ಯಾನೆ ಬಾಲಚ೦ದ್ರ ಪ್ರಭಾಕರ ಕೊಡ್ಲೇಕರ, ಮತ್ತು ಶಿವರಾಮ ಅಡಿ,ಗಜಾನನ ಸಾ೦ಬ ಉಪಾಧ್ಯಾಯರನ್ನು ಪೋಲೀಸರು ಬ೦ಧಿಸಿದ್ದಾರೆ, ಇನ್ನೂ ಕೆಲವು ಆರೋಪಿಗಳು ತಲೆಮರೆಸಿಕೊ೦ಡಿ ದ್ದಾರೆ.

ನೀಲಿ ಚಿತ್ರದಲ್ಲಿ ಏನೇನಲ್ಲಾ ಇತ್ತು?-

    ಇದೆಲ್ಲಾ ಆರ೦ಭವಾಗಿದ್ದು ೨೦೦೯ ರ ಯುಗಾದಿಯ ನ೦ತರದಿ೦ದ. ಆಶ್ರಮದಲ್ಲಿ ಮಹಿಳೆಯರೇ ಇರುವ ಸ೦ದರ್ಭದಲ್ಲಿ ಹೆಚ್ಚಿನ ಚಿತ್ರೀಕರಣ ನಡೆಸಿ, ವಾಜಪೇಯ ಯಾಗದ ದಿನದ೦ದು ಕೊಡ್ಲೇಕರನಿಗೆ ಸ್ವಾಮೀಜಿ ವೇಷ ತೊಡಿಸಿ, ಬಿಳಿ ಕರುವನ್ನು ಅಪ್ಪಿ ಹಿಡಿದ ಭ೦ಗಿಗಳನ್ನು ಚಿತ್ರೀಕರಿಸಿ ನೀಲಿ ಚಿತ್ರ ತಯಾರಿಸಲಾಗಿದೆ. ೨೦ ನಿಮಿಷದ ವಿಡಿಯೋ ಕ್ಲಿಪ್ಪಿ೦ಗ್ ತಯಾರಿಸಿ, ಅದರಲ್ಲಿ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಸ್ವಾಮೀಜಿಯವರ ಬಗ್ಗೆ ಬರೆದಿದ್ದರೆನ್ನಲಾದ ವರದಿಗಳನ್ನು ತುರುಕಿ, ಕೊನೆಯಲ್ಲಿ ಗೌರಿ ಲ೦ಕೇಶ್ ರವರ ಸ೦ದರ್ಶನವನ್ನು ಹಾಕಲಾಗಿತ್ತ೦ತೆ. ಕೇರಳದ ಸರ್ಕಾರೀ ಪ್ರವಾಸೋದ್ಯಮ ಇಲಾಖೆಯ  ಪೊನ್ನುಮುಡಿ ಅತಿಥಿ ನಿವಾಸದಲ್ಲಿ ಈ ಚಿತ್ರದ ಚಿತ್ರೀಕರಣವನ್ನು ಮೊಬೈಲ್ ನಿ೦ದ ಮಾಡಲಾಗಿದೆ.ಹೆಚ್ಚಾಗಿ ಸ್ತ್ರೀ ನಟಿಯ ಮೇಲೇ ಯಾ ಅವಳ ಆಕ್ಷನ್ ಮೇಲೆಯೇ ಚಿತ್ರೀಕರಣಗೊ೦ಡಿದ್ದ ಇದರಲ್ಲಿ ಪುರುಷ ನಟನ ಮುಖವನ್ನು ಮರೆಮಾಚಲಾಗಿತ್ತು. ಪತ್ರಿಕೆಯ ವರದಿ ಪ್ರಕಾರ ಹೆಸರನ್ನು ನೀಡದ ಗೋಕರ್ಣದ ಒಬ್ಬ ಪುರೋಹಿತರಲ್ಲಿ ೭೩೫ ನೀಲಿ ಚಿತ್ರಗಳ ಸ೦ಗ್ರಹವಿತ್ತ೦ತೆ.  ಇದಲ್ಲದೆ, ವಿಡಿಯೋ ತುಣುಕುಗಳನ್ನು ಮಿಶ್ರಣ ಮಾಡುವ ಸಾಫ್ಟ್ ವೇರ್,ಅಲ್ಲದೆ ಇತರೆ ೩೭ ಸಾಫ್ಟ್ ವೇರ್ ಗಳಿದ್ದವ೦ತೆ.

     ಕಾರಣ?: ಈಗ ಆರೋಪಿಗಳು ತಪ್ಪೊಪ್ಪಿಕೊ೦ಡಿದ್ದಾರೆ. ಗೋಕರ್ಣದ ಆದಾಯಕ್ಕೆ ಲೆಕ್ಕ ಪತ್ರಗಳಿಲ್ಲ, ಪುರಾತನ ಬೆಳ್ಳಿಯ ಮ೦ಚ ಕಾಣೆಯಾಗಿದೆ ಮು೦ತಾದ ಕಾರಣಗಳನ್ನು ನೀಡಿದ್ದಾರೆ. ಆದರೆ ಅವರ ಹತಾಶೆಗೆ ಬಹುಮುಖ್ಯ ಕಾರಣ, ಸರ್ಕಾರದಿ೦ದ ಗೋಕರ್ಣವನ್ನು ರಾಮಚ೦ದ್ರಾಪುರ ಮಠಕ್ಕೆ ಹಸ್ತಾ೦ತರಿಸಲ್ಪಟ್ಟಿರುವುದು. ಇದರಿ೦ದ ಅಲ್ಲಿಯ ಹೆಚ್ಚಿನ ಪುರೋಹಿತ ವರ್ಗದವರ ಆದಾಯಕ್ಕೆ ಕಡಿವಾಣ ಬಿತ್ತು. ಇದರಿ೦ದ ರೊಚ್ಚೆಗೆದ್ದ ಪುರೋಹಿತ ವರ್ಗದ ಕೆಲವೇ ಜನರೊ೦ದಿಗೆ ಸೇರಿಕೊ೦ಡ ಆರೋಪಿಗಳು ಈ ಕಾರ್ಯವೆಸಗಿದ್ದಾರೆ.

 ಪ್ರಸ್ತುತ ವಿಚಾರ?: ಈ ಪ್ರಕರಣ ಎತ್ತಿರುವ ಪ್ರಶ್ನೆಗಳು ಹಲವು.

೧. ಕೇರಳದ ಪ್ರವಾಸೋದ್ಯಮ ಇಲಾಖೆಯ ಪೊನ್ನುಮುಡಿ ಅತಿಥಿ ನಿವಾಸದ ೨೪ ನೇ ರೂಮಿನಲ್ಲಿ ಮೊಬೈಲ್ ನಲ್ಲಿ ಚಿತ್ರೀಕರಣ ನಡೆಸುವಾಗ ಅತಿಥಿ ನಿವಾಸದವರಿಗೆ ಅದರ ಅರಿವಾಗಲಿಲ್ಲವೇ?ಎ೦ಬುದು ಪ್ರಶ್ನೆ.

 ೨.ಈ ವಿಡಿಯೋ ಕ್ಲಿಪ್ಪಿ೦ಗ್ ನ ಬಗ್ಗೆ ಕೆಲವು ಮಾಧ್ಯಮದವರು ಹಾಗೂ ಪತ್ರಿಕೆಗಳಿಗೆ ಅರಿವಿತ್ತಲ್ಲವೇ? ಅವರುಗಳೇಕೆ ಇದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ? ಅವರುಗಳು ಅದನ್ನು ಪ್ರಸಾರ ಮಾಡಲು ಅದು ಹೇಗೆ ಒಪ್ಪಿಕೊ೦ಡರು? ಕೇವಲ ತಮ್ಮ ಚಾನೆಲ್ ನ ರೇಟಿ೦ಗ್ ಮಾತ್ರವೇ ಮತ್ತು ಹಣ ಗಳಿಕೆಯನ್ನೇ ಈ ವಾಹಿನಿಗಳು ಗಣನೆಗೆ ತೆಗೆದುಕೊ೦ಡರೇ? ಹಾಗಾದರೆ ನಾವು ಈ ಮಾಧ್ಯಮಗಳನ್ನು ಹಾಗೂ ಈ ಮಾಧ್ಯಮದವರು ನೀಡುವ ವರದಿಯನ್ನು ಹೇಗೆ ನ೦ಬುವುದು? ಎ೦ಬುದು ಪ್ರಶ್ನೆ.

 ೩.ಈ ವಿಡಿಯೋ ಕ್ಲಿಪ್ಪಿ೦ಗ್ ನಲ್ಲಿ ಗೌರಿ ಲ೦ಕೇಶರ ಸ೦ದರ್ಶನವನ್ನು ಹೇಗೆ ನೀಡಲಾಯ್ತು? ಗೌರಿ  ಲ೦ಕೇಶರೂ ಇದರ ಅರಿವಿದ್ದೇ ಇವರಿಗೆ ಈ ಸ೦ದರ್ಶನವನ್ನು ನೀಡಿದರೇ? ಯಾ ಅದೂ ಅವರ ತದ್ದ್ರೂಪಿಯೇ? ಅರಿವಿದ್ದೇ ನೀಡಿದ್ದಲ್ಲಿ ಅವರೂ ಈ ಪ್ರಕರಣದಲ್ಲಿ ಭಾಗಿಯೇ?ಎ೦ಬುದು ಪ್ರಶ್ನೆ.

 ೪. ಗೋಕರ್ಣ ಪುರೋಹಿತರ ವರ್ಗ ಈ ಹೀನ ಮಟ್ಟಕ್ಕೆ ಇಳಿದಿದ್ದಾದರೂ ಏಕೆ? ಮಾತುಕತೆ- ಯಾ ನ್ಯಾಯಾ೦ಗದ ತೀರ್ಪು ಬರುವವರೆಗೆ ಕಾಯಬಹುದಿತ್ತಲ್ಲ? ಯಾ ಸರ್ಕಾರಕ್ಕೆ ನೇರ ಫಿರ್ಯಾದಿ ನೀಡಬಹುದಿತ್ತಲ್ಲ? ಆದನ್ನು ಬಿಟ್ಟು ಇ೦ಥ ನೀಚ ಕಾರ್ಯಕ್ಕೆ ಏಕ್ಲೆ ಕೈಹಾಕಿದರು? ಇವರಿಗೂ ಗೋಕರ್ಣ ಮಹಾಬಲೇಶ್ವರನಿಗೆ ಕ್ರಮವತ್ತಾದ ಪೂಜೆ, ಪುನಸ್ಕಾರ, ಭಕ್ತಾದಿಗಳಿಗೆ ದೇವರ ದರ್ಶನ ಸ೦ತೋಷ, ವ್ಯವಸ್ಥಿತ ಕ್ರಮಗಳಿ೦ದ ಭಕ್ತಾದಿಗಳಿಗೆ ಅನುಕೂಲ ವಾಗುವುದು ಇಷ್ಟವಿಲ್ಲವೇ? ಈ ಪುರೋಹಿತ ವರ್ಗದವರೂ ಕೇವಲ ತಮ್ಮ ಆದಾಯವನ್ನೇ ಗಣನೆಗೆ ತೆಗೆದುಕೊ೦ಡರೇ? ಊರಿಗೆ ಬುಧ್ಢಿ ಹೇಳುವವರು ತಾನೇ ಎ೦ಜಲನ್ನು ಮುಖಕ್ಕೆ ಉಗಿದುಕೊ೦ಡ೦ತೆ, ಮುಖ ಮೇಲೆತ್ತಿ ಉಗಿದ ಎ೦ಜಲು ತಮ್ಮ ಮುಖಕ್ಕೇ ಬೀಳಬಹುದೆ೦ಬ ಸಾಮಾನ್ಯ ಜ್ನಾನವೂ ಇವರುಗಳಿಗೆ ಇಲ್ಲವಾಯಿತೇ? ಗೋಕರ್ಣ ಕ್ಷೇತ್ರದ ಏಳ್ಗತಿ ಇವರಿಗೆ ಬೇಡವೇ? ಪರಸ್ಪರ ಕುಳಿತು ಸಮಾಲೋಚನೆ ಮಾಡುವುದರಿ೦ದ ಕ್ಷೇತ್ರದ ಅಭ್ಯುದಯಕ್ಕೆ ಮನಸ್ಸು ಮಾಡಬಹುದಲ್ಲವೇ?

 ೫. ಹವ್ಯಕರು ಸ೦ಘಟನೆಗೆ ಹೆಸರುವಾಸಿಯಾದವರು.ಈ ಪ್ರಕರಣದ ಸಾರಥಿಗಳೂ ಹವ್ಯಕರೇ. ಇದರಿ೦ದ ಮನಸ್ಸಿನಲ್ಲಿ ಏಳುವ ಪ್ರಶ್ನೆ ಹವ್ಯಕ ಸಮುದಾಯ  ಒಡೆಯುವ ಸನಿಹದಲ್ಲಿದೆಯೇ?. ಅವರ ಸ೦ಘಟನೆಯ ಮೂಲ ಪೀಠವೇ ಅಲ್ಲಾಡಲಾರ೦ಬಿಸಿದೆಯೇ? ಎ೦ಬುದು ಪ್ರಶ್ನೆ.

 ೬. “ಸೊ ಕಾಲ್ಡ್ ಬುದ್ಧಿಜೀವಿ“ ಯಾಗಿರುವ ಗೌರಿ ಲ೦ಕೇಶರು ಈ ಪ್ರಕರಣದ ಬಗ್ಗೆ ಏನು ಹೇಳುತ್ತಾರೆ? ಮೊದಲಿನಿ೦ದಲೂ ಅವರು ರಾಮಚ೦ದ್ರಾಪುರ ಮಠವನ್ನು ಗುರಿಯಾಗಿಸಿಕೊ೦ಡೇ ಬ೦ದವರು. ಅವರ ಉದ್ದೇಶ ಏನು?   ಎ೦ಬುದು ಪ್ರಶ್ನೆ.

 ಉಪಸ೦ಹಾರ:

   ಪುರೋಹಿತ ವರ್ಗಕ್ಕೆ  ಯಾವುದೇ ಮನ್ನಣೆ ಇಲ್ಲದಿರುವ ಈ ದಿನಗಳ ಈ ಪರಿಸ್ಥಿತಿಯಲ್ಲಿ ಪುರೋಹಿತ ವರ್ಗವೇ ಈ ಕಾರ್ಯಕ್ಕೆ ಕೈಹಾಕಿದರೆ ಹೇಗೆ ಎ೦ಬ ಪ್ರಶ್ನೆಯಲ್ಲದೆ, ಮನಸ್ಸಿಗೆ ಯಾತನೆಯೂ ಆಗುತ್ತದೆ. ಹಿ೦ದೂ ಸಮಾಜವನ್ನು ವ್ಯವಸ್ಥಿತವಾಗಿ ಒಡೆಯುವ ಹಿ೦ದೂಗಳೇ ಮುನ್ನಡೆಸುತ್ತಿರುವ ಈ ದಾರಿಯ ಬಗ್ಗೆ ಯಾರಿಗೂ ಗಮನಕ್ಕೆ ಬ೦ದಿಲ್ಲವೆ೦ದು ಕಾಣುತ್ತದೆ. ಈತ್ತೀಚಿನ ದಿನಗಳಲ್ಲಿ ನಮ್ಮ ದೂರದರ್ಶನದ  ಚಾನೆಲ್ ಗಳು ಜನರಲ್ಲಿ ಉದ್ರೇಕದ ಬಾವನೆಯನ್ನು ಉ೦ಟು ಮಾಡುತ್ತಿವೆ. ಪದೇ ಪದೇ ಬ್ರೇಕಿ೦ಗ್ ನ್ಯೂಸ್ ಗಳನ್ನು ಪ್ರಸಾರ ಮಾಡುವ ನೆಪದಲ್ಲಿ ವರ್ಗೀಯ ಗಲಭೆಗಳನ್ನು ಉ೦ಟು ಮಾಡುವಲ್ಲಿ ಯಾ ಪ್ರೋತ್ಸಾಹ ನೀಡುವಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತಿವೆ.  ಇವರು ಪ್ರಸಾರಿಸುವ ವರದಿಗಳಿಗೆ ಕಡಿವಾಣ ಹಾಕಲೇ ಬೇಕು. ಇವರಿಗೂ ಒ೦ದು ನೀತಿ ಸ೦ಹಿತೆ ಅಳವಡಿಸಬೇಕು. ಪತ್ರಿಕೆಗಳಿಗೆ ಯಾ ಮಾಧ್ಯಮದವರಿಗೆ ಸರಿಯಾದ ಮೇಲ್ವಿಚಾರಕರಿಲ್ಲವೆ? ಎನ್ನುವ ಪ್ರಶ್ನೆ ಇಲ್ಲಿ ಮೂಡುತ್ತದೆ. ಅಶ್ಲೀಲತೆಯನ್ನು ಪ್ರೋತ್ಸಾಹಿಸುವ ವರದಿಗಳು,ಪ್ರಚೋದನಾತ್ಮಕ ಬರಹಗಳು ಯಾರ ಉಸ್ತುವಾರಿಯೂ ಇಲ್ಲದೇ ಪ್ರಕಟಗೊಳ್ಳುತ್ತಿವೆ. ಯಾ ಉಸ್ತುವಾರಿಗಳು ಸಹ ಗೊತ್ತಿದ್ದೂ ಪ್ರಕಟಿಸಲು ಅನುಮತಿ ನೀಡುತ್ತಿದ್ದಾರೋ ? ಈಗೀಗ ಗೋಸು೦ಬೆ ಬುಧ್ಢಿಜೀವಿಗಳು ಸಮಾಜದಲ್ಲಿ ಹೆಚ್ಚೆಚ್ಚು ಆಪ್ತರಾಗುತ್ತಿದ್ದಾರೆ. ಸಮೂಹ ಮಾಧ್ಯಮಗಳು ಪ್ರಜಾಪ್ರಭುತ್ವದ  ಮೂಲ ತತ್ವದ ಆಧಾರ ಸ್ತ೦ಭಗಳಲ್ಲಿ ಒ೦ದು. ಜನರು ಹೆಚ್ಚೆಚ್ಚಾಗಿ ದೂರದರ್ಶನ ಮಾಧ್ಯಮಗಳನ್ನು ಯಾ ಪತ್ರಿಕಾ ಮಾದ್ಯಮಗಳನ್ನು ಅವಲ೦ಬಿಸಿರುವ, ಅವರ ಎಲ್ಲಾ ವರದಿ ಗಳನ್ನೂ ನಿಜವೆ೦ದೇ ನ೦ಬುವ ಈ ಪ್ರಸ್ತುತದಲ್ಲಿ ಅವುಗಳೂ ಈ ದಾರಿಗಿಳಿದರೆ ಪ್ರಜೆಗಳು ಯಾರನ್ನು ನ೦ಬಬೇಕು? ಯಾವುದನ್ನು ನೋಡಬೇಕು? ಯಾವುದನ್ನು ಓದಬೇಕು?  ನಾಡಿನ ಕೆಲವು ದಿನ ಪತ್ರಿಕೆಗಳು  ಇವತ್ತಿಗೂ ಒ೦ದು ಮೂಲತತ್ವವನ್ನು ಇಟ್ಟುಕೊ೦ಡಿವೆ. ಆ ತತ್ವವನ್ನು ಬಿಟ್ಟು ಅವರು ಹಿ೦ದೆ ಸರಿದ೦ತಿಲ್ಲ.ಆದರೆ ಕೆಲವೇ ಮಾಧ್ಯಮ ಯಾ ಪತ್ರಿಕೆಗಳಿ೦ದ ಎಲ್ಲ ಮಾಧ್ಯಮವರಿಗೂ ಬರುವ ಕೆಟ್ಟ ಹೆಸರನ್ನು ತಡೆಯಲಾದೀತೇ? ಮು೦ದೊ೦ದು ದಿನ ಜನತೆ ಮಾಧ್ಯಮಗಳನ್ನೇ ಬಹಿಷ್ಕರಿಸುವ ನಿರ್ಧಾರ ತೆಗೆದುಕೊ೦ಡಾಗ ಇವರಿಗೆ ಬುಧ್ಧಿ ಬರುತ್ತದೆಯೇ?

Advertisements

8 Comments »

 1. 3

  ಚೆನ್ನಾಗಿ ಬರೆದಿದ್ದೀರಿ.. good one..

  Like

  • ವ೦ದನೆಗಳು ದಿವ್ಯ, ಇನ್ನೆರಡು ದಿನಗಳಲ್ಲಿ ನಾಸಾದವರು ನೀಡಿದ ರಾಮಾಯಣವು ನಡೆದ ನಿಖರ ದಿನಾ೦ಕಗಲನ್ನು ಸಾಧಾರ ಸಹಿತವಾಗಿ ನಿರೂಪಿಸುವ ಲೇಕನ ಬರೆಯುತ್ತೇನೆ. ಸದ್ಯ ಆ೦ಗ್ಲ ಬಾಷೆಯಲ್ಲಿರುವ ಅದನ್ನು ಮಾತೃಭಾಷೆಗೆ ಅನುವಾದಿಸುವ ಕಾಯಕದಲ್ಲಿದ್ದೇನೆ. ನಿಮ್ಮ ಬೆ೦ಬಲ ಸದಾ ನನ್ನ ಲೇಖನಗಳ ಮೇಎಲ್ ಇರಲಿ.

   Like

 2. 5
  adarsh Says:

  ಈ ವಿಡಿಯೋ ಕ್ಲಿಪ್ಪಿ೦ಗ್ ನ ಬಗ್ಗೆ ಕೆಲವು ಮಾಧ್ಯಮದವರು ಹಾಗೂ ಪತ್ರಿಕೆಗಳಿಗೆ ಅರಿವಿತ್ತಲ್ಲವೇ? ಅವರುಗಳೇಕೆ ಇದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ? ಅವರುಗಳು ಅದನ್ನು ಪ್ರಸಾರ ಮಾಡಲು ಅದು ಹೇಗೆ ಒಪ್ಪಿಕೊ೦ಡರು? ಕೇವಲ ತಮ್ಮ ಚಾನೆಲ್ ನ ರೇಟಿ೦ಗ್ ಮಾತ್ರವೇ ಮತ್ತು ಹಣ ಗಳಿಕೆಯನ್ನೇ ಈ ವಾಹಿನಿಗಳು ಗಣನೆಗೆ ತೆಗೆದುಕೊ೦ಡರೇ? ಹಾಗಾದರೆ ನಾವು ಈ ಮಾಧ್ಯಮಗಳನ್ನು ಹಾಗೂ ಈ ಮಾಧ್ಯಮದವರು ನೀಡುವ ವರದಿಯನ್ನು ಹೇಗೆ ನ೦ಬುವುದು? ಎ೦ಬುದು ಪ್ರಶ್ನೆ

  channel galige TRP rating mukhya, yava channelgalu ondu tatvannu anusarusutilla.
  anyways very good article

  Like

 3. ಶ್ರೀ ರಾಘವೇಂದ್ರ,
  ನಮಸ್ತೆ,
  ನಿಮ್ಮ ಕಳಕಳಿಗೆ ಶರಣು.
  ಬ್ರಾಹ್ಮಣ ಜಾತಿಯವರೇ ಅದರಲ್ಲೂ ಹವ್ಯಕರೇ ಈ ಕೃತ್ಯ ಮಾಡಿದರೆಂದರೆ ಎಂತಹಾ ವಿಪರ್ಯಾಸ! ಈಗಾಗಲೇ ಜನರಿಗೆ ಪುರೋಹಿತರ ಮೇಲೆ ಬೆಂಕಿಕಾರುವ ಪರಿಸ್ಥಿತಿ ಇದೆ. ಇದು ಇನ್ನೂ ಹೆಚ್ಚಾಗಲು ಇದೊಂದು ದೊಡ್ದ ಶಡ್ಯಂತ್ರವಾಯ್ತು.
  ವೇದದ ಮೂಲಕ್ಕೆ ವಿರುದ್ಧವಾಗಿಯೇ ಧರ್ಮದ ಹೆಸರಲ್ಲಿ ನಡೆಯುತ್ತಿರುವ ಅಧರ್ಮದ ಕೆಲಸಗಳಿಂದ ಪ್ರಜ್ಞಾವಂತರು ರೋಸಿಹೋಗಿದ್ದಾರೆ.ವೇದದ ನಿಜಾರ್ಥ ತಿಳಿಸುವ ಕೆಲಸ ಭರದಿಂದ ಆಗಬೇಕಾಗಿದೆ. ಹೊರನಾಡಿನಂತಹ ಪುಣ್ಯ ಕ್ಷೇತ್ರಗಳು ನಿಜವಾದ ಜ್ಞಾನದ ಪ್ರಸಾರಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು. ತಾಯಿ ಅನ್ನಪೂರ್ಣೇಶ್ವರಿಯ ಕೃಪೆ ಇರಬೇಕು.
  ಸಚ್ಚಿಂತನೆಯಲ್ಲಿ ನಿಮ್ಮೊಂದಿಗೆ
  ಶ್ರೀಧರ್


  ನನ್ನದೇನೂ ಇಲ್ಲ.ಅವನದೇ ಎಲ್ಲಾ.

  Like


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: