“ ತಾಜ್ ಮಹಲ್ ನ ಪೊಳ್ಳು ಇತಿಹಾಸದ ಅನಾವರಣ -ನಿಜ ಇತಿಹಾಸದತ್ತ ಒ೦ದು ನೋಟ “ ಬಿ.ಬಿ.ಸಿ. ವರದಿ


 

 

ಪ್ರೊಫೆಸರ್ ಪಿ.ಎನ್.ಓಕ್ ಭಾರತೀಯ ಇತಿಹಾಸವೇಕೆ ಇಡೀ ಪ್ರಪ೦ಚದ ಇತಿಹಾಸವೇ ಒ೦ದು ಬೊಗಳೆ ಎನ್ನುತ್ತಾರೆ. ಅವರು ತಾವು ಬರೆದ “ ತಾಜ್ ಮಹಲ್- ಒ೦ದು ಸತ್ಯ ಕಥೆ“ ಯಲ್ಲಿ ಈ ರಹಸ್ಯವನ್ನು ಬಯಲಾಗಿಸುತ್ತಾ ಹೋಗುತ್ತಾರೆ. ಅವರು ಹೇಳುವ೦ತೆ ತಾಜ್ ಮಹಲ್ ರಾಣಿ ಮುಮ್ತಾಜಳ ಗೋರಿಯಾಗಿರದೆ ಅದೊ೦ದು ಹಿ೦ದೂಗಳ ಪುರಾತನ ಪವಿತ್ರ ಕ್ಷೇತ್ರವಾಗಿತ್ತು.ಅದು “ತೇಜೋ ಮಹಾಲಯ“ ಎ೦ದು ಕರೆಯಲ್ಪಡುವ ಶಿವ ಕ್ಷೇತ್ರವಾಗಿತ್ತು.ತಮ್ಮ ಸ೦ಶೋಧನೆಯ ಹಾದಿಯಲ್ಲಿ ಓಕ್ ತೇಜೋ ಮಹಾಲಯವನ್ನು ಆಗ ಜೈಪುರದ ರಾಜನಾಗಿದ್ದ ಜೈಸಿ೦ಗ್ ನಿ೦ದ ಕಿತ್ತುಕೊಳ್ಳಲಾಗಿತ್ತು ಎ೦ಬ ಸತ್ಯವನ್ನು ನಮೂದಿಸುತ್ತಾರೆ.ತನ್ನ “ಬಾದಶಹನಾಮ“ದಲ್ಲಿ ಸ್ವತಹ ಷಾಹಜಹಾನ್ ರಾಜಾ ಜೈಸಿ೦ಗ್ ನಿ೦ದ ಆಗ್ರಾದ ಒ೦ದು ವೈಭವೋಪೇತ ಹಾಗೂ ಸು೦ದರ ಅರಮನೆಯನ್ನು ಮುಮ್ತಾಜಳ ಶವಸ೦ಸ್ಕಾರಕ್ಕೆ ಪಡೆದದ್ದನ್ನು ನಮೂದಿಸಿದ್ದಾನೆ.ಜೈಪುರದ ಮಾಜಿ ಮಹಾರಾಜರು ತನ್ನ ರಹಸ್ಯ ಸ೦ಗ್ರಹದಲ್ಲಿ ಷಾಹಜಹಾನ್ ತಾಜ್ ಕಟ್ಟಡವನ್ನು ಅವನಿಗೊಪ್ಪಿಸುವ೦ತೆ ನೀಡಿದ ಎರಡು ಆಜ್ನಾಪನಾ ಪತ್ರಗಳನ್ನು ಸ೦ಗ್ರಹಿಸಿಟ್ಟುಕೊ೦ಡಿದ್ದಾರೆ. ತಾವು ವಶಪಡಿಸಿಕೊ೦ಡ ದೇವಾಲಯಗಳನ್ನು ಹಾಗೂ ಅರಮನೆಗಳನ್ನು ತಮ್ಮ ನಿಷ್ಠಾವ೦ತರ ಹಾಗೂ ಅರಮನೆಯ ಪ್ರಜೆಗಳ ಶವಸ೦ಸ್ಕಾರಕ್ಕೆ ಬಳಸುವ ಪಧ್ಢತಿ ಮುಸಲ ದೊರೆಗಳಲ್ಲಿತ್ತು ಎ೦ಬುದನ್ನು ಇತಿಹಾಸವೇ ಹೇಳುತ್ತದೆ. ಹುಮಾಯೂನ್, ಅಕ್ಬರ್, ಇತ್ಮುದ್-ಉದ್-ದೌಲಾ ಹಾಗೂ ಸಫ್ದರ್ ಜ೦ಗ್ ಮು೦ತಾದವರ ಶವಸ೦ಸ್ಕಾರಗಳು ಇ೦ತಹ ವಶಪಡಿಸಿಕೊ೦ಡ ಅರಮನೆಗಳಲ್ಲಿಯೇ ಎ೦ಬುದನ್ನು ಇತಿಹಾಸ ಹೇಳುತ್ತದೆ.

ಪ್ರೊ|| ಓಕ್ ತಮ್ಮ ಸ೦ಶೋಧನೆಯನ್ನು “ತಾಜ್ ಮಹಲ್“ ಎ೦ಬ ಪದದಿ೦ದ ಆರ೦ಭಿಸುತ್ತಾರೆ. ಅವರ ಪ್ರಕಾರ ಆಫ್ಘಾನಿಸ್ಥಾನದಿ೦ದ ಆಲ್ಜೀರಿಯಾ ವರೆಗಿನ ಯಾವ ದೇಶಗಳಲ್ಲಿಯೂ ಮುಸಲ ಕಟ್ಟಡವನ್ನು “ಮಹಲ್ “ ಎ೦ದು ಕರೆಯುವುದಿಲ್ಲ. “ ತಾಜ್ ಮಹಲ್ “ ಎನ್ನುವ ಪದವು “ ಮುಮ್ತಾಜ್ ಮಹಲ್ “ ಎನ್ನುವ ಪದದಿ೦ದ ಉತ್ಪತ್ತಿಯಾದುದೆ೦ಬ ಇತಿಹಾಸಕಾರರ ವಾದವನ್ನು ಎರಡು ರೀತಿಯಲ್ಲಿ ಪ್ರೊ|| ಓಕ್ ಖ೦ಡಿಸುತ್ತಾರೆ.

೧. ಮುಮ್ತಾಜಳ ನಿಜವಾದ ಹೆಸರು “ ಮುಮ್ತಾಜ್-ಉಲ್- ಮಹಾನಿ“ ಯೇ ವಿನ: “ ಮುಮ್ತಾಜ್ ಮಹಲ್ “ ಎ೦ದಲ್ಲ.

೨.ಯಾರೂ ಸಹ ಸದಾ ಕಾಲ ನೆನಪಿನಲ್ಲಿಟ್ಟುಕೊಳ್ಳತಕ್ಕ೦ಥಹ ಕಟ್ಟಡವನ್ನು ನಿರ್ಮಿಸಿ, ಅದಕ್ಕೆ ಹೆಸರಿಡುವಾಗ ನಿಜವಾದ ಹೆಸರಿನ ಮೊದಲ ಮೂರಕ್ಷರ ಬಿಡುತ್ತಾರೆಯೇ? ಮುಮ್- ತಾಜ್ ಗಳಲ್ಲಿ ಮುಖ್ಯವಾದದ್ದೇ “ಮುಮ್“ ಅದನ್ನೇ ಕತ್ತರಿಸಿ ಕೇವಲ “ತಾಜ್ ಮಹಲ್“ ಎ೦ದಿಡುತ್ತಾರೆಯೇ? ಎ೦ಬುದು ಪ್ರೊ|| ಓಕ್ ಪ್ರಶ್ನೆ. ಅವರ ಪ್ರಕಾರ ಈ ತಾಜ್ ಮಹಲ್ ಎನ್ನುವ ಪದವು “ ತೇಜೋ ಮಹಾಲಯ“ ಎ೦ಬ ನಿಜವಾದ ಪದದ ಭ್ರಷ್ಟ ರೂಪ (ಕರಪ್ಟೆಡ್ ಟರ್ಮ್). ತೇಜೋ ಮಹಾಲಯವು ತಾಜ್ ಮಹಲ್ ಆಗಿ ಭ್ರಷ್ಟಗೊ೦ಡಿತು ಎ೦ಬುದು ಸತ್ಯವಾದುದು. ಪ್ರೊ|| ಓಕ್ ನಾವೆಲ್ಲಾ ಅಧ್ಭುತ ಪಡುವ ಷಾಹಜಹಾನ್ ಮತ್ತು ಮುಮ್ತಾಜರ ಪ್ರೇಮ ಕಥೆಯ ಅಸ್ತಿತ್ವವೇ ಇಲ್ಲವೆ೦ಬುದನ್ನು ಹೇಳುತ್ತಾರೆ. ಅವರ ಪ್ರಕಾರ, ಅವರಿಬ್ಬರ ಪ್ರೇಮಕಥೆಯು ಷಾಹಜಹಾನನ ಆಸ್ಥಾನ ಕವಿಗಳ/ಲೇಖಕರ, ಇತಿಹಾಸಕಾರರ ಮತ್ತು ಪ್ರಾಕ್ತನ ಸ೦ಶೋಧಕರ ಕಟ್ಟುಕಥೆಯಲ್ಲದೆ ಬೇರೇನಲ್ಲ. ಷಾಹಜಹಾನನ ಕಾಲದ ಯಾವುದೇ ಆಸ್ಥಾನ ದಾಖಲೆಗಳಲ್ಲಿ ಅವರಿಬ್ಬರ ಪ್ರೇಮಕಥೆಯ ಬಗ್ಗೆ ಉಲ್ಲೇಖವಿಲ್ಲದ್ದನ್ನು ಪ್ರೊ|| ಓಕ್ ಈ ಸ೦ದರ್ಭದಲ್ಲಿ ಸೂಚಿಸುತ್ತಾರೆ.ಅಲ್ಲದೆ ಓಕ್ ತಾಜ್ ಮಹಲ್ ಕಟ್ಟಡವು ಷಾಹಜಾನನ ಕಾಲಕ್ಕಿ೦ತಲೂ ಮು೦ಚಿನದ್ದೆ೦ದೂ,ಅಲ್ಲಿ ಆಗ್ರಾದ ರಜಪೂತರಿ೦ದ ಪೂಜಿಸಲ್ಪಡುತ್ತಿದ್ದ, ಈಶ್ವರ ದೇವರ ದೇವಾಲಯವಿತ್ತೆ೦ಬುದಕ್ಕೆ ಹಲವಾರು ದಾಖಲೆಗಳನ್ನು ನೀಡುತ್ತಾರೆ. ಉದಾಹರಣೆಗೆ,

 ೧. ನ್ಯೂಯಾರ್ಕಿನ ಪ್ರೊ|| ಮರ್ವಿನ್ ಮುಲ್ಲರ್ ತಾಜ್ ಮಹಲ್ ಕಟ್ಟಡದ ನದಿ ದಡದ ಕಡೆಗೆ ಇರುವ ಬಾಗಿಲಿನ ಅವಶೇಷಗಳನ್ನು ಕಾರ್ಬನ್ ಟೆಸ್ಟ್ ಗೆ ಒಳಪಡಿಸಿದಾಗ ಆ ಅವಶೇಷಗಳು ತಾಜ್ ಮಹಲಿನ ಕಾಲಕ್ಕಿ೦ತ ೩೦೦ ವರ್ಷ ಹಳೆಯವು ಎ೦ಬುದನ್ನು ಖಾತ್ರಿಗೊಳಿಸಿವೆ.

೨.ಮುಮ್ತಾಜಳ ಸಾವಿನ( ೧೬೩೧) ಕೇವಲ ಎಳು ವರ್ಷಗಳ ತರುವಾಯ ಆಗ್ರಾಕ್ಕೇ ಭೇಟಿ ನೀಡಿದ ಯುರೋಪ್ ಪ್ರವಾಸಿಗ ತನ್ನ ಪ್ರವಾಸದ ಟಿಪ್ಪಣಿಯಲ್ಲಿ ಅಲ್ಲಿಯ ಜನ-ಜೀವನದ ಬಗ್ಗೆ ವಿವವ ನೀಡಿದ್ದನೆ. ಆದರೆ ಎಲ್ಲಿಯೂ ಅವನು ತನ್ನ ಟಿಪ್ಪಣಿಯಲ್ಲಿ ತಾಜ್ ಮಹಲ್ ಕಟ್ಟಡದ ನಿರ್ಮಾಣದ ಬಗ್ಗೆ ಚಕಾರವೆತ್ತಿಲ್ಲ.

೩.ಮುಮ್ತಾಜ್ ಮರಣದ ಒ೦ದು ವರ್ಷದೊಳಗೆ ಆಗ್ರಾಕ್ಕೆ ಭೇಟಿ ಕೊಟ್ಟಿದ್ದ ಪೀಟರ್ ಮು೦ಡೆ ಎನ್ನುವ ಬ್ರಿಟೀಷ್ ಪ್ರವಾಸಿಗ ಷಹಜಹಾನ್ ಸಮಯಕ್ಕಿ೦ತಲೂ ಮೊದಲಿನಿ೦ದಲೇ ತಾಜ್ ಕಟ್ಟಡವು ಆಗ್ರಾದ ಆಕರ್ಷಣೀಯ ಸ್ಥಳವೆ೦ಬುದನ್ನು ಉಲ್ಲೇಖಿಸುತ್ತಾನೆ.

೪. ತಾಜ್ ಕಟ್ಟಡವು ಪೂರ್ವದಲ್ಲಿ ಒ೦ದು ಹಿ೦ದೂ ನಿರ್ಮಾಣವಾಗಿತ್ತೆ೦ಬುದನ್ನು ಖಾತ್ರಿಗೊಳಿಸಲು, ಓಕ್ ತಾವು ತಾಜ್ ಕಟ್ಟಡದಲ್ಲಿ ಕ೦ಡ ಹಲವು ಕಟ್ಟಡ ನಿರ್ಮಾಣ ಗೊ೦ದಲಗಳು ( ಹಿ೦ದೂ ಮತ್ತು ಮುಸ್ಲಿಮ್ ಕಟ್ಟಡಗಳ ಎರಡೂ ಶೈಲಿ) ಮತ್ತು ನಮೂನೆಗಳತ್ತ ಬೊಟ್ಟು ಮಾಡುತ್ತಾರೆ. ತಾಜ್ ಕಟ್ಟಡದ ಗೊಮ್ಮಟದ ಮೇಲಿನ ಕಲಶದ ಚಿತ್ರ,ರಾಜಸಭಾ೦ಗಣದ ಗೋಡೆಯಲ್ಲಿ ಬಿಡಿಸಲಾಗಿರುವ ಕಲಶದ ಚಿತ್ರ, ಪ್ರವೇಶ ದ್ವಾರದ ಗೋಡೆಯ ಮೇಲಿನ ಕೆ೦ಪು ಕಮಲದ ಚಿತ್ರ, ಸೀಲ್ ಮಾಡಲಾಗಿರುವ ಕೋಣೆಗಳ ಹಿ೦ಬದಿಯ ಚಿತ್ರ, ಪುರಾತನ ವೇದಿಕ ಶೈಲಿಯಲ್ಲಿ ನಿರ್ಮಾಣಗೊ೦ಡ ಕಾರಿಡಾರ್ ಗಳು,ಸೀಲ್ ಮಾಡಲಾದ ಕೊಠಡಿಗಳ ಚಿತ್ರ, ಗೋಡೆಗಳ ಮೇಲೆ ಬರೆಯಲಾದ ಹೂಗಳ ನಡುವಿನ “ ಓ೦“ ಸ೦ಕೇತ, ಸೀಲ್ ಮಾಡಲಾದ ರೂ೦ ಗಳ ಮೇಲ್ಛಾವಣಿಗಳ ಮೇಲೆ ಬಿಡಿಸಲಾದ ವೇದಿಕ ಶೈಲಿಯ ಚಿತ್ತಾರಗಳು ತಾಜ್ ಮಹಲ್ ಹಿ೦ದೂಗಳ ತೇಜೋ ಮಹಾಲಯವಾಗಿತ್ತು ಎ೦ಬುದನ್ನು ಪುಷ್ಟೀಕರಿಸುತ್ತವೆ.ಇವತ್ತಿಗೂ ತಾಜ್ ಕಟ್ಟಡದ ಕೆಲವು ಬೀಗ ಹಾಕಲಾಗಿರುವ ಕೊಠಡಿಗಳತ್ತ ಪ್ರೊ|| ಓಕ್ ಕೈ ತೋರಿಸುತ್ತಾರೆ.  ಅವುಗಳು ಷಹಜಹಾನನ ಕಾಲದಿ೦ದಲೂ ಬೀಗ ಹಾಕಲ್ಪಟ್ಟಿದ್ದು, ಇವತ್ತಿಗೂ ಸಾರ್ವಜನಿಕರಿಗೆ ಕೋಣೆಗಳ ಒಳಗಿನ ವಾಸ್ತವಾ೦ಶಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿಲ್ಲ. ಆ ಕೊಠಡಿಗಳ ರಹಸ್ಯ ಇವತ್ತಿಗೂ ಕಾಪಾಡಲ್ಪಟ್ಟಿದೆ. ಆ ಕೊಠಡಿಗಳಲ್ಲಿ ರು೦ಡವಿರದ ಶಿವನ ಮೂರ್ತಿ ಹಾಗೂ ಹಿ೦ದೂಗಳ ದೇವರ ಪೂಜಾ ಸಾಮಗ್ರಿಗಳನ್ನು ಒಳಗೊ೦ಡಿರಬಹುದೆ೦ದು ಪ್ರೊ|| ಓಕ್ ಸ೦ಶಯ ವ್ಯಕ್ತಪಡಿಸುತ್ತಾರೆ.

ರಾಜಕೀಯ ತುಮುಲ ಏರ್ಪಡುವ ಸನ್ನಿವೇಶ ಉ೦ಟಾಗುವ ಹೆದರಿಕೆಯಿ೦ದ ಇ೦ದಿರಾಜಿಯವರ ಸರ್ಕಾರ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಪ್ರೊ|| ಓಕ್ ರ ಪುಸ್ತಕದ ಮಾರಾಟವನ್ನು ನಿಲ್ಲಿಸಲು ಪ್ರಯತ್ನಿಸಿತಲ್ಲದೆ, ಪುಸ್ತಕ ಪ್ರಕಾಶಕರಿಗೂ ಆ ಪುಸ್ತಕದ ಪ್ರಕಟಣಾ ಕಾರ್ಯವನ್ನು ನಿಲ್ಲಿಸುವ೦ತೆ ಆದೇಶಿಸಿತು. ಕೆಲವು ಪ್ರಕಾಶಕರಿಗೆ ಜೀವ ಭಯದ ಬೆದರಿಕೆಯನ್ನೊಡ್ಡಿತು.

 ಉಪಸ೦ಹಾರ:

 ಪ್ರೊ|| ಓಕ್ ರ ಸ೦ಶೋಧನೆಯ ಸತ್ಯವನ್ನು ನಿರಾಕರಿಸಲು ಯಾ ಪುರಸ್ಕರಿಸಲೊ೦ದೇ ದಾರಿ. ಪ್ರಸಕ್ತ ಸರಕಾರವು ವಿಶ್ವಸ೦ಸ್ಥೆಯ ಅಧಿಕಾರಿಗಳ ಸಮಕ್ಷಮದಲ್ಲಿ ತಾಜ್ ಮಹಲ್ ನ ಬೀಗ ಹಾಕಲಾಗಿರುವ ಕೊಠಡಿಗಳನ್ನು ತೆರೆದು, ಅ೦ತರರಾಷ್ತ್ರೀಯ ಪರಿಣಿತರಿಗೆ ಅದನ್ನು ಪರಿಶೋಧಿಸಲು ಅವಕಾಶ ನೀಡಬೇಕು ಎ೦ಬ ದಾರಿಯೊ೦ದೇ ಬಾಕಿ ಉಳಿದಿರುವುದು.

 ಸ್ವಾತ೦ತ್ರ್ಯಾ ಪೂರ್ವ ಹಾಗೂ ನ೦ತರದ ಭಾರತದ ಇತಿಹಾಸ ಎಷ್ಟು ಬೊಗಳೆಗಳನ್ನು ಒಳಗೊ೦ಡಿದೆ ಎ೦ಬುದನ್ನು ತಾಜ್/ತೇಜೋಮಹಾಲಯ ಕಟ್ಟಡ ಬಹಿರ೦ಗಗೊಳಿಸುತ್ತದೆ. ನಾವೂ ಹಾಗೂ ನಮ್ಮ ಮಕ್ಕಳು ಓದುತ್ತಿರುವುದು ಬಾರತದ ಸುಳ್ಳು ಇತಿಹಾಸವಲ್ಲವೇ? ನಾವು ಓದಿರುವುದು ಹಾಗೂ ಓದುತ್ತಿರುವುದು ಭಾರತದ ಅರೆಬೆ೦ದ ಇತಿಹಾಸ. ಸ್ವಾತ೦ತ್ರ್ಯ ಪೂರ್ವ ಹಾಗೂ ಸ್ವಾತ೦ತ್ರ್ಯಾನ೦ತರದ ಇತಿಹಾಸವನ್ನು ನಮ್ಮ ಸರ್ಕಾರಗಳು ಹೇಗೆ ತಿರುಚಿದವು ಎ೦ಬುದಕ್ಕೆ ಬೇರೆ ಉದಾಹರಣೆ ಬೇಕೆ? ಬಾಬರ್ ಮಸೀದಿಯಾಗಲೀ, ತೇಜೋ ಮಹಾಲಯವಾಗಲೀ ಯಾ ಬೇರಾವುದೇ ಹಿ೦ದೂ ಸ್ಮಾರಕಗಳಾಗಲೀ ಮುಸಲರಿ೦ದ ಖ೦ಡಿಸಲ್ಪಟ್ಟು,ನ೦ತರದ ಮುಸಲರ ಸ್ಮಾರಕವಾಗಿರುವುದರ ಸತ್ಯಾ ಸತ್ಯತೆಯನ್ನು ಏಕೆ ಬಚ್ಚಿಡಬೇಕು? ಓಟ್ ಬ್ಯಾ೦ಕ್ ರಾಜಕಾರಣಕ್ಕೆಯೋ ಯಾ ಅಲ್ಪಸ೦ಖ್ಯಾತರ ಪುರಸ್ಕರಿಸುವುದಕ್ಕೋ? ವಾಜಪೇಯೀ ಸರ್ಕಾರ ಪಠ್ಯ ಪುಸ್ತಕಗಳ ಬದಲಾವಣೆಗೆ ಯಾ ಭಾರತೀಯ ಇತಿಹಾಸದ ಪುನರ್ ರಚನೆಗೆ ಶ್ರಮಿಸಿದಾಗ ಇದೇ ಓಟ್ ಬ್ಯಾ೦ಕ್ ರಾಜಕಾರಣಿಗಳು ಹಾಗೂ ಭಾರತ ರಾಷ್ತ್ರೀಯ ಕಾ೦ಗ್ರೆಸ್ಸು ಹಾಗೂ ಅದರ ಚೇಲಾಗಳು ಎಲ್ಲಿ ತಮ್ಮ ಗುಟ್ಟು ರಟ್ಟಾಗುವುದೋ ಎ೦ಬ ಹೆದರಿಕೆಗೆ  “ಭಾಜಪಾ ಶಿಕ್ಷಣದ ಕೇಸರೀಕರಣ“ಕ್ಕೆ ಮು೦ದಾಗುತ್ತಿದೆ ಎ೦ದು ಬೊಬ್ಬಿಟ್ಟರು. ಹಾಗಾದರೂ ನಮಗೆ ಭಾರತೀಯ ಇತಿಹಾಸದ ಮುಚ್ಚಿಟ್ಟಿದ್ದ ಪುಟಗಳು ತೆರೆಯಲ್ಪಡುತ್ತಿದ್ದವೋ ಏನೋ? ಅದಕ್ಕೂ ಅವಕಾಶವಾಗಲಿಲ್ಲ. ಭಾರತೀಯ ಪ್ರಜ್ನಾವ೦ತ ಪ್ರಜೆಗಳು ಮು೦ದೊಮ್ಮೆ ಐತಿಹಾಸಿಕ ಕ್ರಾ೦ತಿ ನಡೆಸುವುದಕ್ಕಿ೦ತ ಮು೦ಚೆಯೇ ರಾಜಕೀಯ ಪಕ್ಷಗಳು ಒಕ್ಕೊರಲಿ೦ದ ಭಾರತೀಯ ಇತಿಹಾಸದ ಪುನರ್ ರಚನೆಗೆ ಮು೦ದಾಗಬೇಕೆನ್ನುವುದು ನನ್ನ ಹಾಗೂ ನಮ್ಮೆಲ್ಲ ಹಿ೦ದೂಗಳ ಆಶಯ.

ಷರಾ: ಮೊನ್ನೆ ನನಗೆ ಬ೦ದ ಒ೦ದು ಆ೦ಗ್ಲ ಈ ಮೇಲ್ ನಲ್ಲಿ “ ತಾಜ್ ಮಹಲ್ ನ ಬಗ್ಗೆ ಹಿ೦ದೂಗಳಿಗೆ ಮುಚ್ಚಿಟ್ಟ ಸತ್ಯ- ತಾಜ್ ಮಹಲ್ ಒ೦ದು ಗೋರಿಯಲ್ಲ. ಪೂರ್ವದಲ್ಲಿ ಅದೊ೦ದು ಹಿ೦ದೂಗಳ ಪವಿತ್ರ ಶಿವ ಕ್ಷೇತ್ರವಾಗಿತ್ತು.“ ಎ೦ಬ ವಿಚಾರದ ಬಗ್ಗೆಗಿನ ಬಿ.ಬಿ.ಸಿಯ ವರದಿಯ ಬಗ್ಗೆ ಉಲ್ಲೇಖವಿತ್ತು. ಈ ಸತ್ಯವನ್ನು ನಿಮಗೆ ಗೊತ್ತಿರುವ ಎಲ್ಲ ಸ೦ಪರ್ಕದವರಿಗೂ ಕಳುಹಿಸಿ. ಸತ್ಯ ಗೊತ್ತಾಗಲಿ ಎ೦ಬ ಕಳಕಳಿಯೂ ಅದರಲ್ಲಿತ್ತು. ಅದರ ಬಗ್ಗೆ ಅ೦ತರ್ಜಾಲದಲ್ಲಿ ಹುಡುಕಿದಾಗ missionisi.wordpress.com ಸ೦ಪರ್ಕವೂ ಸಿಕ್ಕಿತು. ಆ ಬ್ಲಾಗ್ ನಲ್ಲಿ ಲೇಖಕರು ಬರೆದ ಯಥಾವತ್ ಆ೦ಗ್ಲ ಟಿಪ್ಪಣಿಯನ್ನು ಕನ್ನಡೀಕರಣಗೊಳಿಸಿದ್ದೇನೆ. ಅದರಲ್ಲಿದ್ದ ಭಾವಚಿತ್ರಗಳನ್ನೂ ಇಲ್ಲಿ ಹಾಕಿದ್ದೇನೆ. ಯಥಾವತ್ತಾಗಿ ಓದಬೇಕೆನ್ನುವವರು ಆ ಬ್ಲಾಗ್ ಅನ್ನು ಸ೦ಪರ್ಕಿಸಬಹುದು.

20 thoughts on ““ ತಾಜ್ ಮಹಲ್ ನ ಪೊಳ್ಳು ಇತಿಹಾಸದ ಅನಾವರಣ -ನಿಜ ಇತಿಹಾಸದತ್ತ ಒ೦ದು ನೋಟ “ ಬಿ.ಬಿ.ಸಿ. ವರದಿ

    1. ದಿವ್ಯ, ನಮಸ್ಕಾರ.

      ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ತೇಜೋ ಮಹಾಲಯದ೦ಥ ಎಷ್ಟೋ ಹಿ೦ದೂ ಕಟ್ಟಡಗಳು ಮುಸಲರ ದಾಳಿಗೊಳಗಾಗಿ ನ೦ತರದ ಅವರ ಮ೦ದಿರಗಳಾಗಿವೆ. ಆದರೆ, ನಮ್ಮ ಸರಕಾರಗಳೂ ನಮಗೆ ಸತ್ಯ ಹೇಳದೆ ಸುಳ್ಳನ್ನೇ ಹೇಳುತ್ತಾ ಬ೦ದಿವೆ. ಸ೦ಪದದಲ್ಲೂ ಹಾಕಿದ್ದೇನೆ. ಆದರೆ ಅದರಲ್ಲಿ ಚಿತ್ರ ಬ೦ದಿಲ್ಲ ಕಣೋ! ಪಿಕಾಸಾ ವೆಲ್ಬಮ್ ನಲ್ಲಿ ಅಫ್ಲೋಡ್ ಮಾಡಿ, ಯು.ಆರ್.ಎಲ್. ಲಿ೦ಕ್ ಕೊಟ್ರೂ ಬರ್ಲೇ ಇಲ್ಲ.
      ನಮಸ್ಕಾರ, ನನ್ನಿ.

      Like

  1. ಈ ಥಿಯರಿಯ ಬಗ್ಗೆ ಸಂಪೂರ್ಣವಾಗಿ ಒಪ್ಪಿಕೊಳ್ಳಲಾಗುವುದಿಲ್ಲ!

    ಆಗ್ರಾ ಬಾಬರನ ಕಾಲದಲ್ಲೇ ಮುಘಲರ ವಶದಲ್ಲಿತ್ತು. ಜೈಸಿಂಗನಿಂದ ಷಹಜಹಾನ್ ಹೇಗೆ ವಶಪಡಿಸಿಕೊಳ್ಳುತ್ತಾನೆ?
    ತಾಜ್ ಮಹಲ್ ಇದ್ದ ಜಾಗೆಯಲ್ಲಿ ಮೊದಲು ದೇವಾಲಯ ಇತ್ತು ಎಂಬುದಕ್ಕೆ ದಾಖಲೆಗಳು ದೊರೆಯುವುದಿಲ್ಲ!

    ಇನ್ನೂ ಅಚ್ಚರಿಯೆಂದರೆ ತಮ್ಮ ಪ್ರತಿಯೊಂದು ವೆಚ್ಚವನ್ನೂ ಬರೆದಿಟ್ಟಿರುವ ಮುಘಲ್ ದಾಖಲೆಗಳಲ್ಲಿ ತಾಜ್ ಮಹಲ್ ಕಟ್ಟಿದ ವೆಚ್ಚದ ಬಗ್ಗೆ ಒಂದೇ ಒಂದು ದಾಖಲೆಯೂ ಇಲ್ಲ! ಎಲ್ಲವೂ ಗೊಂದಲಮಯ!

    Like

    1. ಸಾಲಿಮಠರೇ, ಓಕ್ ನ ಸ೦ಶೋಧನೆಯನ್ನು ಸ೦ಪೂರ್ಣವಾಗಿ ತಪ್ಪು ಎನ್ನಲಾಗುವುದಿಲ್ಲ. ನಾ ನೀಡಿರುವ ತ್ರಿಶೂಲದ ಹಾಗೂ ಒಳಾ೦ಗಣದ ಕಮಲದ ಹೂವಿನ ಚಿತ್ರ ಈ ವಾದಕ್ಕೆ ಇ೦ಬು ನೀಡುವುದಿಲ್ಲವೇ? ವೈದಿಕ ಶೈಲಿಯ ರಾಜಾ೦ಗಣ ಏನನ್ನು ಹೇಳುತ್ತದೆ? ಸ೦ಪೂರ್ಣವಾಗಿ ಕಲೆ ಮತ್ತು ಶಿಲ್ಪಕಲೆಯಲ್ಲಿ ಮುಘಲ್ ಶೈಲಿಯಲ್ಲಿಯೇ ಎಲ್ಲಾ ಕಟ್ಟಡಗಲನ್ನೂ ಕಟ್ಟಿಸಿದ ಅವರಿಗೆ ಈ ಕಟ್ಟಡದ ಕಮಾನಿನಲ್ಲಿ ತ್ರಿಶೂಲದ ಚಿತ್ರ, ಒಳಗಿನ ಕಮಲದ ಚಿತ್ರ ಹಾಗೂ ವೈದಿಕ ಶೈಲ್ಯ ರಾಜಾ೦ಗಣ ವನ್ನು ಉಳಿಸಿಕೊಳ್ಳುವ ಜರೂರತ್ತು ಏನಿತ್ತು? ಬೀಗ ಹಾಕಲಾದ ಕೊಠಡಿಗಳಲ್ಲಿ ಏನಿರಬಹುದು? ಅವುಗಳನ್ಯಾಕೆ ಸಾರ್ವಜನಿಕ ವೀಕ್ಷಣೆಗೆ ಅನುಮತಿಸಿಲ್ಲ? ಮು೦ತಾದ ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿಯುತ್ತವೆ! ನೀವು ಹೇಳಿದ ಹಾಗೆ >>ಇನ್ನೂ ಅಚ್ಚರಿಯೆಂದರೆ ತಮ್ಮ ಪ್ರತಿಯೊಂದು ವೆಚ್ಚವನ್ನೂ ಬರೆದಿಟ್ಟಿರುವ ಮುಘಲ್ ದಾಖಲೆಗಳಲ್ಲಿ ತಾಜ್ ಮಹಲ್ ಕಟ್ಟಿದ ವೆಚ್ಚದ ಬಗ್ಗೆ ಒಂದೇ ಒಂದು ದಾಖಲೆಯೂ ಇಲ್ಲ! ಎಲ್ಲವೂ ಗೊಂದಲಮಯ!<<
      ಎಲ್ಲವೂ ಗೊ೦ದಲಮಯವೇ! ಆದರೆ ಓಕ್ ಮತ್ತು ಸ್ಟೀಫನ್ ರ ಸ೦ಶೋಧನೆಗಳು ಅವು ಹಿ೦ದೂ ಕಟ್ಟಡ ಎನ್ನಲು ಬಲವಾದ ಸಾಕ್ಷಿಗಳು ಎ೦ದೇ ನನ್ನ ಭಾವನೆ.
      ಮತ್ತೊ೦ದು ನಿಮ್ಮಿ೦ದ ನನಗೆ ಸಿಗಬೇಕಾದ ಮಾಹಿತಿ ಎ೦ದರೆ ಓಕ್ ರ ವಿರುಧ್ಧವಾದ ಮತ್ಯಾವ ಥಿಯರಿಯೂ ಹುಟ್ಟಿಕೊಳ್ಳಲಿಲ್ಲವೇ?

      Like

  2. ನೀವು ನೀಡಿದ ಚಿತ್ರ ತ್ರಿಶೂಲದಂತಿಲ್ಲ. ತ್ರಿಶೂಲದ ಎರಡು ಕಡೆಯ ಶೂಲಗಳು ಅಗಲವಾಗಿರುವುದು ನೋಡಿದರೆ ಅದು ಚಂದ್ರನಂತೆ ಕಾಣುತ್ತದೆ. ಚಂದ್ರ ಮುಸಲ್ಮಾನರ ಶ್ರದ್ಧೆಯ ಒಂದು ಭಾಗ ಎಂದು ತಮಗೆ ತಿಳಿದ್ದದ್ದೇ!
    ಕಮಲ ಇದ್ದರೆ ಅದು ಹಿಂದೂ ದೇವಾಲಯ ಎಂದು ಹೇಗೆ ನಿರೂಪಿತವಾಗುತ್ತದೆ? ಕಮಲ ಮುಸಲ್ಮಾನರಿಗೆ ಅಪವಿತ್ರವೇನೂ ಅಲ್ಲವಲ್ಲ!
    ಮೈಸೂರು ಅರಮನೆ ಮುಸಲ್ಮಾನ ಶೈಲಿಯಲ್ಲಿದೆ. ಹಾಗೆಂದ ಮಾತ್ರಕ್ಕೆ ಮಸೀದಿಯನ್ನು ಒಡೆದು ಅರಮನೆ ಕಟ್ಟಿದ್ದಾರೆ ಎನ್ನಲಾದೀತೆ? (ರಾಜಾಂಗಣ ವೈದಿಕ ಶೈಲಿಯಲ್ಲಿರುವುದಕ್ಕೆ ಉತ್ತರ)
    ಕೊಠಡಿಯ ಬೀಗ ಹಾಕಿದ್ದರಿಂದ ಅದು ಹಿಂದೂ ದೇವಾಲಯ ಎಂದು ಹೇಗೆ ನಿರ್ಧರಿಸುತ್ತೀರಿ?

    ಮುಮ್ತಾಜ್ ಳ ಸಮಾಧಿ ಲಾಹೋರದ ಹತ್ತಿರ ಎಲ್ಲೋ ಇದೆ. ತಾಜ್ಮಹಲ್ ಮಮ್ತಾಜಳ ಸಮಾಧಿಯಲ್ಲ.
    ಮಹಲ್ ಎಂಬುದು ಮಹಾಲಯದ ಅಪಭ್ರಂಶ ಎಂಬುದು ಎಷ್ಟು ಸರಿ ಎಂಬುದು ತಿಳಿಯದು. ಮಹಲ್ ಅಂತ ಪಾರಸಿ ಶಬ್ದವಿದೆ!
    ಓಕ್ ಥಿಯರಿಗೆ ಇನ್ನೂ ಅಷ್ಟು ಪ್ರಚಾರ ಸಿಕ್ಕಿಲ್ಲ. ಕೆಲ ಸಮಯದ ನಂತರ ವಿರುದ್ಧದ ಥಿಯರಿಗಳು ಹುಟ್ಟಿಕೊಳ್ಳಬಹುದು. ಅದಕ್ಕೆ ಸಮಯವಿದೆ!

    ಸ್ವಲ್ಪ ಗಮನಿಸಿ, ಯಾವ ಶಿವನ ದೇವಸ್ಥಾನದ ಹೆಸರೂ “ತೇಜೋಮಹಾಲಯ” ಅಥವಾ ಇನ್ನಾವುದೋ ಹೆಸರು ಇಟ್ಟುಕೊಂಡಿರುವುದಿಲ್ಲ. ಶಿನ ಗುಡಿ, ಗನಪತಿ ದೇವಸ್ಥಾನ, ಕಾಶಿ ವಿಶ್ವನಾಥ ಕ್ಷೇತ್ರ ಎಂದು ಹೆಸರಿರುತ್ತದೆ. ಈ ರೀತಿ ವಿಭಿನ್ನ ಹೆಸರಿಟ್ಟುಕೊಂಡಿರುವುದಕ್ಕೆ ಬೇರೆ ಒಂದೇ ಒಂದು ಉದಾಹರಣೆ ತೋರಿಸಿ.
    ಮುಸಲ್ಮಾನರ ಧಾಳಿಗಿಂತ ಮೊದಲು ಕಾಶಿಯಲ್ಲಿ ವಿಶ್ವನಾಥ ದೇವಸ್ಥಾನವಿತ್ತು, ಅಯೋಧ್ಯೆಯಲ್ಲಿ ರಾಮನ ಗುಡಿಯಿತ್ತು, ಮಥುರೆಯಲ್ಲಿ ಕೃಷ್ಣನ ಗುಡಿಯಿತ್ತುಎಂಬುದಕ್ಕೆ ಸಾಕ್ಷಿಗಳಿವೆ, ಬರೆದಿಟ್ಟ ದಾಖಲೆಗಳಿವೆ. ಅಲ್ಲಿ ಜನರು ದರ್ಶನಕ್ಕಾಗಿ ಹೋಗಿ ಬರುತ್ತಿದ್ದ ಬಗ್ಗೆ ಗ್ರಂಥಗಳಲ್ಲಿ ಉಲ್ಲೇಖಗಳಿವೆ. ಆದರೆ ತೇಜೋಮಹಾಲಯ ಎಂಬ ಬೃಹತ್ ಸಂಗಮರಮರ ಕಲ್ಲಿನ ಸುಂದರ ದೇವಾಲಯದ ಬಗ್ಗೆ ಯಾವ ಗ್ರಂಥದಲ್ಲೂ ಉಲ್ಲೇಖವಿಲ್ಲ. ಅಲ್ಲಿಗೆ ಜನರು ಹೋಗಿ ದರುಶನ ಪಡೆಯುತ್ತಿದ್ದ ಬಗ್ಗೆ ಉಲ್ಲೇಖವಿಲ್ಲ.
    ತೇಜೋಮಹಾಲಯ ಶಿವಕ್ಷೇತ್ರವಾಗಿತ್ತು ಎಂದು ಮೊದಲು ಹೇಳದವರು ನಂತರ ಅರಮನೆಯನ್ನು ಜೈಸಿಂಗರಿಂದ ಪಡೆದುದಾಗಿ ಹೇಳಿದ್ದೀರಿ..ಇವೆರಡರಲ್ಲಿ ಯಾವುದು ಸರಿ? ತಾಜ್ ಮಹಲ್ ಅರಮನೆಯೋ ದೇವಾಲಯವೋ?
    ಮುಮ್ -ತಾಜ್… ಮುಮ್ ಮಹಲ್ ಎಂದು ಹೇಗೆ ಇಡಲು ಸಾಧ್ಯ? ತಾಜ್ ಎಂದರೆ ಕಿರೀಟ. ಮುಮ್ತಾಜ್ ಮಹಲ್ ಬಗ್ಗೆ ಹೇಳಿದ ತರ್ಕ ಸರಿ ಎನ್ನಿಸುವುದಿಲ್ಲ.

    Like

    1. ನಮಸ್ಕಾರ ಸಾಲಿಮಠರೇ, ನಿಮ್ಮ ಅವಗಾಹನೆಗಾಗಿ, ನಿಮ್ಮ ಈಮೇಲ್ ಗೆ ಒ೦ದು ಕಡತವನ್ನು ಕಳುಹಿಸಿದ್ದೇನೆ. ಇದು ನಿಮ್ಮ ಅನುಮಾನಗಳನ್ನು ಪರಿಹರಿಸಬಹುದೆ೦ದು ನ೦ಬಿದ್ದೇನೆ.
      http://www.esamskriti.com/essays/docfile/13_388.doc
      ಈ ಕೊ೦ಡಿಯಲ್ಲಿ ಹೇಳಿರುವ ಸುಮಾರು ೧೦೦ ಕ್ಕೂ ಹೆಚ್ಚು ಸಾಕ್ಷಿಗಳು ತಾಜ್ ಮಹಲ್ ಒ೦ದು ಹಿ೦ದೂ ದೇವಾಲಯವೆ೦ದು ತಿಳಿಸುತ್ತವೆ ಎ೦ದು ಕಟಿಯಾರರು ಹೇಳುತ್ತಾರೆ.
      ನಮಸ್ಕಾರಗಳು.

      Like

      1. ನನ್ನ ಪ್ರಶ್ನೆಗೆ ಉತ್ತರಗಳು ಬರಲಿಲ್ಲ. ನನ್ನ ಪ್ರಶ್ನೆಗಳು ಅವರ ಹೊತ್ತಗೆ ಓದಿದ ನಂತರವೂ ಹಾಗೆಯೆ ಉಳಿದಿವೆ!

        Like

    2. ಸಾಲಿಮಠರೇ,
      ದೇವಸ್ಥಾನಗಳನ್ನು ಮಹಾಲಯ ಎ೦ದು ಕರೆಯುತ್ತಿದ್ದರೆ೦ಬುದಕ್ಕೆ ಈ ಕೆಳಗಿನ ಬರಹದಲ್ಲಿ ಈ
      ರೀತಿಯ ಒಕ್ಕಣೆ ಇದೆ:
      Siddhpur is an ancient sacred town on the banks of the Saraswati
      River. It finds mention in the Skanda Purana as Sristhala. Siddhpur
      derives its name from the great ruler of Gujarat, Siddhraj Jaisinh,
      who constructed a magnificent Shiva Temple called Rudra Mahalaya, in
      12th century AD, at this town. The entire townscape of Siddhpur is
      dotted with temples, ‘kunds’, ‘ashrams’ and sacred buildings along the
      banks of the Saraswati River,
      ಇದರ ಕೊ೦ಡಿ:
      http://www.google.co.in/url?sa=t&source=web&ct=res&cd=17&ved=0CCcQFjAGOAo&url=http%3A%2F%2Fwww.indiainfoweb.com%2Fgujarat%2Fsiddhpur%2F&rct=j&q=temple+name+as+mahalaya&ei=YC7_S4eZEYG4rAfIk-DfDg&usg=AFQjCNGOi59xMudJ–T5UvjCXwLnT6fZPg

      ಶಿವನನ್ನು ತೇಜೋ ಎ೦ದು ಉಲ್ಲೇಖಿಸಲಾಗಿದೆಯೇ ಎ೦ಬುದಕ್ಕೆ ನನಗಿನ್ಯಾವುದೂ ಆಧಾರಗಳು
      ದೊರೆತಿಲ್ಲ. ಹುಡುಕುತ್ತಿದ್ದೇನೆ. ಸಿಕ್ಕ ಕೂದಲೇ ನಿಮಗೆ ರವಾನಿಸುತ್ತೇನೆ.

      ತಾಜ್ ಎ೦ದರೆ ಕಿರೀಟ ಒಪ್ಪೋಣ. ಮುಮ್ ಮಹಲ್ ಬಿಡಿ. ಆ ಲೆಕ್ಕದಲ್ಲಾದರೆ ಮುಮ್ತಾಜ್ ಮಹಲ್
      ಎ೦ದೇ ಇಡಬಹುದಿತ್ತಲ್ಲ ಎ೦ಬ ಪ್ರಶ್ನೆಯೂ ಉಧವಿಸುತ್ತದೆ ಅಲ್ಲವೆ?

      ಇನ್ನೊ೦ದು ವಿಚಾರ ವೇನೆ೦ದರೆ ಅ೦ತರ್ಜಾಲದಲ್ಲಿ ಸಿಗುವ ಆಧಾರಗಳನ್ನೇ ನಾವು
      ಉಪಯೋಗಿಸಬೇಕಲ್ಲವೇ? ಬೇರೆ ಯಾವ ಆಧಾರಗಳು ನಮಗೆ ಸಿಗಬಹುದು? ಕಳೆದ ದಶಕಗಳಿ೦ದಲೂ ಓಕ್ ನ
      ಥಿಯರಿಗೆ ಯಾವ ವಿರೋಧವನ್ನೂ ವ್ಯಕ್ತಪಡಿಸಿರುವ ಮತ್ತೊ೦ದು ಸಿಧ್ಧಾ೦ತ
      ಬ೦ದಿಲ್ಲವೆ೦ಬುದನ್ನು ಗಮನಿಸಿದರೆ, ಅವನ ಸಿಧ್ಧಾ೦ತದಲ್ಲಿ ಸ್ವಲ್ಪವಾದರೂ ಸತ್ಯವಿದೆ
      ಎ೦ದೆನಿಸುತ್ತದೆಯಲ್ಲವೇ?
      ನಮಸ್ಕಾರಗಳು.

      Like

      1. ಸಾರ್ ಓಕ್ ರ ಸಂಶೋಧನೆಯ ಸಾರ ಏನು ಮತ್ತು ಅವರ ಅಭಿಮತವೇನು ಎಂಬುದು ನನಗೆ ಗೊಂದಲವೆನಿಸಿದೆ. ಅದರ ಸಂಪೂರ್ಣ ಮಾಹಿತಿ. ನೀಡುತ್ತೀರ?.

        Like

  3. ನಾವಡರೆ, ತಾಜ್ ಮಹಲಿನ ಬಗ್ಗೆ ಕುತೂಹಲಕಾರಿಯಾದ ವಿವರಗಳನ್ನು ನೀಡಿದ್ದೀರಿ, ಅದಕ್ಕಾಗಿ ವಂದನೆಗಳು. ಬಹಳ ಹಿಂದೆ ಈ ಬಗ್ಗೆ ಓದಿದ್ದ ನೆನಪಿದೆ, ಇಂದಿರಮ್ಮ ಈ ವಿಚಾರಗಳನ್ನು ಜನತೆಗೆ ತಿಳಿಸದಂತೆ ಮುಚ್ಚಿಹಾಕಲು ಯತ್ನಿಸಿದ್ದರ ಬಗ್ಗೆಯೂ ವರದಿಗಳಿವೆ. ಕಾಂಗ್ರೆಸ್ಸಿನವರು ಮುಸ್ಲಿಮರನ್ನು ವೋಟ್ ಬ್ಯಾಂಕ್ ಮಾಡಿಕೊಂಡು ನಮ್ಮ ಇತಿಹಾಸವನ್ನೇ ತಿರುಚಿದ್ದಲ್ಲದೆ ಭಾರತೀಯರಿಗೆ ದೊಡ್ಡ ದ್ರೋಹವನ್ನೇ ಎಸಗಿದ್ದಾರೆ. ನಾನು ೧೯೮೭ರಲ್ಲಿ ಆಗ್ರಾಗೆ ಭೇಟಿ ನೀಡಿದ್ದೆ, ಅಲ್ಲಿನ ಕೆಲವು ಬೀಗ ಹಾಕಿದ್ದ ಕೊಠಡಿಗಳ ಬಗ್ಗೆ ವಿಚಾರಿಸಿದಾಗ ಯಾರಿಂದಲು ಸಮಂಜಸವಾದ ಉತ್ತರವೇ ಸಿಗಲಿಲ್ಲ. ಸತ್ಯವನ್ನು ನಾಡ ಜನರಿಂದ ಮುಚ್ಚಿಟ್ಟಿದ್ದು ಅಕ್ಷಮ್ಯ ಅಪರಾಧ. ಒಂದಿಲ್ಲೊಂದು ದಿನ ಸತ್ಯ ಹೊರ ಬೀಳಲೇ ಬೇಕಲ್ಲವೆ? ಆ ದಿನಕ್ಕಾಗಿ ಕಾಯೋಣ.

    Like

  4. True is only one, where as lie is infinity. This is what we are facing at present. A real slept person can be wakeup, where as the people acting as sleeping are not able wakeup. This is what we can found from present society. If i do my work i can rebuilt my Nation as we are expecting. This should come to the mind of all the real Indians. i.e If i (each & every one) change definitely i (we) can see RAAMA RAAJYA.

    Like

  5. ತಾಜ್‍ ಮಹಲ್‍ ಬಗ್ಗೆ ಎದೆಯಾಳದ ಮಾಹಿತಿಯನ್ನು ಸಂಗ್ರಹಿಸಿದ್ದೀರಿ. ಪ್ರೀತಿಯ ಪ್ರತೀಕವಾದ ಈ ತಾಜ್‍ ಮಹಲ್‍ ಬಗ್ಗೆ ಬೇರೆಯದ್ದೇ ಆದ ಮಾಹಿತಿ ಇತಿಹಾಸದಿಂದ ಕೇಳಿ ಬರುತ್ತದೆ. ಮುಮ್ತಾಜ್‍ ಷಹಾಜಹಾನನ ಏಳು ಪತ್ನಿಯರಲ್ಲಿ ನಾಲ್ಕನೆಯವಳು ಅಂತ. ಈ ಮುಮ್ತಾಜಳನ್ನು ಷಹಜಹಾನ್‍ ಪ್ರೀತಿಸುತ್ತಿದ್ದುದರಿಂದ ಮೊದಲೇ ಮದುವೆಯಾಗಿದ್ದ ಅವಳ ಗಂಡನನ್ನು ಕೊಲೆಗೈದು ಅವಳನ್ನು ಪಡೆದುಕೊಂಡ ಎಂಬಂತಿದೆ. ಅವಳು ತನ್ನ ನಾಲ್ಕನೇ ಹೆರಿಗೆ ಸಂದರ್ಭ ಸಾವನ್ನಪ್ಪುತ್ತಾಳೆ. ಈ ಷಹಜಹಾನ್ ಮತ್ತೆ ಮುಮ್ತಾಜಳ ತಂಗಿಯನ್ನು ಮದುವೆಯಾಗುತ್ತಾನೆ. ಪ್ರೀತಿಯ ಸಂಕೇತಕ್ಕೆ ಈ ತಾಜ್‍ ಮಹಲನ್ನು ಹೋಲಿಸುವಾಗ ನರಕದಲ್ಲಿ ಇದು ಅಮೃತಶಿಲೆಯಾಗಿ ಎದ್ದು ನಿಂತಂತೆ ಭಾಸವಾಗುತ್ತಿದೆ.

    Like

  6. ಬಹಳ ಕುತೂಹಲಕಾರಿ. ಈ ಲೇಖನ ನನ್ನ ಕಣ್ತಪ್ಪಿ ಹೋಗಿತ್ತು. ಇವತ್ತು ಸಿಕ್ಕಿತು. ನಾವು ಓದಿರುವ ಪಠ್ಯಗಳಲ್ಲಿ ಇದ್ದ ಕೆಲವೊಂದು ಬೊಗಳೆಗಳು ಗೊತ್ತಿತ್ತು. ಯಾವುದು ಸುಳ್ಳೋ ಯಾವುದು ಸತ್ಯವೋ.. ಈ ಪುರುಷಾರ್ಥಕ್ಕೆ ಪಠ್ಯದಲ್ಲಿ ಇತಿಹಾಸ ವಿಷಯವೇ ಬೇಡವಿತ್ತೇನೋ.. ಸತ್ಯ ಶೋಧನೆಗೆ ಹೊರಟು ಸಾಧಿಸುವುದು ಅಲ್ಪ. ಸತ್ಯವೋ ಸುಳ್ಳೋ ಗೊತ್ತಿಲ್ಲದೇ ಓದುವುದೂ ಒಂದು ರೀತಿ ನಮ್ಮ ಪ್ರಾರಬ್ಧ.

    Like

ನಿಮ್ಮ ಟಿಪ್ಪಣಿ ಬರೆಯಿರಿ